ಒಪ್ಪೋ ದೊಂದಿಗೆ ಕೈ ಜೋಡಿಸಿದ ಜಿಯೋ: ಕೊಟ್ಟಿದೆ ಬಂಪರ್ ಆಫರ್

Written By:

ಈಗಾಗಲೇ ಮೊಬೈಲ್ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಚೀನಾ ಮೂಲದ ಸ್ಮಾರ್ಟ್‌ಫೋನ್ ಕಂಪನಿ ಒಪ್ಪೋ, ಟೆಲಿಕಾಂ ವಲಯದಲ್ಲಿ ದೈತ್ಯ ಕಂಪನಿಯಾಗಿ ಬೆಳೆಯುತ್ತಿರುವ ಜಿಯೋದೊಂದಿಗೆ ಕೈ ಜೋಡಿಸಿದ್ದು, ಈ ಮೂಲಕ ಒಪ್ಪೋ ತನ್ನ ಬಳಕೆದಾರರಿಗೆ ಜಿಯೋ ದಿಂದ ಹೆಚ್ಚಿನ ಡೇಟಾ ಸೇವೆಯನ್ನು ನೀಡಲು ಮುಂದಾಗಿದೆ.

ಒಪ್ಪೋ ದೊಂದಿಗೆ ಕೈ ಜೋಡಿಸಿದ ಜಿಯೋ: ಕೊಟ್ಟಿದೆ ಬಂಪರ್ ಆಫರ್

ಓದಿರಿ: ಯಾರಿಗೂ ತಿಳಿದಿಲ್ಲ ಈ ಟ್ರಿಕ್: ಅಮೆಜಾನ್ ಪ್ರೈಮ್ ವಿಡಿಯೋ ಡೌನ್‌ಲೋಡ್ ಮಾಡಿ, ಸ್ನೇಹಿತರಿಗೂ ಹಂಚಿ..!

ಜಿಯೋ-ಒಪ್ಪೋ ಹೆಚ್ಚುವರಿ ಡೇಟಾ ಆಫರ್ ಈಗಾಗಲೇ ಜಾರಿಯಲ್ಲಿದ್ದೂ ಒಪ್ಪೋ ನೂತನ ಸ್ಮಾರ್ಟ್‌ಫೋನ್ ಕೊಳ್ಳುವವರಿಗೆ ಜಿಯೋದಿಂದ ಹೆಚ್ಚುವರಿ ಡೇಟಾ ಆಯ್ಕೆಯು ದೊರೆಯಲಿದೆ ಎನ್ನಲಾಗಿದೆ. ಈ ಆಫರ್ ಒಪ್ಪೋ ಬಿಡುಗಡೆ ಮಾಡಿರುವ ಎಲ್ಲಾ 4G ಗಳಲ್ಲೂ ಲಭ್ಯವಿರಲಿದೆ. ಒಟ್ಟು 100GB ಡೇಟಾ ಬಳಕೆಗೆ ದೊರೆಯಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಪ್ಪೋ F5 ಬಿಡುಗಡೆ ಸಂಭ್ರಮದಲ್ಲಿ:

ಒಪ್ಪೋ F5 ಬಿಡುಗಡೆ ಸಂಭ್ರಮದಲ್ಲಿ:

ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಸೆಲ್ಫಿ ಎಕ್ಸ್‌ಪರ್ಟ್ ಒಪ್ಪೋ F5 ಸ್ಮಾರ್ಟ್‌ಫೋನ್ ಬಿಡುಗಡೆ ಸಂಭ್ರಮದಲ್ಲಿ ಜಿಯೋದೊಂದಿಗೆ ಒಪ್ಪಂದವನ್ನು ಮಾಡಿಕೊಂಡಿದೆ ಎನ್ನಲಾಗಿದೆ. ಇದರಿಂದಾಗಿ ಒಪ್ಪೋ-ಜಿಯೋ ಎರಡಕ್ಕೂ ಲಾಭವಾಗಲಿದೆ.

ಯಾವ ಫೋನ್‌ಗಳ ಮೇಲೆ ಆಫರ್:

ಯಾವ ಫೋನ್‌ಗಳ ಮೇಲೆ ಆಫರ್:

ಒಪ್ಪೋ ಎಫ್ 5, ಒಪ್ಪೋ ಎಫ್ 3, ಒಪ್ಪೋ ಎಫ್ 3 ಪ್ಲಸ್, ಒಪ್ಪೋ ಎಫ್ 1 ಪ್ಲಸ್, ಒಪ್ಪೋ ಎಫ್ 1, ಒಪ್ಪೋ ಎ 33 ಎಫ್, ಒಪ್ಪೋ ಎ 37 ಎಫ್, ಒಪ್ಪೋ ಎ 37 ಎಫ್, ಒಪ್ಪೋ ಎ 57, ಮತ್ತು ಒಪ್ಪೋ ಎ 71 ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ ಈ ಅಫರ್ ಪಡೆಯಬಹುದಾಗಿದೆ.

ಆಫರ್ ಪಡೆಯುವುದು ಹೇಗೆ;

ಆಫರ್ ಪಡೆಯುವುದು ಹೇಗೆ;

ಈ ಆಫರ್ ಅನ್ನು ಪಡೆದುಕೊಳ್ಳುವ ಸಲುವಾಗಿ ಈ ಫೋನಿನಲ್ಲಿ ಮೈ ಜಿಯೋ ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ನಂತರ ಈ ಸ್ಟೆಪ್‌ಗಳನ್ನು ಅನುಸರಿಸಿರಿ. MyJio> My Vouchers> View Voucher> Recharge> Recharge my Number > Confirm Recharge >

ಎಷ್ಟಕ್ಕೆ ರೀಚಾರ್ಜ್ ಮಾಡಿಸಬೇಕು:

ಎಷ್ಟಕ್ಕೆ ರೀಚಾರ್ಜ್ ಮಾಡಿಸಬೇಕು:

ಒಪ್ಪೋ ಸ್ಮಾರ್ಟ್‌ಪೋನ್ ಖರೀದಿ ಮಾಡಿದ ನಂತರದಲ್ಲಿ ನೀವು ಜಿಯೋ ಗೆ ರೂ.309 ರಿಚಾರ್ಜ್ ಮಾಡಿಸಿಕೊಂಡರೆ ಒಟ್ಟು 100GB ಡೇಟಾ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Oppo joins hand with Reliance Jio, offers 100 GB of additional 4G data. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot