ಬೆಲೆ ಇಳಿಕೆ!..'ಒಪ್ಪೊ A5s' ಸ್ಮಾರ್ಟ್‌ಫೋನ್ ಖರೀದಿಗೆ ಸಕಾಲ!

|

ಚೀನಾ ಮೂಲದ ಒಪ್ಪೊ ಕಂಪನಿಯು ಈಗಾಗಲೇ ದೇಶಿಯ ಮಾರುಕಟ್ಟೆಯಲ್ಲಿ ಈಗಾಗಲೇ ತನ್ನ ಛಾಪನ್ನು ಮೂಡಿಸಿದ್ದು, ಇತ್ತೀಚಿಗೆ ಮಿಡ್‌ರೇಂಜ್ ಮಾದರಿಯಲ್ಲಿ 'ಒಪ್ಪೊ A5ಎಸ್‌' ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿ ಗ್ರಾಹಕರನ್ನು ಆಕರ್ಷಿಸಿತ್ತು. ಇದೀಗ ಕಂಪನಿಯು ಗ್ರಾಹಕರಿಗೆ ಮತ್ತೆ ಖುಷಿ ಸಮಾಚಾರ ನೀಡಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಭರ್ಜರಿ ಇಳಿಕೆ ಮಾಡಿದೆ.

ಬೆಲೆ ಇಳಿಕೆ!..'ಒಪ್ಪೊ A5s' ಸ್ಮಾರ್ಟ್‌ಫೋನ್ ಖರೀದಿಗೆ ಸಕಾಲ!

ಹೌದು, ಒಪ್ಪೊ ಕಂಪನಿಯು 'ಒಪ್ಪೊ A5ಎಸ್‌' ಸ್ಮಾರ್ಟ್‌ಫೋನಿನ 4GB RAM + 64GB ವೇರಿಯಂಟ್‌ನ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಈ ಫೋನ್‌ ಈಗ 11,990ರೂ.ಗಳಿಗೆ ದೊರೆಯಲಿದೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ತಾಣಗಳಲ್ಲಿ ಖರೀದಿಗೆ ಲಭ್ಯವಿದೆ. ಪ್ರಮುಖ ಮೀಡಿಯಾ ಟೆಕ್‌ ಹಿಲಿಯೊ ಪಿ35' ಪ್ರೊಸೆಸರ್‌ ಮತ್ತು 4,230mAh ಸಾಮರ್ಥ್ಯದ ಬ್ಯಾಟರಿ ಶಕ್ತಿ ಈ ಫೋನಿನ ಕೀ ಹೈಲೈಟ್ಸ್‌ಗಳಾಗಿವೆ. ಹಾಗಾದರೇ 'ಒಪ್ಪೊ A5ಎಸ್‌' ಸ್ಮಾರ್ಟ್‌ಫೋನಿನ್ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : 498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!ಓದಿರಿ : 498ರೂ.ಗಳ 'BSNL ಸ್ಟಾರ್‌ ಸದಸ್ಯತ್ವದ' ಪ್ಲ್ಯಾನ್‌ ಲಾಂಚ್!..ಭರ್ಜರಿ ಆಫರ್!

ಡಿಸ್‌ಪ್ಲೇ ಹೇಗಿದೆ

ಡಿಸ್‌ಪ್ಲೇ ಹೇಗಿದೆ

ಒಪ್ಪೊ ಸ್ಮಾರ್ಟ್‌ಫೋನ್ 6.2 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಇದರೊಂದಿಗೆ ವಾಟರ್‌ಡ್ರಾಪ್ ಸ್ಕ್ರೀನ್‌ ಸಹ ಇದೆ. ವಿಶಾಲವಾದ ಡಿಸ್‌ಪ್ಲೇಯು ವಿಡಿಯೊ ವೀಕ್ಷಣೆ ಮತ್ತು ಗೇಮ್ಸ್‌ ಆಡಲು ಅತ್ಯುತ್ತಮ ಎನಿಸಲಿದೆ. ಇನ್ನು ಡಿಸ್‌ಪ್ಲೆಯು 1520x720 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲ್ಲಿರುವ ಡಿಸ್‌ಪ್ಲೇಯು ಶೇ. 89.35%ರಷ್ಟು ಅನುಪಾತವನ್ನು ಪಡೆದುಕೊಂಡಿದೆ.

