ಒಪ್ಪೋ K10x ಸ್ಮಾರ್ಟ್‌ಫೋನ್‌ ಲಾಂಚ್‌; 12GB RAM ಆಯ್ಕೆ!

|

ಒಪ್ಪೋ ಕಂಪೆನಿ ಸ್ಮಾರ್ಟ್‌ಫೋನ್‌ಗಳ ಪ್ರಮುಖ ತಯಾರಿಕಾ ಕಂಪೆನಿಯಾಗಿದ್ದು, ಬಜೆಟ್ ಬೆಲೆಯಿಂದ ಮಿಡ್‌ರೇಂಜ್‌ವರೆಗಿನ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡುತ್ತಾ ಬಂದಿದೆ. ಈಗ ಒಪ್ಪೋ K ಸೀರಿಸ್‌ ಮೊಬೈಲ್‌ಗಳಲ್ಲಿ K10x ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಈ ಸ್ಮಾರ್ಟ್‌ಫೋನ್‌ 120Hz ಡಿಸ್‌ಪ್ಲೇ, ಸ್ನಾಪ್‌ಡ್ರಾಗನ್ 695 SoC ನಲ್ಲಿ ಕಾರ್ಯನಿರ್ವಹಿಸಲಿದ್ದು, 12GB RAM ಸ್ಟೋರೇಜ್ ಸಾಮರ್ಥ್ಯ ಹೊಂದಿದೆ.

ಒಪ್ಪೋ

ಒಪ್ಪೋ ಸಂಸ್ಥೆಯು ನೂತನವಾಗಿ ಒಪ್ಪೋ K10x ಫೋನ್ ಅನ್ನು ಇಂದು ಚೀನಾದಲ್ಲಿ ಬಿಡುಗಡೆ ಮಾಡಿದೆ. ಇದು ಮೂರು ಸ್ಟೋರೇಜ್‌ ಆಯ್ಕೆಗಳನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಕಪ್ಪು ಮತ್ತು ಅರೋರಾ ಎರಡು ಬಣ್ಣಗಳಲ್ಲಿ ಲಭ್ಯವಿದೆ. ಇದು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 67W SuperVOOC ವೇಗದ ಚಾರ್ಜಿಂಗ್ ವ್ಯವಸ್ಥೆ ಒಳಗೊಂಡಿದೆ.

ಸ್ಮಾರ್ಟ್‌ಫೋನ್‌

ಈ ಸ್ಮಾರ್ಟ್‌ಫೋನ್‌ ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ಆಗಿದ್ದು, 5000 mAh ಬ್ಯಾಟರಿ ಶಕ್ತಿಯನ್ನು ಒಳಗೊಂಡಿದೆ. ಹಾಗೆ ವೇಗದ ಚಾರ್ಜಿಂಗ್‌ ಆಯ್ಕೆಯನ್ನೂ ಸಹ ಇದು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಮೂರು ವೇರಿಯಂಟ್‌ನಲ್ಲಿ ಲಭ್ಯ ಆಗಲಿದ್ದು, ಆರಂಭಿಕ ಬೆಲೆ 17,100 ರೂ. ಇದೆ. ಇದರ ಜೊತೆಗೆ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಒಳಗೊಂಡಿದ್ದು, 3.5mm ಹೆಡ್‌ಫೋನ್ ಜ್ಯಾಕ್ ಆಯ್ಕೆ ಪಡೆದಿದೆ. ಹಾಗಾದರೆ ಈ ಸ್ಮಾರ್ಟ್‌ಫೋನ್‌ನ ಇನ್ನಷ್ಟು ಫೀಚರ್ಸ್‌ಗಳನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ಒಪ್ಪೋ K10x ಡಿಸ್‌ಪ್ಲೇ ರಚನೆ

