ಫಿಲಿಪ್ಸ್‌ ಕಂಪೆನಿಯಿಂದ ಎರಡು ಹೊಸ ಸೌಂಡ್‌ಬಾರ್‌ ಲಾಂಚ್‌! ಬೆಲೆ ಎಷ್ಟು?

|

ಫಿಲಿಪ್ಸ್‌ ಕಂಪೆನಿಯ ಡಿವೈಸ್‌ಗಳಿಗೆ ಭಾರತದಲ್ಲಿ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಫಿಲಿಪ್ಸ್‌ ಕಂಪೆನಿ ಕೂಡ ಭಾರತದಲ್ಲಿ ಸ್ಮಾರ್ಟ್‌ಟಿವಿ, ಆಡಿಯೋ ಆಕ್ಸಿಸರೀಸ್‌, ಸೌಂಡ್‌ಬಾರ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದಲ್ಲಿ ಎರಡು ಹೊಸ ಸೌಂಡ್‌ಬಾರ್‌ಗಳನ್ನು ಪರಿಚಯಿಸಿದೆ. ಇವುಗಳನ್ನು ಫಿಲಿಪ್ಸ್‌ TAB8947 3.1.2 ಮತ್ತು TAB7807 3.1 CH ಸೌಂಡ್‌ಬಾರ್‌ ಎಂದು ಹೆಸರಿಸಲಾಗಿದೆ. ಇನ್ನು ಈ ಸೌಂಡ್‌ಬಾರ್‌ಗಳು ಡಾಲ್ಬಿ ಅಟ್ಮಾಸ್‌ ಟ್ಯೂನ್‌ ಮಾಡಿದ ಇಮ್ಮರ್ಸಿವ್ ಆಡಿಯೊ ನೀಡಲಿವೆ.

ಫಿಲಿಪ್ಸ್‌

ಹೌದು, ಫಿಲಿಪ್ಸ್‌ ಕಂಪೆನಿ ಭಾರತದಲ್ಲಿ ಹೊಸದಾಗಿ TAB8947 3.1.2 CH ಮತ್ತು TAB7807 3.1 CH ಸೌಂಡ್‌ಬಾರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸೌಂಡ್‌ಬಾರ್‌ಗಳು ಕೂಡ ವಾಯರ್‌ಲೆಸ್‌ ಕನೆಕ್ಟಿವಿಟಿಯ್ನು ಪಡೆದುಕೊಂಡಿವೆ. ಇದರಿಂದ ವಾಯರ್‌ಲೆಸ್‌ ಮೂಲಕ ಸಬ್‌ವೂಫರ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇವುಗಳು ಆಲ್-ಇನ್-ಒನ್ ಅನುಭವವನ್ನು ನೀಡಲಿವೆ ಎಂದು ಫಿಲಿಪ್ಸ್‌ ಕಂಪೆನಿ ಹೇಳಿಕೊಂಡಿದೆ.

ಫಿಲಿಪ್ಸ್ TAB8947 3.1.2 CH

ಫಿಲಿಪ್ಸ್ TAB8947 3.1.2 CH

ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು 3.1.2 ಚಾನಲ್‌ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಬಳಸಲಿದೆ. ಇನ್ನು ಈ ಸೌಂಡ್‌ಬಾರ್‌ ಸ್ಪಷ್ಟವಾದ ಸೌಂಡ್‌ ಮಾತ್ರವಲ್ಲದೆ ಹೆಚ್ಚಿನ ಬಾಸ್‌ ಅನ್ನು ಕೂಡ ನೀಡಲಿದೆ. ಇದಲ್ಲದೆ ಡಾಲ್ಬಿ ಅಟ್ಮೋಸ್‌ ಬೆಂಬಲವನ್ನು ಹೊಂದಿರುವುದರಿಂದ ಸರೌಂಡ್‌ ಅನುಭವವನ್ನು ನೀಡಲಿದೆ. ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ZEE5 ನಂತಹ OTT ಸೇವೆಗಳಲ್ಲಿ ಕೂಡ ಡಾಲ್ಬಿ ಅಟ್ಮೋಸ್‌ ಅನ್ನು ಬೆಂಬಲಿಸಲಿದೆ.

