ಗ್ರಾಹಕರಿಗೆ ಹೆಚ್ಚುವರಿ ಶುಲ್ಕದ ಶಾಕ್‌ ಕೊಟ್ಟ ಪೇಟಿಎಂ! ಇಲ್ಲಿದೆ ಮಾಹಿತಿ!

|

ಜನಪ್ರಿಯ ಯಪಿಐ ಪಾವತಿ ಅಪ್ಲಿಕೇಶನ್‌ ಪೇಟಿಎಂ ತನ್ನ ಬಳಕೆದಾರರಿಗೆ ಬಿಗ್‌ ಶಾಕ್‌ ನೀಡಿದೆ. ಪೇಟಿಎಂ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡುವ ಬಳಕೆದಾರರಿಗೆ ಹೆಚ್ಚುವರಿ ಶುಲ್ಕದ ಶಾಕ್‌ ಕೊಟ್ಟಿದೆ. ಈಗಾಗಲೇ ಫೋನ್‌ ಪೇ ಕೂಡ ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ಮೊಬೈಲ್‌ ರೀಚಾರ್ಜ್‌ ಮಾಡುವವರಿಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿದೆ. ಇದೀಗ ಪೇಟಿಎಂ ಕೂಡ ರೀಚಾರ್ಜ್‌ ಮಾಡುವವರಿಗೆ ರೀಚಾರ್ಜ್‌ ಮೊತ್ತದ ಆಧಾರದ ಮೇಲೆ 1ರೂ.ನಿಂದ ಹಿಡಿದು 6ರೂ.ಗಳ ವರೆಗೆ ಹೆಚ್ಚುವರಿ ಶುಲ್ಕ ವಿಧಿಸಲು ಮುಂದಾಗಿದೆ.

ಪೇಟಿಎಂ

ಹೌದು, ಪೇಟಿಎಂ ಮೂಲಕ ಮೊಬೈಲ್‌ ರೀಚಾರ್ಜ್‌ ಮಾಡಿದರೆ ನೀವು ಕೂಡ ಹೆಚ್ಚುವರಿ ಶುಲ್ಕವನ್ನು ಪಾವತಿಸದಬೇಕಾಗುತ್ತದೆ. ಪೇಟಿಎಂ ವಾಲೆಟ್ ಬ್ಯಾಲೆನ್ಸ್, ಬ್ಯಾಂಕ್ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಮಾಡಿದರೂ ಕೂಡ ಎಲ್ಲಾ ಪೇಟಿಎಂ ಮೊಬೈಲ್ ರೀಚಾರ್ಜ್‌ಗಳಿಗೆ ಈ ಶುಲ್ಕ ಅನ್ವಯಿಸಲಿದೆ. ಈ ಕ್ಷಣದಲ್ಲಿ ಎಲ್ಲಾ ಬಳಕೆದಾರರಿಗೆ ಈ ಅಪ್ಡೇಟ್‌ ಗಮನಾರ್ಹವಾಗಿ ಅನ್ವಯಿಸುವುದಿಲ್ಲ. ಆದರೆ ಕೆಲವೇ ದಿನಗಳಲ್ಲಿ ಇದು ಎಲ್ಲರಿಗೂ ಅನ್ವಯವಾಗಲಿದೆ. ಹಾಗಾದ್ರೆ ಪೇಟಿಎಂ ಯಾವೆಲ್ಲಾ ಪಾವತಿಗಳಿಗೆ ಶುಲ್ಕ ವಿಧಿಸಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಪೇಟಿಎಂ

ಪೇಟಿಎಂ ಅಪ್ಲಿಕೇಶನ್‌ ತನ್ನ ಪ್ಲಾಟ್‌ಫಾರ್ಮ್‌ ಮೂಲಕ ಮೊಬೈಲ್ ರೀಚಾರ್ಜ್‌ಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲು ಪ್ರಾರಂಭಿಸಿದೆ ಎಂದು ವರದಿಯಾಗಿದೆ. ಈ ಹೆಚ್ಚುವರಿ ಶುಲ್ಕವು ರೀಚಾರ್ಜ್ ಮೊತ್ತದ ಆಧಾರದ ಮೇಲೆ 1ರೂ.ನಿಂದ 6ರೂ.ಗಳವರೆಗೆ ಇರಲಿದೆ. ಇನ್ನು ನೀವು ಪೇಟಿಎಂ UPI ಅಥವಾ ಬ್ಯಾಂಕ್ ಕ್ರೆಡಿಟ್/ಡೆಬಿಟ್ ಕಾರ್ಡ್ ಮೂಲಕ ಪಾವತಿಸಿದ ಮೊಬೈಲ್ ರೀಚಾರ್ಜ್‌ಗಳಿಗೆ ಈ ಶುಲ್ಕವನ್ನು ವಿಧಿಸಲಾಗುತ್ತದೆ.

