ಒಪ್ಪೋ R 11 ಬಾರ್ಸಿಲೋನಾ ಆವೃತ್ತಿ ಬಿಡುಗಡೆ

Written By: Lekhaka

ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಕ ಕಂಪನಿ ಒಪ್ಪೋ R11 ಸ್ಮಾರ್ಟ್ ಫೋನ್ ಅನ್ನು ಜೂನ್ ನಲ್ಲಿ ಚೀನಾದಲ್ಲಿ ಬಿಡುಗಡೆ ಮಾಡಿತ್ತು. ಈ ಸಂದರ್ಭದಲ್ಲಿ ಕಂಪನಿಯೂ ಬ್ಲಾಕ್, ಗೋಲ್ಡ್ ಮತ್ತು ರೋಸ್ ಗೋಲ್ಡ್ ಆವೃತ್ತಿಗಳನ್ನು ಬಿಡುಗಡೆ ಮಾಡಿತ್ತು. ಅಲ್ಲದೇ ಈ ಬಾರಿ ಒಪ್ಪೋ ಲಿಮಿಟೆಡ್ ಆಡಿಷನ್ ಅನ್ನು ಬಿಡುಗಡೆ ಮಾಡಿದೆ.

ಒಪ್ಪೋ R 11 ಬಾರ್ಸಿಲೋನಾ ಆವೃತ್ತಿ ಬಿಡುಗಡೆ

ಸದ್ಯ ಒಪ್ಪೋ R1 FC ಬಾರ್ಸಿಲೋನಾ ಆವೃತ್ತಿಯನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಚೀನಾದಲ್ಲಿ ಒಪ್ಪೋ ಅಧಿಕೃತ ವೆಬ್ ಸೈಟಿನಲ್ಲಿ ಮಾರಾಟವನ್ನು ಶುರುವಾಗಿದೆ. ಈ ಸ್ಮಾರ್ಟ್ ಫೋನಿನ ಬೆಲೆ CNY 3,499 ಆಗಲಿದ್ದು, (ರೂ.33,580) ಅಲ್ಲದೇ ಈ ಸ್ಮಾರ್ಟ್ ಫೋನ್ ಕಡಿಮೆ ಸಂಖ್ಯೆಯಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದೆ.

ಈ ಫೋನಿನ ವಿಶೇಷತೆ ಎಂದರೆ ಇದರಲ್ಲಿ 18 ಕ್ಯಾರೆಟ್ ಗೋಲ್ಡ್ ಪ್ಲೇಟೆಡ್ FC ಬಾಡ್ಜ್ ಅನ್ನು ಹಿಂಭಾಗದಲ್ಲಿ ಕಾಣಬಹುದಾಗಿದೆ. ಅಲ್ಲದೇ ಈ ಸ್ಮಾರ್ಟ್ ಫೋನ್ ಅನ್ನು ಬಾರ್ಸಿಲೋನಾ ಥಿಮ್ ಕಲರ್ ನಲ್ಲಿ ಮಾಡಲಾಗಿದೆ. ಇದಕ್ಕಾಗಿ ರೆಡ್ ಮತ್ತು ಬ್ಲೂ ಬಣ್ಣವನ್ನು ಬಳಕೆ ಮಾಡಿಕೊಳ್ಳಲಾಗಿದೆ.

ಒಪ್ಪೋ R 11 ಬಾರ್ಸಿಲೋನಾ ಆವೃತ್ತಿ ಬಿಡುಗಡೆ

ಇದಲ್ಲದೇ ಈ ಸ್ಮಾರ್ಟ್ ಫೋನಿನ್ಲಿ FC ಬಾರ್ಸಿಲೋನಾ ಥಿಮ್ UI ಸಹ ಹೊಂದಿದೆ ಎನ್ನಲಾಗಿದೆ. ಅದನ್ನು ಬಿಟ್ಟರೆ ಉಳಿದೆಲ್ಲವೂ ಒಪ್ಪೋ R11 ಸ್ಮಾರ್ಟ್ ಫೋನಿನ ವಿಶೇಷತೆಗಳೆ ಇದರಲಿದೆ.

ಲಂಬೋರ್ಗಿನಿ ಐಷಾರಾಮಿ ಸ್ಮಾರ್ಟ್‌ಫೋನ್ ಲಾಂಚ್: ಬೆಲೆ ಎಷ್ಟು..?

5.5 ಇಂಚಿನ FHD ಡಿಸ್ ಪ್ಲೇ, ಸ್ನಾಪ್ ಡ್ರಾಗನ್ 660 ಪ್ರೋಸೆಸರ್ 4GB RAM, 64GB ಇಂಟರ್ನಲ್ ಮೆಮೊರಿ. ಅಲ್ಲದೇ ಮೆಮೊರಿ ಕಾರ್ಡ್ ಹಾಕಿಕೊಳ್ಳುವ ಮೂಲಕ ಅದನ್ನು ವಿಸ್ತರಿಸಿಕೊಳ್ಳುವ ಅವಕಾಶ. ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ 16 MP + 20 MP, ಮುಂಭಾಗದಲ್ಲಿ 20 MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ.Read more about:
English summary
Good news for Barcelona fans, Oppo has just launched Oppo R11 FC Barcelona Edition smartphone for consumers.
Please Wait while comments are loading...
Opinion Poll

Social Counting