Subscribe to Gizbot

ಒಪ್ಪೋ R11s ಮತ್ತು R11s ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್

Written By: Lekhaka

ಚೀನಾ ಮೂಲದ ಸ್ಮಾರ್ಟ್ ಫೋನ್ ತಯಾರಿಕಾ ಕಂಪನಿ ಒಪ್ಪೋ ಭಾರತೀಯ ಮಾರುಕಟ್ಟೆಯಲ್ಲಿ ಒಪ್ಪೋ F5 ಸ್ಮಾರ್ಟ್ ಫೋನ್ ಬಿಡುಗಡೆ ಮಾಡಿದೆ. ಇದೇ ಮಾದರಿಯಲ್ಲಿ ಚೀನಾ ಮಾರುಕಟ್ಟೆಯಲ್ಲಿ ಒಪ್ಪೋ R11s ಮತ್ತು R11s ಪ್ಲಸ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ.

ಒಪ್ಪೋ R11s ಮತ್ತು R11s ಪ್ಲಸ್ ಸ್ಮಾರ್ಟ್ ಫೋನ್ ಲಾಂಚ್

16:9 ಡಿಸ್ ಪ್ಲೇ ಅನುಪಾತದ ಬದಲಿಗೆ ಈ ಫೋನಿನಲ್ಲಿ 18:9 ಅನುಪಾತವನ್ನು ಕಾಣಬಹುದಾಗಿದ್ದು, ಈ ಹಿಂದಿನ ಫೋನ್ ಗಳಿಗಿಂತ ಭಿನ್ನವಾಗಿ ಮತ್ತು ವಿಶೇಷವಾಗಿ ಈ ಫೋನ್ ಕಾಣಿಸಿಕೊಂಡಿದೆ. ಹಿಂದಿನ ಸರಣಿಯ ಫೋನ್ ಗಿಂತಲೂ ಹೆಚ್ಚಿನ ವೇಗ ಮತ್ತು ಕಾರ್ಯದಕ್ಷತೆಯನ್ನು ಹೊಂದಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಒಪ್ಪೋ R11s ಸ್ಮಾರ್ಟ್ ಫೋನ್:

ಒಪ್ಪೋ R11s ಸ್ಮಾರ್ಟ್ ಫೋನ್:

ಒಪ್ಪೋ R11s ಫುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿದೆ. 6.01 ಇಂಚಿನ ಪರದೆಯನ್ನುಇಲ್ಲಿ ಕಾಣಬಹುದಾಗಿದೆ. ಇದು FHD ಗುಣಮಟ್ಟದ್ದಾಗಿದ್ದು, ಉತ್ತಮ ವಾದ ಕಲರ್ ಗಳನ್ನು ಹೊಂದಿದೆ.

ಇದರಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ ಅನ್ನು ಕಾಣಬಹುದಾಗಿದ್ದು, 4GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಸಹ ನೀಡಲಾಗಿದೆ. 3205mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಫಾಸ್ಟ್ ಚಾರ್ಜಿಂಗ್ ಆಯ್ಕೆ ಸಹ ಲಭ್ಯವಿದೆ.

ಈ ಸ್ಮಾರ್ಟ್ ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಇದೆ. 20MP + 16MP ಕ್ಯಾಮೆರಾ ಅಳವಡಿಸಲಾಗಿದೆ. ಉತ್ತಮವಾದ ಚಿತ್ರಗಳನ್ನು ಇದು ಸೆರೆಹಿಡಿಯಲಿದೆ. ಆಂಡ್ರಾಯ್ಡ್ ನ್ಯಾಗಾ ದಲ್ಲಿ ಕಾರ್ಯನಿರ್ವಹಿಸಲಿದೆ.

ಒಪ್ಪೋ R11s ಪ್ಲಸ್ ಸ್ಮಾರ್ಟ್ ಫೋನ್:

ಒಪ್ಪೋ R11s ಪ್ಲಸ್ ಸ್ಮಾರ್ಟ್ ಫೋನ್:

ಒಪ್ಪೋ R11s ಪ್ಲಸ್ ಫುಲ್ ಸ್ಕ್ರಿನ್ ವಿನ್ಯಾಸವನ್ನು ಹೊಂದಿದೆ. ಇದು FHD ಪ್ಲಸ್ ಗುಣಮಟ್ಟದ, 6.43 ಇಂಚಿನ ಡಿಸ್ ಪ್ಲೇಯಾಗಿದೆ.

ಇದರಲ್ಲಿ ಕ್ವಾಲ್ಕಮ್ ಸ್ನಾಪ್ ಡ್ರಾಗನ್ 660 ಪ್ರೋಸೆಸರ್ 6GB RAM ಮತ್ತು 64GB ಇಂಟರ್ನಲ್ ಮೆಮೊರಿಯನ್ನು ಕಾಣಬಹುದಾಗಿದೆ. 4000mAh ಬ್ಯಾಟರಿಯನ್ನು ಅಳವಡಿಸಲಾಗಿದೆ. ಫಾಸ್ಟ್ ಚಾರ್ಜಿಂಗ್ ಆಯ್ಕೆ ಸಹ ಲಭ್ಯವಿದೆ.

ಈ ಸ್ಮಾರ್ಟ್ ಫೋನ್ ಆಂಡ್ರಾಯ್ಡ್ ನ್ಯಾಗಾ ದಲ್ಲಿ ಕಾರ್ಯನಿರ್ವಹಿಸಲಿದ್ದು, ಫೋನಿನ ಹಿಂಭಾಗದಲ್ಲಿ ಡ್ಯುಯಲ್ ಲೈನ್ಸ್ ಕ್ಯಾಮೆರಾ ಇದೆ. 20MP + 16MP ಕ್ಯಾಮೆರಾ ಅಳವಡಿಸಲಾಗಿದೆ. ಉತ್ತಮವಾದ ಚಿತ್ರಗಳನ್ನು ಇದು ಸೆರೆಹಿಡಿಯಲಿದೆ.

ಜಿಯೋ ಎಫೆಕ್ಟ್..ಭಾರಿ ಬಂಡವಾಳ ಹೂಡಿಕೆಗೆ ಮುಂದಾದ ಏರ್‌ಟೆಲ್‌!!

ಬೆಲೆ:

ಬೆಲೆ:

ಒಪ್ಪೋ R11s ಸ್ಮಾರ್ಟ್ ಫೋನ್ ಬ್ಲಾಕ್ ಮತ್ತು ಕ್ಯಾಂಪೇನಿಂಗ್ ಬಣ್ಣದಲ್ಲಿ ದೊರೆಯಲಿದೆ ಬೆಲೆ ರೂ. 29,300 ಆಗಲಿದ್ದು, ರೆಡ್ ಆವೃತ್ತಿಯ ಬೆಲೆ ರೂ. 31,300ಆಗಲಿದೆ.

ಒಪ್ಪೋ R11s ಪ್ಲಸ್ ಸ್ಮಾರ್ಟ್ ಫೋನ್ ಬ್ಲಾಕ್ ಮತ್ತು ಕ್ಯಾಂಪೇನಿಂಗ್ ಬಣ್ಣದಲ್ಲಿ ಲಭ್ಯವಿದ್ದು, ರೂ. 36,200ಆಗಲಿದೆ. ಭಾರತೀಯ ಮಾರುಕಟ್ಟೆಗೆ ಬಂದ ಮೇಲೆ ಬೆಲೆಗಳಲ್ಲಿ ವ್ಯತ್ಯಾಸವಾಗಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The smartphones are the updated versions of Oppo R11 and R11 Plus that were launched earlier this year.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot