ಬರಲಿದೆ ಒಪ್ಪೋ F3 ರೆಡ್ ಆವೃತ್ತಿ: ವಿಶೇಷತೆಗಳೇನು..?

Written By: Lekhaka

ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಹೆಚ್ಚು ಖ್ಯಾತಿಯನ್ನು ಪಡೆದುಕೊಳ್ಳುತ್ತಿದೆ. ಈಗಾಗಲೇ ಒಪ್ಪೋ ಬಿಡುಗಡೆ ಮಾಡಿರುವ ಒಪ್ಪೋ F3 ಸ್ಮಾರ್ಟ್ ಫೋನ್ ಗಳು ಹೆಚ್ಚು ಮಾರಾಟವಾಗುತ್ತಿದೆ. ಈ ಕಾರಣಕ್ಕಾಗಿ ಕಂಪನಿ ಒಪ್ಪೋ F3 ರೆಡ್ ಆವೃತ್ತಿಯನ್ನು ಬಿಡುಗಡೆ ಮಾಡಲು ಚಿಂತನೆ ನಡೆಸಿದೆ.

ಬರಲಿದೆ ಒಪ್ಪೋ F3 ರೆಡ್ ಆವೃತ್ತಿ: ವಿಶೇಷತೆಗಳೇನು..?

ಆಗಸ್ಟ್ 12ಕ್ಕೆ ಈ ಸ್ಮಾರ್ಟ್ ಫೋನ್ ಲಾಂಚ್ ಆಗಲಿದೆ. ಫೇಸ್ ಬುಕ್ ನಲ್ಲಿ ಕಂಪನಿಯೇ ಈ ಬಗ್ಗೆ ಮಾಹಿತಿಯನ್ನು ನೀಡಿದೆ. ಆದರೆ ಈ ಒಪ್ಪೋ F3 ರೆಡ್ ಆವೃತ್ತಿಯ ಬೆಲೆಯ ಬಗ್ಗೆ ಯಾವುದೇ ಮಾಹಿತಿಯನ್ನು ಕಂಪನಿಯೂ ಬಿಟ್ಟುಕೊಟ್ಟಿಲ್ಲ. ಈಗಾಗಲೇ ಭಾರತದಲ್ಲಿ ರೋಸ್ ರೆಡ್ ಬಣ್ಣದ ಫೋನ್ ಲಭ್ಯವಿದೆ.

ಒಪ್ಪೋ F3 ರೆಡ್ ಸ್ಮಾರ್ಟ್ ಫೋನ್ ಆಕ್ಟಾ ಕೋರ್ ಮಿಡಿಯಾ ಟೆಕ್ MT6750T ಪ್ರೋಸೆಸರ್ ಅನ್ನು ಹೊಂದಿದ್ದು, ಇದರೊಂದಿಗೆ ಮೇಲ್ T86-MP2 GPU ಸಹ ಇದರಲ್ಲಿದೆ. 4GB RAM ಮತ್ತು 64GB ಇಂಟರ್ನಲ್ ಮೆಮೊರಿ ಕಾಣಬಹುದಾಗಿದ್ದು, SD ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳುವ ಅವಕಾಶ ನೀಡಿದೆ.

ಲೆನೊವೊ K8 ನೋಟ್ ಲಾಂಚ್: ಬೆಲೆ, ವಿಶೇಷತೆಗಳು.!!

ಅಲ್ಲದೇ ಈ ಫೋನಿನ ವಿಶೇಷತೆ ಎಂದರೆ ಮುಂಭಾಗದಲ್ಲಿ ಸೆಲ್ಪಿಗಾಗಿಯೇ ಡ್ಯುಯಲ್ ಕ್ಯಾಮೆರಾ ನೀಡಲಾಗಿದೆ. 16 MP + 8 MP ಡ್ಯುಯಲ್ ಫ್ರಂಟ್ ಕ್ಯಾಮೆರಾ ಇದರಲ್ಲಿದ್ದು, ಹಿಂಭಾಗದಲ್ಲಿ 13 MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದು HD ವಿಡಿಯೋ ರೆಕಾರ್ಡಿಂಗ್ ಮಾಡಲು ಶಕ್ತವಾಗಿದೆ.

ಒಪ್ಪೋ F3 ರೆಡ್ ಫೋನಿನಲ್ಲಿ 3200mAh ಬ್ಯಾಟರಿಯನ್ನು ನೀಡಲಾಗಿದ್ದು, ಆಂಡ್ರಾಯ್ಡ್ 6.0 ಮತ್ತು ಕಲರ್ UI 3.0 ದಲ್ಲಿ ಕಾರ್ಯನಿರ್ವಹಿಸಲಿದೆ.

Read more about:
English summary
The launch of the Oppo F3 Red variant will coincide with the opening of a new Oppo concept store in the Philippines.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot