ಭಾರತೀಯರನ್ನು ತೃಪ್ತಿಪಡಿಸಿರುವ ಮೊಬೈಲ್ ಬ್ರ್ಯಾಂಡ್ 'ಒಪ್ಪೊ' ಅಂತೆ!

|

ಇತ್ತೀಚಿಗೆ ನಡೆದಿರುವ ಸಮೀಕ್ಷೆಯೊಂದರ ಪ್ರಕಾರ, ಭಾರತದಲ್ಲಿ ಒಪ್ಪೋ ಮೊಬೈಲ್ ಬ್ರ್ಯಾಂಡ್ ಹೆಚ್ಚು ಗ್ರಾಹಕ ಇಷ್ಟದ ಬ್ರ್ಯಾಂಡ್ ಎಂದು ಹೇಳಲಾಗಿದೆ. ಭಾರತೀಯ ವೈವಿಧ್ಯಮಯ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗಾಗಿ ನಮ್ರ್ ರಿಸರ್ಚ್ ನಡೆಸಿದ ಸಮೀಕ್ಷೆಯಲ್ಲಿ ಒಪ್ಪೊ ಮೊದಲ ಸ್ಥಾನವನ್ನು ಪಡೆದಿದ್ದು, ನಂತರದ ಸ್ಥಾನವನ್ನು ಒನ್ ಪ್ಲಸ್ ಮತ್ತು ಹುವಾವೆ ಪಡೆದುಕೊಂಡಿದೆ. ಅಧ್ಯಯನದ ಪ್ರಕಾರ ಅತೀ ಹೆಚ್ಚು ಮಾರಾಟವಾಗುವ ಮೊಬೈಲ್ ಫೋನ್‌ಗಳಾದ ಶಿಯೋಮಿ, ಸ್ಯಾಮ್ ಸಂಗ್ ಮತ್ತು ವಿವೋ ಈ ಬಾರಿ ತನ್ನ ಜನಪ್ರಿಯತೆಯನ್ನು ಕಳೆದುಕೊಂಡಿವೆ.

ಭಾರತೀಯರನ್ನು ತೃಪ್ತಿಪಡಿಸಿರುವ ಮೊಬೈಲ್ ಬ್ರ್ಯಾಂಡ್ 'ಒಪ್ಪೊ' ಅಂತೆ!

ಹೌದು, ವೈವಿಧ್ಯಮಯ ಸ್ಮಾರ್ಟ್‌ಫೋನ್ ಬ್ರಾಂಡ್‌ಗಳಿಗಾಗಿ ಎನ್‌ಪಿಎಸ್ (ನೆಟ್ ಪ್ರವರ್ತಕ ಸ್ಕೋರ್) ಅನ್ನು ಪರಿಶೀಲಿಸಿದಾಗ ಇಂತಹದೊಂದು ರಿಪೋರ್ಟ್ ಹೊರಬಿದ್ದಿದ್ದು, ಸಮೀಕ್ಷೆಯಲ್ಲಿ ಗ್ರಾಹಕರು ಒಪ್ಪೋ ಬ್ರ್ಯಾಂಡ್‌ಗೆ ಹೆಚ್ಚು ಆಕರ್ಷಿತರಾಗಿದ್ದಾರೆ ಎಂದು ನಮ್ರ್ ತಿಳಿಸಿದೆ. ಸಮೀಕ್ಷೆಯಲ್ಲಿ ಮೊದಲ ಮೂರು ಸ್ಥಾನವನ್ನು ಒಪ್ಪೋ, ಒನ್ ಪ್ಲಸ್, ಹುವಾಯಿ ಪಡೆದುಕೊಂಡರೆ, ಪ್ರಸಿದ್ಧ ಮೊಬೈಲ್ ಬ್ರ್ಯಾಂಡ್‌ಗಳಾದ ಆಪಲ್ 68ನೇ ಸ್ಥಾನ, ಶಿಯೋಮಿ 66ನೇ ಸ್ಥಾನ, ಲೆನೋವೋ 64ನೇ ಸ್ಥಾನ, ಸ್ಯಾಮ್ ಸಂಗ್ 63 ನೇ ಸ್ಥಾನವನ್ನು ಪಡೆದುಕೊಂಡಿದೆ ಎಂದು ಹೇಳಿದೆ.

ಎನ್‌ಪಿಎಸ್ (ನೆಟ್ ಪ್ರವರ್ತಕ ಸ್ಕೋರ್) ಶ್ರೇಯಾಂಕ ವ್ಯವಸ್ಥೆಯಲ್ಲಿ ಗ್ರಾಹಕರ ತೃಪ್ತಿ ಮತ್ತು ನಿಷ್ಠೆಯನ್ನು ಲೆಕ್ಕಾಚಾರ ಮಾಡಲಾಗುತ್ತದೆ. ಇದನ್ನು 0-10 ಪ್ರಮಾಣದಲ್ಲಿ ಅಳೆಯಲಾಗುತ್ತದೆ. ಈ ಮೆಟ್ರಿಕ್ ಲೆಕ್ಕಾಚಾರವು ನಿಮ್ಮ ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳಿಗೆ ಕಂಪನಿ / ಸೇವೆಯನ್ನು ಶಿಫಾರಸು ಮಾಡಲು ಎಷ್ಟು ಸಾಧ್ಯ ಎಂದು ಪರಿಗಣಿಸಲಾಗಿದೆ. ಹೆಚ್ಚಿನ ಎನ್‌ಪಿಎಸ್ ಸ್ಕೋರ್ ಹೆಚ್ಚಿನ ಗ್ರಾಹಕರ ತೃಪ್ತಿಯ ಉತ್ತಮ ಸೂಚನೆಯಾಗಿದೆ. ಇದು ತಮ್ಮ ಗೆಳೆಯರಿಗೆ ಉತ್ಪನ್ನವನ್ನು ಶಿಫಾರಸು ಮಾಡುವ ಸಂಭವನೀಯತೆಯನ್ನು ಹೆಚ್ಚಿಸುತ್ತದೆ.

