Subscribe to Gizbot

1.5 ದಶಲಕ್ಷ ಭಾರತೀಯರಿಂದ ರೈಲ್ವೆ ನಿಲ್ದಾಣಗಳಲ್ಲಿ ಗೂಗಲ್‌ ಉಚಿತ ವೈಫೈ ಬಳಕೆ

Written By:

ಶೀಘ್ರದಲ್ಲಿ ಹೆಚ್ಚು ರೈಲ್ವೆ ನಿಲ್ದಾಣಗಳು ಉಚಿತ ವೈಫೈ ನೆಟ್‌ವರ್ಕ್‌ ಪಡೆಯಲಿವೆ. ಪ್ರಸ್ತುತ 'ಭಾರತದ 19 ರೈಲ್ವೆ ನಿಲ್ದಾಣಗಳಲ್ಲಿ 1.5 ದಶಲಕ್ಷ ಜನರು ಉಚಿತ ವೈಫೈ ಬಳಕೆ ಮಾಡುತ್ತಿದ್ದಾರೆ', ಎಂದು 'ಗೂಗಲ್‌' ಹೇಳಿದೆ.

2016 ರ ಅಂತ್ಯದೊಳಗೆ ಸುಮಾರು 100 ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ನೀಡುವ ಯೋಜನೆಯನನ್ನು ಜಾರಿಗೊಳಿಸಬೇಕು ಎಂದು ಗೂಗಲ್‌ ಮತ್ತು ರೈಲ್‌ಟೆಲ್‌ ಉದ್ದೇಶಿಸಿವೆ. ಈಗಾಗಲೇ ಗೂಗಲ್‌ ನೀಡಿರುವ ಉಚಿತ ವೈಫೈ(wifi) ನೆಟ್‌ವರ್ಕ್‌ನಿಂದ ಎಷ್ಟು ಜನರು ಉಚಿತವಾಗಿ ಇಂಟರ್ನೆಟ್‌ ಕನೆಕ್ಟ್‌ ಆಗುತ್ತಿದ್ದಾರೆ, ಉಪಯೋಗ ಏನು, ಗೂಗಲ್‌ ಉದ್ದೇಶವೇನು ಎಂಬಿತ್ಯಾದಿ ಮಾಹಿತಿಯನ್ನು ಮುಂದೆ ಓದಿರಿ.

ವೈಫೈ ವೇಗಗೊಳಿಸಬೇಕೇ ಇಲ್ಲಿದೆ ಸಲಹೆಗಳು

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಗೂಗಲ್‌ ಹೇಳಿದ್ದೇನು?

1

"ಕಳೆದ ವಾರ ಭಾರತದ ಅತಿದೊಡ್ಡ ರೈಲ್ವೆ ನಿಲ್ದಾಣಗಳಾದ ಸೇಲ್ಡಹ್ ಜಂಕ್ಷನ್‌, ಲಕ್ನೋ ಜಂಕ್ಷನ್‌, ಲಕ್ನೋ ಮತ್ತು ಗೋರಕ್‌ಪುರ ಜಂಕ್ಷನ್‌ಗಳಲ್ಲಿ ವೈಫೈ ಉಚಿತ ಇಂಟರ್ನೆಟ್‌ ನೆಟ್‌ವರ್ಕ್‌ ಅನ್ನು ಚಾಲನೆಗೊಳಿಸಿದ್ದೇವೆ ಮತ್ತು ಅಂದಿನಿಂದ 19 ದಶಲಕ್ಷ ಭಾರತೀಯರು ಅತಿವೇಗದ ಬ್ರಾಡ್‌ಬ್ಯಾಂಡ್‌ ಅನುಭವವನ್ನು ಪಡೆಯುತ್ತಿದ್ದಾರೆ" ಎಂದು ಗೂಗಲ್‌ ತನ್ನ ಬ್ಲಾಗ್‌ಸ್ಪಾಟ್‌ನಲ್ಲಿ ಬರೆದಿದೆ.

ಶೇಕಡ 20 ನೆಟ್‌ವರ್ಕ್‌

2

2016 ರಲ್ಲಿ ಶೇಕಡ 20 ರಷ್ಟು ನೆಟ್‌ವರ್ಕ್‌ ಸೇವೆ ನೀಡಲು ಉದ್ದೇಶಿಸಿದ್ದವು, ಉಚಿತ ಇಂಟರ್ನೆಟ್‌ ಸೇವೆ ಆರಂಭಿಸಿದ ಒಂದು ವಾರದಲ್ಲೇ ಒಂದು ಲಕ್ಷಕ್ಕಿಂತ ಹೆಚ್ಚು ಜನರು ನೆಟ್‌ವರ್ಕ್‌ಗೆ ಕನೆಕ್ಟ್ ಆಗಿದ್ದಾರೆ. ಆದ್ದರಿಂದ ಹೆಚ್ಚು ರೈಲ್ವೆ ನಿಲ್ದಾಣಗಳಲ್ಲಿ ಉಚಿತ ವೈಫೈ ನೆಟ್‌ವರ್ಕ್‌ ಜಾರಿಗೊಳಿಸುತ್ತಿದ್ದೇವೆ ಎಂದು ಗೂಗಲ್‌ ಪೋಸ್ಟ್‌ನಲ್ಲಿ ಹೇಳಿದೆ.

2 ನಗರಗಳಿಂದ ಹೆಚ್ಚು ಬಳಕೆ

3

ಗೂಗಲ್‌ ವೈಫೈ ಸೇವೆ ಜಾರಿಗೊಳಿಸಿದ ಒಂದು ದಿನದಲ್ಲೇ ಭುವನೇಶ್ವರ್‌ ಮತ್ತು ಮುಂಬೈ ಕೇಂದ್ರದಲ್ಲಿ ಅತಿ ಹೆಚ್ಚು ಡಾಟಾ ಬಳಸುವುದನ್ನು ಬಳಕೆದಾರರ ಅಂಕಿ ಅಂಶಗಳ ಪ್ರಕಾರ ಗೂಗಲ್ ಹೇಳಿದೆ.

ಗೂಗಲ್‌ ಮತ್ತು IAMAI

4

ಗೂಗಲ್‌ ಮತ್ತು IAMAI ಡಾಟಾ ಪ್ರಕಾರ ಪ್ರತಿ ಬಳಕೆದಾರರು ಎಷ್ಟು ಡಾಟಾ ಬಳಸುತ್ತಿದ್ದಾರೆ ಎಂಬುದನ್ನು ಪ್ರದರ್ಶಿಸಿದ್ದು, ಪ್ರತಿ ಬಳಕೆದಾರ 3G ಪ್ಯಾಕ್‌ನಲ್ಲಿ ಬಳಸುವ ಡಾಟಾದ 15 ಪಟ್ಟು ಹೆಚ್ಚು ಡಾಟಾ ಬಳಸುತ್ತಿದ್ದಾರೆ ಎಂದು ಹೇಳಲಾಗಿದೆ.

ಗೂಗಲ್‌ ಪ್ರಾಥಮಿಕ ಡಾಟಾ ಬಳಕೆ

5

ಗೂಗಲ್‌ನ ಉಚಿತ ವೈಫೈ ನೆಟ್‌ವರ್ಕ್‌ ಅನ್ನು ಪ್ರಾಥಮಿಕವಾಗಿ ಮಾಹಿತಿ, ಮನರಂಜನೆ, ಆನ್‌ಲೈನ್ ಜಾಬ್‌ ಸರ್ಚ್‌ಗಾಗಿ ಬಳಸಲಾಗುತ್ತಿದೆ. ಭುವನೇಶ್ವರ್‌ ಮತ್ತು ಪುಣೆಯ ವಿದ್ಯಾರ್ಥಿಗಳು ರೈಲ್ವೆ ನಿಲ್ದಾಣಕ್ಕೆ ಬಂದು ಶಿಕ್ಚಣಕ್ಕೆ ಸಂಬಂಧಿಸಿದ ಕೋರ್ಸ್‌, ಪರೀಕ್ಷೆ ಫಲಿತಾಂಶ ಮಾಹಿತಿ ಸರ್ಚ್‌ ಮಾಡುತ್ತಿದ್ದಾರೆ, ಸಾಫ್ಟ್‌ವೇರ್‌ ಡೌನ್‌ಲೋಡ್‌ ಮತ್ತು ಫೋನ್‌ ಆಪ್‌ಗಳನ್ನು ಅಪ್‌ಗ್ರೇಡ್‌ ಸಹ ಮಾಡುತ್ತಿದ್ದಾರೆ ಎಂದು ಗೂಗಲ್ ಹೇಳಿದೆ.

