Just In
- 43 min ago
ಸ್ಮಾರ್ಟ್ವಾಚ್ ಇಲ್ಲವೇ ಸ್ಮಾರ್ಟ್ಬ್ಯಾಂಡ್ ಖರೀದಿಸುವ ಪ್ಲ್ಯಾನ್ ಇದ್ರೆ, ಈ ಚಾನ್ಸ್ ಕಳ್ಕೋಬೇಡಿ!
- 1 hr ago
ಇಯರ್ಫೋನ್ ಖರೀದಿಸುವವರಿಗೆ ಅಮೆಜಾನ್ನಲ್ಲಿ ಸಿಗಲಿದೆ ಬಿಗ್ ಡಿಸ್ಕೌಂಟ್!
- 3 hrs ago
ವಾಟ್ಸಾಪ್, ಟೆಲಿಗ್ರಾಮ್ನಂತಹ ಆಪ್ಗಳ ನಿಯಂತ್ರಣಕ್ಕೆ ಸರ್ಕಾರದಿಂದ ಹೊಸ ಪ್ಲಾನ್!
- 4 hrs ago
ಇಂದು ಇನ್ಫಿನಿಕ್ಸ್ ಹಾಟ್ 12 ಪ್ರೊ ಫಸ್ಟ್ ಸೇಲ್; ಡಿಸ್ಕೌಂಟ್ ಎಷ್ಟು ಗೊತ್ತಾ?
Don't Miss
- Movies
ಉತ್ತರದಲ್ಲಿ ವಿಜಯ್ ದೇವರಕೊಂಡ ಸುನಾಮಿ: ಬಾಲಿವುಡ್ಡಿಗರಿಗೆ ಹೊಟ್ಟೆ ಉರಿ!
- News
KIAL: 2025ಕ್ಕೆ 'ಏರ್ಫೋರ್ಟ್ ಸ್ಮಾರ್ಟ್ಸಿಟಿ 1ನೇ ಹಂತ ಪೂರ್ಣ
- Lifestyle
ಬೆಚ್ಚಗಾಗಲು ಬಳಸುವ ರೂಮ್ ಹೀಟರ್ ಎಷ್ಟು ಅಪಾಯಕಾರಿ ಗೊತ್ತಾ?
- Sports
CWG 2022: ಶ್ರೀಲಂಕಾದ 10 ಕ್ರೀಡಾಪಟುಗಳು ನಾಪತ್ತೆ!: ಲಂಕಾ ಕ್ರೀಡಾಪಟುಗಳ ಈ ಚಾಳಿಯ ಇತಿಹಾಸವೇ ವಿಚಿತ್ರ!
- Finance
ಮುಕೇಶ್ ಅಂಬಾನಿ ಮಾಸಿಕ ವೇತನ ಕೇಳಿದ್ರೆ ಅಚ್ಚರಿ ಮೂಡುತ್ತೆ!
- Automobiles
ಫೋರ್ಡ್ ಇಂಡಿಯಾದ ಸನಂದ್ ಕಾರ್ಖಾನೆ ಟಾಟಾ ಮೋಟಾರ್ಸ್ ತೆಕ್ಕೆಗೆ: 726 ಕೋಟಿ ರೂ.ಗೆ ಖರೀದಿ
- Travel
ಭಾರತದಲ್ಲಿರುವ ಕೆಲವು ಸ್ಥಳಗಳು ಅಸ್ತಮಾ ರೋಗಿಗಳಿಗೆ ಸಲ್ಪ ಮಟ್ಟದಲ್ಲಿ ಅಪಾಯಕಾರಿಯಾಗಬಹುದು!
- Education
CSB Recruitment 2022 : 66 ಸೈಂಟಿಸ್ಟ್-ಬಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತದಲ್ಲಿ ಒಪ್ಪೋ A57 (2022) ಸ್ಮಾರ್ಟ್‌ಫೋನ್ ಅನಾವರಣ! ಬೆಲೆ ಎಷ್ಟು?
ಜನಪ್ರಿಯ ಸ್ಮಾರ್ಟ್‌ಫೋನ್ ಬ್ರ್ಯಾಂಡ್‌ಗಳಲ್ಲಿ ಒಪ್ಪೋ ಕಂಪೆನಿ ಕೂಡ ಒಂದಾಗಿದೆ. ಒಪ್ಪೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಕ್ಯಾಮೆರಾ ಫೀಚರ್ಸ್‌ಗಳಿಗೆ ಹೆಸರುವಾಸಿಯಾಗಿವೆ. ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಹೊಸ ಮಾದರಿಯನ್ನು ಪರಿಚಯಿಸಿದ ಕೀರ್ತಿ ಒಪ್ಪೋ ಬ್ರ್ಯಾಂಡ್‌ಗೆ ಸಲ್ಲುತ್ತದೆ. ಇದೇ ಕಾರಣಕ್ಕೆ ಒಪ್ಪೋ ಕಂಪೆನಿಯ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಸ್ಮಾರ್ಟ್‌ಫೋನ್ ಪ್ರಿಯರಿಗೆ ಸಾಕಷ್ಟು ನಿರೀಕ್ಷೆ ಇರುತ್ತದೆ. ಅದರಂತೆ ಒಪ್ಪೋ ಕಂಪೆನಿ ಇದೀಗ ಭಾರತದಲ್ಲಿ ತನ್ನ ಮತ್ತೊಂದು ಹೊಸ ಸ್ಮಾರ್ಟ್‌ಫೋನ್ ಒಪ್ಪೋ A57 (2022) ಅನ್ನು ಬಿಡುಗಡೆ ಮಾಡಿದೆ.