ಬಲವಾದ ಪ್ರೊಸೆಸರ್

ಬಲವಾದ ಪ್ರೊಸೆಸರ್

ಒಪ್ಪೊ A5ಎಸ್ ಸ್ಮಾರ್ಟ್‌ಫೋನ್ 'ಮೀಡಿಯಾ ಟೆಕ್‌ ಹಿಲಿಯೊ ಪಿ35' ಚಿಪ್‌ಸೆಟ್‌ ಬಲವಾದ ಪ್ರೊಸೆಸರ್‌ ಅನ್ನು ಹೊಂದಿದೆ. 4GB RAM + 64GB ಸ್ಟೋರೇಜ್‌ ಒಳಗೊಂಡಿದ್ದು, ಆಂಡ್ರಾಯ್ಡ್‌ ಓರಿಯೊ ಫೋನಿನ ಕಾರ್ಯವೈಖರಿ ಹೆಚ್ಚಿಸಿದೆ. ಈ ಪ್ರೊಸೆಸರ್ TSMCಯ 12nm FinFET ತಂತ್ರಜ್ಞಾನದಲ್ಲಿ ರಚಿತವಾಗಿದ್ದು, ಕೋರ್‌ಟೆಕ್ಸ್-A53 CPU ಸ್ಮಾರ್ಟ್‌ಫೋನಿಗೆ ಮತ್ತಷ್ಟು ಶಕ್ತಿ ಒದಗಿಸಿದೆ.

ಓದಿರಿ : ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!ಓದಿರಿ : ಮಿಸ್‌ ಕಾಲ್‌ ಮಾಡಿ ಉಚಿತ 'ಟಾಟಾಸ್ಕೈ ಫೈರ್‌ ಟಿವಿ ಸ್ಟಿಕ್' ಸೇವೆ ಪಡೆಯಿರಿ!

ವೇಗದ ಕಾರ್ಯವೈಖರಿ

ವೇಗದ ಕಾರ್ಯವೈಖರಿ

'ಒಪ್ಪೊ A5ಎಸ್' ಸ್ಮಾರ್ಟ್‌ಫೋನ್ ತನ್ನ ವರ್ಗದ ಇತರೆ ಫೋನ್‌ಗಳಿಂಗಿಂತ ಅತ್ಯುತ್ತಮ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ವೇಗದ ಕೆಲಸ ನಿರ್ವಹಣೆಯಲ್ಲಿ ಮುಂದಿದೆ. ಹಾಗೆಯೇ ಮಲ್ಟಿಟಾಸ್ಕ ಕೆಲಸಗಳನ್ನು ಸುಲಭವಾಗಿ ನಿರ್ವಹಿಸುವ ಶಕ್ತಿಯನ್ನು ಈ ಸ್ಮಾರ್ಟ್‌ಫೋನ್‌ ಪಡೆದುಕೊಂಡಿದ್ದು, ಅಧಿಕ ಡೇಟಾ ಗೇಮ್ಸ್‌ಗಳಿಗೆ ಸಪೋರ್ಟ್‌ ಮಾಡುತ್ತದೆ.

ಕ್ಯಾಮೆರಾ ಸ್ಪೆಷಲ್

ಕ್ಯಾಮೆರಾ ಸ್ಪೆಷಲ್

ಈ ಸ್ಮಾರ್ಟ್‌ಫೋನಿನ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾಗಳನ್ನು ಹೊಂದಿದ್ದು, 13ಮೆಗಾಪಿಕ್ಸಲ್‌ನಲ್ಲಿ ಮೊದಲ ಕ್ಯಾಮೆರಾ ಇದ್ದು, ಎರಡನೇ ಕ್ಯಾಮೆರಾವು ಡೆಪ್ತ್ ಸೆನ್ಸರ್‌ನೊಂದಿಗೆ 2 ಮೆಗಾಪಿಕ್ಸಲ್ ಸಾಮರ್ಥ್ಯದಲ್ಲಿದೆ. ಹಾಗೆಯೇ ಸೆಲ್ಫಿಗಾಗಿ 8ಮೆಗಾಪಿಕ್ಸಲ್ ಕ್ಯಾಮೆರಾವನ್ನು ನೀಡಲಾಗಿದ್ದು, ಕಡಿಮೆ ದರದಲ್ಲಿ ಇದು ಬೆಸ್ಟ್ ಕ್ಯಾಮೆರಾ ಆಗಿದೆ. ಸೆರೆಹಿಡಿದ ಫೋಟೊಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ.

ಓದಿರಿ : ಭರ್ಜರಿ ಡಿಸ್ಕೌಂಟ್ : ಫ್ಲಿಪ್‌ಕಾರ್ಟ್‌ನ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಶುರು!ಓದಿರಿ : ಭರ್ಜರಿ ಡಿಸ್ಕೌಂಟ್ : ಫ್ಲಿಪ್‌ಕಾರ್ಟ್‌ನ 'ಗ್ರ್ಯಾಂಡ್ ಗ್ಯಾಜೆಟ್‌ ಡೇಸ್' ಶುರು!

ಪವರ್‌ಫುಲ್ ಬ್ಯಾಟರಿ

ಪವರ್‌ಫುಲ್ ಬ್ಯಾಟರಿ

ಒಪ್ಪೊ ಈ ಸ್ಮಾರ್ಟ್‌ಫೋನಿನಲ್ಲಿ 4,230mAh ಸಾಮರ್ಥ್ಯದ ಬಲಶಾಲಿಯಾದ ಬ್ಯಾಟರಿಯನ್ನು ನೀಡಿದ್ದು, ಸುಮಾರು ಎರಡು ದಿನಗಳ ಮಟ್ಟಿಗೆ ಸ್ಮಾರ್ಟ್‌ಫೋನಿಗೆ ದೀರ್ಘಬಾಳಿಕೆ ಒದಗಿಸಲಿದೆ. MTK6765 ಪ್ರೊಸೆಸರ್ ಇದ್ದು, ಈ ಪ್ರೊಸೆಸರ್ ಕಡಿಮೆ ಬ್ಯಾಟರಿಯನ್ನು ಕನ್ಸೂಮ್‌ ಮಾಡಿಕೊಳ್ಳಲಿದೆ. 13.5 ಗಂಟೆಗಳ ವಿಡಿಯೊ ಪ್ಲೇಬ್ಯಾಕ್ ಶಕ್ತಿ ಹೊಂದಿದ್ದು, ಬ್ಯಾಟರಿ ಗೇಮಿಂಗ್‌ಗೆ ಪೂರಕವಾಗಿದೆ.

ಓದಿರಿ : ವಾಟ್ಸಪ್‌ ಸ್ಟೇಟಸ್‌ ಸೇವ್‌ ಮಾಡುವುದು ಸುಲಭ!..ಹೇಗೆ ಅಂತೀರಾ? ಓದಿರಿ : ವಾಟ್ಸಪ್‌ ಸ್ಟೇಟಸ್‌ ಸೇವ್‌ ಮಾಡುವುದು ಸುಲಭ!..ಹೇಗೆ ಅಂತೀರಾ?

Best Mobiles in India

English summary
Oppo A5s is listed with the new price on Amazon India, Paytm Mall, and Flipkart. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X