ಒನ್‌ಪ್ಲಸ್‌ TV 55 Y1S ಪ್ರೊ ಟಿವಿ ಬಿಡುಗಡೆ! ಈ ಫೀಚರ್ಸ್‌ ಬೇರೆಲ್ಲೂ ಸಿಗೋದಿಲ್ಲ!

|

ಭಾರತದ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ಒನ್‌ಪ್ಲಸ್ ಬ್ರ್ಯಾಂಡ್‌ನ ಟಿವಿಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಒನ್‌ಪ್ಲಸ್ ಕಂಪೆನಿ ಕೂಡ ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಭಾರತದಲ್ಲಿ ಪರಿಚಯಿಸಿದೆ. ಇದೀಗ ತನ್ನ Y1S ಪ್ರೊ ಸರಣಿಯಲ್ಲಿ ಹೊಸ ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿ ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಟಿವಿ 4K ಪ್ಯಾನೆಲ್ ಮತ್ತು ಸ್ಮಾರ್ಟ್ ಫೀಚರ್ಸ್‌ಗಳ ಹೋಸ್ಟ್‌ನೊಂದಿಗೆ ಬರುತ್ತದೆ. ಇದು ಆಂಡ್ರಾಯ್ಡ್‌ TV 10.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಒನ್‌ಪ್ಲಸ್‌

ಹೌದು, ಒನ್‌ಪ್ಲಸ್‌ ಕಂಪೆನಿ ಭಾರತದಲ್ಲಿ ಹೊಸ ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿ ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಟಿವಿ ಡೈನಾಮಿಕ್‌ ಕಾಂಟ್ರಾಸ್ಟ್‌ ಮತ್ತು ಅಮೇಜಿಂಗ್‌ ಕಲರ್‌ ಅಕ್ಯುರೆಸಿಯನ್ನುಹೊಂದಿದೆ. ಇದು ಇದು 4K UHD ಪ್ಯಾನೆಲ್ ಹೊಂದಿದ್ದು, ಪ್ರತಿ ವಿವರವನ್ನು ತಡೆರಹಿತವಾಗಿ ವೀಕ್ಷಿಸಬಹುದಾಗಿದೆ. ಇದರಲ್ಲಿ ಬಳಕೆದಾರರು ರಿಯಲ್‌ ಟೈಂ ಇಮೇಜ್‌ ಗುಣಮಟ್ಟದ ಆಪ್ಟಿಮೈಸೇಶನ್‌ ಅನ್ನು ಕೂಡ ಆನಂದಿಸಬಹುದಾಗಿದೆ. ಇನ್ನುಳಿದಂತೆ ಈ ಸ್ಮಾರ್ಟ್‌ಟಿವಿ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಒನ್‌ಪ್ಲಸ್‌ TV 55 Y1S ಪ್ರೊ

ಒನ್‌ಪ್ಲಸ್‌ TV 55 Y1S ಪ್ರೊ ಹೆಸರೇ ಸೂಚಿಸುವಂತೆ 55 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಇದು 10-ಬಿಟ್ ಕಲರ್‌ ಡೆಪ್ತ್‌ ಮತ್ತು ಅಮೇಜಿಂಗ್‌ ಕಲರ್‌ ಅಕ್ಯುರೆಸಿಯೊಂದಿಗೆ ಬರಲಿದೆ. ಈ ಸ್ಮಾರ್ಟ್‌ಟಿವಿ 4K UHD ಪ್ಯಾನೆಲ್ ಹೊಂದಿದ್ದು, ಇದರಲ್ಲಿ ಪ್ರತಿ ವಿವರವನ್ನು ತಡೆರಹಿತ ರೀತಿಯಲ್ಲಿ ನೋಡಬಹುದು. ಇದು ಡೈನಾಮಿಕ್ ಕಾಂಟ್ರಾಸ್ಟ್ ಮತ್ತು ಅಮೇಜಿಂಗ್‌ ಕಲರ್‌ನೊಂದಿಗೆ ಅಲ್ಟ್ರಾ-ಕ್ಲಿಯರ್‌ ಕಂಟೆಂಟ್‌ ಒದಗಿಸಲು ವಿಶ್ಯುಯಲ್ಸ್‌ ಅನ್ನು ಸ್ಮಾರ್ಟ್ ಟ್ಯೂನ್ ಮಾಡುತ್ತದೆ. ಜೊತೆಗೆ ಈ ಡಿಸ್‌ಪ್ಲೇ HDR10+, HDR10 ಮತ್ತು HFL ಫಾರ್ಮ್ಯಾಟ್ ಹೊಂದಾಣಿಕೆಯೊಂದಿಗೆ ಬರುತ್ತದೆ.

