ಭಾರತದಲ್ಲಿ ಈ ಪ್ರದೇಶದ ಜನರಿಗೆ 5G ನೆಟ್‌ವರ್ಕ್‌ ಸಿಗುವುದಿಲ್ಲ?..ಕಾರಣ ಏನು?

|

ಭಾರತದಲ್ಲಿ 5G ರೂಲ್‌ಔಟ್‌ ಆದ ನಂತರ ಸಾಕಷ್ಟು ಬೆಳವಣಿಗೆಗಳು ನಡೆದಿದೆ. ದೇಶದ ಕೆಲವು ಆಯ್ದ ಪ್ರಮುಖ ನಗರಗಳಲ್ಲಿ ಈಗಾಗಲೇ 5G ನೆಟ್‌ವರ್ಕ್‌ ಅನ್ನು ಜಿಯೋ ಮತ್ತು ಏರ್‌ಟೆಲ್‌ ಟೆಲಿಕಾಂಗಳು ನೀಡುತ್ತಾ ಬಂದಿವೆ. ಇದರ ನಡುವೆ ದೇಶದ ಆಯ್ದ ಏರ್‌ಪೋರ್ಟ್‌ಗಳಲ್ಲಿಯೂ ಕೂಡ 5G ಬೇಸ್‌ ಅನ್ನು ಸ್ಥಾಪನೆ ಮಾಡುತ್ತಾ ಬಂದಿವೆ. ಇದಲ್ಲದೆ 2023ರ ಅಂತ್ಯದ ವೇಳೆಗೆ ಇಡೀ ದೇಶದ ಮೂಲೆ ಮೂಲೆಗೂ 5G ನೆಟ್‌ವರ್ಕ್‌ ತಲುಪಲಿದೆ ಎಂಬ ನಿರೀಕ್ಷೆ ಇಡಲಾಗಿದೆ. ಆದರೆ ಇದೀಗ ಬಂದಿರುವ ಹೊಸ ಸುದ್ದಿ ನಿಮಗೆ ಶಾಕ್‌ ಎನಿಸಿದರೂ ಅಚ್ಚರಿಯಿಲ್ಲ.

5G

ಹೌದು, ಭಾರತದಲ್ಲಿ ಮುಂದಿನ ವರ್ಷ ಎಲ್ಲಾ ಕಡೆ 5G ನೆಟ್‌ವರ್ಕ್‌ ಲಭ್ಯವಾಗುವ ಸಾಧ್ಯತೆಯಿದೆ. ಆದರೆ ಈ ಪ್ರದೇಶಗಳಲ್ಲಿ ಮಾತ್ರ 5G ನೆಟ್‌ವರ್ಕ್‌ ಲಬ್ಯವಾಗೋದು ಡೌಟ್‌ ಎನ್ನಲಾಗಿದೆ. ಇದರಿಂದ ಈ ಪ್ರದೇಶಗಳಲ್ಲಿ ವಾಸಿಸುವ ಲಕ್ಷಾಂತರ ಜನರು 5G ನೆಟ್‌ವರ್ಕ್‌ ಬಳಸುವುದಕ್ಕೆ ಮುಂದಿನ ಕೆಲವು ವರ್ಷಗಳು ಸಾಧ್ಯವಾಗುವುದಿಲ್ಲ ಎನ್ನಲಾಗಿದೆ. ಹಾಗಾದ್ರೆ ಭಾರತದ ಯಾವ ಪ್ರದೇಶದಲ್ಲಿ 5G ನೆಟ್‌ವರ್ಕ್‌ ಲಭ್ಯವಾಗೋದು ಡೌಟ್‌ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

5G

ಭಾರತದಲ್ಲಿ 5G ನೆಟ್‌ವರ್ಕ್‌ ಎಲ್ಲಾ ಪ್ರದೇಶಗಳಲ್ಲಿ ಲಭ್ಯವಾಗಬಹುದು. ಆದರೆ ದೇಶದ ವಿಮಾನ ನಿಲ್ದಾಣಗಳ ಬಳಿ ವಾಸಿಸುವ ಜನರಿಗೆ ಪ್ರಸ್ತುತ 5G ನೆಟ್‌ವರ್ಕ್‌ ಲಭ್ಯವಾಗುವುದಿಲ್ಲ. ಯಾಕಂದ್ರೆ ದೇಶದ 5G ನೆಟ್‌ವರ್ಕ್‌ನ ರೇಡಿಯೋ ಫ್ರಿಕ್ವೆನ್ಸಿಗಳು ವಿಮಾನಗಳ ಹಾರಾಟಕ್ಕೆ ತೊಂದರೆ ನೀಡುವ ಸಾದ್ಯತೆಯಿದೆ. ಇದಕ್ಕಾಗಿ ಮುಂದಿನ ಆದೇಶದವರೆಗೂ ವಿಮಾನ ನಿಲ್ದಾಣ ಹಾಗೂ ಹತ್ತಿರದ ಪ್ರದೇಶದಲ್ಲಿ 5G ನೆಟ್‌ವರ್ಕ್‌ ಬೇಸ್‌ ಸ್ಟೇಷನ್‌ಗಳನ್ನು ಸ್ಥಾಪಿಸದಂತೆ ಟೆಲಿಕಾಂ ಆಪರೇಟರ್‌ಗಳಿಗೆ ದೂರಸಂಪರ್ಕ ಇಲಾಖೆ ಮಾಹಿತಿ ನೀಡಿದೆ.

5G ನೆಟ್‌ವರ್ಕ್‌

5G ನೆಟ್‌ವರ್ಕ್‌ ಬಳಸಬೇಕಾದರೆ ಬೇಸ್‌ ಸ್ಟೇಷನ್‌ಗಳನ್ನು ನಿರ್ಮಿಸಬೇಕಾಗುತ್ತದೆ. ಆದರೆ ಇದರಿಂದ ಹೊರಬರುವ ರೇಡಿಯೋ ತರಂಗಾಂತರ ಸ್ಪೆಕ್ಟ್ರಂ ವಿಮಾನಗಳ ರೇಡಿಯೋ ಆಲ್ಟಿಮೀಟರ್‌ಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ವರದಿಯಾಗಿದೆ. ಇದರಿಂದ ವಿಮಾನಗಳ ಹಾರಾಟದ ಸಮಯದಲ್ಲಿ ಅಪಘಾತಗಳು ಹೆಚ್ಚಾಗುವ ಸಾದ್ಯತೆಯಿದೆ. ಇದೇ ಕಾರಣಕ್ಕೆ ವಿಮಾನ ನಿಲ್ದಾಣಗಳ ಬಳಿ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸದಂತೆ ದೂರಸಂಪರ್ಕ ಇಲಾಖೆ ಆದೇಶಿಸಿದೆ. ಅಲ್ಲದೆ ಭಾರತೀಯ ವಿಮಾನ ನಿಲ್ದಾಣಗಳ 2.1 ಕಿಮೀ ವ್ಯಾಪ್ತಿಯಲ್ಲಿ C-ಬ್ಯಾಂಡ್ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸದಂತೆ ಟೆಲಿಕಾಂಗಳಿಗೆ DoT ಪತ್ರವನ್ನು ಕಳುಹಿಸಿದೆ ಎಂದು ವರದಿಯಾಗಿದೆ.

ವಿಮಾನದ

ವಿಮಾನದ ರೇಡಾರ್ ಆಲ್ಟಿಮೀಟರ್‌ಗಳ ಮೇಲೆ ಸಿ-ಬ್ಯಾಂಡ್ 5G ಪ್ರಭಾವ ಬೀರುವ ಸಾಧ್ಯತೆ ಹಿನ್ನೆಲೆ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. 5G ನೆಟ್‌ವರ್ಕ್‌ನ ರೇಡಿಯೊ ಆಲ್ಟಿಮೀಟರ್‌ಗಳಲ್ಲಿನ ಬದಲಾವಣೆಯು ಬಹುಶಃ ವಿಮಾನಗಳ ಟೇಕ್-ಆಫ್ ಮತ್ತು ಲ್ಯಾಂಡಿಂಗ್ ಮತ್ತು ಇನ್-ಏರ್ ನ್ಯಾವಿಗೇಷನ್‌ನ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಆದರಿಂದ ರನ್‌ವೇಯ ಎರಡೂ ತುದಿಗಳಿಂದ 2,100 ಮೀಟರ್‌ಗಳು ಮತ್ತು ಭಾರತೀಯ ವಿಮಾನ ನಿಲ್ದಾಣಗಳ ರನ್‌ವೇಯ ಮಧ್ಯದ ರೇಖೆಯಿಂದ 910 ಮೀಟರ್‌ಗಳಷ್ಟು ಪ್ರದೇಶದಲ್ಲಿ 3,300-3,670 MHz ನಲ್ಲಿ ಯಾವುದೇ 5G/ IMT ಬೇಸ್ ಸ್ಟೇಷನ್‌ಗಳನ್ನು ಹೊಂದಿರಬಾರದು ಎಂದು ಸೂಚನೆ ನೀಡಲಾಗಿದೆ.

ವಿಮಾನಯಾನ

ಸದ್ಯ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ ಹಳೆಯ ವಿಮಾನಗಳಿಂದ ಎಲ್ಲಾ ವಿಮಾನಗಳ ರೇಡಿಯೋ ಆಲ್ಟಿಮೀಟರ್‌ಗಳ ಫಿಲ್ಟರ್‌ಗಳನ್ನು ಬದಲಿಸುವ ತನಕ ಈ ನಿರ್ಬಂಧ ಮುಂದುವರೆಯಲಿದೆ ಎಂದು ಹೇಳಿದೆ. ಮುಂದಿನ ದಿನಗಳಲ್ಲಿ ಸೂಕ್ತ ಬದಲಾವಣೆಗಳನ್ನ ಅಳವಡಿಸಿದ ನಂತರ 5G ನೆಟ್‌ವರ್ಕ್‌ ಆ ಪ್ರದೇಶಗಳಲ್ಲಿ ಲಭ್ಯವಾಗಬಹುದು ಎಂದು ನಿರೀಕ್ಷಿಸಲಾಗಿದೆ. ಆದರೆ ಏರ್‌ಟೆಲ್ ಈಗಾಗಲೇ ನಾಗಪುರ, ಬೆಂಗಳೂರು, ನವದೆಹಲಿ, ಗುವಾಹಟಿ ಮತ್ತು ಪುಣೆಯ ವಿಮಾನ ನಿಲ್ದಾಣಗಳಲ್ಲಿ ತನ್ನ 5G ಬೇಸ್ ಸ್ಟೇಷನ್‌ಗಳನ್ನು ಸ್ಥಾಪಿಸಿದು, ಈ ಹೊಸ ನಿರ್ಣಯ ಏರ್‌ಟೆಲ್‌ 5Gಗೆ ಹಿನ್ನೆಡೆ ಎಂದು ಕೂಡ ಹೇಳಲಾಗಿದೆ.

Best Mobiles in India

English summary
People living These area's might not be able to enjoy 5G even in 2023

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X