ಒಪ್ಪೋ ಪ್ಯಾಡ್‌ ಏರ್‌ ಮತ್ತು ಎನ್ಕೋ X2 ಇಯರ್‌ಬಡ್ಸ್‌ ಲಾಂಚ್‌! ಫೀಚರ್ಸ್‌ ಹೇಗಿದೆ?

|

ಟೆಕ್‌ ವಲಯದಲ್ಲಿ ಒಪ್ಪೋ ಕಂಪೆನಿ ತನ್ನ ವೈವಿಧ್ಯಮಯ ಗ್ಯಾಜೆಟ್ಸ್‌ಗಳಿಂದ ಗುರುತಿಸಿಕೊಂಡಿದೆ. ತನ್ನ ಭಿನ್ನ ಮಾದರಿಯ ಡಿವೈಸ್‌ಗಳ ಮೂಲಕ ಗ್ರಾಹಕರ ನೆಚ್ಚಿನ ಬ್ರ್ಯಾಂಡ್‌ಗಳಲ್ಲಿ ಒಂದೆನಿಸಿಕೊಂಡಿದೆ. ಸ್ಮಾರ್ಟ್‌ಫೋನ್‌, ಇಯರ್‌ಫೋನ್‌, ಟ್ಯಾಬ್‌ ಸೇರಿದಂತೆ ಅನೇಕ ಡಿವೈಸ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸುತ್ತಲೇ ಬಂದಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಒಪ್ಪೋ ರೆನೋ 8 ಸರಣಿಯ ಜೊತೆಗೆ ಹೊಸ ಒಪ್ಪೋ ಪ್ಯಾಡ್‌ ಏರ್‌ ಮತ್ತು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ಲಾಂಚ್‌ ಮಾಡಿದೆ.

ಒಪ್ಪೋ ಕಂಪೆನಿ

ಹೌದು, ಒಪ್ಪೋ ಕಂಪೆನಿ ಭಾರತದಲ್ಲಿ ಹೊಸ ಪ್ಯಾಡ್‌ ಏರ್‌ ಮತ್ತು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ಅನ್ನು ಪರಿಚಯಿಸಿದೆ. ಈ ಮೂಲಕ ಇಯರ್‌ಬಡ್ಸ್‌ ಮತ್ತು ಟ್ಯಾಬ್‌ ಮಾರುಕಟ್ಟೆಯಲ್ಲಿ ತನ್ನ ಪ್ರಾಬಲ್ಯವನ್ನು ಇನ್ನಷ್ಟು ವಿಸ್ತರಣೆ ಮಾಡಿದೆ. ಇದರಲ್ಲಿ ಒಪ್ಪೋ ಪ್ಯಾಡ್‌ ಏರ್‌ 7,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಸಿಂಗಲ್‌ ಚಾರ್ಜ್‌ನಲ್ಲಿ 15 ಗಂಟೆಗಳ ವೀಡಿಯೋ ಕಾಲ್‌ ಟೈಂ ನೀಡಲಿದೆ. ಇನ್ನು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ 20-40,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ರೇಂಜ್‌ ಅನ್ನು ನೀಡಲಿದೆ ಎನ್ನಲಾಗಿದೆ.

ಒಪ್ಪೋ

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ಡ್ಯಾನಿಶ್ ಸ್ಪೀಕರ್ ತಯಾರಕ ಡೈನಾಡಿಯೊದಿಂದ ಸೌಂಡ್‌ ಟ್ಯೂನಿಂಗ್ ಅನ್ನು ಒಳಗೊಂಡಿದೆ. ಇದು ಬ್ಲೂಟೂತ್ ವಿ5.2 ಕನೆಕ್ಟಿವಿಟಿಯನ್ನು ಬೆಂಬಲಿಸಲಿದ್ದು, ಇಯರ್‌ಬಡ್‌ಗಳು ಗರಿಷ್ಟ 10 ಮೀಟರ್ ಆಪರೇಟಿಂಗ್ ದೂರವನ್ನು ಹೊಂದಿವೆ. ಇನ್ನು ಒಪ್ಪೋ ಪ್ಯಾಡ್‌ ಏರ್‌ ಸರೌಂಡ್‌ ಸೌಂಡ್‌ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್‌ ಬೆಂಬಲಿಸುವ ಕ್ವಾಡ್ ಸ್ಪೀಕರ್‌ಗಳನ್ನು ಒಳಗೊಂಡಿದೆ. ಇನ್ನುಳಿದಂತೆ ಒಪ್ಪೋ ಪ್ಯಾಡ್‌ ಏರ್‌ ಮತ್ತು ಎನ್ಕೋ X2 ಇಯರ್‌ಬಡ್ಸ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಒಪ್ಪೋ ಪ್ಯಾಡ್‌ ಏರ್‌ ಡಿಸ್‌ಪ್ಲೇ ಹೇಗಿದೆ?

ಒಪ್ಪೋ ಪ್ಯಾಡ್‌ ಏರ್‌ ಡಿಸ್‌ಪ್ಲೇ ಹೇಗಿದೆ?

ಒಪ್ಪೋ ಪ್ಯಾಡ್‌ ಏರ್‌ ಟ್ಯಾಬ್‌ 10.36-ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 2,000x1,200 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿದೆ. ಇದು 60Hz ರಿಫ್ರೆಶ್ ರೇಟ್‌ ಅನ್ನು ಬೆಂಬಲಿಸಲಿದೆ. ಇನ್ನು ಈ ಡಿಸ್‌ಪ್ಲೇ 225ppi ಪಿಕ್ಸೆಲ್ ಸಾಂದ್ರತೆ ಮತ್ತು 360 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್‌ ಅನ್ನು ನೀಡಲಿದೆ. ಜೊತೆಗೆ ಈ ಡಿಸ್‌ಪ್ಲೇಯು ಲೋ ಬ್ಲೂ ಲೈಟ್‌ಗಾಗಿ TUV ರೈನ್‌ಲ್ಯಾಂಡ್-ಪ್ರಮಾಣೀಕೃತವಾಗಿದೆ ಎಂದು ಹೇಳಲಾಗಿದೆ.

ಪ್ರೊಸೆಸರ್‌ ಬಲವೇನು? ಕ್ಯಾಮೆರಾ ಎಷ್ಟಿದೆ?

ಪ್ರೊಸೆಸರ್‌ ಬಲವೇನು? ಕ್ಯಾಮೆರಾ ಎಷ್ಟಿದೆ?

ಒಪ್ಪೋ ಪ್ಯಾಡ್‌ ಏರ್‌ ಟ್ಯಾಬ್ಲೆಟ್ ಆಕ್ಟಾ-ಕೋರ್ 6nm ಸ್ನಾಪ್‌ಡ್ರಾಗನ್ 680 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 12ನಲ್ಲಿ ಕಲರ್‌ಒಎಸ್‌ 12.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಆಂಡ್ರೆನೋ 610 GPU ಸಪೋರ್ಟ್‌ ಹೊಂದಿದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಪಡೆದಿದೆ. ಇದಲ್ಲದೆ ಮೆಮೊರಿ ಕಾರ್ಡ್‌ ಮೂಲಕ 512GB ವರೆಗೆ ಸಂಗ್ರಹ ಸಾಮರ್ಥ್ಯವನ್ನು ವಿಸ್ತರಿಸುವುದಕ್ಕೆ ಅವಕಾಶವನ್ನು ನೀಡಿದೆ. ಈ ಟ್ಯಾಬ್ಲೆಟ್‌ 8 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌ ಹೇಗಿದೆ? ಇತರೆ ಫೀಚರ್ಸ್‌ಗಳೇನು?

ಬ್ಯಾಟರಿ ಬ್ಯಾಕ್‌ಅಪ್‌ ಹೇಗಿದೆ? ಇತರೆ ಫೀಚರ್ಸ್‌ಗಳೇನು?

ಒಪ್ಪೋ ಪ್ಯಾಡ್ ಏರ್‌ ಟ್ಯಾಬ್‌ 7,100mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಇದು ಸಿಂಗಲ್‌ ಚಾರ್ಜ್‌ನಲ್ಲಿ 15 ಗಂಟೆಗಳ ವೀಡಿಯೋ ಕಾಲ್‌ ಟೈಂ ನೀಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi 5, ಬ್ಲೂಟೂತ್ v5.1 ಮತ್ತು USB ಟೈಪ್-C ಪೋರ್ಟ್ ಅನ್ನು ಬೆಂಬಲಿಸಲಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಗೈರೊಸ್ಕೋಪ್ ಮತ್ತು ಮ್ಯಾಗ್ನೆಟೋಮೀಟರ್ ಅನ್ನು ಒಳಗೊಂಡಿವೆ. ಜೊತೆಗೆ ಸರೌಂಡ್ ಸೌಂಡ್ ಅನುಭವಕ್ಕಾಗಿ ಡಾಲ್ಬಿ ಅಟ್ಮಾಸ್‌ನಿಂದ ಬೆಂಬಲಿತವಾದ ಕ್ವಾಡ್ ಸ್ಪೀಕರ್‌ಗಳನ್ನು ಹೊಂದಿದೆ.

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ವಿಶೇಷತೆ ಏನು?

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ವಿಶೇಷತೆ ಏನು?

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ಡೈನಾಡಿಯೊದಿಂದ ಸೌಂಡ್‌ ಟ್ಯೂನಿಂಗ್ ಅನ್ನು ಒಳಗೊಂಡಿವೆ. ಇದು ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ (ANC) ಕಾರ್ಯವನ್ನು ಹೊಂದಿದ್ದು, ಬಾಹ್ಯ ಶಬ್ದವನ್ನು 45dB ವರೆಗೆ ಕಡಿಮೆ ಮಾಡುತ್ತದೆ. ಇನ್ನು ಈ ಇಯರ್‌ಬಡ್ಸ್‌ ಅಲ್ಟ್ರಾಲೈಟ್ ಡಯಾಫ್ರಾಮ್‌ನೊಂದಿಗೆ 11 ಎಂಎಂ ಆಡಿಯೋ ಡೈನಾಮಿಕ್ ಡ್ರೈವರ್‌ಗಳನ್ನು ಹೊಂದಿವೆ. ಇವುಗಳು 20-40,000Hz ಫ್ರಿಕ್ವೆನ್ಸಿ ರೆಸ್ಪಾನ್ಸ್‌ ರೇಂಜ್‌ ಅನ್ನು ತಲುಪಿಸುತ್ತವೆ ಎಂದು ಹೇಳಲಾಗಿದೆ.

ಇಯರ್‌ಬಡ್ಸ್‌

ಇನ್ನು ಈ ಇಯರ್‌ಬಡ್ಸ್‌ ಇನ್-ಇಯರ್ ವಿನ್ಯಾಸವನ್ನು ಹೊಂದಿದ್ದು, ಕರೆಗಳಿಗಾಗಿ ಮೂರು ಮೈಕ್ರೊಫೋನ್‌ಗಳನ್ನು ಹೊಂದಿವೆ. ಇವುಗಳನ್ನು ವಾಯರ್‌ಲೆಸ್ ಹೈ ರೆಸ್ ಆಡಿಯೊಗಾಗಿ ಪ್ರಮಾಣೀಕರಿಸಲಾಗಿದೆ. ಈ ಇಯರ್‌ಬಡ್ಸ್‌ ಡಾಲ್ಬಿ ಬೈನೌರಲ್ ರೆಕಾರ್ಡಿಂಗ್ ಫೀಚರ್ಸ್‌ ಅನ್ನು ಪಡೆದುಕೊಂಡಿದ್ದು, ವ್ಲಾಗರ್‌ಗಳು ಮತ್ತು ಕಂಟೆಂಟ್‌ ಕ್ರಿಯೆಟರ್ಸ್‌ಗಳಿಗೆ ಆಡಿಯೊವನ್ನು ರೆಕಾರ್ಡ್‌ ಮಾಡಲು ಸಹಾಯ ಮಾಡಲಿದೆ. ಇದು ಎಲ್‌ಎಚ್‌ಡಿಸಿ 4.0, ಎಎಸಿ ಮತ್ತು ಎಸ್‌ಬಿಸಿ ಆಡಿಯೊ ಕೊಡೆಕ್‌ಗಳಿಗೆ ಬೆಂಬಲಿಸಲಿದೆ.

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ ಬ್ಲೂಟೂತ್ ವಿ5.2 ಕನೆಕ್ಟಿವಿಟಿಯನ್ನು ಹೊಂದಿದ್ದು, ಗರಿಷ್ಟ 10 ಮೀಟರ್ ಆಪರೇಟಿಂಗ್ ದೂರವನ್ನು ಹೊಂದಿವೆ. ಇದಲ್ಲದೆ, ಈ ಇಯರ್‌ಬಡ್ಸ್‌ ಒಪ್ಪೋ IPX5 ಸ್ಪ್ಲಾಶ್-ನಿರೋಧಕ ನಿರ್ಮಾಣವನ್ನು ಪಡೆದುಕೊಂಡಿವೆ. ಈ ಇಯರ್‌ಬಡ್ಸ್‌ ಸಿಂಗಲ್‌ ಚಾರ್ಜ್‌ನಲ್ಲಿ 5 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಅನ್ನು ನೀಡಲಿದೆ ಎಂದು ಹೇಳಲಾಗಿದೆ. ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ಗಳನ್ನು ಅಂಡಾಕಾರದ ಆಕಾರದ ಚಾರ್ಜಿಂಗ್ ಕೇಸ್‌ನಲ್ಲಿ ಇರಿಸಲಾಗಿರುತ್ತದೆ, ಇದರಿಂದ ANC ಸಕ್ರಿಯಗೊಳಿಸಿದ 20 ಗಂಟೆಗಳವರೆಗೆ ಮ್ಯೂಸಿಕ್‌ ಪ್ಲೇಬ್ಯಾಕ್ ಟೈಂ ಅನ್ನು ಪಡೆದುಕೊಳ್ಳಬಹುದು.

ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌

ಇನ್ನು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್‌ನಲ್ಲಿ 57mAh ಬ್ಯಾಟರಿಯನ್ನು ನೀಡಲಾಗಿದೆ. ಹಾಗೆಯೇ ಚಾರ್ಜಿಂಗ್ ಕೇಸ್‌ನಲ್ಲಿ 566mAh ಬ್ಯಾಟರಿಯನ್ನು ಒದಗಿಸಲಾಗಿದೆ. ಇದರಲ್ಲಿ USB ಟೈಪ್-C ಕೇಬಲ್ ಮೂಲಕ ಕೇಸ್ ಅನ್ನು ಚಾರ್ಜ್ ಮಾಡಬಹುದು. ಇನ್ನು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ನ ಪ್ರತಿ ಇಯರ್‌ಬಡ್ 4.7 ಗ್ರಾಂ ತೂಕವನ್ನು ಹೊಂದಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಒಪ್ಪೋ ಪ್ಯಾಡ್‌ ಏರ್‌ ಬೇಸ್ ಮಾಡೆಲ್‌ 4GB RAM + 64GB ಸ್ಟೋರೇಜ್ ಮಾದರಿಗೆ 16,999ರೂ.ಬೆಲೆಯನ್ನು ಹೊಂದಿದೆ. ಈ ಟ್ಯಾಬ್ಲೆಟ್‌ನ 4GB RAM + 128GB ಸ್ಟೋರೇಜ್ ಮಾದರಿಯ ಆಯ್ಕೆಗೆ 19,999ರೂ.ಬೆಲೆ ಪಡೆದಿದೆ. ಇನ್ನು ಈ ಟ್ಯಾಬ್ಲೆಟ್‌ ಬೂದು ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ಇದು ಜುಲೈ 23 ರಿಂದ ಮಾರಾಟವಾಗಲಿದೆ.

ಒಪ್ಪೋ ಎನ್ಕೋ X2

ಇನ್ನು ಒಪ್ಪೋ ಎನ್ಕೋ X2 ಇಯರ್‌ಬಡ್ಸ್‌ 10,999ರೂ. ಬೆಲೆಯಲ್ಲಿ ಲಭ್ಯವಾಗಲಿದೆ. ಇದು ಕಪ್ಪು ಮತ್ತು ಬಿಳಿ ಬಣ್ಣದ ಆಯ್ಕೆಗಳಲ್ಲಿ ಖರೀದಿಸಬಹುದಾಗಿದೆ. ಇದು ಇದೇ ಜುಲೈ 25 ರಿಂದ ಖರೀದಿಗೆ ಲಭ್ಯವಾಗಲಿದೆ. ಇವರೆಡು ಗ್ಯಾಜೆಟ್ಸ್‌ಗಳು ಫ್ಲಿಪ್‌ಕಾರ್ಟ್‌ ಮೂಲಕ ಸೇಲ್‌ ಆಗಲಿವೆ.

Best Mobiles in India

English summary
The new tablet and true wireless stereo (TWS) earbuds were unveiled alongside Oppo Reno 8 Series smartphones.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X