'ಶೂ'ಗಳನ್ನು ಕ್ಲೀನ್‌ ಮಾಡಲು ಬಂದಿದೆ ಹೊಸ ಡಿವೈಸ್‌! ಏನಿದರ ವಿಶೇಷ ಅಂತೀರಾ?

|

ಪ್ರಸ್ತುತ ದಿನಗಳಲ್ಲಿ ಮನೆಯಲ್ಲಿ ಬಳಸುವ ಎಲ್ಲಾ ವಸ್ತುಗಳನ್ನು ಸ್ವಚ್ಛಗೊಳಿಸುವುದಕ್ಕೆ ವಿಭಿನ್ನ ಮಾದರಿಯ ಯಂತ್ರಗಳು ಮಾರುಕಟ್ಟೆಯಲ್ಲಿವೆ. ಮನೆಯಲ್ಲಿ ಅಡುಗೆ ಮಾಡುವ ಪಾತ್ರೆಗಳನ್ನು ಸ್ವಚ್ಛಗೊಳಿಸುವ ಯಂತ್ರಗಳಿಂದ ಹಿಡಿದು ಮನೆಯನ್ನು ಸ್ವಚ್ಛಗೊಳಿಸುವ ಯಂತ್ರಗಳನ್ನು ನಾವು ಕಾಣಬಹುದಾಗಿದೆ. ಇದೀಗ ಎಲೆಕ್ಟ್ರಾನಿಕ್ಸ್‌ ಮಾರುಕಟ್ಟೆಯಲ್ಲಿ ಜನಪ್ರಿಯ ಬ್ರ್ಯಾಂಡ್‌ ಎನಿಸಿಕೊಂಡಿರುವ ಫಿಲಿಪ್ಸ್‌ ಕಂಪೆನಿ ಹೊಸ ಯಂತ್ರವನ್ನು ಭಾರತದಲ್ಲಿ ಪರಿಚಯಿಸಿದೆ. ಇದು ನಿಮ್ಮ ಶೂ ಗಳನ್ನು ಸ್ವಚ್ಛಗೊಳಿಸುವ ಕೆಲಸ ಮಾಡಲಿದ್ದು ಭಾರತದಲ್ಲಿ ಈ ಮಾದರಿಯ ಡಿವೈಸ್‌ ಇದೇ ಮೊದಲು ಎನ್ನಲಾಗಿದೆ.

ಫಿಲಿಪ್ಸ್

ಹೌದು, ಫಿಲಿಪ್ಸ್ ಕಂಪೆನಿ ಭಾರತದಲ್ಲಿ ಮೊದಲ ಸ್ನೀಕರ್ ಕ್ಲೀನರ್ ಅನ್ನು ಬಿಡುಗಡೆ ಮಾಡಿದೆ. ಇದನ್ನು ಸ್ನೀಕರ್ ಕ್ಲೀನರ್ GCA1000/60 ಎಂದು ಹೆಸರಿಸಲಾಗಿದೆ. ಈ ಸ್ನೀಕರ್‌ ಕ್ಲೀನರ್‌ ಮೂಲಕ ನಿಮ್ಮ ಶೂಗಳನ್ನು ಶುಚಿ ಮಾಡುವುದಕ್ಕೆ ಸಾಧ್ಯವಾಗಲಿದೆ. ಇದು ಬೂಟುಗಳನ್ನು ನಿರ್ಮಲವಾಗಿ ಮತ್ತು ಕ್ರೀಸ್ ಮುಕ್ತವಾಗಿಡಲು ಸಹಾಯ ಮಾಡುತ್ತದೆ ಎಂದು ಫಿಲಿಪ್ಸ್‌ ಕಂಪನಿ ಹೇಳಿಕೊಂಡಿದೆ. ಅರೆ ಇದೇನಿದು ಶೂ ಕ್ಲೀನ್‌ ಮಾಡುವುದಕ್ಕೂ ಒಂದು ಡಿವೈಸ್‌ ಇದೆಯಾ ಅಂತಾ ನಿಮಗೆ ಅನಿಸಬಹುದು. ಆದರೆ ಇದನ್ನು ಫಿಲಿಪ್ಸ್‌ ಕಂಪೆನಿ ಸಾಕಾರಗೊಳಿಸಿದೆ.

ಸ್ನೀಕರ್‌

ಇನ್ನು ಸ್ನೀಕರ್‌ ಕ್ಲೀನರ್‌ GCA1000/60 ತಡೆರಹಿತ, ಹ್ಯಾಸಲ್‌-ಫ್ರೀ ಮತ್ತು ಕೈಗೆಟುಕುವ ಅನುಭವವನ್ನು ನೀಡುವ ಭರವಸೆ ನೀಡುತ್ತದೆ. ಇದರಲ್ಲಿ ಮೂರು ರೀತಿಯ ಬ್ರಷ್‌ಗಳಿವೆ. ಇದು ಬೂಟನ್ನು ಉಜ್ಜುವುದು ಮತ್ತು ಸ್ಕ್ರಬ್ಬಿಂಗ್‌ ಅನ್ನು ಮಾಡುವ ಮೂಲಕ ಬೂಟುಗಳು ಸ್ವಚ್ಛವಾಗಿರುವಂತೆ ಮಾಡಲಿದೆ. ಇದು IPX5 ವಾಟರ್‌ ಪ್ರೂಫ್‌ ಅನ್ನು ಹೊಂದಿದೆ. ಈ ಡಿವೈಸ್‌ ಒಂದು ರೀತಿಯಲ್ಲಿ ಪಾಕೆಟ್ ಶೂ ಮ್ಯಾನೇಜ್‌ ಅನ್ನು ಮಾಡಲಿದೆ. ಇನ್ನುಳಿದಂತೆ ಈ ಹೊಸ ಸ್ನೀಕರ್‌ ಕ್ಲೀನರ್‌ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಲಿಪ್ಸ್‌

ಫಿಲಿಪ್ಸ್‌ ಕಂಪೆನಿ ಪರಿಚಯಿಸಿರುವ ಹೊಸ ಸ್ನೀಕರ್ ಕ್ಲೀನರ್ GCA1000/60 ಪೋರ್ಟಬಲ್ ಹ್ಯಾಂಡ್‌ಹೆಲ್ಡ್ ಸ್ನೀಕರ್ ಕ್ಲೀನರ್ ಆಗಿದೆ. ಇದನ್ನು ಬಳಸುವ ಮೂಲಕ ನಿಮ್ಮ ಬೂಟುಗಳನ್ನು ಸುಲಭವಾಗಿ ಸ್ವಚ್ಛಗೊಳಿಸಬಹುದು. ಶೂಗಳನ್ನು ಸ್ವಚ್ಚಗೊಳಿಸುವುದಕ್ಕೆ ಈ ಡಿವೈಸ್‌ ನಿಮಗೆ ಸಹಾಯ ಮಾಡಲಿದೆ. ಸಾಮಾನ್ಯವಾಗಿ ಬೂಟುಗಳನ್ನು ಕ್ಲಿನ್‌ ಮಾಡುವುದಕ್ಕೆ ಹಳೆ ಬಟ್ಟೆಗಳನ್ನು ಬಳಸುತ್ತಾರೆ. ಆದರೆ ಅದು ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಆದರೆ ಫಿಲಿಪ್ಸ್‌ ಕಂಪೆನಿಯ ಈ ಡಿವೈಸ್‌ ನಿಮ್ಮ ಬೂಟೂಗಳನ್ನು ಅತ್ಯಂತ ಸ್ವಚ್ಛವಾಗಿ ಕಾಣುವಂತೆ ಮಾಡಲಿದೆ.

ಫಿಲಿಪ್ಸ್‌ ಸ್ನೀಕರ್ ಕ್ಲೀನರ್

ಫಿಲಿಪ್ಸ್‌ ಸ್ನೀಕರ್ ಕ್ಲೀನರ್ GCA1000/60 ತಡೆರಹಿತ, ಹ್ಯಾಸಲ್‌-ಫ್ರೀ ಮತ್ತು ಕೈಗೆಟುಕುವ ಅನುಭವವನ್ನು ನೀಡಲಿದೆ. ಇದು ಹ್ಯಾಂಡ್ಹೆಲ್ಡ್ ಸ್ನೀಕರ್ ಕ್ಲೀನರ್ ಆಗಿದ್ದು, ಪರಿಣಾಮಕಾರಿಯಾಗಿ ನಿಮ್ಮ ಶೂಗಳನ್ನು ಸ್ವಚ್ಛಗೊಳಿಸುವುದಕ್ಕೆ ಅವಕಾಶ ನೀಡಲಿದೆ. ಇದರಲ್ಲಿ ಒಂದು ಬಟನ್‌ ಅನ್ನು ನೀಡಲಾಗಿದ್ದು, ಗುಂಡಿಯ ಸ್ಪರ್ಶದಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡಿವೈಸ್‌ ಮಲ್ಟಿಪಂಕ್ಷನ್‌ ಅನ್ನು ಹೊಂದಿದ್ದು, ಇದು ಉಜ್ಜುವುದು ಮತ್ತು ಸ್ಕ್ರಬ್ಬಿಂಗ್ ಅನ್ನು ಆಟೋಮ್ಯಾಟಿಕ್‌ ಆಗಿ ಮಾಡಲಿದೆ. ಇದರಿಂದ ನಿಮ್ಮ ಸಮಯ ಮತ್ತು ಶ್ರಮವನ್ನು ಉಳಿಸಲಿದೆ.

ಸ್ನೀಕರ್‌

ಈ ಸ್ನೀಕರ್‌ ಕ್ಲೀನರ್‌ನಲ್ಲಿ ಮೂರು ವಿಭಿನ್ನ ಬ್ರಷ್‌ಗಳನ್ನು ನೀಡಲಾಗಿದೆ. ಇವುಗಳನ್ನು ಸಾಫ್ಟ್ ಬ್ರಷ್‌, ಹಾರ್ಡ್ ಬ್ರಷ್ ಮತ್ತು ಸಾಫ್ಟ್ ಸ್ಪಾಂಜ್ ಎಂದು ಹೆಸರಿಸಲಾಗಿದೆ. ಇದರಲ್ಲಿ ಸಾಫ್ಟ್‌ ಬ್ರಷ್‌ ಮೆಶ್ ಮತ್ತು ಕ್ಯಾನ್ವಾಸ್‌ಗೆ ಸೂಕ್ತವಾಗಿದೆ. ಇನ್ನು ಹಾರ್ಡ್ ಬ್ರಷ್ ಟೆಕ್ಸ್ಚರ್ಡ್ ರಬ್ಬರ್ ಅಥವಾ ಶೂ ಬಾಟಮ್‌ಗಳನ್ನು ಕ್ಲೀನ್‌ ಮಾಡುವುದಕ್ಕೆ ಉತ್ತಮವಾಗಿದೆ. ಹಾಗೆಯೇ ಸಾಫ್ಟ್ ಸ್ಪಾಂಜ್ PVC, ಚರ್ಮ ಮತ್ತು ಸ್ಯೂಡ್ ವಸ್ತುಗಳನ್ನು ಸ್ವಚ್ಛಗೊಳಿಸಲು ಸೂಕ್ತ ಎನಿಸಲಿದೆ. ಇದು 4x 6V AA ಬ್ಯಾಟರಿಗಳನ್ನು ಒಳಗೊಂಡಿದ್ದು, 80 ನಿಮಿಷಗಳ ರನ್ನಿಂಗ್‌ ಟೈಂ ನೀಡಲಿದೆ.

ಸ್ನೀಕರ್

ಇನ್ನು ಫಿಲಿಪ್ಸ್‌ನ ಸ್ನೀಕರ್ ಕ್ಲೀನರ್ 500RPM ಗಳೊಂದಿಗೆ ಮೋಟರ್ ಅನ್ನು ಹೊಂದಿದೆ. ಇದು IPX5 ವಾಟರ್‌ ರೆಸಿಸ್ಟೆನ್ಸ್‌ ಅನ್ನು ಹೊಂದಿದೆ. ಇದಲ್ಲದೆ, ಈ ಡಿವೈಸ್‌ ಕಾರ್ಡ್‌ಲೆಸ್‌ ಆಗಿದ್ದು, 0.35Kg ತೂಕವನ್ನು ಹೊಂದಿದೆ. ಇದು ಪಾಕೆಟ್ ಶೂ ನಿರ್ವಹಣೆ ಮತ್ತು ಲಾಂಡ್ರಿ ಪರಿಹಾರದಲ್ಲಿ ಅನುಕೂಲಕರವಾಗಿದೆ. ಈ ಡಿವೈಸ್‌ ಮೂಲಕ ಶೂಗಳನ್ನು ಕ್ಲೀನ್‌ ಮಾಡುವುದು ನಿಮಗೆ ಸುಲಭವಾಗಲಿದೆ. ಇನ್ನು ಈ ಸ್ನೀಕರ್ ಕ್ಲೀನರ್ ನಮ್ಮ ಬ್ರ್ಯಾಂಡ್‌ನ ಹೊಸತನದ ಪ್ರಮುಖ ತತ್ವವನ್ನು ಪುನರುಚ್ಚರಿಸುತ್ತದೆ ಎಂದು ಫಿಲಿಪ್ಸ್‌ ಕಂಪೆನಿ ಹೇಳಿಕೊಂಡಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಫಿಲಿಪ್ಸ್‌ ಕಂಪೆನಿಯ ಹೊಸ ಸ್ನೀಕರ್ ಕ್ಲೀನರ್ GCA1000/60 ಭಾರತದಲ್ಲಿ 2,595 ರೂ. ಬೆಲೆಯನ್ನು ಹೊಂದಿದೆ. ಇದು ಎರಡು ವರ್ಷಗಳ ವಿಶ್ವಾದ್ಯಂತ ಗ್ಯಾರಂಟಿಯೊಂದಿಗೆ ಬರುತ್ತದೆ. ಇನ್ನು ಈ ಸ್ನೀಕರ್ ಕ್ಲೀನರ್ ಬ್ಲ್ಯಾಕ್‌ ಮತ್ತು ಯೆಲ್ಲೊ ಕಲರ್‌ ಬಣ್ಣದ ಆಯ್ಕೆಗಳಲ್ಲಿ ಬರಲಿದೆ. ಇದು ಫಿಲಿಪ್ಸ್ ಡೊಮೆಸ್ಟಿಕ್ ಅಪ್ಲೈಯನ್ಸ್ ಇ-ಸ್ಟೋರ್ ಮೂಲಕ ಖರೀದಿಸಲು ಪ್ರತ್ಯೇಕವಾಗಿ ಲಭ್ಯವಿದೆ.