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ಹೊಸ ಒಪ್ಪೋ A57 (2022) ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಕೆಲವು ದಿನಗಳ ಹಿಂದೆ ಥೈಲ್ಯಾಂಡ್ ಮಾರುಕಟ್ಟೆಗೆ ಎಂಟ್ರಿ ನೀಡಿದ್ದ ಈ ಸ್ಮಾರ್ಟ್‌ಫೋನ್ ಇದೀಗ ಭಾರತಕ್ಕೂ ಎಂಟ್ರಿ ನೀಡಿದೆ. ಇನ್ನು ಈ ಫೀನ್ ಆಕ್ಟಾ-ಕೋರ್ ಮೀಡಿಯಾಟೆಕ್ G35 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್ ಮೆಮೊರಿ ಕಾರ್ಡ್ ಮೂಲಕ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವ ಅವಕಾಶವನ್ನು ಕೂಡ ಹೊಂದಿದೆ.

ಇನ್ನು ಒಪ್ಪೋ A57 (2022) ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನ್ ಗ್ಲೋಯಿಂಗ್ ಗ್ರೀನ್ ಮತ್ತ ಗ್ಲೋಯಿಂಗ್ ಬ್ಲ್ಯಾಕ್ ಕಲರ್ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಹಾಗಾದ್ರೆ ಒಪ್ಪೋ A57 (2022) ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತಿವಿ ಓದಿರಿ.

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ
ಒಪ್ಪೋ A57 (2022) ಸ್ಮಾರ್ಟ್‌ಫೋನ್ 6.56-ಇಂಚಿನ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 1,612x720 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದು 60Hz ರಿಫ್ರೆಶ್ ರೇಟ್ ಅನ್ನು ಹೊಂದಿದ್ದು, 600 ನಿಟ್ಸ್ ಗರಿಷ್ಠ ಬ್ರೈಟ್‌ನೆಸ್ ಅನ್ನು ನೀಡುವಂತೆ ವಿನ್ಯಾಸಗೊಳಿಸಲಾಗಿದೆ. ಇನ್ನು ಡಿಸ್‌ಪ್ಲೇ 84.2% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದ್ದು, 20:9 ರಚನೆಯ ಅನುಪಾತವನ್ನು ಪಡೆದಿದೆ.

ಪ್ರೊಸೆಸರ್ ಯಾವುದು?
ಇನ್ನು ಈ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾಟೆಕ್ ಹಿಲಿಯೋ G35 SoC ಪ್ರೊಸೆಸರ್ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಕಲರ್OS 12.1 ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 4GB RAM ಮತ್ತು 64GB ಇಂಟರ್ ಸ್ಟೋರೇಜ್ ಅನ್ನು ಹೊಂದಿದೆ. ಇದಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವಿದೆ.

ಕ್ಯಾಮೆರಾ ವಿಶೇಷ
ಒಪ್ಪೋ A57 (2022) ಸ್ಮಾರ್ಟ್‌ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಮೊನೊ ಲೆನ್ಸ್ ಅನ್ನು ಹೊಂದಿದೆ. ಇದಲ್ಲದೆ 8 ಮೆಗಾಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು ಈ ಸ್ಮಾರ್ಟ್‌ಫೋನ್ ಕ್ಯಾಮೆರಾ ಮೂಲಕ 30fps ನಲ್ಲಿ 1080p ವರೆಗೆ ವೀಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದೆ. ಇದಲ್ಲದೆ ಕ್ಯಾಮೆರಾದಲ್ಲಿ ಎಲ್ಇಡಿ ಫ್ಲ್ಯಾಷ್, ಎಚ್‌ಡಿಆರ್, ಪನೋರಮಾ ಫೀಚರ್ಸ್‌ಗಳನ್ನು ಕಾಣಬಹುದಾಗಿದೆ.