TAB8947

ಇನ್ನು ಫಿಲಿಪ್ಸ್‌ TAB8947 3.1.2 CH ಸೌಂಡ್‌ಬಾರ್‌ ಗೂಗಲ್‌ ಅಸಿಸ್ಟೆಂಟ್‌ ಮತ್ತು ಆಪಲ್‌ ಸಿರಿ ಬೆಂಬಲವನ್ನು ಹೊಂದಿದೆ. ಜೊತೆಗೆ ನೀವು ಕ್ರೋಮಾಕಾಸ್ಟ್‌ ಮತ್ತು ಏರ್‌ಪ್ಲೇ ಬಳಸಿಕೊಂಡು ನಿಮ್ಮ ಫೋನ್‌ನಿಂದ ಕಂಟೆಂಟ್‌ ಅನ್ನು ಕೂಡ ಪ್ಲೇ ಮಾಡಬಹುದಾಗಿದೆ. ಹಾಗೆಯೇ HDMI eARC ಗೆ ಬೆಂಬಲದೊಂದಿಗೆ, ನಿಮ್ಮ ಟಿವಿ ರಿಮೋಟ್ ಕಂಟ್ರೋಲ್‌ ಮೂಲಕ ಸೌಂಡ್‌ಬಾರ್‌ ಕಂಟ್ರೋಲ್‌ ಮಾಡುವುದಕ್ಕೆ ಸಾಧ್ಯವಾಗಲಿದೆ. ಆದರೆ "ರೆಸಲ್ಯೂಶನ್ ನಷ್ಟವಿಲ್ಲದೆ" 4K ಪಾಸ್-ಥ್ರೂ ಅನ್ನು ಅನುಮತಿಸುತ್ತದೆ. ಇದಲ್ಲದೆ ಈ ಸೌಂಡ್‌ಬಾರ್‌ ಫಿಲಿಪ್ಸ್ ಈಸಿಲಿಂಕ್‌ಗೆ ಬೆಂಬಲವನ್ನು ನೀಡಲಿದ್ದು, ಕೇವಲ ಒಂದು ರಿಮೋಟ್ ಕಂಟ್ರೋಲ್‌ ಮೂಲಕ EQ ಮೋಡ್‌ಗಳು, ಬಾಸ್, ಟ್ರೆಬಲ್ ಮತ್ತು ವಾಲ್ಯೂಮ್ ಸೆಟ್ಟಿಂಗ್‌ಗಳನ್ನು ಸೆಟ್‌ ಮಾಡಬಹುದಾಗಿದೆ.

ಫಿಲಿಪ್ಸ್ TAB7807 3.1 CH

ಫಿಲಿಪ್ಸ್ TAB7807 3.1 CH

ಫಿಲಿಪ್ಸ್ TAB7807 3.1 CH ಸೌಂಡ್‌ಬಾರ್‌ ಕೂಡ 3.1-ಚಾನೆಲ್ ಹೊಂದಿದೆ. ಆದರೆ ಇದು 6 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದರಲ್ಲಿ ಸಂಪೂರ್ಣ ಸಿಸ್ಟಮ್‌ಗೆ ವಾಯರ್‌ಲೆಸ್ ಆಗಿ ಸಂಪರ್ಕಿಸುವ 8-ಇಂಚಿನ ಸಬ್ ವೂಫರ್ ಅನ್ನು ನೀಡಲಾಗಿದೆ. ಈ ಫಿಲಿಪ್ಸ್ ಸೌಂಡ್‌ಬಾರ್‌ನ ಎರಡೂ ತುದಿಯಲ್ಲಿ ಎರಡು ಹೆಚ್ಚುವರಿ ಟ್ವೀಟರ್ ಸ್ಪೀಕರ್‌ಗಳನ್ನು ನೀಡಲಾಗಿದೆ ಎಂದು ಫಿಲಿಪ್ಸ್‌ ಕಂಪೆನಿ ಹೇಳಿಕೊಂಡಿದೆ. ಈ ಸೌಂಡ್‌ಬಾರ್ ಕೂಡ ಡಾಲ್ಬಿ ಅಟ್ಮಾಸ್ ಅನ್ನು ಬೆಂಬಲಿಸುತ್ತದೆ. ಆದ್ದರಿಂದ ಇದರ ಮೂಲಕ ನೀವು ತಲ್ಲೀನಗೊಳಿಸುವ ಆಡಿಯೊ ಅನುಭವವನ್ನು ಪಡೆದುಕೊಳ್ಳಬಹುದಾಗಿದೆ. ಅದರಲ್ಲೂ ವಿಶೇಷವಾಗಿ ಚಲನಚಿತ್ರಗಳನ್ನು ವೀಕ್ಷಿಸುವಾಗ ಅತ್ಯುತ್ತಮವಾದ ಅನುಭವವನ್ನು ಪಡೆದುಕೊಳ್ಳಲು ಸಾಧ್ಯವಾಗಲಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌ನ ಬೆಲೆ 35,990ರೂ. ಆಗಿದೆ. ಹಾಗೆಯೇ ಫಿಲಿಪ್ಸ್‌ TAB7807 3.1 CH ಸೌಂಡ್‌ಬಾರ್‌ ಬೆಲೆ 28,990ರೂ. ಆಗಿದೆ. ಈ ಎರಡು ಸೌಂಡ್‌ಬಾರ್‌ಗಳು ಭಾರತದ ಪ್ರಮುಖ ಎಲೆಕ್ಟ್ರಾನಿಕ್ಸ್‌ ಸ್ಟೋರ್‌ಗಳಲ್ಲಿ. ಕಂಪೆನಿಯ ಅಧಿಕೃತ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿದೆ.

Best Mobiles in India

Read more about:
English summary
Philips Dolby Atmos-tuned soundbars with wireless subwoofer launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X