ಪ್ಯಾನಸೋನಿಕ್‌ನಿಂದ ಎರಡು ಹೊಸ ಕ್ಯಾಮ್‌ಕಾರ್ಡರ್‌ ಲಾಂಚ್‌! ಏನೆಲ್ಲಾ ಫೀಚರ್ಸ್‌ ಲಭ್ಯ!

|

ಕ್ಯಾಮೆರಾ ಮಾರುಕಟ್ಟೆಯಲ್ಲಿ ಪ್ಯಾನಸೋನಿಕ್ ಕ್ಯಾಮೆರಾಗಳಿಗೆ ಭಾರಿ ಬೇಡಿಕೆಯಿದೆ. ತನ್ನ ಗುಣಮಟ್ಟದ ವಿನ್ಯಾಸ ಹಾಗೂ ಆಕರ್ಷಕ ಫೀಚರ್ಸ್‌ಗಳಿಂದ ವೃತ್ತಿಪರ ಫೋಟೋಗ್ರಾಫರ್‌ಗಳ ನೆಚ್ಚಿನ ಆಯ್ಕೆ ಬ್ರ್ಯಾಂಡ್‌ ಎನಿಸಿಕೊಂಡಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಎರಡು ಹೊಸ ವೃತ್ತಿಪರ ಕ್ಯಾಮ್‌ಕಾರ್ಡರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು HC-X2 ಮತ್ತು HC-X20 ಎಂದು ಹೆಸರಿಸಲಾಗಿದೆ. ಈ ಕ್ಯಾಮ್‌ಕಾರ್ಡರ್‌ಗಳು ವೃತ್ತಿಪರ ವೀಡಿಯೊಗ್ರಾಫರ್‌ಗಳಿಗೆ ಸೂಕ್ತವಾಗುವ ವಿನ್ಯಾಸವನ್ನು ಹೊಂದಿವೆ ಎನ್ನಲಾಗಿದೆ.

ಪ್ಯಾನಸೋನಿಕ್

ಹೌದು, ಪ್ಯಾನಸೋನಿಕ್ ಕಂಪೆನಿ ಭಾರತದಲ್ಲಿ HC-X2 ಮತ್ತು HC-X20 ಎನ್ನುವ ಹೊಸ ಕ್ಯಾಮ್‌ಕಾರ್ಡರ್‌ಗಳನ್ನು ಲಾಂಚ್‌ ಮಾಡಿದೆ. ಈ ಕ್ಯಾಮ್‌ಕಾರ್ಡರ್‌ಗಳು 20x ಆಪ್ಟಿಕಲ್ ಜೂಮ್‌ ಹೊಂದಿದ್ದು, 4K ರೆಕಾರ್ಡಿಂಗ್ ಸಾಮರ್ಥ್ಯವನ್ನು ಪಡೆದಿವೆ. 100fps ನಿಂದ 120fps ವರೆಗೆ ಸೂಪರ್ ಸ್ಲೋ ಮೋಷನ್ ರೇಟ್‌ ಅನ್ನು ಕೂಡ ಒಳಗೊಂಡಿದೆ. ಹಾಗಾದ್ರೆ ಈ ಹೊಸ ಕ್ಯಾಮ್‌ಕಾರ್ಡರ್‌ಗಳ ವಿಶೇಷತೆ ಏನಿದೆ? ಇದರಲ್ಲಿರುವ ಫೀಚರ್ಸ್‌ ವಿವರಗಳೇನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪ್ಯಾನಸೋನಿಕ್‌

ಪ್ಯಾನಸೋನಿಕ್‌ ಕಂಪೆನಿ ಪರಿಚಯಿಸಿರುವ ಎರಡು ಕ್ಯಾಮ್‌ಕಾರ್ಡರ್‌ಗಳು UHD ಮತ್ತು FHD ಎರಡಕ್ಕೂ 24.5mm ವೈಡ್ ಆಂಗಲ್ ಲೆನ್ಸ್‌ ಹೊಂದಿವೆ. ಜೊತೆಗೆ 4K ರೆಕಾರ್ಡಿಂಗ್‌ನಲ್ಲಿ ಹೆಚ್ಚು ನಿಖರವಾದ ಆಟೋ ಫೋಕಸ್‌ ಅನ್ನು ನೀಡಲಿದೆ. ಜೊತೆಗೆ ನ್ಯೂ ಫೇಸ್‌ ಡಿಟೆಕ್ಷನ್‌ ಮತ್ತು ಹೆಚ್ಚಿನ ನಿಖರತೆಗಾಗಿ 1.0 ಟೈಪ್ ಸೆನ್ಸಾರ್‌ ಅನ್ನು ಒಳಗೊಂಡಿವೆ. ಇದಲ್ಲದೆ, ಪ್ಯಾನಸೋನಿಕ್‌ ಕಂಪೆನಿ ತನ್ನ ಕ್ಯಾಮ್‌ಕಾರ್ಡರ್‌ಗಳಲ್ಲಿ ವರ್ಧಿತ ವೀಡಿಯೊ ಕಾರ್ಯಕ್ಷಮತೆ ಮತ್ತು ವಿಸ್ತರಣೆಯನ್ನು ಸಹ ನೀಡಿದೆ.

ಕ್ಯಾಮ್‌ಕಾರ್ಡರ್‌ಗಳು

ಈ ಹೊಸ ಕ್ಯಾಮ್‌ಕಾರ್ಡರ್‌ಗಳು 100fps ನಿಂದ 120fps ವರೆಗೆ ಸೂಪರ್ ಸ್ಲೋ ಮೋಷನ್ ರೇಟ್‌ ಹೊಂದಿವೆ. ಅಲ್ಲದೆ 2fps ನಿಂದ 60fps ವರೆಗಿನ ವೇರಿಯಬಲ್ ಫ್ರೇಮ್ ರೇಟ್‌ ಅನ್ನು ಬೆಂಬಲಿಸಲಿವೆ. ಇನ್ನು HC-X2 ಮತ್ತು HC-X20 ಕ್ಯಾಮ್‌ಕಾರ್ಡರ್‌ಗಳು LCD ಮಾನಿಟರ್ ಮತ್ತು EVF ಅನ್ನು ಹೊಂದಿವೆ. ಇವುಗಳಲ್ಲಿ ಟ್ರಿಪಲ್ ಮ್ಯಾನುವಲ್ ರಿಂಗ್ಸ್‌, 2 ಚಾನೆಲ್ XLR ಆಡಿಯೊ ಇನ್‌ಪುಟ್ ಟರ್ಮಿನಲ್‌ಗಳು, ND ಫಿಲ್ಟರ್, ಡ್ಯುಯಲ್ SD ಕಾರ್ಡ್ ಸ್ಲಾಟ್‌ಗಳನ್ನು ನೀಡಲಾಗಿದೆ. ಈ ಕ್ಯಾಮ್‌ಕಾರ್ಡರ್‌ಗಳನ್ನು ವಾಯರ್‌ಲೆಸ್‌ ಕನೆಕ್ಟಿವಿಟಿ ಬೆಂಬಲದೊಂದಿಗೆ ಬಿಲ್ಟ್‌ ಮಾಡಲಾಗಿದೆ.

