ವ್ಯಕ್ತಿಯ ಮರಣ ದಿನ ತಿಳಿಸುವ "ಆನ್‌ಲೈನ್‌ ಕ್ಯಾಲ್ಕುಲೇಟರ್‌"

  By Suneel
  |

  ಇವತ್ತು ಇದ್ದೋರು ನಾಳೆ ಇರುತ್ತಾರಾ? ಅಂತ ಪ್ರಶ್ನೆ ಕೇಳಿದ್ರೆ ಸ್ವಲ್ಪ ಅಲೋಚನೆ ಮಾಡಿ ಉತ್ತರ ಹೇಳುವ ಕಾಲವಿದು. ಆದರೂ ಸಹ ಎಲ್ಲರೂ ನಾಳೆಯ ನಂಬಿಕೆ ಮೇಲೆ ಎಂತಹ ಕೆಲಸ ಕಾರ್ಯಗಳನ್ನು ಸಹ ನಿಶ್ಚಿಂತೆಯಿಂದ ಮುಂದೂಡುತ್ತಾರೆ. ಅದು ಸೋಮಾರಿತನ ಅಂತಲೋ, ಬೇಜಾವಾಬ್ದಾರಿತನ ಎಂತಲೂ ಅಥವಾ ನಾಳೆಯ ನಂಬಿಕೆ ಎಂತಲೋ ಕರೆಯಬಹುದು. 50-60 ವರ್ಷ ಯಾವುದೇ ಮನುಷ್ಯನಿಗೆ ವಯಸ್ಸಾದರೆ ಸಾಕು, ಅಯ್ಯೋ ಆ ಮನುಷ್ಯನ ಇವತ್ತೋ, ನಾಳೇನೋ ಬಿದ್ದುಹೋಗೋ ಮರೆ ಅಂತ ಕೆಲವರು ಗೊಣಗುಡುತ್ತಾರೆ. ಆದರೆ ಅಂತಹ ಮಾತುಗಳು ಎಷ್ಟೋ ಸುಳ್ಳಾಗಿ ಹಾಗೆ ಎನಿಸಿಕೊಂಡವರೆ ನೂರಾರು ವರ್ಷ ಜೀವಿಸಿ ಬಿಡುತ್ತಾರೆ.

  ಅಂದಹಾಗೆ ಈ ಮಾಹಿತಿಯನ್ನ ಯಾಕೆ ಹೀಗೆ ಹೇಳ್ತಿದ್ದೀವಿ ಅಂದ್ರೆ, ವಿಜ್ಞಾನಿಗಳ ತಂಡವೊಂದು ವ್ಯಕ್ತಿಯೊಬ್ಬ ಎಷ್ಟು ವರ್ಷ ಬದುಕುತ್ತಾನೆ ಎಂದು ತಿಳಿಸುವ ಟೆಕ್ನಾಲಜಿ ಅಭಿವೃದ್ದಿಪಡಿಸಿದ್ದಾರೆ. ವಿಶೇಷ ಏನಪ್ಪಾ ಅಂದ್ರೆ ಟೆಕ್ನಾಲಜಿಯೂ, ವ್ಯಕ್ತಿಯು ದೀರ್ಘಕಾಲ ಬದುಕಲು ತನ್ನ ಜೀವನ ಶೈಲಿಯನ್ನು ಹೇಗೆ ಇಟ್ಟುಕೊಳ್ಳಬೇಕು ಎಂದು ಸಹ ತಿಳಿಸುತ್ತದೆ. ಈ ಬಗ್ಗೆ ಟೆಕ್ನಾಲಜಿಯು, ಹೇಗೆ ಕಾರ್ಯ ನಿರ್ವಹಿಸುತ್ತದೆ, ಅದನ್ನು ಹೇಗೆ ನಾವು ಸಹ ಬಳಸುವುದು, ಮಾಹಿತಿ ಹೇಗೆ ತಿಳಿಯುವುದು ಎಂಬಿತ್ಯಾದಿ ಕುತೂಹಲ ಮಾಹಿತಿ ತಿಳಿಯಲು ಇಂದಿನ ಲೇಖನ ಓದಿರಿ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಬಾಸ್ಟನ್‌ ಸ್ಕೂಲ್‌ ಆಫ್‌ ಮೆಡಿಷನ್‌ ವಿಶ್ವವಿದ್ಯಾಲಯದ, ಬಾಸ್ಟನ್‌ ಮೆಡಿಕಲ್‌ ಸೆಂಟರ್‌ನ ಮುಪ್ಪುಶಾಸ್ತ್ರಜ್ಞ (Geriatrician) "ಥಾಮಸ್‌ ಪರ್ಲ್ಸ್‌" ರವರು ಆನ್‌ಲೈನ್‌ ಕ್ಯಾಲ್ಕುಲೇಟರ್‌ ಒಂದನ್ನು ಅಭಿವೃದ್ದಿಪಡಿಸಿದ್ದು, ಅದು ವಿಜ್ಞಾನಿಗಳು ಹೇಗೆ ಬದುಕುವ ಜೀವಿತಾವಧಿಯನ್ನು ಅಂದಾಜಿಸಿ ಹೇಳುತ್ತಾರೆಯೋ ಹಾಗೆಯೇ ಈ ಆನ್‌ಲೈನ್‌ ಟೂಲ್‌ ವ್ಯಕ್ತಿಯೂ ಬದುಕುವ ಜೀವಿತಾವಧಿಯನ್ನು ಹೇಳುತ್ತದೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಆನ್‌ಲೈನ್‌ ಕ್ಯಾಲ್ಕುಲೇಟರ್‌ ನಿಮ್ಮ ಜೀವಿತಾವಧಿಯನ್ನು ಹೇಳಲು ನಿಮ್ಮ ಸೀಟ್‌ ಬೆಲ್ಟ್‌ ಬಳಕೆ ಬಗ್ಗೆ, ವ್ಯಕ್ತಿಯ ಕುಟುಂಬದ ವೈದ್ಯಕೀಯ ಇತಿಹಾಸ, ಆಹಾರ ಪದ್ಧತಿ, ಕೆಲಸದ ವೇಳೆ ಮತ್ತು ಇತರೆ ಕೆಲವು ಮಾಹಿತಿ ಕೇಳುತ್ತದಂತೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಆನ್‌ಲೈನ್‌ ಟೂಲ್‌ ಎಲ್ಲಾ ಮಾಹಿತಿ ಪಡೆದು ವ್ಯಕ್ತಿಗೆ ಬದುಕುವ ವರ್ಷಗಳ ಮಾಹಿತಿ ನೀಡುತ್ತದೆ. ನಂತರದಲ್ಲಿ ವ್ಯಕ್ತಿಯೂ ತಾನು ಬದುಕುವ ದಿನಗಳನ್ನು ಹೆಚ್ಚು ಮಾಡಿಕೊಳ್ಳಲು ಸಲಹೆಗಳನ್ನು ಬೇಕಾದರೆ ಕೇಳಬಹುದಂತೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಆನ್‌ಲೈನ್‌ ಕ್ಯಾಲ್ಕುಲೇಟರ್‌ನಲ್ಲಿ ನೀವು 40 ಪ್ರಶ್ನೆಗಳಿಗೆ ಕೇವಲ 10 ನಿಮಿಷಗಳಲ್ಲಿ ಉತ್ತರ ನೀಡಬೇಕಾಗಿದೆ. ಅಲ್ಲದೇ ನೀವು ಉತ್ತರ ಪಡೆಯುವ ಮುನ್ನ ನಿಮ್ಮ ಇಮೇಲ್‌ ವಿಳಾಸ ನೀಡಿ ಪಾಸ್‌ವರ್ಡ್‌ ಕ್ರಿಯೇಟ್‌ ಮಾಡಿಕೊಳ್ಳಬೇಕಿದೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಆನ್‌ಲೈನ್‌ ಕ್ಯಾಲ್ಕುಲೇಟರ್‌ನಲ್ಲಿ ವ್ಯಕ್ತಿ ತಾನು ಜೀವಿತಾವಧಿ ಬಗ್ಗೆ ಮಾಹಿತಿ ತಿಳಿಯುವ ಮೊದಲು ವೆಬ್‌ಸೈಟ್‌ ಕೆಲವು ವಯಕ್ತಿಕ ನಿಯಮಗಳನ್ನು ನೀಡುತ್ತದೆ. ಅದನ್ನು ಓದಿ ತಿಳಿದ ನಂತರ ಆನ್‌ಲೈನ್‌ ಟೂಲ್‌ ಅನ್ನು ಬಳಸಬೇಕೋ ಬೇಡವೋ ಎಂದು ನಿರ್ಧರಿಸಬಹುದಾಗಿದೆ. ಕಾರಣ ವ್ಯಕ್ತಿ ತಾನು ನೀಡುವ ಮಾಹಿತಿ ಮೂರನೇ ವ್ಯಕ್ತಿಗೆ ಹಂಚುವುದಾಗಿದೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಪಾಲಿಸಿಗಾಗಿ ಇಲ್ಲಿ ಕ್ಲಿಕ್‌ ಮಾಡಿ ಜೀವಿತಾವಧಿ ತಿಳಿಸುವ ಕ್ಯಾಲ್ಕುಲೇಟರ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  "ನೀವು ಆರೋಗ್ಯವಾಗಿರಲು ಏನು ಮಾಡಬೇಕು ಎಂದು ತಿಳಿಯಲು ಯಾವುದೇ ಜೆನೆಟಿಕ್‌ ಟೆಸ್ಟ್‌ ಮಾಡಬೇಕಿಲ್ಲ. ಹಾಗೂ ಹೇಗಿರಬೇಕು ಎಂದು ತಿಳಿಯಲು ಸಹ ಅದು ಅಗತ್ಯವಿಲ್ಲ. ನಾವು ಈಗಾಗಲೇ ತಿಳಿದಿದ್ದೇವೆ", ಎಂದು ಬಾಸ್ಟನ್‌ ಸ್ಕೂಲ್‌ ಆಫ್‌ ಮೆಡಿಷನ್‌ ವಿಶ್ವವಿದ್ಯಾಲಯದ, ಬಾಸ್ಟನ್‌ ಮೆಡಿಕಲ್‌ ಸೆಂಟರ್‌ನ ಮುಪ್ಪುಶಾಸ್ತ್ರಜ್ಞ (Geriatrician) "ಥಾಮಸ್‌ ಪರ್ಲ್ಸ್‌" ಹೇಳಿದ್ದಾರೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಥಾಮಸ್‌ ಪರ್ಲ್ಸ್‌ ರವರು ಹೆಚ್ಚು ಕಾಲ ಬದುಕಿದವರನ್ನು ಉದಾಹರಣೆ ನೀಡುತ್ತಾ "ಆರೋಗ್ಯವಾಗಿರಲು, ಧೂಮಪಾನ ಮಾಡಬೇಡಿ, ದಿನನಿತ್ಯ ವ್ಯಾಯಾಮ ಮಾಡುವುದು, ಧ್ಯಾನ ಮಾಡುವುದು, ಯೋಗ ಮಾಡುವುದು, ಅಲ್ಲದೇ ಒತ್ತಡವನ್ನು ನಿಯಂತ್ರಿಸಲು ಸಾಮಾಜಿಕ ಸಂಪರ್ಕ ಹೊಂದುವುದು ಸರಳ ವಿಧಾನಗಳು ಎಂದಿದ್ದಾರೆ.

  ವ್ಯಕ್ತಿಯ ಮರಣ ಯಾವಾಗ ಎಂದು ತಿಳಿಸುವ ಕ್ಯಾಲ್ಕುಲೇಟರ್‌

  ಪರ್ಲ್ಸ್‌ ರವರು ಪ್ರಪಂಚದಾದ್ಯಂತ 100 ವರ್ಷಗಳ ಕಾಲ ಬದುಕಿದವರ ಬಗ್ಗೆ ಅಧ್ಯಯನ ಮಾಡಿದ್ದಾರೆ.

  ಗಿಜ್‌ಬಾಟ್‌

  3 ದಶಲಕ್ಷ ಜಾಹೀರಾತುದಾರರನ್ನು ತಲುಪಿದ ಫೇಸ್‌ಬುಕ್‌: ರಹಸ್ಯವೇನು?

  ಬೆಂಗಳೂರು ಮಹಿಳೆ ಆಪಲ್‌ ಜಾಹೀರಾತಿನಲ್ಲಿ ಮಿಂಚಿದ್ದಾದರೂ ಹೇಗೆ?

  ವಾಟ್ಸಾಪ್‌ನಲ್ಲಿ ಡಾಕ್ಯುಮೆಂಟ್‌ಗಳನ್ನು ಶೇರ್‌ ಮಾಡುವುದು ಹೇಗೆ?

  ಗಿಜ್‌ಬಾಟ್‌

  ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
  ಕನ್ನಡ ಗಿಜ್‌ಬಾಟ್‌ ಟೆಕ್ನಾಲಜಿ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Online Calculator will tell you when you will die. Read more about this in kannada.gizbot.com

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more