ಭಾರತದಲ್ಲಿ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಲಾಂಚ್!.ಸೂಪರ್ ಫೀಚರ್ಸ್!

|

ಫೋಟೊಗ್ರಫಿಯನ್ನು ಬಹುತೇಕ ಎಲ್ಲರೂ ಇಷ್ಟ ಪಡುತ್ತಾರೆ ನಿಜ ಆದರೆ ಅದು ಕೇಲವರಿಗೆ ಹವ್ಯಾಸ ಮತ್ತು ಇನ್ನು ಕೇಲವರಿಗೆ ವೃತ್ತಿ ಆಗಿದೆ. ಯಾರೇ ಆದರೂ ಸರಿ ಮಾರುಕಟ್ಟೆಯಲ್ಲಿ ಬೆಸ್ಟ್‌ ಎನಿಸಿಕೊಂಡ ಕ್ಯಾಮೆರಾ ಖರೀದಿಸಲು ಮುಂದಾಗುತ್ತಾರೆ. ಬೆಸ್ಟ್‌ ಎನಿಸಿಕೊಂಡ ಫೈಕಿ 'ಪ್ಯಾನನೋನಿಕ್'ನ ಕ್ಯಾಮೆರಾಗಳು ಗುರುತಿಸಿಕೊಂಡಿದ್ದು, ಕಂಪನಿಯು ಇತ್ತೀಚಿಗಷ್ಟೆ ಮತ್ತೊಂದು ಅತ್ಯುತ್ತಮ ಕ್ಯಾಮೆರಾವನ್ನು ಲಾಂಚ್ ಮಾಡಿ ಕ್ಯಾಮೆರಾ ಪ್ರಿಯರನ್ನು ಸೆಳೆದಿತ್ತು.

ಭಾರತದಲ್ಲಿ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಲಾಂಚ್!.ಸೂಪರ್ ಫೀಚರ್ಸ್!

ಹೌದು, ಪ್ಯಾನಸೋನಿಕ್ ಕಂಪನಿಯು ಇತ್ತೀಚಿಗೆ 'ಲುಮಿಕ್ಸ್‌ G95'(Lumix G95) ಕ್ಯಾಮೆರಾವನ್ನು ಬಿಡುಗಡೆ ಮಾಡಿತ್ತು ಇದೀಗ ಈ ಕ್ಯಾಮೆರಾವನ್ನು ಭಾರತೀಯ ಮಾರುಕಟ್ಟೆಗೆ ಲಾಂಚ್ ಮಾಡಿದೆ. ಕಂಪನಿಯ ಲುಮಿಕ್ಸ್ Lumix G85 ಕ್ಯಾಮೆರಾದ ಮುಂದಿನ ಅವತರಣಿಕೆ ಆಗಿದ್ದು, ಈ ಕ್ಯಾಮೆರಾವು 20ಎಂಪಿ ಸೆನ್ಸಾರ್‌ ಒಳಗೊಂಡಿದ್ದು, ಬಿಲ್ಟ್‌ಇನ್‌ 5 ಆಕ್ಸಿಸ್ ಇಮೇಜ್ ಸ್ಟೆಬಿಲೈಜೇಶನ್ ಸೌಲಭ್ಯದೊಂದಿಗೆ 4K ಗುಣಮಟ್ಟವನ್ನು ಪಡೆದಿದೆ.

ಭಾರತದಲ್ಲಿ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಲಾಂಚ್!.ಸೂಪರ್ ಫೀಚರ್ಸ್!

ಭಾರತದಲ್ಲಿ ಈ ಕ್ಯಾಮೆರಾವು 12-60mm f/3.5-5.6 ಲೆನ್ಸ್‌ ಮತ್ತು 14-140mm f/3.5-5.6 ಲೆನ್ಸ್‌ ಸಾಮರ್ಥ್ಯದ ಎರಡು ಕಿಟ್‌ ಆಯ್ಕೆಗಳನ್ನು ಹೊಂದಿದೆ. ಹಾಗೆಯೇ ಈ ಕ್ಯಾಮೆರಾವು ರಗಡ ಡಿಸೈನ್‌ ಹೊಂದಿದ್ದು, ನೋಡಲು ಟಫ್‌ ಲುಕ್‌ನಲ್ಲಿದೆ. ಹಾಗಾದರೇ ಪ್ಯಾನಸೋನಿಕ್ 'ಲುಮಿಕ್ಸ್‌ G95' ಕ್ಯಾಮೆರಾ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌! ಓದಿರಿ : ಐದು ಅಂತಸ್ತಿನ ಕಟ್ಟಡ ಖರೀದಿಸಿದ 6 ವರ್ಷದ ಯೂಟ್ಯೂಬ್ ಸ್ಟಾರ್‌!

ಡಿಸ್‌ಪ್ಲೇ ಮತ್ತು ಪಿಕ್ಸಲ್

ಡಿಸ್‌ಪ್ಲೇ ಮತ್ತು ಪಿಕ್ಸಲ್

ಪ್ಯಾನಸೋನಿಕ್‌ನ ಹೊಸ ಲುಮಿಕ್ಸ್ G95 ಕ್ಯಾಮೆರಾವು 3 ಇಂಚಿನ ಟಚ್‌ಸ್ಕ್ರೀನ್ ಡಿಸ್‌ಪ್ಲೇಯನ್ನು ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯು 1.24K ಡಾಟ್ಸ್‌ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರೊಂದಿಗೆ EVF ನೊಂದಿಗೆ 2.36 ಮಿಲಿಯನ್ ಡಾಟ್ಸ್‌ಗಳ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಈ ಕ್ಯಾಮೆರಾವು 20ಎಂಪಿ ಸೆನ್ಸಾರ್‌ನಲ್ಲಿದೆ.

