Subscribe to Gizbot

ಪೇಟಿಎಂ ಮಾಲ್ ಆಫರ್: ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.20000 ಕ್ಯಾಷ್ ಬ್ಯಾಕ್.!

Written By:

ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಆನ್‌ಲೈನ್ ಶಾಪಿಂಗ್ ತಾಣಗಳು ಸಾಕಷ್ಟು ಆಫರ್ ಗಳನ್ನು ನೀಡುತ್ತಿದ್ದು, ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಳು ಮೂರುದಿನದ ಆಫರ್ ನೀಡಿದ ಮಾದರಿಯಲ್ಲಿ ಪೇಟಿಎಂ ಮಾಲ್ ಸಹ ಗ್ರಾಹಕರಿಗೆ ಏಳುದಿನಗಳ ಭರ್ಜರಿ ಆಫರ್ ಗಳನ್ನು ನೀಡಲು ಮುಂದಾಗಿದೆ.

ಪೇಟಿಎಂ ಮಾಲ್ ಆಫರ್: ಸ್ಮಾರ್ಟ್‌ಫೋನ್‌ಗಳ ಮೇಲೆ ರೂ.20000 ಕ್ಯಾಷ್ ಬ್ಯಾಕ್.!

ಓದಿರಿ: ಏರ್‌ಟೆಲ್‌ನಿಂದ ಕೌಂಟರ್ : ಜಿಯೋ ಬೇಡ ಎಂದ ಗ್ರಾಹಕ! ಯಾವುದು ಆಫರ್?

ಪೇಟಿಎಂ ಮಾಲ್ ಆಪ್ ಮತ್ತು ವೆಬ್‌ಸೈಟಿನಲ್ಲಿ ಸೇಲ್ ನಡೆಯುತ್ತಿದ್ದು, ಆಗಸ್ಟ್ 8 ರಿಂದ 15ರ ವರೆಗೆ ಈ ಸ್ಮಾರ್ಟ್‌ಫೋನ್ ಮತ್ತು ಇತರೆ ಗ್ಯಾಜೆಟ್‌ಗಳ ಮೇಲೆ ಭರ್ಜರಿ ಆಫರ್ ನೀಡುತ್ತಿದೆ. ಶೇ.80% ವರೆಗೂ ಕಡಿತವಿದ್ದು, ಜೊತೆಗೆ ರೂ.20000 ತನಕ ಕ್ಯಾಷ್ ಬ್ಯಾಕ್ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಫೋನ್ ಮೇಳೆ ಭಾರಿ ಕಡಿತ:

ಐಫೋನ್ ಮೇಳೆ ಭಾರಿ ಕಡಿತ:

ಈ ಬಾರಿ ಪೇಟಿಎಂ ಮಾಲ್ ಇಂಡಿಪೆಂಡೆನ್ಸ್‍ ಡೇ ಸೇಲ್ ನಲ್ಲಿ ಐಫೋನ್ 7 ಗೆ ರೂ.8000ದ ವರೆಗೂ ಕ್ಯಾಷ್ ಬ್ಯಾಕ್ ದೊರೆಯುತ್ತಿದ್ದು, ಇದರೊಂದಿಗೆ ಐಫೋನ್ ಎಸ್‌ಇ ಬೆಲೆಯಲ್ಲಿ 15% ಕಡಿತಗೊಂಡಿದ್ದು, ಜೊತೆಗೆ ರೂ.3000 ಕ್ಯಾಷ್ ಬ್ಯಾಕ್ ಸಹ ದೊರೆಯುತ್ತಿದೆ. ಇಲ್ಲದೇ ಎಲ್ಲಾ ಮಾದರಿಯ ಐಪೋನ್ ಗಳ ಮೇಲೆಯೂ ಸಹ ಆಫರ್ ಲಭ್ಯವಿದೆ.

ಶಿಯೋಮಿ ಫೋನ್ ಮೇಲೆಯೂ ಆಫರ್:

ಶಿಯೋಮಿ ಫೋನ್ ಮೇಲೆಯೂ ಆಫರ್:

ಇದಲ್ಲದೇ ಶಿಯೋಮಿ ಹೊಸದಾಗಿ ಲಾಂಚ್ ಮಾಡಿದ ಶಿಯೋಮಿ ಮಿ ಮ್ಯಾಕ್ಸ್ 2 ಸ್ಮಾರ್ಟ್‌ಫೋನಿನ ಮೇಲೆಯೂ ಸಹ ಆಫರ್ ಲಭ್ಯವಿದ್ದು, ಶೇ.10% ಡಿಸ್ಕೌಂಟ್ ದೊರೆಯುತ್ತಿದೆ.

ಇತರೆ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಆಫರ್ ಇದೆ:

ಇತರೆ ಸ್ಮಾರ್ಟ್‌ಫೋನ್‌ಗಳ ಮೇಲೆಯೂ ಆಫರ್ ಇದೆ:

ಇದಲ್ಲದೇ ಲಿನೋವೊ, ಪ್ಯಾನಸೋನಿಕ್, ಮೈಕ್ರೋ ಮಾಕ್ಸ್, ವಿವೋ ಸ್ಮಾರ್ಟ್‌ಫೋನ್‌ಗಳ ಮೇಲೆ ಕಡಿಮೆ ಎಂದರೆ ಶೇ.10% ರಷ್ಟು ಆಫರ್ ದೊರೆಯುತ್ತದೆ ಎನ್ನಲಾಗಿದೆ.

ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ಆಫರ್:

ಲ್ಯಾಪ್‌ಟಾಪ್‌ಗಳ ಮೇಲೆ ಭರ್ಜರಿ ಆಫರ್:

ಆಪಲ್, ಹೆಚ್‌ಪಿ, ಲಿನೋವೊ ಮತ್ತು ಆಪಲ್ ಲ್ಯಾಪ್‌ಟಾಪ್‌ಗಳ ಮೇಲೆ ರೂ.20000 ಕ್ಯಾಷ್‌ಬ್ಯಾಕ್ ಆಫರ್ ನೀಡಲಾಗಿದೆ. ಇದಲ್ಲದೇ ಡಿಸ್ಕೌಂಟ್ ಸಹ ಕಾಣಬಹುದಾಗಿದೆ.

ಟಿವಿ-ಕ್ಯಾಮೆರಾ ಮೇಲೆಯೂ ಆಫರ್ ಇದೆ:

ಟಿವಿ-ಕ್ಯಾಮೆರಾ ಮೇಲೆಯೂ ಆಫರ್ ಇದೆ:

ಇದರೊಂದಿಗೆ ಪೇಟಿಎಂ ಮಾಲಿನಲ್ಲಿ ವಿವಿಧ ಬ್ರಾಂಡ್ ಟಿವಿಗಳು ಮತ್ತು ಕ್ಯಾಮೆರಾಗಳ ಮೇಲೆಯೂ ಆಫರ್ ನೀಡಲು ಮುಂದಾಗಿದೆ. ಅವುಗಳ ಮೇಲೆಯೂ ಡಿಸ್ಕೌಂಟ್ ನೊಂದಿಗೆ ಕ್ಯಾಷ್ ಬ್ಯಾಕ್ ಸಹ ನೀಡುತ್ತಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Ahead of Independence Day, Paytm Mall has begun its sale on the app and website offering discounts on smartphones and other gadgets.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot