ಇಂದು ಒಪ್ಪೋ K10 5G ಫಸ್ಟ್‌ ಸೇಲ್‌!..ಈ ಫೋನ್ ನೀವು ಖರೀದಿಸ್ತೀರಾ?

|

ಪ್ರಮುಖ ಮೊಬೈಲ್‌ ಬ್ರ್ಯಾಂಡ್‌ಗಳಲ್ಲಿ ಒಂದಾದ ಒಪ್ಪೋ, ಇತ್ತೀಚಿಗೆ ದೇಶಿಯ ಮಾರುಕಟ್ಟೆಗೆ ಪರಿಚಯಿಸಿರುವ ನೂತನ ಒಪ್ಪೋ K10 5G ಸ್ಮಾರ್ಟ್‌ಫೋನ್‌ ಕೆಲವು ಫೀಚರ್ಸ್‌ಗಳಿಂದ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್‌ ಜನಪ್ರಿಯ ಫ್ಲಿಪ್‌ಕಾರ್ಟ್‌ ತಾಣದ ಮೂಲಕ ಇಂದು (ಜೂ. 15) ಮೊದಲ ಸೇಲ್‌ ಪ್ರಾರಂಭಿಸಲಿದೆ. ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಮತ್ತು 8 GB + 128 GB ಸ್ಟೋರೇಜ್‌ ಆಯ್ಕೆಗಳು ಪ್ಲಸ್‌ ಪಾಯಿಂಟ್‌ ಆಗಿ ಕಾಣಿಸಿಕೊಂಡಿವೆ.

ಡ್ಯುಯಲ್‌

ಹೌದು, ಒಪ್ಪೋ ಸಂಸ್ಥೆಯ ಹೊಸ ಒಪ್ಪೋ K10 5G ಸ್ಮಾರ್ಟ್‌ಫೋನ್‌ ಇಂದು ಖರೀದಿಗೆ ಲಭ್ಯವಾಗಲಿದೆ. ಈ ಫೋನ್ ಡ್ಯುಯಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಜೊತೆಗೆ 5,000 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಇನ್ನು ಈ ಫೋನ್‌ ಬ್ಲ್ಯಾಕ್ ಕಾರ್ಬನ್ ಮತ್ತು ಬ್ಲೂ ಫ್ಲೇಮ್ ಕಲರ್‌ ಆಯ್ಕೆಗಳಲ್ಲಿ ಲಭ್ಯ ಇದೆ. ಹಾಗಾದರೇ ಈ ಸ್ಮಾರ್ಟ್‌ಫೋನ್‌ ಬೆಲೆ ಎಷ್ಟು?..ಇದರ ಫೀಚರ್ಸ್‌ಗಳೇನು?..ಖರೀದಿಗೆ ಯೋಗ್ಯವೇ? ಈ ಬಗ್ಗೆ ಮುಂದಿನ ಸ್ಲೈಡ್‌ಗಳಲ್ಲಿ ತಿಳಿಯೋಣ ಬನ್ನಿರಿ.

ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ

ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯ

ಒಪ್ಪೋ K10 5G ಸ್ಮಾರ್ಟ್‌ಫೋನ್‌ 1,080 x 1920 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.5 ಇಂಚಿನ ಫುಲ್‌ ಹೆಚ್‌ಡಿ ಎಲ್‌ಸಿಡಿ ಡಿಸ್‌ಪ್ಲೇಯನ್ನು ಹೊಂದಿದೆ. ಈ ಫೋನಿನ ರಚನೆಯು 7.99 ಎಂ.ಎಂ ನಲ್ಲಿ ತಿಳುವಾಗಿದ್ದು, ಪ್ರತಿ ಆಂಗಲ್‌ನಿಂದಲೂ ಗಮನ ಸೆಳೆಯುವ ಅದ್ಭುತ ವಿನ್ಯಾಸವನ್ನು ಹೊಂದಿದೆ. ಈ ಡಿಸ್‌ಪ್ಲೇ 90Hz ರಿಫ್ರೆಶ್‌ ರೇಟ್‌ ಒಳಗೊಂಡಿದೆ. ಇದರ ಹಿಂದಿನ ಫಲಕವು ಫಿಂಗರ್‌ಪ್ರಿಂಟ್ ಮತ್ತು ಸ್ಕ್ರಾಚ್-ನಿರೋಧಕವಾಗಿದೆ. ಹಾಗೆಯೇ ಈ ಸ್ಮಾರ್ಟ್‌ಫೋನ್ IPX4 ಜಲ ನಿರೋಧಕ ರೇಟಿಂಗ್ ಅನ್ನು ಸಹ ಹೊಂದಿದೆ.

ವೇಗದ ಪ್ರೊಸೆಸರ್‌ ಇದೆಯಾ?

ವೇಗದ ಪ್ರೊಸೆಸರ್‌ ಇದೆಯಾ?

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 810 SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ನಲ್ಲಿ ಜೊತೆಗೆ ಕಲರ್‌ಓಎಸ್‌ 12.1 ಕಾರ್ಯ ನಿರ್ವಹಿಸುತ್ತದೆ. ಹಾಗೆಯೇ 8 GB + 128 GB ಇಂಟರ್‌ ಸ್ಟೋರೇಜ್‌ ಹೊಂದಿದೆ. ಇದಲ್ಲದೆ ಮೈಕ್ರೋ SD ಕಾರ್ಡ್ ಮೂಲಕ ಬಾಹ್ಯ ಸಂಗ್ರಹ ಸಾಮರ್ಥ್ಯ ವನ್ನು 512GB ವರೆಗೂ ವಿಸ್ತರಿಸುವುದಕ್ಕೆ ಅವಕಾಶವನ್ನು ಸಹ ನೀಡದೆ. ಈ ಫೋನಿನ RAM ಆಯ್ಕೆಯು ದೈನಂದಿನ ಬಳಕೆಗೆ ಪೂರಕೆ ಎನಿಸುತ್ತದೆ. ಆದಾಗ್ಯೂ, ಈ ಡಿವೈಸ್‌ 5GB ಹೆಚ್ಚುವರಿ RAM ಸಾಮರ್ಥ್ಯವನ್ನು ಅನುಮತಿಸುವ RAM ವಿಸ್ತರಣೆಯ ಆಯ್ಕೆಯನ್ನು ಸಹ ಹೊಂದಿದೆ. ಮಲ್ಟಿ ಆಪ್‌ಗಳ ಬಳಕೆಗೂ ಪೂರಕ ಎನಿಸುತ್ತದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ?

ಕ್ಯಾಮೆರಾ ಸೆನ್ಸಾರ್ ಹೇಗಿದೆ?

ಒಪ್ಪೋ K10 5G ಸ್ಮಾರ್ಟ್‌ಫೋನ್‌ ಡ್ಯುಯಲ್‌ ಕ್ಯಾಮೆರಾ ಸೆಟ್‌ಅಪ್ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 48 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌ ಹೊಂದಿದೆ. ಇದರೊಂದಿಗೆ 8 ಮೆಗಾ ಪಿಕ್ಸೆಲ್ AI ಸೆಲ್ಫಿ ಕ್ಯಾಮೆರಾ ವನ್ನು ಸಹ ಒಳಗೊಂಡಿದೆ.

ಬ್ಯಾಟರಿ ಮತ್ತು ಇತರೆ ಕನೆಕ್ಟಿವಿಟಿ ಸೌಲಭ್ಯಗಳು ಏನು?

ಬ್ಯಾಟರಿ ಮತ್ತು ಇತರೆ ಕನೆಕ್ಟಿವಿಟಿ ಸೌಲಭ್ಯಗಳು ಏನು?

ಒಪ್ಪೋ K10 5G ಸ್ಮಾರ್ಟ್‌ಫೋನ್‌ 5,000 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದಕ್ಕೆ ಪೂರಕವಾಗಿ 33W SUPERVOOC ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಒಳಗೊಂಡಿದೆ. ಇದಲ್ಲದೆ ಬಯೋಮೆಟ್ರಿಕ್ ದೃಢೀಕರಣಕ್ಕಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಹೊಂದಿದೆ. ಇದರೊಂದಿಗೆ ಬ್ಯಾಟರಿಯು ಪೋರ್ಟ್ ಆಂಟಿ-ಬರ್ನ್ ಪ್ರೊಟೆಕ್ಷನ್ ಫೀಚರ್ಸ್‌ ಬರುತ್ತದೆ ಅದು ಚಾರ್ಜಿಂಗ್ ಸಮಯದಲ್ಲಿ ಸಾಧನವನ್ನು ಬಿಸಿ ಮಾಡುವುದನ್ನು ತಡೆಯುತ್ತದೆ.

ಆಡಿಯೋ ಫೀಚರ್

ಆಡಿಯೋ ಫೀಚರ್

ಒಪ್ಪೋ K10 5G ಫೋನ್ ಅಲ್ಟ್ರಾ-ಲೀನಿಯರ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಅನ್ನು ಹೊಂದಿದ್ದು ಅದು ಬಳಕೆದಾರರು ಚಲನಚಿತ್ರವನ್ನು ವೀಕ್ಷಿಸುತ್ತಿರುವಾಗ ಅಥವಾ ಮೆಚ್ಚಿನ ಮೊಬೈಲ್ ಗೇಮ್ ಅನ್ನು ಆಡುತ್ತಿರುವಾಗ ನಿಮ್ಮನ್ನು ಹಿಮ್ಮೆಟ್ಟಿಸುವ ತಲ್ಲೀನಗೊಳಿಸುವ ಸರೌಂಡ್ ಸೌಂಡ್ ಆಡಿಯೊ ಅನುಭವದಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳಲು ಅಕೌಸ್ಟಿಕ್ ಫೀಸ್ಟ್ ಅನ್ನು ನೀಡುತ್ತದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಒಪ್ಪೋ K10 5G ಕೇವಲ ಒಂದು ವೇರಿಯಂಟ್‌ ಆಯ್ಕೆ ಪಡೆದಿದ್ದು, ಅದು 8 GB + 128 GB ಆಗಿದೆ. ಇನ್ನು ಭಾರತದಲ್ಲಿ ಈ ಫೋನಿನ ಬೆಲೆ 17,499 ರೂ. ಆಗಿದೆ. ಇನ್ನು ಈ ಫೋನ್ ಇಂದು (ಜೂನ್ 15 ರಿಂದ) ಫ್ಲಿಪ್‌ಕಾರ್ಟ್‌ ಇ ಕಾಮರ್ಸ್‌ ಪ್ಲಾಟ್‌ಫಾರ್ಮ್ ನಲ್ಲಿ, ಒಪ್ಪೋ ಸ್ಟೋರ್‌ನಲ್ಲಿ ಹಾಗೂ ಪ್ರಮುಖ ರೀಟೇಲ್‌ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಾಗಲಿದೆ.

ಏನಾದ್ರೂ ಆಫರ್‌ ಇದೆಯಾ?

ಏನಾದ್ರೂ ಆಫರ್‌ ಇದೆಯಾ?

ಒಪ್ಪೋ K10 5G ಫೋನ್ ಅನ್ನು ಖರೀದಿಸುವ ಗ್ರಾಹಕರು 3 ತಿಂಗಳವರೆಗೆ ಯಾವುದೇ ವೆಚ್ಚದ EMI ಅಥವಾ SBI ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳು ಮತ್ತು EMI ವಹಿವಾಟುಗಳಲ್ಲಿ 1,500 ರೂ. ಗಳ ಫ್ಲಾಟ್ ರಿಯಾಯಿತಿಯಂತಹ ಮಾರಾಟದ ಕೊಡುಗೆಗಳನ್ನು ಪಡೆಯಬಹುದು. ಆಕ್ಸಿಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕ್‌ನಿಂದ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳನ್ನು ಹೊಂದಿರುವ ಗ್ರಾಹಕರು ಸಹ ಫ್ಲಾಟ್ ರಿಯಾಯಿತಿ ಕೊಡುಗೆಯನ್ನು ಪಡೆಯಬಹುದಾಗಿದೆ.

ಈ ಫೋನ್‌ ಖರೀದಿಸಬಹುದೇ?

ಈ ಫೋನ್‌ ಖರೀದಿಸಬಹುದೇ?

ಒಪ್ಪೋ K10 5G ಫೋನ್ ಕೆಲವೊಂದು ಫೀಚರ್ಸ್‌ಗಳು ಗ್ರಾಹಕರಿಗೆ ಟ್ರೆಂಡಿ ಎನಿಸಿವೆ. ಅದಾಗ್ಯೂ, 17,499 ರೂ. ಪ್ರೈಸ್‌ಟ್ಯಾಗ್‌ ಹೊಂದಿರುವ ಈ ಫೋನಿನಲ್ಲಿ ಡ್ಯುಯಲ್‌ ರಿಯರ್‌ ಕ್ಯಾಮೆರಾ ರಚನೆ ಇದೆ. ಅದರ ಬದಲಾಗಿ ಟ್ರಿಪಲ್‌ ಕ್ಯಾಮೆರಾ ರಚನೆ ನೀಡಿದ್ದರೆ, ಈ ಫೋನ್ ಇನ್ನಷ್ಟು ಆಕರ್ಷಕ ಎನಿಸುತ್ತಿತ್ತು. ಹಾಗೆಯೇ 8 GB + 128 GB ಸ್ಟೋರೇಜ್‌ ಒಂದೇ ವೇರಿಯಂಟ್‌ನ ಆಯ್ಕೆ ನೀಡಲಾಗಿದೆ. ಆದ್ರೆ, ಭಾರತದ ಮಾರುಕಟ್ಟೆಯಲ್ಲಿ ಇದರೊಂದಿಗೆ 6 GB + 128 GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆ ನೀಡಬಹುದಿತ್ತು. ಈ ವರ್ಗದಲ್ಲಿ ಡ್ಯುಯಲ್‌ ಕ್ಯಾಮೆರಾ ಪರವಾಗಿಲ್ಲ ಎನ್ನುವುದಾದರೇ ಈ ಫೋನ್ ಖರೀದಿಗೆ ಸೂಕ್ತ.

Best Mobiles in India

English summary
Oppo K10 5G to go on sale in India today; Should You Buy This.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X