ಸ್ಪೆಷಲ್ ಫೀಚರ್ಸ್‌ಗಳು

ಸ್ಪೆಷಲ್ ಫೀಚರ್ಸ್‌ಗಳು

ಈ ಕ್ಯಾಮೆರಾವು ಐ AF, 30fps (ಫ್ರೇಮ್ಸ್‌ ಪರ್‌ ಸೆಕೆಂಡ್) ವೇಗದಲ್ಲಿ 4K ಗುಣಮಟ್ಟದಲ್ಲಿ ರೆಕಾರ್ಡ್‌ ಮಾಡಬಹುದಾಗಿದೆ. ಅಡ್ವಾನ್ಸ್ಡ್‌ ಮೋಡ್ ಆಯ್ಕೆ ನೀಡಲಾಗಿದ್ದು, 120fps ಸಾಮರ್ಥ್ಯದಲ್ಲಿ ಸ್ಲೋ ಮೋಷನ್ ರೆಕಾರ್ಡಿಂಗ್ ಮಾಡುವ ಸೌಲಭ್ಯವನ್ನು ಪಡೆದುಕೊಂಡಿದೆ. V ಲಾಗ್‌ L ಶೂಟಿಂಗ್ ಆಯ್ಕೆಯಲ್ಲಿ 4:2:0 ಅನುಪಾತದಲ್ಲಿ 8 ಬಿಟ್‌ನಲ್ಲಿ ವಿಡಿಯೊ ಸೆರೆಹಿಡಿಯಬಹುದಾಗಿದೆ.

ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು? ಓದಿರಿ : ಬಿಎಸ್‌ಎನ್‌ಎಲ್‌ನಿಂದ ಮತ್ತೆ ಬಿಗ್ ವ್ಯಾಲಿಡಿಟಿ ಪ್ಲ್ಯಾನ್!..ಸ್ಪೆಷಲ್ ಏನು?

ಕ್ಯಾಮೆರಾದ ISO ಸಾಮರ್ಥ್ಯ

ಕ್ಯಾಮೆರಾದ ISO ಸಾಮರ್ಥ್ಯ

ಪ್ಯಾನಸೋನಿಕ್‌ನ ಈ ಕ್ಯಾಮೆರಾದ ISO ಸಾಮರ್ಥ್ಯವು 200-25,600, ಆಗಿದ್ದು, 90 ಆಟೋಫೋಕಸ್‌ ಪಾಯಿಂಟ್‌ಗಳನ್ನು ಒಳಗೊಂಡಿದೆ. 9fps ಬರ್ಸ್ಟ್‌ ಶೂಟಿಂಗ್ ಆಯ್ಕೆ ಇದ್ದು, ಶಟರ್‌ನ ಗರಿಷ್ಠ ವೇಗವು 1/4000 ಆಗಿದೆ. ವೈ-ಫೈ ಮತ್ತು ಬ್ಲೂಟೂತ್ 4.2 ಇನ್‌ಬಿಲ್ಟ್‌ ಹೊಂದಿದ್ದು, ಆಪ್‌ ಮೂಲಕ ಸ್ಮಾರ್ಟ್‌ಫೋನ್‌ಗೆ ಕನೆಕ್ಟ್ ಮಾಡಬಹುದಾದ ಸೌಲಭ್ಯ ಸಹ ಇದೆ.

ಓದಿರಿ : ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!ಓದಿರಿ : ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗಲಿವೆ ಉಚಿತ ಹೈ ಸ್ಪೀಡ್ ವೈ-ಫೈ!

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಪ್ಯಾನಸೋನಿಕ್‌ನ ಲುಮಿಕ್ಸ್‌ G95 ಕ್ಯಾಮೆರಾವು ಎರಡು ಕಿಟ್‌ ಆಯ್ಕೆಗಳನ್ನು ಹೊಂದಿದ್ದು, 12-60mm f/3.5-5.6 ಲೆನ್ಸ್ ಕಿಟ್‌ ಬೆಲೆಯು 94,990ರೂ.ಗಳು ಆಗಿದೆ. ಮತ್ತು 14-140mm f/3.5-5.6 ಲೆನ್ಸ್‌ ಕಿಟ್‌ ಬೆಲೆಯು 1,09,990ರೂ.ಗಳ ಪ್ರೈಸ್‌ಟ್ಯಾಗ್‌ನಲ್ಲಿದೆ. ಸದ್ಯ ಈ ಕ್ಯಾಮೆರಾವು ಪ್ಯಾನಸೋನಿಕ್‌ ಕಂಪನಿಯ ಅಧಿಕೃತ ಸ್ಟೋರ್‌ಗಳಲ್ಲಿ ಖರೀದಿಗೆ ಲಭ್ಯವಿದೆ.

ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!ಓದಿರಿ : ಫ್ಲಿಪ್‌ಕಾರ್ಟ್‌ 'ಮಂತ್ ಎಂಡ್‌ ಮೊಬೈಲ್ ಫೆಸ್ಟ್‌'!..ಭರ್ಜರಿ ಡಿಸ್ಕೌಂಟ್!

Best Mobiles in India

English summary
Lumix G95 back in April, and now, the company has finally launched it in India. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X