Y1S

ಇನ್ನು ಒನ್‌ಪ್ಲಸ್‌ TV 55 Y1S ಪ್ರೊ ಸ್ಮಾರ್ಟ್‌ಟಿವಿ ಆಂಡ್ರಾಯ್ಡ್‌ TV 10.0ನಲ್ಲಿ ರನ್‌ ಆಗಲಿದೆ. ಇದು ಒನ್‌ಪ್ಲಸ್‌ ಕನೆಕ್ಟ್‌ 2.0 ಅಪ್ಲಿಕೇಶನ್‌ ಜೊತೆಗೆ ಕಿಡ್ಸ್ ಮೋಡ್ ಫೀಚರ್ಸ್‌ ಅನ್ನು ಒಳಗೊಂಡಿದೆ. ಇದರಿಂದ ನೀವು ಹೊಸ ಒನ್‌ಪ್ಲಸ್‌ ಸ್ಮಾರ್ಟ್‌ಟಿವಿಯನ್ನು ಒನ್‌ಪ್ಲಸ್‌ ಬಡ್ಸ್‌ನೊಂದಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದಲ್ಲದೆ ಬಳಕೆದಾರರು ತಮ್ಮ ಕಿವಿಗಳಿಂದ ಇಯರ್‌ಬಡ್ಸ್‌ ಅನ್ನು ತೆಗೆದುಹಾಕಿದರೆ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕಂಟೆಂಟ್‌ ಆಟೋಮ್ಯಾಟಿಕ್‌ ಆಗಿ ಸ್ಟಾಪ್‌ ಆಗಲಿದೆ.

ಸ್ಮಾರ್ಟ್‌ಟಿವಿಯನ್ನು

ಇದಲ್ಲದೆ ಈ ಸ್ಮಾರ್ಟ್‌ಟಿವಿಯನ್ನು ಒನ್‌ಪ್ಲಸ್‌ ವಾಚ್‌ ಜೊತೆಗೂ ಕೂಡ ಕನೆಕ್ಟ್‌ ಮಾಡುಬಹುದು. ಒನ್‌ಪ್ಲಸ್‌ ಕನೆಕ್ಟ್ ಸಾಫ್ಟ್‌ವೇರ್ (2.0) ನೊಂದಿಗೆ ಬಳಕೆದಾರರು ತಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿಗೆ ರಿಮೋಟ್ ಆಗಿ ಪರಿವರ್ತಿಸಬಹುದು. ಇನ್ನು ಈ ಸ್ಮಾರ್ಟ್‌ಟಿವಿ OxygenPlay 2.0 ಸ್ಕಿನ್ ಅನ್ನು ಹೊಂದಿರುತ್ತದೆ. ಇದರ ಸೌಂಡ್‌ ಸಿಸ್ಟಂಗಳು ಡಾಲ್ಬಿ ಆಡಿಯೊದಿಂದ ಚಾಲಿತವಾಗಿದ್ದು ಬಳಕೆದಾರರಿಗೆ ಸಂಪೂರ್ಣವಾಗಿ ತಲ್ಲೀನಗೊಳಿಸುವ ಸೌಂಡ್‌ ಸಿಸ್ಟಂ ಅನ್ನು ನೀಡಲಿದೆ. ಜೊತೆಗೆ 24W ಔಟ್‌ಪುಟ್‌ನೊಂದಿಗೆ ಫುಲ್‌-ರೇಂಜ್‌ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇದು ಬೆಜೆಲ್-ಲೆಸ್ ವಿನ್ಯಾಸವನ್ನು ಹೊಂದಿದ್ದು, ಆಕರ್ಷಕವಾಗಿ ಕಾಣಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒನ್‌ಪ್ಲಸ್‌ TV 55 Y1S ಪ್ರೊ ಟಿವಿಯನ್ನು 39,999ರೂ. ಗಳಿಗೆ ಬಿಡುಗಡೆ ಮಾಡಲಾಗಿದೆ. ಈ ಸ್ಮಾರ್ಟ್‌ಟಿವಿ ಒನ್‌ಪ್ಲಸ್‌.ಇನ್‌, ಅಮೆಜಾನ್‌.ಇನ್‌ ಮತ್ತು ಫ್ಲಿಪ್‌ಕಾರ್ಟ್‌ ಮೂಲಕ ಲಭ್ಯವಾಗಲಿದೆ. ಇದು ಇದೇ ಡಿಸೆಂಬರ್ 13, 2022 ರಿಂದ ಮಧ್ಯಾಹ್ನ 12 ಗಂಟೆಗೆ ಮೊದಲ ಸೇಲ್‌ ಪ್ರಾರಂಭಿಸಲಿದೆ. ಇದನ್ನು ಗ್ರಾಹಕರು ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿಸಿದರೆ ತಕ್ಷಣವೇ 3,000 ರೂಪಾಯಿಗಳ ರಿಯಾಯಿತಿಯನ್ನು ಪಡೆಯಬಹುದು. ಈ ಕೊಡುಗೆಯು ಡಿಸೆಂಬರ್ 25, 2022 ರವರೆಗೆ ಸೀಮಿತ ಅವಧಿಗೆ ಮಾತ್ರ ಲಭ್ಯವಾಗಲಿದೆ.

Best Mobiles in India

English summary
OnePlus TV 55 Y1S Pro Launched in India: Details here

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X