ಬ್ಯಾಟರಿ ಮತ್ತು ಇತರೆ
ಒಪ್ಪೋ A57 (2022) ಸ್ಮಾರ್ಟ್‌ಫೋನ್ 33W ಸೂಪರ್‌ವೂಕ್ ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಒಳಗೊಂಡಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G, ಬ್ಲೂಟೂತ್ 5.3, USB ಟೈಪ್-C ಪೋರ್ಟ್ ಮತ್ತು 3.mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಇದಲ್ಲದೆ ಬಯೋಮೆಟ್ರಿಕ್ಸ್‌ಗಾಗಿ ಫಿಂಗರ್‌ಪ್ರಿಂಟ್ ಮತ್ತು ಫೇಶಿಯಲ್ ರೆಕಗ್ನಿಷನ್ ಬೆಂಬಲವನ್ನು ಸಹ ಹೊಂದಿದೆ. ಹಾಗೆಯೇ ಜಿಯೋಮ್ಯಾಗ್ನೆಟಿಕ್ ಸೆನ್ಸರ್, ಆಂಬಿಯೆಂಟ್ ಲೈಟ್ ಸೆನ್ಸರ್, ಪ್ರಾಕ್ಸಿಮಿಟಿ ಸೆನ್ಸರ್, ಅಕ್ಸೆಲೆರೊಮೀಟರ್ ಸೆನ್ಸರ್ ಮತ್ತು ಗ್ರಾವಿಟಿ ಸೆನ್ಸರ್ ಗಳನ್ನು ಸಹ ಹೊಂದಿದೆ. ಜೊತೆಗೆ ಈ ಫೋನ್ ಬಾಕ್ಸ್‌ನಲ್ಲಿ, ಸ್ಮಾರ್ಟ್‌ಫೋನ್ ಜೊತೆಗೆ, ಗ್ರಾಹಕರು ಚಾರ್ಜಿಂಗ್ ಅಡಾಪ್ಟರ್, ಯುಎಸ್‌ಬಿ ಕೇಬಲ್, ಸಿಮ್ ಎಜೆಕ್ಟರ್ ಟೂಲ್ ಮತ್ತು ಸೆಕ್ಯುರ್ ಕೇಸ್ ಅನ್ನು ಪಡೆಯುತ್ತಾರೆ.

ಬೆಲೆ ಮತ್ತು ಲಭ್ಯತೆ
ಒಪ್ಪೋ A57 (2022) ಸ್ಮಾರ್ಟ್‌ಫೋನ್ ಭಾರತದಲ್ಲಿ ಏಕೈಕ 4GB RAM ಮತ್ತು 64GB ಇನ್‌ಬಿಲ್ಟ್ ಸ್ಟೋರೇಜ್ ರೂಪಾಂತರಕ್ಕೆ 13,999ರೂ.ಬೆಲೆಯನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಪ್ರಸ್ತುತ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಗ್ಲೋಯಿಂಗ್ ಗ್ರೀನ್ ಮತ್ತು ಗ್ಲೋಯಿಂಗ್ ಬ್ಲ್ಯಾಕ್ ಬಣ್ಣದ ಆಯ್ಕೆಗಳಲ್ಲಿ ಖರೀದಿಗೆ ಲಭ್ಯವಿದೆ. ಇನ್ನು ಒಪ್ಪೋ ಕಂಪೆನಿ ಇದೇ ಸ್ಮಾರ್ಟ್‌ಫೋನ್ ಅನ್ನು ಕಳೆದ ಮೇ ತಿಂಗಳಲ್ಲಿ ಥೈಲ್ಯಾಂಡ್‌ನಲ್ಲಿ THB 5,499 (ಅಂದಾಜು 12,100ರೂ)ಗಳಿಗೆ ಬಿಡುಗಡೆ ಮಾಡಿತು. ಅಂದರೆ ಈ ಸ್ಮಾರ್ಟ್‌ಫೋನ್ ಭಾರತದಲ್ಲಿ ಪಡೆದಿರುವ ಬೆಲೆಗಿಂತ ಕಡಿಮೆಬೆಲೆಯಲ್ಲಿ ಥೈಲ್ಯಾಂಡ್‌ನಲ್ಲಿ ದೊರೆಯಲಿದೆ.

ಇದಲ್ಲದೆ ಒಪ್ಪೋ ಕಂಪೆನಿ ಇದೇ ತಿಂಗಳು ಭಾರತದಲ್ಲಿ ಹೊಸ ಒಪ್ಪೋ K10 5G ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿತ್ತು. ಈ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್ ರೇಟ್ ಒಳಗೊಂಡಿದೆ. ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ನಲ್ಲಿ ಜೊತೆಗೆ ಕಲರ್‌ಓಎಸ್ 12.1 ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8 GB + 128 GB ಇಂಟರ್ ಸ್ಟೋರೇಜ್ ಹೊಂದಿದೆ. ಈ ಸ್ಮಾರ್ಟ್‌ಫೋನ್ ಡ್ಯುಯಲ್ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ವನ್ನು ಸಹ ಒಳಗೊಂಡಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
44,999
-
15,999
-
20,449
-
7,332
-
18,990
-
31,999
-
54,999
-
17,091
-
17,091
-
13,999
-
31,830
-
31,499
-
26,265
-
24,960
-
21,839
-
15,999
-
11,570
-
11,700
-
7,070
-
7,086