ಎರಡು

ಇನ್ನು ಈ ಎರಡು ಕ್ಯಾಮ್‌ಕಾರ್ಡರ್‌ಗಳಲ್ಲಿ HC-X2 ಹೈ ಎಂಡ್‌ ಮಾದರಿಯಾಗಿದ್ದು, 4K HDR ಕಂಟೆಂಟ್‌ ಕ್ರಿಯೆಟ್‌ ಮಾಡಲು HLG ಮತ್ತು 13 ಸ್ಟಾಪ್ V ಲಾಗ್ ರೆಕಾರ್ಡಿಂಗ್ ಅನ್ನು ನೀಡಲಿದೆ. ಜೊತೆಗೆ ಈಥರ್ನೆಟ್ ಕನೆಕ್ಟಿವಿಟಿ ಮತ್ತು ಏಕಕಾಲಿಕ SDI/HDMI ಔಟ್‌ಪುಟ್ ಅನ್ನು ನೀಡಲಿದೆ. ಹಾಗೆಯೇ HD ಲೈವ್ ಸ್ಟ್ರೀಮಿಂಗ್ ಸಾಮರ್ಥ್ಯವನ್ನು ಹೊಂದಿದೆ. ಈ ಎರಡು ಕ್ಯಾಮ್‌ಕಾರ್ಡರ್‌ಗಳನ್ನು HC-ROP ಅಪ್ಲಿಕೇಶನ್ ಮೂಲಕ ಕಂಟ್ರೋಲ್‌ ಮಾಡಬಹುದಾಗಿದೆ. ಈ ಅಪ್ಲಿಕೇಶನ್‌ ಮೂಲಕ ರೆಕಾರ್ಡ್ ಸ್ಟಾರ್ಟ್‌, ಸ್ಟಾಪ್ ರೆಕಾರ್ಡ್ ಮೋಡ್ ಮತ್ತು ಫ್ರೇಮ್ ರೇಟ್‌ ಅನ್ನು ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ.

ಪ್ಯಾನಾಸೋನಿಕ್

ಪ್ಯಾನಾಸೋನಿಕ್ ಲೈಫ್ ಸೊಲ್ಯೂಷನ್ಸ್ ಇಂಡಿಯಾದ ಇಮೇಜಿಂಗ್ ಬ್ಯುಸಿನೆಸ್ ಗ್ರೂಪ್‌ನ ಬಿಸಿನೆಸ್ ಚೀಫ್ ಹರ್ದೀಪ್ ಸರ್ನಾ ಅವರು ಹೇಳಿರುವಂತೆ ಈ ಕ್ಯಾಮ್‌ಕಾರ್ಡರ್‌ಗಳು ಬಳಸಲು ಸುಲಭವಾದ ಮತ್ತು ಸಮತೋಲನವಾಗಿವೆ. ಇವುಗಳನ್ನು ಸಿನಿಮಾ ಮೇಕಿಂಗ್, ಮದುವೆ ಮತ್ತು ಈವೆಂಟ್ ಕವರೇಜ್, ಸುದ್ದಿ ಸಂಸ್ಥೆಗಳು, ಲೈವ್ ಸ್ಟ್ರೀಮಿಂಗ್ ಉದ್ದೇಶಗಳಿಗೆ ಬಳಸುವುದಕ್ಕೆ ಸುಲಭವಾಗಿದೆ. ಆದರಿಂದ ಈ ಕ್ಯಾಮ್‌ಕಾರ್ಡರ್‌ಗಳನ್ನು ವೃತ್ತಿಪರ ವೀಡಿಯೊಗ್ರಾಫರ್‌ಗಳು ಬಳಸುವುದಕ್ಕೆ ಸೂಕ್ತವಾಗಿವೆ ಎಂದು ಹೇಳಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಪ್ಯಾನಸೋನಿಕ್‌ HC-X2 ಕ್ಯಾಮ್‌ಕಾರ್ಡರ್‌ ಭಾರತದ ಮಾರುಕಟ್ಟೆಯಲ್ಲಿ 2,69,990ರೂ. ಬೆಲೆಯನ್ನು ಹೊಂದಿದೆ. ಆದರೆ ಪ್ಯಾನಸೋನಿಕ್‌ HC-X20 ಕ್ಯಾಮ್‌ಕಾರ್ಡರ್‌ ಬೆಲೆ 2,29,990ರೂ.ಆಗಿದೆ. ಇನ್ನು ಈ ಕ್ಯಾಮ್‌ಕಾರ್ಡರ್‌ಗಳು ಭಾರತದಲ್ಲಿರುವ ಎಲ್ಲಾ ಪ್ಯಾನಾಸೋನಿಕ್ ಬ್ರ್ಯಾಂಡ್ ಸ್ಟೋರ್‌ಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
Panasonic launches new camrecorders with 20x zoom and 4K capabilities

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X