ಭಾರತದಲ್ಲಿ ಒಪ್ಪೋ F3 ಈಗ ಅಗ್ಗ, ಪಡೆದಿದೆ ರೂ 3,000 ದರ ಕಡಿತ!

By Tejaswini P G
|

2017ರ ವರ್ಷಾಂತ್ಯದಲ್ಲಿ ಹಲವು ಕಂಪೆನಿಗಳು ತಮ್ಮ ಸ್ಮಾರ್ಟ್ಫೋನ್ ಗಳ ಮೇಲೇ ಭಾರೀ ದರ ಕಡಿತವನ್ನು ನೀಡುತ್ತಿದೆ. ಉಳಿದ ಕಂಪೆನಿಗಳಂತೆ ಒಪ್ಪೋ ಕೂಡ ತಮ್ಮ ಒಪ್ಪೋ F3 ಸ್ಮಾರ್ಟ್ಫೋನ್ ನ ಬೆಲೆಯಲ್ಲಿ ಭಾರೀ ಕಡಿತವನ್ನು ನೀಡಿದೆ.

ಭಾರತದಲ್ಲಿ ಒಪ್ಪೋ F3 ಈಗ ಅಗ್ಗ, ಪಡೆದಿದೆ ರೂ 3,000 ದರ ಕಡಿತ!


ಮೂಲತಃ ರೂ 19,990 ಬೆಲೆಯಲ್ಲಿ ಲಾಂಚ್ ಆಗಿದ್ದ ಒಪ್ಪೋ F3 ಗೆ ಲಭಿಸಿದೆ ಅದರ ಬೆಲೆಯಲ್ಲಿ ರೂ 3,000 ದಷ್ಟು ಭಾರೀ ಕಡಿತ! ಒಪ್ಪೋ F3 ಈಗ ಭಾರತದಲ್ಲಿ ಲಭಿಸಲಿದೆ ಕೇವಲ ರೂ 16,990ಕ್ಕೆ!. ಗ್ಯಾಜೆಟ್ಸ್ 360 ಯ ಅನುಸಾರ ಈ ಹೊಸ ಬೆಲೆ ಡಿಸೆಂಬರ್ 29 ರಿಂದ ಜಾರಿಗೆ ಬರಲಿದ್ದು, ಆಫ್ಲೈನ್ ರೀಟೈಲ್ ಮಾರಾಟಗಾರರು ಈ ಬೆಲೆಯಲ್ಲೇ ಮಾರಾಟ ಮಾಡಬೇಕಾಗಿದೆ.

ಒಪ್ಪೋ ಸಂಸ್ಥೆಯು ಒಪ್ಪೋ F3 ಅನ್ನು ಕಳೆದ ಮೇ ತಿಂಗಳಲ್ಲಿ ಲಾಂಚ್ ಮಾಡಿದ್ದು ಉತ್ತಮ ಫೀಚರ್ಗಳನ್ನು ಹೊಂದಿದೆ. ಈ ಸ್ಮಾರ್ಟ್ಫೋನ್ ನಲ್ಲಿ ಏನೇನು ಫೀಚರ್ಗಳಿವೆ ಎಂದು ಮತ್ತೊಮ್ಮೆ ಮೆಲುಕು ಹಾಕೋಣ.

5.5ಇಂಚ್ ಫುಲ್ HD(1080x1920 ಪಿಕ್ಸೆಲ್ಗಳು) ಇನ್-ಸೆಲ್ 2.5D ಕರ್ವ್ಡ್ ಡಿಸ್ಪ್ಲೇ ಹೊಂದಿರುವ ಒಪ್ಪೋ F3 ನಲ್ಲಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ನ ಹೊರಕವಚವೂ ಇದೆ. 1.5GHz ಮೀಡಿಯಾಟೆಕ್ MT6750T6 ಒಕ್ಟಾಕೋರ್ ಪ್ರಾಸೆಸರ್ ಹೊಂದಿರುವ ಈ ಸ್ಮಾರ್ಟ್ಫೋನ್ ಮಾಲಿ-T860 GPU ಮತ್ತು 4GB RAM ಕೂಡ ಹೊಂದಿದೆ. ಅಲ್ಲದೆ ಒಪ್ಪೋ F3 64GB ಇಂಟರ್ನಲ್ ಸ್ಟೋರೇಜ್ ಹೊಂದಿದ್ದು, ಇದನ್ನು ಮೈಕ್ರೋSD ಕಾರ್ಡ್ ಬಳಸಿ 128GB ವರೆಗೆ ವಿಸ್ತರಿಸಬಹುದಾಗಿದೆ.

ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!ಶಿಯೋಮಿಗೆ ಸೆಡ್ಡುಹೊಡೆದ ಸ್ಯಾಮ್‌ಸಂಗ್!..ಕೇವಲ 9,999ರೂ.ಗಳಿಗೆ ಗ್ಯಾಲಾಕ್ಸಿ ಆನ್ ನೆಕ್ಸ್ಟ್ ರಿಲೀಸ್!!

ಇನ್ನು ಇದರ ಕ್ಯಾಮೆರಾ ಕುರಿತು ಹೇಳುವುದಾದರೆ, ಒಪ್ಪೋ F3 ಯಲ್ಲಿದೆ 13MP ಪ್ರೈಮರಿ ಕ್ಯಾಮೆರಾ ಸೆನ್ಸರ್ ಮತ್ತು LED ಫ್ಲ್ಯಾಶ್. ಇನ್ನು ಸ್ಮಾರ್ಟ್ಫೋನ್ ನ ಮುಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಇದ್ದು 16MP 1.3 ಇಂಚ್ ಸೆನ್ಸರ್ f/2.0 ಅಪರ್ಚರ್ ಲೆನ್ಸ್ ಮತ್ತು 8MP ಸೆಕೆಂಡರಿ ಸೆನ್ಸರ್ 120 ಡಿಗ್ರೀ ವೈಡ್-ಆಂಗಲ್ ಲೆನ್ಸ್ ಸಹಿತ ಇದೆ.

How to Sharing a Mobile Data Connection with Your PC (KANNADA)

ಒಪ್ಪೋ F3 ಸ್ಮಾರ್ಟ್ ಫೇಶಿಯಲ್ ರೆಕಗ್ನಿಶನ್ ಫೀಚರ್ ಹೊಂದಿದ್ದು, ಈ ಫೀಚರ್ ಸೆಲ್ಫ್ ಪೋರ್ಟ್ರೇಯ್ಟ್ ಶಾಟ್ ಗಳನ್ನು ಸೆರೆಹಿಡಿಯಲು ಯಾವ ಲೆನ್ಸ್ ಉತ್ತಮ ಎಂದು ಸಲಹೆ ನೀಡುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಲ್ಲಿ ಬ್ಯೂಟಿಫೈ 4.0, ಸೆಲ್ಫೀ ಪ್ಯಾನರೋಮಾ, ಸ್ಕ್ರೀನ್ ಫ್ಲ್ಯಾಶ್ ಮತ್ತು ಪಾಮ್ ಶಟರ್ ಮೊದಲಾದ ನೂತನ ಮೋಡ್ಗಳು ಇದೆ.

ಆಂಡ್ರಾಯ್ಡ್ 6.0 ಮಾರ್ಶ್ಮೆಲ್ಲೋ ಹೊಂದಿರುವ ಒಪ್ಪೋ F3 ಕಲರ್OS3.0 ಕೂಡ ಹೊಂದಿದೆ. ಇದರಲ್ಲಿದೆ 3200mAh ನಾನ್-ರಿಮೂವೆಬಲ್ ಬ್ಯಾಟರಿ. ಒಪ್ಪೋ F3 ಡ್ಯುಯಲ್ ಸಿಮ್ ಫೋನ್ ಆಗಿದ್ದು 4G VoLTE, ವೈಫೈ 802.11 a/b/g/n/ac, ಬ್ಲೂಟೂತ್ v4.0, GPS/A-GPS, 3.5mm ಆಡಿಯೋ ಜ್ಯಾಕ್ ಮತ್ತು ಮೈಕ್ರೋ-USB ಮೊದಲಾದ ಕನೆಕ್ಟಿವಿಟಿ ಫೀಚರ್ಗಳನ್ನು ಹೊಂದಿದೆ. ಕಂಪಾಸ್ ಮ್ಯಾಗ್ನೆಟೋಮೀಟರ್, ಪ್ರಾಕ್ಸಿಮಿಟಿ ಸೆನ್ಸರ್, ಅಕ್ಸೆಲೆರೋಮೀಟರ್, ಆಂಬಿಯೆಂಟ್ ಲೈಟ್ ಸೆನ್ಸರ್, ಗೈರೋಸ್ಕೋಪ್ ಮೊದಲಾದ ಸೆನ್ಸರ್ ಗಳು ಕೂಡ ಇದರಲ್ಲಿವೆ. 153.3x75.3x7.3 mm ಗಾತ್ರದ ಒಪ್ಪೋ F3 ಯ ತೂಕ 153 ಗ್ರಾಂ ಆಗಿದೆ.

Best Mobiles in India

Read more about:
English summary
As the year comes to an end, Oppo amongst other smartphone brands has now announced a price cut on its popular smartphone Oppo F3.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X