ಒಪ್ಪೋ ರೆನೋ 8 ಪ್ರೊ ಈ ರೀತಿ ಲಾಂಚ್‌ ಆಗುತ್ತೆ ಅಂಥಾ ನೀವು ಖಂಡಿತಾ ಊಹಿಸಿರಲ್ಲ!

|

ಪ್ರಮುಖ ಮೊಬೈಲ್‌ ತಯಾರಿಕಾ ಸಂಸ್ಥೆ ಒಪ್ಪೋ ಈಗಾಗಲೇ ಭಿನ್ನ ಮಾದರಿಯ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಹಾಗೆಯೇ ಒಪ್ಪೋ ಕಂಪನಿಯು ನೂತನವಾಗಿ ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಲು ಸಜ್ಜಾಗುತ್ತಿದೆ. ಈ ಫೋನ್‌ ಫೀಚರ್ಸ್‌ಗಳ ಬಗ್ಗೆ ಫೋನ್‌ ಪ್ರಿಯರಲ್ಲಿ ಸಾಕಷ್ಟು ನಿರೀಕ್ಷೆಗಳಿವೆ. ಆದ್ರೆ ಒಪ್ಪೋ ಸಂಸ್ಥೆಯ ಮುಂಬರುವ ತನ್ನ ಒಪ್ಪೋ ರೆನೋ 8 ಪ್ರೊ ಫೋನ್‌ ಒಪ್ಪೋ ಬ್ರ್ಯಾಂಡ್‌ನಲ್ಲಿ ಬರುವುದಿಲ್ಲ.!

ರೀಬ್ರ್ಯಾಂಡ್‌ನಲ್ಲಿ

ಹೌದು, ಒಪ್ಪೋ ಸಂಸ್ಥೆಯ ಮುಂಬರುವ ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಒನ್‌ಪ್ಲಸ್‌ ಫೋನ್‌ ಆಗಿ ರೀಬ್ರ್ಯಾಂಡ್‌ನಲ್ಲಿ ಕಾಣಿಸಿಕೊಳ್ಳಲಿದೆ ಎಂದು IMEI ಡೇಟಾಬೇಸ್ ಸೂಚಿಸುತ್ತದೆ. ಇನ್ನು ಒಪ್ಪೋ ರೆನೋ 8 ಪ್ರೊ ಕಳೆದ ತಿಂಗಳು ಚೀನಾದಲ್ಲಿ ಅನಾವರಣಗೊಂಡಿತು. ಒಪ್ಪೋ ಈ ಫೋನ್‌ ಅನ್ನು ಸಾಧನದಲ್ಲಿ ಮರುಬ್ರಾಂಡೆಡ್ ಆವೃತ್ತಿಯು IMEI ಡೇಟಾಬೇಸ್‌ನಲ್ಲಿ ಮಾದರಿ ಸಂಖ್ಯೆ PGAM10 ನೊಂದಿಗೆ ಕಾಣಿಸಿಕೊಂಡಿದೆ.

CPH2455

ಟಿಪ್‌ಸ್ಟಾರ್‌ ಮುಕುಲ್ ಶರ್ಮಾ ಪ್ರಕಾರ, ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಮಾದರಿ ಸಂಖ್ಯೆ PGAM10 ಅನ್ನು ಹೊಂದಿದೆ. ಹಾಗೆಯೇ ಒಪ್ಪೋ ತನ್ನ ಒಪ್ಪೋ A57 ಫೋನ್‌ ಅನ್ನು ಒನ್‌ಪ್ಲಸ್‌ ನಾರ್ಡ್‌ N20 SE (OnePlus Nord N20 SE) ಆಗಿ ಮರು ಪ್ರಾರಂಭಿಸಬಹುದು ಎನ್ನಲಾಗಿದೆ.. ಇತರೆ ಒನ್‌ಪ್ಲಸ್‌ ಮಾದರಿಗಳು ಸಹ CPH2455 ಮತ್ತು CPH2413 ಮಾದರಿ ಸಂಖ್ಯೆಗಳೊಂದಿಗೆ ಒಪ್ಪೋ ಸ್ಮಾರ್ಟ್‌ಫೋನ್‌ಗಳನ್ನು ಮರುಬ್ಯಾಡ್ಜ್ ಮಾಡಲಿವೆ.