ಮೊದಲ ಉಚಿತ ವೈಫೈ ಸ್ಥಳ

6

ಗೂಗಲ್‌ ಮೊದಲು ಮುಂಬೈ ಕೇಂದ್ರದಲ್ಲಿ ಉಚಿತ ವೈಫೈ ಯೋಜನೆ ಲಾಂಚ್‌ ಮಾಡಿದೆ. ಈ ಮೂಲಕ ಉಚಿತ ವೈಫೈ ಯಾವ ರೀತಿ ವಿಸ್ತರಣೆ ಯಾಗುತ್ತದೆ ಎಂಬುದನ್ನು ತಿಳಿಯಲಿದೆಯಂತೆ.

ಗೂಗಲ್‌ 'ರೈಲ್‌ಟೆಲ್‌'ನೊಂದಿಗೆ ಕೈಜೋಡಿಸಿದೆ

7

ಗೂಗಲ್‌ 'ರೈಲ್‌ಟೆಲ್'ನೊಂದಿಗೆ ಕೈಜೋಡಿಸಿದ್ದು, ಇದು 'ಪಾನ್‌ ಇಂಡಿಯಾ ಆಪ್ಟಿಕ್ ಫೈಬರ್‌ ನೆಟ್‌ವರ್ಕ್‌' ಅನ್ನು ರೈಲ್ವೆ ಟ್ರ್ಯಾಕ್‌ನಲ್ಲಿ ಹೊಂದಿದೆ. ಪಿಎಸ್‌ಯು ದೇಶದಾದ್ಯಂತ 45,000 ಕಿಲೋ ಮೀಟರ್‌ ಆಪ್ಟಿಕ್‌ ಫೈಬರ್‌ ನೆಟ್‌ವರ್ಕ್ ಹೊಂದಿದೆ. ಆದ್ದರಿಂದ ಗೂಗಲ್‌ ತನ್ನ ವೈಫೈಗಾಗಿ ಪಿಎಸ್‌ಯು ಅನ್ನು ಬಳಸಿಕೊಂಡಿದೆ.

ಗೂಗಲ್‌ ಗುರಿ

8

ಗೂಗಲ್‌ 'ವೈಫೈ ಬ್ರಾಡ್‌ಬ್ಯಾಂಡ್‌' ಹೆಚ್ಚು ಸಾಮರ್ಥ್ಯದೊಂದಿಗೆ ಉತ್ತಮ ಗುಣಮಟ್ಟ ಕಾಪಾಡಿಕೊಳ್ಳುವುದರ ಜೊತೆಗೆ, 2016 ರ ಅಂತ್ಯದೊಳಗೆ 10 ದಶಲಕ್ಷ ಜನರು ರೈಲ್ವೆ ನಿಲ್ದಾಣದ ಉಚಿತ ವೈಫೈ ಬಳಕೆದಾರರನ್ನು ಹೊಂದುವ ನಿರೀಕ್ಷೆ ಹೊಂದಿದೆ.

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ರೂ 3,999 ಕ್ಕೆ 3G ಸ್ಮಾರ್ಟ್‌ಫೋನ್‌ ' 'ಇಂಟೆಕ್ಸ್‌ ಆಕ್ವಾ ಸೆನ್ಸ್‌ 5.1'

ವಾಟ್ಸಾಪ್‌ನ 15 ಸೀಕ್ರೇಟ್‌ ಫೀಚರ್‌ಗಳು; ಬಳಕೆದಾರರು ತಿಳಿಯಲೇಬೇಕು!!

ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌

ಗಿಜ್‌ಬಾಟ್‌ ಫೇಸ್‌ಬುಕ್‌ ಪೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Over 1.5 mn Indians using Google’s free WiFi at railway stations. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot