ಸ್ಫೋಟಕ ವರದಿ: ವಾಟ್ಸ್‌ಆಪ್‌ನಲ್ಲಿ ರೂ.500ಕ್ಕೆ 100 ಕೋಟಿ ಆಧಾರ್ ಮಾಹಿತಿ ಮಾರಾಟ.!

|

ಕೇಂದ್ರ ಸರ್ಕಾರವೂ ದೇಶದ ನಾಗರೀಕರಿಗೆ ಆಧಾರ್ ಹೊಂದುವುದನ್ನು ಕಡ್ಡಾಯ ಮಾಡಿದೆ. ಅಲ್ಲದೇ ತನ್ನ ಎಲ್ಲಾ ಸೇವೆಗಳನ್ನು ಪಡೆಯಲು ಆಧಾರ್ ಸಂಖ್ಯೆಯನ್ನು ನೀಡುವುದು ಇಲ್ಲವೇ ಲಿಂಕ್ ಮಾಡುವುದನ್ನು ಕಡ್ಡಾಯ ಮಾಡುತ್ತಿದೆ. ಈ ಹಿನ್ನಲೆಯಲ್ಲಿ ಪ್ರತಿಯೊಬ್ಬ ದೇಶದ ನಾಗರೀಕನು ಆಧಾರ್ ಕಾರ್ಡ್ ಮಾಡಿಸಿಕೊಳ್ಳಲು ಕ್ಯೂನಲ್ಲಿ ನಿಲ್ಲುತ್ತಿದ್ದಾನೆ.

ಓದಿರಿ: ಫ್ಲಿಪ್‌ಕಾರ್ಟ್‌ 2018ರ ಮೊದಲ ಸೇಲ್‌ನಲ್ಲಿ ರೂ.2018ಕ್ಕೆ 4G ಸ್ಮಾರ್ಟ್‌ಫೋನ್..!

ಇದೇ ಸಂದರ್ಭದಲ್ಲಿ ಶಾಕಿಂಗ್ ಸುದ್ದಿಯೊಂದನ್ನು ಆಂಗ್ಲ ವೆಬ್‌ ಸೈಟ್‌ವೊಂದು ಹೊರ ಹಾಕಿದ್ದು, ಕೇವಲ ರೂ.500ಕ್ಕೆ ಆಧಾರ್ ಕಾರ್ಡ್ ಮಾಹಿತಿಯನ್ನು ಮಾರಲಾಗುತ್ತಿದೆ.ಜಿಯೋದಿಂದ ಕೋಟಿ ಕೋಟಿ ಆಧಾರ್ ಮಾಹಿತಿ ಲೀಕ್ ಎಂಬ ವರದಿಯೂ ಮಾಸುವ ಮುನ್ನವೇ ಸತ್ಯ ಸಂಗತಿಯೊಂದನ್ನು ಆಂಗ್ಲ ವೆಬ್‌ ಸೈಟ್ BGR ವರದಿ ಮಾಡಿದೆ.

ಆಧಾರ್ ಮಾಹಿತಿಗಳನ್ನು ರೂ.500ಕ್ಕೆ ಮಾರಾಟ ಮಾಡುತ್ತಿರುವ ಕುರಿತು ವರದಿಯೊಂದನ್ನು ಪ್ರಕಟ ಮಾಡಿದೆ. ಹ್ಯಾಕರ್ಸ್‌ಗಳು ವಾಟ್ಸ್‌ಆಪ್ ಮೂಲಕ ಏಜೆಂಟ್‌ಗಳ ಸಹಾಯದಿಂದ ಒಂದು ಬಿಲಿಯನ್ ಆಧಾರ್ ಬಳಕೆದಾರರ ಎಲ್ಲಾ ಮಾಹಿತಿಗಳನ್ನು ಕೇವಲ ರೂ.500ಕ್ಕೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

ಓದಿರಿ: ಗೂಗಲ್ ಕನಸು ನನಸು: ಜನವರಿ 26ಕ್ಕೆ ರೂ. 2000ಕ್ಕೆ ಆಂಡ್ರಾಯ್ಡ್ ಗೋ ಸ್ಮಾರ್ಟ್‌ಫೋನ್ ಲಾಂಚ್..!

ರೂ.500ಕ್ಕೆ ಮಾರಾಟ:

ರೂ.500ಕ್ಕೆ ಮಾರಾಟ:

ವಾಟ್ಸ್‌ಆಪ್ ಮೂಲಕವೇ ವ್ಯವಹಾರವನ್ನು ನಡೆಸುತ್ತಿರುವ ಏಜೆಂಟ್‌ಗಳು ಪೇಟಿಎಂ ಮೂಲಕ ರೂ.500 ಪಡೆದುಕೊಂಡು ದುಡ್ಡು ನೀಡಿದವರಿಗೆ ಒಂದು ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ವೊಂದನ್ನು ನೀಡುತ್ತಾರೆ. ಅದನ್ನು ಪಡೆದುಕೊಂಡು ಅವರು ತಿಳಿಸುವ ವೆಬ್‌ಸೈಟಿಗೆ ಲಗ್ಗೆ ಇಟ್ಟರೆ ಅಲ್ಲಿ ಒಂದು ಬಿಲಿಯನ್ ಆಧಾರ್ ಕಾರ್ಡ್ ಮಾಹಿತಿಗಳು ಯಾವುದೇ ಅಡೆತಡೆ ಇಲ್ಲದೇ ದೊರೆಯುತ್ತಿದೆ ಎನ್ನಲಾಗಿದೆ.

ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಮಾರಾಟ:

ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಮಾರಾಟ:

ಆಧಾರ್ ವೆಬ್‌ ಸೈಟಿಗೆ ಲಗ್ಗೆ ಇಡುವ ಯೂಸರ್ ಐಡಿ ಮತ್ತು ಪಾಸ್‌ವರ್ಡ್‌ ಅನ್ನು ವಾಟ್ಸ್‌ಆಪ್‌ ಗ್ರೂಪ್‌ವೊಂದರಲ್ಲಿ ಏಜೆಂಟ್‌ಗಳು ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ. ಇದು ದೇಶದ ಭದ್ರತೆಗೆ ಮಾರಕವಾಗುವ ಸಾಧ್ಯತೆ ದಟ್ಟವಾಗಿದೆ ಎನ್ನಲಾಗಿದೆ.

ಯಾವ ಯಾವ ಮಾಹಿತಿಗಳು ಲಭ್ಯ:

ಯಾವ ಯಾವ ಮಾಹಿತಿಗಳು ಲಭ್ಯ:

ಏಜೆಂಟ್ ನೀಡುವ ಯೂಸರ್ ಐಡಿ-ಪಾಸ್‌ವರ್ಡ್‌ ಮೂಲಕ ವೆಬ್‌ ಸೈಟಿಗೆ ಎಂಟ್ರಿಯನ್ನು ಪಡೆದುಕೊಂಡರೆ ಅಲ್ಲಿ ಒಂದು ಬಿಲಿಯನ್ ಎಂದರೆ ನೂರು ಕೋಟಿ ಆಧಾರ್ ಕಾರ್ಡ್ ಮಾಹಿತಿಗಳು ದೊರೆಯಲಿದೆ. ಪ್ರತಿ ಆಧಾರ್ ಬಳಕೆದಾರರ ಹೆಸರು, ವಿಳಾಸ, ಪೋಸ್ಟಲ್ ಕೋಡ್, ಫೋಟೋ, ಫೋನ್ ನಂಬರ್ ಮತ್ತು ಇ-ಮೇಲ್ ಐಡಿಗಳು ಸುಲಭವಾಗಿ ದೊರೆಯಲಿದೆ ಎನ್ನಲಾಗಿದೆ.

How to save WhatsApp Status other than taking screenshots!! Kannada
ರಾಜಸ್ಥಾನ್ ಸರಕಾರದ ವೆಬ್‌ ಸೈಟ್ ಹ್ಯಾಕ್:

ರಾಜಸ್ಥಾನ್ ಸರಕಾರದ ವೆಬ್‌ ಸೈಟ್ ಹ್ಯಾಕ್:

ಈ ಏಜೆಂಟ್‌ಗಳು ಹ್ಯಾಕರ್ಸ್ ಸಹಾಯದಿಂದ ರಾಜಸ್ಥಾನ ಸರಕಾರದ ವೆಬ್‌ ಸೈಟ್‌ ಅನ್ನು ಹ್ಯಾಕ್ ಮಾಡಿದ್ದಾರೆ ಎನ್ನಲಾಗಿದೆ. ಇದರ ಮೂಲಕವೇ ಸಾಫ್ಟ್‌ವೇರ್ ವೊಂದನ್ನು ಬಳಕೆ ಮಾಡಿಕೊಂದು ಆಧಾರ್ ಮಾಹಿತಿಗಳನ್ನು ಸಂಗ್ರಹಿಸಿಕೊಂಡಿರುವುದಲ್ಲೇ ಮಾಹಿತಿಯನ್ನು ಬ್ಲಾಕ್ ಮಾರುಕಟ್ಟೆಯಲ್ಲಿ ಅತೀ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗಿದೆ.

UIDAI ಹೇಳುವುದೇನು...?

UIDAI ಹೇಳುವುದೇನು...?

UIDAI ಹೆಚ್ಚುವರಿ ನಿರ್ದೇಶಕ ಸಂಜಯ್ ಜಿಂದಾಲ್, ಈ ಕುರಿತು ಮಾತನಾಡಿದ್ದು, 'ಇಡೀ ದೇಶದಲ್ಲಿ UIDAI ನಿರ್ದೇಶಕ ಮತ್ತು ನನ್ನನು ಬಿಟ್ಟರೇ ಇನ್ಯಾರು ಆಧಾರ್ ವೆಬೈ ಸೈಟ್‌ಗೆ ಲಾಗ್ ಆಗುವ ಅಧಿಕಾರ ಮತ್ತು ಅವಕಾಶವನ್ನು ಹೊಂದಿಲ್ಲ. ರಾಜಸ್ಥಾನದ ಯಾವುದೇ ವ್ಯಕ್ತಿಗೆ ಈ ಅಧಿಕಾರವನ್ನು ನೀಡಿಲ್ಲ. ಒಮ್ಮೆ ಯಾರಾದರು ಈ ಆಯ್ಕೆಯನ್ನು ಹೊಂದಿದ್ದರೇ ಅದು ದೇಶದ ಭದ್ರತೆಗೆ ಮಾರಕ' ಎಂದಿದ್ದಾರೆ.

Best Mobiles in India

English summary
Over a billion Aadhaar details sold at Rs 500. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X