ಪೇಟಿಎಂ

ಇನ್ನು ಈ ಹೊಸ ಅಪ್‌ಡೇಟ್‌ನ ಭಾಗವಾಗಿ ಪರಿಗಣಿಸಲ್ಪಟ್ಟ ಆಯ್ದ ಬಳಕೆದಾರರು ಮಾತ್ರ ಇದೀಗ ಹೆಚ್ಚುವರಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಸದ್ಯ ಪೇಟಿಎಂ ತನ್ನ ಆದಾಯವನ್ನು ಹೆಚ್ಚಿಸುವುದ್ಕಾಗಿ ಈ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಈ ಹಿಂದೆ ಅಂದರೆ 2019 ರಲ್ಲಿ, ಪೇಟಿಎಂ UPI ಮತ್ತು ವ್ಯಾಲೆಟ್‌ಗಳನ್ನು ಒಳಗೊಂಡಿರುವ ಯಾವುದೇ ಪಾವತಿ ವಿಧಾನವನ್ನು ಬಳಸುವಾಗ ಗ್ರಾಹಕರಿಂದ ಯಾವುದೇ ರೀತಿಯ ಹೆಚ್ಚುವರಿ ಶುಲ್ಕವನ್ನು ಪಡೆಯುವುದಿಲ್ಲ ಎಂದು ಭರವಸೆ ನೀಡಿತ್ತು. ಆದರೆ ಇದೀಗ ತನ್ನ ಆದಾಯವನ್ನು ಹೆಚ್ಚಿಸುವುದಕ್ಕೆ ಈ ಹೊಸ ಮಾರ್ಗವನ್ನು ಆಯ್ಕೆ ಮಾಡಿಕೊಂಡಿದೆ.

ಪೇಟಿಎಂ

ಮೊಬೈಲ್‌ ರೀಚಾರ್ಜ್‌ಗೆ ಹೆಚ್ಚುವರಿ ಶುಲ್ಕ ವಿಧಿಸುತ್ತಿರುವುದರಲ್ಲಿ ಪೇಟಿಎಂ ಮೊದಲೇನಲ್ಲ. ಈಗಾಗಲೇ ಫೋನ್‌ಪೇ ಅಪ್ಲಿಕೇಶನ್‌ ಕೂಡ ಮೊಬೈಲ್ ರೀಚಾರ್ಜ್‌ಗಳಿಗಾಗಿ ಗ್ರಾಹಕರಿಗೆ "ಪ್ರೊಸೆಸಿಂಗ್ ಶುಲ್ಕ" ಎಂದು ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿದೆ. ಇದೀಗ ಇದೇ ಹಾದಿಯಲ್ಲಿ ಪೇಟಿಎಂ ಹೆಜ್ಜೆ ಹಾಕಿದೆ. ಆದರೆ ಫೋನ್‌ಪೇ ಮತ್ತು ಪೇಟಿಎಂ ಎರಡೂ ಅಪ್ಲಿಕೇಶನ್‌ಗಳು ಹೆಚ್ಚುವರಿ ಶುಲ್ಕವನ್ನು ವಿಧಿಸಲು ಗ್ರಾಹಕರನ್ನು ಆಯ್ಕೆ ಮಾಡಲು ಯಾವೆಲ್ಲಾ ಮಾನದಂಡಗಳನ್ನು ಬಳಸುತ್ತಿವೆ ಅನ್ನೊದು ಇನ್ನೂ ಕೂಡ ಅಧಿಕೃತವಾಗಿ ಬಹಿರಂಗಪಡಿಸಿಲ್ಲ.

ಅಮೆಜಾನ್‌

ಪ್ರಸ್ತುತ ಅಮೆಜಾನ್‌ ಪೇ ಮತ್ತು ಗೂಗಲ್‌ ಪೇ ಅಪ್ಲಿಕೇಶನ್‌ಗಳು ಮಾತ್ರ ರೀಚಾರ್ಜ್‌ ಹಾಗೂ ಯಾವುದೇ ಪಾವತಿಗಳಿಗೆ ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಪೇಟಿಎಂ ಬಳಕೆದಾರರ ಈ ಪ್ಲಾಟ್‌ಫಾರ್ಮ್‌ಗಳಿಗೆ ಬದಲಾಗುವ ಸಾಧ್ಯತೆಯಿದೆ. ಇದಲ್ಲದೆ ಏರ್‌ಟೆಲ್‌, ವಿ ಮತ್ತು ಜಿಯೋ ಟೆಲಿಕಾಂಗಳು ತಮ್ಮ ಲೋಕಲ್‌ ಅಪ್ಲಿಕೇಶನ್‌ಗಳ ಮೂಲಕ ಮೊಬೈಲ್ ರೀಚಾರ್ಜ್‌ಗಳನ್ನು ಸಹ ಬೆಂಬಲಿಸುತ್ತಿವೆ. ಆದರಿಂದ ಬಳಕೆದಾರರು ಇನ್ಮುಂದೆ ಮೊಬೈಲ್‌ ರೀಚಾರ್ಜ್‌ಗಾಗಿ ಯುಪಿಐ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸದೆ ಇರುವ ಸಾಧ್ಯತೆ ಕೂಡ ಇದೆ.

Best Mobiles in India

Read more about:
English summary
Paytm has started taking a surcharge for mobile recharges through its platform

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X