ಒಪ್ಪೋ K10x ಡಿಸ್‌ಪ್ಲೇ ರಚನೆ

ಈ ಸ್ಮಾರ್ಟ್‌ಫೋನ್‌ 6.59 ಇಂಚಿನ ಪೂರ್ಣ HD+ IPS LCD ಅನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. 1080 x 2412 ಪಿಕ್ಸೆಲ್‌ ರೆಸಲ್ಯೂಶನ್ ಡಿಸ್‌ಪ್ಲೇ ಜೊತೆಗೆ ಇದು ಸೆಲ್ಫಿ ಕ್ಯಾಮೆರಾಕ್ಕಾಗಿ ಪಂಚ್ ಹೋಲ್‌ ಮಾದರಿಯ ರಚನೆ ಹೊಂದಿದೆ ಹಾಗೂ ಸೂಪರ್‌ ಲೀನಿಯರ್ ಸ್ಪೀಕರ್‌ ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಈ ಫೋನ್ ಸ್ನಾಪ್‌ಡ್ರಾಗನ್ 695 SoC, ಪ್ರೊಸೆಸರ್‌ ಜೊತೆಗೆ ಅಂಡ್ರಾಯ್ಡ್‌ 12 ಆಧಾರಿತ ColorOS 12.1 ಓಎಸ್‌ ಕೆಲಸ ನಿರ್ವಹಿಸಲಿದೆ. ಈ ಸ್ಮಾರ್ಟ್‌ಫೋನ್‌ ಮೂರು ವೇರಿಯಂಟ್‌ಗಳಲ್ಲಿ ಲಭ್ಯ ಇದೆ. ಕ್ರಮವಾಗಿ 8GB RAM ಮತ್ತು 128GB ಸ್ಟೋರೇಜ್‌, 8GB RAM ಮತ್ತು 256GB ಹಾಗೂ 12GB RAM ಮತ್ತು 256GB ಸ್ಟೋರೇಜ್‌ ಸಾಮರ್ಥ್ಯದಲ್ಲಿ ಫೋನ್‌ಗಳನ್ನು ಕಂಪೆನಿ ಲಾಂಚ್‌ ಮಾಡಿದೆ.

ಕ್ಯಾಮೆರಾ ರಚನೆ ಹೇಗಿದೆ?

ಕ್ಯಾಮೆರಾ ರಚನೆ ಹೇಗಿದೆ?

ಈ ಸ್ಮಾರ್ಟ್‌ ಫೋನ್ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ರಚನೆ ಇದ್ದು, ವೈಡ್ಆಯ್ಕೆಯಲ್ಲಿ 64,ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾ, ಅಲ್ಟ್ರಾವೈಡ್‌ನ 8 ಮೆಗಾಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು ಮ್ಯಾಕ್ರೋ ಆಯ್ಕೆಯ 2 ಮೆಗಾಪಿಕ್ಸೆಲ್ ಕ್ಯಾಮೆರಾ ವ್ಯವಸ್ಥೆ ಒಳಗೊಂಡಿದೆ. ಸೆಲ್ಫಿಗಳಿಗಾಗಿ 16 ಮೆಗಾಪಿಕ್ಸೆಲ್‌ ಜೊತೆ f/2.0 ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ರಿಯರ್‌ ಕ್ಯಾಮೆರಾದಲ್ಲಿ ಎಲ್‌ಇಡಿ ಪ್ಲಾಸ್‌ ಲೈಟ್‌ ಇದ್ದು, 1080p@30fp ನಲ್ಲಿ ವಿಡಿಯೋ ಮಾಡಬಹುದಾಗಿದೆ.

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಬ್ಯಾಟರಿ ಸಾಮರ್ಥ್ಯ ಹಾಗೂ ಇತರೆ

ಈ ಸ್ಮಾರ್ಟ್‌ಫೋನ್ 67W SuperVOOC ವೇಗದ ಚಾರ್ಜಿಂಗ್‌ನೊಂದಿಗೆ 5000 mAh ಬ್ಯಾಟರಿ ಶಕ್ತಿಯನ್ನು ಪಡೆದಿದೆ. ಈ ಹೊಸ OPPO ಸ್ಮಾರ್ಟ್‌ಫೋನ್ ಸುಮಾರು 195 ಗ್ರಾಂ ತೂಗಲಿದ್ದು, 8.5mm ದಪ್ಪವನ್ನು ಹೊಂದಿದೆ. ಈ ಫೋನ್ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಹಾಗೆಯೇ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಪಡೆದಿದೆ. ಈ ಸ್ಮಾರ್ಟ್‌ಫೋನ್‌ ಡ್ಯುಯಲ್‌ ಸಿಮ್‌ ಆಯ್ಕೆಯನ್ನು ಪಡೆದಿದೆ. ಈ ಸ್ಮಾರ್ಟ್ಫೋನ್‌ ಪ್ಲಾಸ್ಟಿಕ್‌ ಪ್ರೇಮ್‌ ಹಾಗೂ ಪ್ಯಾನಲ್‌ ಒಳಗೊಂಡಿದೆ. ವೈ-ಪೈ 6 802.11 ac (2.4GHz + 5GHz), ಬ್ಲೂಟೂತ್ 5.2, GPS/GLONASS/Beidou, USB ಟೈಪ್-C ಇದರ ಇನ್ನಿತರೆ ವೈಶಿಷ್ಟ್ಯ.

Best Mobiles in India

English summary
OPPO launched a new K-series smartphones with special features. OPPO K10x is expected to launch soon in India and other markets.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X