ಭಾರತದಲ್ಲಿ ಒಪ್ಪೋ F21s ಪ್ರೊ 5G ಸ್ಮಾರ್ಟ್‌ಫೋನ್‌ ಲಾಂಚ್‌!..ಪ್ರಮುಖ ಹೈಲೈಟ್‌ ಏನು?

|

ಜನಪ್ರಿಯ ಮೊಬೈಲ್ ತಯಾರಿಕಾ ಸಂಸ್ಥೆಗಳಲ್ಲಿ ಒಂದಾದ ಒಪ್ಪೋ ಸಂಸ್ಥೆಯು ತನ್ನ ಬಹು ನಿರೀಕ್ಷಿತ ಒಪ್ಪೋ F21s ಪ್ರೊ 5G ಮತ್ತು ಒಪ್ಪೋ F21s ಪ್ರೊ 4G ಸ್ಮಾರ್ಟ್‌ಫೋನ್‌ಗಳನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್‌ಫೋನ್‌ಗಳು ಟ್ರಿಪಲ್ ಕ್ಯಾಮೆರಾ ಸೆಟ್‌ಅಪ್‌ ಹಾಗೂ 4,500mAh ಸಾಮರ್ಥ್ಯದ ಬಿಗ್ ಬ್ಯಾಟರಿ ಫೀಚರ್ಸ್ ಅನ್ನು ಒಳಗೊಂಡಿವೆ. ಹಾಗೆಯೇ ಈ ಸ್ಮಾರ್ಟ್‌ಫೋನ್ 6GB RAM ಮತ್ತು 128GB ಆಂತರೀಕ ಸ್ಟೋರೇಜ್‌ ವೇರಿಯಂಟ್‌ ಮಾಡೆಲ್‌ ಅನ್ನು ಪಡೆದಿದೆ.

ಮಾದರಿಯ

ಹೌದು, ಒಪ್ಪೋ ಸಂಸ್ಥೆಯು ದೇಶದ ಮಾರುಕಟ್ಟೆಯಲ್ಲಿ ಒಪ್ಪೋ F21s ಪ್ರೊ 5G ಮತ್ತು ಒಪ್ಪೋ F21s ಪ್ರೊ 4G ಫೋನ್‌ಗಳನ್ನು ಲಾಂಚ್ ಮಾಡಿದೆ. ಇನ್ನು ಈ ಎರಡು ಫೋನ್‌ಗಳು ಮೀಡ್‌ರೇಂಜ್‌ ಮಾದರಿಯ ಸ್ಮಾರ್ಟ್‌ಫೋನ್‌ಗಳಾಗಿದ್ದು, ಈ ಎರಡು ಫೋನ್‌ಗಳು 8GB RAM + 128GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ಪಡೆದಿವೆ. ಜೊತೆಗೆ 6.43 ಇಂಚಿನ ಡಿಸ್‌ಪ್ಲೇಯನ್ನು ಪಡೆದಿದ್ದು, ಗೋಲ್ಡ್‌ ಹಾಗೂ ಬ್ಲ್ಯಾಕ್‌ ಬಣ್ಣಗಳಲ್ಲಿ ಲಭ್ಯವಾಗಲಿವೆ.

ಸೌಲಭ್ಯವನ್ನು

ಒಪ್ಪೋ F21s ಪ್ರೊ 5G ಮತ್ತು ಒಪ್ಪೋ F21s ಪ್ರೊ 4G ಫೋನ್‌ಗಳು 33W ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಇನ್‌ ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಸೌಲಭ್ಯವನ್ನು ಇದು ಒಳಗೊಂಡಿದೆ. ಹಾಗಾದರೇ ಒಪ್ಪೋ F21s ಪ್ರೊ 5G ಮತ್ತು ಒಪ್ಪೋ F21s ಪ್ರೊ 4G ಫೋನ್‌ಗಳ ಇತರೆ ಫೀಚರ್ಸ್‌ಗಳೆನು ಹಾಗೂ ಬೆಲೆ ಎಷ್ಟು ಎಂಬುದನ್ನು ಮುಂದೆ ತಿಳಿಯೋಣ ಬನ್ನಿರಿ.

ಒಪ್ಪೋ F21s ಪ್ರೊ 5G ಫೀಚರ್ಸ್‌

ಒಪ್ಪೋ F21s ಪ್ರೊ 5G ಫೀಚರ್ಸ್‌

ಒಪ್ಪೋ F21s ಪ್ರೊ 5G ಸ್ಮಾರ್ಟ್‌ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 60Hz ರೀಫ್ರೇಶ್ ರೇಟ್ ಅನ್ನು ಪಡೆದಿದೆ. ಡಿಸ್‌ಪ್ಲೇಯು 2400 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 695 5G SoC ಪ್ರೊಸೆಸರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಜೊತೆಗೆ ಈ ಫೋನ್ 8GB RAM ಮತ್ತು 128GB ಆಂತರಿಕ ಸೌಲಭ್ಯವನ್ನು ಪಡೆದಿದೆ.

ಫೋನ್

ಹಾಗೆಯೇ ಇದು ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ನಲ್ಲಿದೆ. ಹಾಗೆಯೇ ಈ ಫೋನ್ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 181 ಗ್ರಾಂ ತೂಕ ಪಡೆದಿದ್ದು, 3.5mm ಆಡಿಯೋ ಜಾಕ್‌ ಸೌಲಭ್ಯವನ್ನು ಪಡೆದಿದೆ.

ಒಪ್ಪೋ F21s ಪ್ರೊ 4G ಫೀಚರ್ಸ್‌

ಒಪ್ಪೋ F21s ಪ್ರೊ 4G ಫೀಚರ್ಸ್‌

ಒಪ್ಪೋ F21s ಪ್ರೊ 4G ಸ್ಮಾರ್ಟ್‌ಫೋನ್ 6.43 ಇಂಚಿನ ಪೂರ್ಣ HD+ AMOLED ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ರೀಫ್ರೇಶ್ ರೇಟ್ ಅನ್ನು ಪಡೆದಿದೆ. ಡಿಸ್‌ಪ್ಲೇಯು 2400 x 1080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದಲಿದೆ. ಹಾಗೆಯೇ ಈ ಫೋನ್ ಸ್ನಾಪ್‌ಡ್ರಾಗನ್ 680 5G SoC ಪ್ರೊಸೆಸರ್‌ ಅನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಅನ್ನು ಪಡೆದಿದೆ. ಜೊತೆಗೆ ಈ ಫೋನ್ 8GB RAM ಮತ್ತು 128GB ಆಂತರಿಕ ಸೌಲಭ್ಯವನ್ನು ಪಡೆದಿದೆ.

ಚಾರ್ಜಿಂಗ್

ಹಾಗೆಯೇ ಇದು ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್ ಅನ್ನು ಹೊಂದಿದೆ. ಇನ್ನು ಸೆಲ್ಫಿ ಕ್ಯಾಮೆರಾವು 16 ಮೆಗಾ ಪಿಕ್ಸಲ್‌ನಲ್ಲಿದೆ. ಹಾಗೆಯೇ ಈ ಫೋನ್ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, 33W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 181 ಗ್ರಾಂ ತೂಕ ಪಡೆದಿದ್ದು, 3.5mm ಆಡಿಯೋ ಜಾಕ್‌ ಸೌಲಭ್ಯವನ್ನು ಪಡೆದಿದೆ.

ಬೆಲೆ ಎಷ್ಟು ಮತ್ತು ಲಭ್ಯತೆ?

ಬೆಲೆ ಎಷ್ಟು ಮತ್ತು ಲಭ್ಯತೆ?

ಒಪ್ಪೋ F21s ಪ್ರೊ 5G ಮತ್ತು ಒಪ್ಪೋ F21s ಪ್ರೊ 4G ಈ ಎರಡು ಫೋನ್‌ಗಳು 8GB RAM ಮತ್ತು 128GB ವೇರಿಯಂಟ್‌ ಆಯ್ಕೆ ಪಡೆದಿವೆ. ಒಪ್ಪೋ F21s ಪ್ರೊ 5G ಫೋನಿನ ಬೆಲೆಯು 25,999ರೂ. ಗಳು ಆಗಿದ್ದು, ಅದೇ ರೀತಿ ಒಪ್ಪೋ F21s ಪ್ರೊ 4G ಫೋನಿನ ಬೆಲೆಯು 22,999ರೂ. ಗಳಾಗಿದೆ. ಇನ್ನು ಈ ಫೋನ್ ಗೋಲ್ಡ್ ಮತ್ತು ಸ್ಟಾರ್‌ಲೈಟ್ ಬ್ಲ್ಯಾಕ್‌ನಲ್ಲಿ ಲಭ್ಯವಿರುತ್ತದೆ. ಇನ್ನು ಅಮೆಜಾನ್‌ ತಾಣದಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
OPPO F21s Pro 5G, OPPO F21s Pro 4G with 4,500mAh battery launched in India. When is First sale, What is price and specifications Here is the Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X