ಸ್ಯಾಮ್‌ಸಂಗ್‌ನ

IMEI ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿರುವ ಸಂಖ್ಯೆಯ ಪ್ರಕಾರ ಒನ್‌ಪ್ಲಸ್‌ ಮೊಬೈಲ್‌ ತಯಾರಿಕಾ ಸಂಸ್ಥೆಯು, ಒಪ್ಪೋ ರೆನೋ 8 ಪ್ರೊ ಫೋನ್‌ ಅನ್ನು ಮರುಬ್ಯಾಡ್ಜ್ ಮಾಡುತ್ತದೆ. ಇನ್ನು ಟಿಪ್‌ಸ್ಟಾರ್‌ ಮುಕುಲ್ ಶರ್ಮಾ ಪ್ರಕಾರ ಈ ಫೋನಿನ ಮಾದರಿ ಸಂಖ್ಯೆ PGAM10 ಅನ್ನು ಹೊಂದಿದೆ. ಒಪ್ಪೋ ರೆನೋ 8 ಪ್ರೊ ಸ್ಮಾರ್ಟ್‌ಫೋನ್‌ ಸ್ಯಾಮ್‌ಸಂಗ್‌ನ 4nm ಉತ್ಪಾದನಾ ಪ್ರಕ್ರಿಯೆಯಲ್ಲಿ ನಿರ್ಮಿಸಲಾದ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ (Snapdragon 7 Gen 1) ಚಿಪ್‌ ಪ್ರೊಸೆಸರ್‌ನೊಂದಿಗೆ ಬರುವ ವಿಶ್ವದ ಮೊದಲ ಡಿವೈಸ್‌ ಆಗಿದೆ.

ಒಪ್ಪೋ ರೆನೋ 8 ಪ್ರೊ ಫೀಚರ್ಸ್‌

ಒಪ್ಪೋ ರೆನೋ 8 ಪ್ರೊ ಫೀಚರ್ಸ್‌

ಒಪ್ಪೋ ರೆನೋ 8 ಪ್ರೊ ಫೋನ್‌ 6.62 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ AMOLED E4 ಡಿಸ್‌ಪ್ಲೇಯನ್ನು ಪಡೆದಿರಲಿದ್ದು, ಈ ಫೋನಿನ ಡಿಸ್‌ಪ್ಲೇಯು 1,080 x 2,400 ಪಿಕ್ಸಲ್‌ ರೆಸಲ್ಯೂಶನ್ ಅನ್ನು ಹೊಂದಿರಲಿದೆ. ಹಾಗೆಯೇ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್ 7 Gen 1 ಪ್ರೊಸೆಸರ್‌ ಸಪೋರ್ಟ್‌ ಇರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಒಎಸ್‌ ಬೆಂಬಲ ಇರಲಿದೆ. ಇನ್ನು ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ ನಲ್ಲಿರಲಿದೆ.

ಮೆಮೊರಿ ಮತ್ತು ಸ್ಟೋರೇಜ್‌ ಆಯ್ಕೆ

ಮೆಮೊರಿ ಮತ್ತು ಸ್ಟೋರೇಜ್‌ ಆಯ್ಕೆ

ಒಪ್ಪೋ ರೆನೋ 8 ಪ್ರೊ ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳಲ್ಲಿ ಎಂಟ್ರಿ ಕೊಡಲಿದೆ ಎಂದು ಲೀಕ್ ಮಾಹಿತಿಗಳಿಂದ ತಿಳಿದು ಬಂದಿದೆ. ಅವುಗಳು ಕ್ರಮವಾಗಿ 8 GB RAM ಮತ್ತು 128 GB ಸ್ಟೋರೇಜ್‌ ಆಯ್ಕೆ ಹಾಗೂ 12 GB RAM ಮತ್ತು 256 GB ಸ್ಟೋರೇಜ್‌ ಆಯ್ಕೆ. ಹಾಗೆಯೇ ಈ ಫೋನ್ 4500 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದ್ದು, ಜೊತೆಗೆ ಬ್ಲ್ಯಾಕ್‌, ವಾರ್ಮ ಗೋಲ್ಡ್‌ ಮತ್ತು ವೈಟ್‌ ಬಣ್ಣಗಳ ಆಯ್ಕೆಗಳಲ್ಲಿ ಪರಿಚಯ ಆಗಲಿದೆ.

ಬೆಲೆ ಎಷ್ಟಿರಲಿದೆ?

ಬೆಲೆ ಎಷ್ಟಿರಲಿದೆ?

ಇನ್ನು ಚೀನಾದಲ್ಲಿ ಒಪ್ಪೋ ರೆನೋ 8 ಪ್ರೊ ಫೋನ್‌ 8GB RAM ಆವೃತ್ತಿಗೆ ಬೇಸ್‌ ವೇರಿಯಂಟ್‌ ಬೆಲೆಯು CNY 2,999 (ಭಾರತದಲ್ಲಿ ಅಂದಾಜು 34,900 ರೂ.) ಆಗಿದೆ. ಒಪ್ಪೋ ಮತ್ತು ಒನ್‌ಪ್ಲಸ್‌ ಮೊದಲ ಬ್ರ್ಯಾಂಡ್‌ಗಳಲ್ಲ. ರೆಡ್ಮಿ ಮೊಬೈಲ್‌ ಸಂಸ್ಥೆಯು ಪೊಕೊ ಬ್ರ್ಯಾಂಡ್‌ ಹೆಸರಿನಲ್ಲಿ ಸ್ಮಾರ್ಟ್‌ಫೋನ್‌ಗಳಲ್ಲಿ ಮರುಬ್ಯಾಡ್ಜ್ ಮಾಡಿ ಅನಾವರಣ ಮಾಡಿದೆ. ಮುಂದೆ ಬರಲಿರುವ ಇತರೆ ಒಪ್ಪೋ ಫೋನ್‌ಗಳ ಬಗ್ಗೆ ಒಂದು ನೋಟ ಮುಂದೆ ನೋಡೋಣ ಬನ್ನಿರಿ.

ಒಪ್ಪೋ ರೆನೋ 8

ಒಪ್ಪೋ ರೆನೋ 8

ಒಪ್ಪೋ ರೆನೋ 8 ಸ್ಮಾರ್ಟ್‌ಫೋನ್ ಜೂನ್‌ 2022 ರಲ್ಲಿ ಲಾಂಚ್ ಆಗುವ ನಿರೀಕ್ಷೆಗಳಿವೆ. ಇನ್ನು ಈ ಫೋನ್‌ 6.43 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿರಲಿದ್ದು, ಈ ಫೋನಿನ ಡಿಸ್‌ಪ್ಲೇಯು 1,080 x 2,400 ಪಿಕ್ಸಲ್‌ ರೆಸಲ್ಯೂಶನ್ ಅನ್ನು ಹೊಂದಿರಲಿದೆ. ಹಾಗೆಯೇ ಇದು ಮೀಡಿಯಾ ಟೆಕ್ ಡೈಮೆನ್ಸಿಟಿ 1300 ಪ್ರೊಸೆಸರ್‌ ಸಪೋರ್ಟ್‌ ಇರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಒಎಸ್‌ ಬೆಂಬಲ ಇರಲಿದೆ. ಇನ್ನು ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾಪಿಕ್ಸಲ್‌ ಸೆನ್ಸಾರ್‌ ನಲ್ಲಿರಲಿದೆ. ಜೊತೆಗೆ 4500 mAh ಬ್ಯಾಟರಿ ಇರಲಿದೆ.

ಒಪ್ಪೋ ಫೈಂಡ್‌ X5 ಪ್ರೊ 5G

ಒಪ್ಪೋ ಫೈಂಡ್‌ X5 ಪ್ರೊ 5G

ಒಪ್ಪೋ ಫೈಂಡ್‌ X5 ಪ್ರೊ 5G ಸ್ಮಾರ್ಟ್‌ಫೋನ್ ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಇದೊಂದು ಹೈ ಎಂಡ್‌ ಮಾದರಿಯ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಫೀಚರ್ಸ್‌ಗಳು ಫ್ಲ್ಯಾಗ್‌ಶಿಪ್‌ ಮಾದರಿಯಲ್ಲಿರಲಿವೆ. ಇನ್ನು ಈ ಫೋನ್‌ 6.7 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿರಲಿದ್ದು, ಇದು ಸ್ನ್ಯಾಪ್‌ಡ್ರಾಗನ್ 8 ಜೆನ್‌ 1 ಪ್ರೊಸೆಸರ್‌ ಸಪೋರ್ಟ್‌ ಇರಲಿದ್ದು, ಅದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಒಎಸ್‌ ಸಪೋರ್ಟ್ ಹೊಂದಿರಲಿದೆ. ಇನ್ನು ಈ ಫೋನ್ ತ್ರಿವಳಿ ಕ್ಯಾಮೆರಾ ರಚನೆಯನ್ನು ಪಡೆದಿರಲಿದ್ದು, ಮೊದಲೆರಡು ಕ್ಯಾಮೆರಾಗಳು 50 ಮೆಗಾ ಪಿಕ್ಸಲ್‌ ಸೆನ್ಸಾರ್‌ ನಲ್ಲಿರಲಿದೆ. ಜೊತೆಗೆ 5000 mAh ಬ್ಯಾಟರಿ ಸಪೋರ್ಟ್‌ ಇರಲಿದೆ.

ಒಪ್ಪೋ A57 5G

ಒಪ್ಪೋ A57 5G

ಒಪ್ಪೋ A57 5G ಸ್ಮಾರ್ಟ್‌ಫೋನ್ ಸಹ ಇದೇ ಜುಲೈ ತಿಂಗಳಿನಲ್ಲಿ ಬಿಡುಗಡೆ ಆಗುವ ನಿರೀಕ್ಷೆಗಳಿವೆ. ಇನ್ನು ಈ ಫೋನಿನ ಫೀಚರ್ಸ್‌ಗಳನ್ನು ನೋಡುವುದಾದರೇ, ಇದು 6.56 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಪಡೆದಿರಲಿದ್ದು, ಮೀಡಿಯಾ ಟೆಕ್ ಡೈಮೆನ್ಸಿಟಿ 810 ಪ್ರೊಸೆಸರ್‌, ಜೊತೆಗೆ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿರಲಿದೆ. ಮುಖ್ಯ ಕ್ಯಾಮೆರಾವು 13 ಮೆಗಾ ಪಿಕ್ಸಲ್‌ನಲ್ಲಿರಲಿದ್ದು, 5000 mAh ಬ್ಯಾಟರಿ ಸಪೋರ್ಟ್‌ ಪಡೆದಿರಲಿದೆ.

Best Mobiles in India

English summary
Oppo Reno 8 Pro To Be Rebranded As A OnePlus Phone: All you need to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X