ಭಾರತೀಯರನ್ನು ತೃಪ್ತಿಪಡಿಸಿರುವ ಮೊಬೈಲ್ ಬ್ರ್ಯಾಂಡ್ 'ಒಪ್ಪೊ' ಅಂತೆ!

ಎನ್‌ಪಿಎಸ್ (ನೆಟ್ ಪ್ರವರ್ತಕ ಸ್ಕೋರ್) ಶ್ರೇಯಾಂಕ ಸಂಖ್ಯೆಗಳ ಪಡೆಯುವಲ್ಲಿ ಒಪ್ಪೊ, ಒನೆಪ್ಲಸ್ ಮತ್ತು ಹುವಾಯಿ ಮೊದಲ ಮೂರು ಸ್ಥಾನಗಳಲ್ಲಿವೆ. ಇದೇ ವೇಳೆ ಯಶಸ್ವಿ ಮೊಬೈಲ್ ಮಾರಾಟ ಬ್ರಾಂಡ್‌ಗಳಾದ ಆಪಲ್ (ಎನ್‌ಪಿಎಸ್ 68), ಶಿಯೋಮಿ (ಎನ್‌ಪಿಎಸ್ 66), ಲೆನೊವೊ (ಎನ್‌ಪಿಎಸ್ 64) ಮತ್ತು ಸ್ಯಾಮ್‌ಸಂಗ್ (ಎನ್‌ಪಿಎಸ್ 63) ಹೆಚ್ಚು ಹಿಂದುಳಿದಿವೆ. ಆಶ್ಚರ್ಯವೆಂದರೆ, ಮಾರಾಟ ಮತ್ತು ಮಾರ್ಕೆಟಿಂಗ್ ಖರ್ಚಿನ ವಿಷಯದಲ್ಲಿ ಉನ್ನತ ಬ್ರಾಂಡ್‌ಗಳಲ್ಲಿ ಒಂದಾಗಿರುವ ವಿವೋ ಎನ್‌ಪಿಎಸ್ -25 ಸ್ಕೋರ್‌ ಪಡೆದುಕೊಂಡಿದೆ.

ಈ ಜನಪ್ರಿಯ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!ಈ ಜನಪ್ರಿಯ ಆಪ್ ನಿಮ್ಮ ಮೊಬೈಲ್‌ನಲ್ಲಿದ್ದರೆ ಈಗಲೇ ಡಿಲೀಟ್ ಮಾಡಿ!

ಭಾರತದ ಮಾರುಕಟ್ಟೆ ಸಂಶೋಧನಾ ಕಂಪನಿಯಾಗಿರುವ ನಮ್ರ್ ರಿಸರ್ಚ್ ಪ್ರತಿ ಗ್ರಾಹಕ ಅನುಭವವನ್ನು ಎಣಿಸುವಂತೆ ಮಾಡುವ ದ್ಯೇಯವನ್ನು ಹೊಂದಿದೆ. ಆದರೆ, ಆಘಾತಕಾರಿ ಸಂಗತಿಯೆಂದರೆ, 25 ರಿಂದ 60 ವರ್ಷದೊಳಗಿನ ಕೇವಲ 500 ವ್ಯಕ್ತಿಗಳ ಅಭಿಪ್ರಾಯಗಳನ್ನು ಆಧರಿಸಿ, ಒಪ್ಪೋ ಎಲ್ಲರಿಗೂ ಒಪ್ಪುವಂತಹ ಬ್ರ್ಯಾಂಡ್ ಫೋನ್ ಆಗಿದೆ ಎಂಬುದಾಗಿ ಈ ಸಮೀಕ್ಷೆ ರಿಪೋರ್ಟ್ ನೀಡಿದೆ. ದೆಹಲಿ, ಕೋಲ್ಕತಾ, ಮುಂಬೈ, ಬೆಂಗಳೂರು, ಚೆನ್ನೈ ಮತ್ತು ಅಹಮದಾಬಾದ್‌ನ ವಿವಿಧ ನಗರಗಳಿಗೆ ಸೇರಿದ ಜನರಲ್ಲಿ ಈ ಸಮೀಕ್ಷೆಯನ್ನು ಆನ್‌ಲೈನ್‌ನಲ್ಲಿ ನಡೆಸಿದೆ.

Best Mobiles in India

English summary
Oppo Users Are Most Satisfied In India!. Oppo Users Are Most Satisfied In India!. Shockingly, top-selling brands like Samsung, Xiaomi and Vivo didn’t do very well with NPS scores compared to other brands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X