ಶೀಘ್ರದಲ್ಲಿ ಒನ್‌ಪ್ಲಸ್‌ TV 55 Y1S ಪ್ರೊ ಭಾರತದ ಮಾರುಕಟ್ಟೆಗೆ; ಫೀಚರ್ಸ್‌ ಲೀಕ್

|

ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಪ್ರಮುಖ ಬ್ರ್ಯಾಂಡ್‌ನ ಸ್ಮಾರ್ಟ್‌ಟಿವಿ, ಸ್ಮಾರ್ಟ್‌ಫೋನ್‌ ಹಾಗೂ ಇನ್ನಿತರೆ ಡಿವೈಸ್‌ಗಳು ಗ್ರಾಹಕರನ್ನು ಭಿನ್ನ ರೀತಿಯಲ್ಲಿ ಸೆಳೆಯುತ್ತವೆ. ಅದರಂತೆ ಒನ್‌ಪ್ಲಸ್‌ ಸಂಸ್ಥೆಯ ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ ಯಶಸ್ಸು ಕಂಡಿದ್ದು, ಇದರ ನಡುವೆ ಕಂಪೆನಿಯು ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿಯನ್ನು ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಲಾಂಚ್‌ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜೊತೆಗೆ ಈ Y1S ಸೀರಿಸ್‌ ವಿಭಾಗದಲ್ಲಿ ಒನ್‌ಪ್ಲಸ್‌ TV 43 Y1S ಪ್ರೊ ಮತ್ತು ಒನ್‌ಪ್ಲಸ್‌ TV 50 Y1S ಪ್ರೊ ಸ್ಮಾರ್ಟ್‌ಟಿವಿಗಳು ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯ ಇವೆ.

ಸ್ಮಾರ್ಟ್‌ ಗ್ಯಾಜೆಟ್‌

ಹೌದು, ಸ್ಮಾರ್ಟ್‌ ಗ್ಯಾಜೆಟ್‌ ವಿಭಾಗದಲ್ಲಿ ಒನ್‌ಪ್ಲಸ್‌ ಕಂಪೆನಿಯು ಭಾರತದಲ್ಲಿ ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿ ಬಗ್ಗೆ ಘೋಷಣೆ ಮಾಡಿದೆಯಾದರೂ ಫೀಚರ್ಸ್‌ ಬಗ್ಗೆ ಅಧಿಕೃತ ಮಾಹಿತಿ ನೀಡಿಲ್ಲ. ಆದರೆ, ಕೆಲವು ಲೀಕ್‌ ಮಾಹಿತಿಯಂತೆ ಈ ಸ್ಮಾರ್ಟ್‌ಟಿವಿ 55 ಇಂಚಿನ ಡಿಸ್‌ಪ್ಲೇ ಹೊಂದಿರಲಿದ್ದು, 4K ಅಲ್ಟ್ರಾ HD ರೆಸಲ್ಯೂಶನ್ ನೀಡಲಿದೆಯಂತೆ. ಹಾಗಿದ್ರೆ ಇದರ ಇನ್ನಿತರೆ ಫೀಚರ್ಸ್‌ ಏನು?, ಬೆಲೆ ಎಷ್ಟಿರಬಹುದು ಎಂಬ ಬಗ್ಗೆ ವಿವರಿಸಲಾಗಿದೆ ಈ ಲೇಖನ ಓದಿ.

ಪ್ರಮುಖ ವಿವರ

ಪ್ರಮುಖ ವಿವರ

ಈ ಸ್ಮಾರ್ಟ್‌ಟಿವಿ 55 ಇಂಚಿನ 4K ಅಲ್ಟ್ರಾ HD ರೆಸಲ್ಯೂಶನ್ ಸಾಮರ್ಥ್ಯದ ಡಿಸ್‌ಪ್ಲೇ ಆಯ್ಕೆ ಪಡೆದಿದ್ದು, ಇದು HDR+10 ಫೀಚರ್ಸ್‌ ಪಡೆದಿರಲಿದೆ ಎನ್ನಲಾಗಿದೆ. ಹಾಗೆಯೇ ದೃಶ್ಯಗಳನ್ನು ಆಕರ್ಷಕವಾಗಿಸಲು ಮೋಶನ್ ಕಂಪೆನ್ಸಷನ್ ಫೀಚರ್ಸ್‌ ಪಡೆದಿದ್ದು, ಇದು ಎರಡು ಫ್ರೇಮ್‌ಗಳ ನಡುವೆ ಹೆಚ್ಚುವರಿ ಫ್ರೇಮ್‌ಗಳನ್ನು ನೀಡುವ ಮೂಲಕ ವಿಡಿಯೋ ವೀಕ್ಷಣೆಯ ಅನುಭವವನ್ನು ಇನ್ನಷ್ಟು ಹೆಚ್ಚಿಗೆ ಮಾಡಲಿದೆ.

 ಇತರೆ ಫೀಚರ್ಸ್‌

ಇತರೆ ಫೀಚರ್ಸ್‌

ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿಯು ಯಾವ ಆಂಡ್ರಾಯ್ಡ್‌ ಆವೃತ್ತಿಯಲ್ಲಿ ಕಾರ್ಯನಿರ್ವಹಿಲಿದೆ ಎಂಬ ಬಗ್ಗೆ ಈವರೆಗೂ ಎಲ್ಲಿಯೂ ಮಾಹಿತಿ ನೀಡಿಲ್ಲ. ಆದರೆ, ಪ್ರಮುಖ ಲೀಕ್‌ ಮಾಹಿತಿ ಪ್ರಕಾರ ಈ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್ 10 ಟಿವಿ ಓಎಸ್ ಗಾಗಿ ನಿರ್ಮಿಸಲಾದ ಆಕ್ಸಿಜನ್ ಪ್ಲೇ 2.0 ನಲ್ಲಿ ಕಾರ್ಯನಿರ್ವಹಿಸಲಿದೆ ಎಂದು ಹೇಳಲಾಗುತ್ತಿದೆ. ಈ ಆಂಡ್ರಾಯ್ಡ್‌ ಆವೃತ್ತಿಯನ್ನು ಕಳೆದ ಸೀರಿಸ್‌ ಸ್ಮಾರ್ಟ್‌ಟಿವಿಗಳಾದ ಒನ್‌ಪ್ಲಸ್‌ TV 43 Y1S ಪ್ರೊ ಮತ್ತು ಒನ್‌ಪ್ಲಸ್‌ TV 50 Y1S ಪ್ರೊ ನಲ್ಲೂ ಬಳಕೆ ಮಾಡಲಾಗಿತ್ತು.

ಸ್ಮಾರ್ಟ್‌ಟಿವಿ

ಇದರೊಂದಿಗೆ ಈ ಸ್ಮಾರ್ಟ್‌ಟಿವಿ ಸ್ಮಾರ್ಟ್ ಟಿವಿ ನೆಟ್‌ಫ್ಲಿಕ್ಸ್, ಪ್ರೈಮ್ ವಿಡಿಯೋ ಹಾಗೂ ಯೂಟ್ಯೂಬ್‌ನಂತಹ ಆಪ್‌ಗಳು ಇನ್‌ಬಿಲ್ಟ್‌ಆಗಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಇದಿಷ್ಟೇ ಅಲ್ಲದೆ, 230 ಲೈವ್ ಚಾನೆಲ್‌ಗಳಿಗೆ ಈ ಸ್ಮಾರ್ಟ್‌ಟಿವಿ ಬೆಂಬಲ ನೀಡಲಿದೆ.

ಕನೆಕ್ಟಿವಿಟಿ ಆಯ್ಕೆ

ಕನೆಕ್ಟಿವಿಟಿ ಆಯ್ಕೆ

ಈ ಸ್ಮಾರ್ಟ್‌ಟಿವಿ ಒನ್‌ಪ್ಲಸ್‌ ಕನೆಕ್ಟ್ 2.0 ತಂತ್ರಜ್ಞಾನವನ್ನು ಹೊಂದಿದ್ದು, ಒನ್‌ಪ್ಲಸ್‌ ಡಿವೈಸ್ ಹೊಂದಿರುವವರು ವೈ-ಫೈ ಅಥವಾ ಇತರೆ ಆಪ್‌ಗಳನ್ನು ಬಳಕೆ ಮಾಡದೆಯೇ ಪರಸ್ಪರ ಸಂಪರ್ಕ ಕಲ್ಪಿಸಿಕೊಳ್ಳಬಹುದಾಗಿದೆ ಎನ್ನಲಾಗಿದೆ. ಇದರೊಂದಿಗೆ ಮತ್ತೊಂದು ಆಕರ್ಷಕ ಫೀಚರ್ಸ್‌ ಪರಿಚಯಿಸಿದ್ದು, ಅದರಂತೆ ಒನ್‌ಪ್ಲಸ್‌ ಬಡ್ಸ್‌ ಗಳನ್ನು ಧರಿಸಿ ಟಿವಿಯಲ್ಲಿ ವೀಕ್ಷಣೆ ಮಾಡಿದ ನಂತರ ಅವನ್ನು ಕಿವಿಯಿಂದ ಹೊರತೆಗೆದಾಗ ಆಟೋಮ್ಯಾಟಿಕ್‌ ಆಗಿ ಟಿವಿ ವಿರಾಮವಾಗುತ್ತದೆ ಎಂದು ವರದಿಗಳಿಂದ ತಿಳಿದುಬಂದಿದೆ.

ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ

ಗೂಗಲ್ ಅಸಿಸ್ಟೆಂಟ್, ಅಮೆಜಾನ್ ಅಲೆಕ್ಸಾ

ಹಾಗೆಯೇ ಒನ್‌ಪ್ಲಸ್‌ ವಾಚ್ ಹೊಂದಿರುವವರು ಈ ಸ್ಮಾರ್ಟ್‌ಟಿವಿಯ ಸ್ಲೀಪ್ ಕಂಟ್ರೋಲ್ ಫೀಚರ್ಸ್‌ ಅನ್ನು ಬಳಸಲು ಅನುವು ಮಾಡಿಕೊಡಲಾಗಿದೆ ಎಂದು ಹೇಳಲಾಗುತ್ತಿದೆ. ಇದರೊಂದಿಗೆ ಒನ್‌ಪ್ಲಸ್ TV 55 YS ಪ್ರೊ ಸ್ಮಾರ್ಟ್‌ಟಿವಿ ಆಟೋ ಕಡಿಮೆ ಲೇಟೆನ್ಸಿ ಮೋಡ್, ಕಿಡ್ಸ್ ಮೋಡ್ ಹಾಘೂ ಗೂಗಲ್ ಅಸಿಸ್ಟೆಂಟ್ ,ಅಮೆಜಾನ್ ಅಲೆಕ್ಸಾ ದಂತದ ಪ್ರಮುಖ ಆಯ್ಕೆಗಳನ್ನು ಒಳಗೊಂಡಿರಲಿದೆ.

 ಸ್ಮಾರ್ಟ್ ಟಿವಿ

ಇನ್ನುಳಿದಂತೆ ಸ್ಮಾರ್ಟ್ ಟಿವಿ ವೈ-ಫೈ 802.11 a/b/g/n, ಬ್ಲೂಟೂತ್‌ ಆವೃತ್ತಿ v5.0, ಮೂರು HDMI 2.1 ಹಾಗೂ ಎರಡು ಯುಎಸ್‌ಬಿ 2.0 ಪೋರ್ಟ್‌ಗಳ ಆಯ್ಕೆಯನ್ನು ಇದು ಪಡೆದಿರಲಿದೆ ಎನ್ನುವ ಮಾತು ಕೇಳಿಬರುತ್ತಿವೆ.

ಬೆಲೆ ಹಾಗೂ ಲಭ್ಯತೆ

ಬೆಲೆ ಹಾಗೂ ಲಭ್ಯತೆ

ಒನ್‌ಪ್ಲಸ್‌ ಸಂಸ್ಥೆಯು ಈ ಸ್ಮಾರ್ಟ್‌ಟಿವಿಗೆ 40,000ರೂ. ಗಳನ್ನು ನಿಗದಿ ಮಾಡಬಹುದು ಎಂದು ಊಹಿಸಲಾಗಿದೆ. ಹಾಗೆಯೇ ಇನ್ನೇನು ಕೆಲವು ದಿನಗಳಲ್ಲಿ ಈ ಸ್ಮಾರ್ಟ್‌ಟಿವಿ ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರಲಿದೆ.

Best Mobiles in India

English summary
OnePlus smartphones have been a success in India, meanwhile the company is all set to launch the OnePlus TV 55 Y1S Pro Smart TV in India in the next few days.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X