ಸ್ಮಾರ್ಟ್‌ ಬೈಕ್‌ ಹೆಲ್ಮೆಟ್‌

ಇದಲ್ಲದೆ ನೀವು ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಬೈಕ್‌ ಹೆಲ್ಮೆಟ್‌ಗಳನ್ನು ಕೂಡ ಕಾಣಬಹುದು. ಸ್ಮಾರ್ಟ್‌ ಟೆಕ್ನಾಲಜಿ ಮೂಲಕ ಗಮನ ಸೆಳೆದಿರುವ ಡಿವೈಸ್‌ಗಳಲ್ಲಿ ಸ್ಮಾರ್ಟ್‌ ಹೆಲ್ಮೆಟ್‌ ಕೂಡ ಸೇರಿದೆ. ಸ್ಮಾರ್ಟ್‌ ಬೈಕ್‌ ಹೆಲ್ಮೆಟ್‌ಗಳನ್ನು ನಿಮ್ಮ ಪ್ರಯಾಣವನ್ನು ಇನ್ನಷ್ಟು ಸುರಕ್ಷಿತವಾಗಿಸಲಿದೆ. ಸ್ಮಾರ್ಟ್‌ ಹೆಲ್ಮೆಟ್‌ಗಳು ಸಾಮಾನ್ಯವಾಗಿ ಬ್ಲೂಟೂತ್‌ ಕನೆಕ್ಟಿವಿಟಿಯನ್ನು ಪಡೆದುಕೊಂಡಿವೆ. ಇದರಿಂದ ಹೆಡ್‌ಸೆಟ್‌ ಕೆನೆಕ್ಟಿವಿಟಿ ಕೂಡ ಸಾಧ್ಯವಾಗಲಿದೆ. ಇದರಿಂದ ನೀವು ಮ್ಯೂಸಿಕ್‌ ಅನ್ನು ಆಲಿಸುವುದಕ್ಕೆ ಸಾದ್ಯವಾಗಲಿದೆ. ಈ ಮಾದರಿಯ ಸ್ಮಾರ್ಟ್‌ ಹೆಲ್ಮೆಟ್‌ಗಳಲ್ಲಿ ಗಮನಸೆಳೆದಿರುವ ಸ್ಮಾರ್ಟ್‌ ಹೆಲ್ಮೆಟ್‌ಗಳ ವಿವರ ಕೆಳಗಿನಂತಿದೆ.

BluArmor BLU3 E20 ಸ್ಮಾರ್ಟ್‌ ಹೆಲ್ಮೆಟ್‌

BluArmor BLU3 E20 ಸ್ಮಾರ್ಟ್‌ ಹೆಲ್ಮೆಟ್‌

BluArmor BLU3 E20 ಈ ಹೆಲ್ಮೆಟ್‌ ಕೂಲಿಂಗ್ ಹಾಗೂ ಇನ್ಫೋಟೈನ್‌ಮೆಂಟ್‌ಗಾಗಿ ಬ್ಲೂಟೂತ್ ಬೆಂಬಲವನ್ನು ಪಡೆದುಕೊಂಡಿದೆ. ಹಾಗೆಯೇ ಧೂಳನ್ನು ನಿರ್ಬಂಧಿಸುವ ಸೌಲಭ್ಯವನ್ನು ಪಡೆದುಕೊಂಡಿದೆ.

Vega Evo BT ಬ್ಲೂಟೂತ್ ಹೆಲ್ಮೆಟ್‌

Vega Evo BT ಬ್ಲೂಟೂತ್ ಹೆಲ್ಮೆಟ್‌

Vega Evo BT ಬ್ಲೂಟೂತ್ ಹೆಲ್ಮೆಟ್‌ ವಾಯರ್‌ಲೆಸ್‌ ಕನೆಕ್ಟಿವಿಟಿ ಆಯ್ಕೆ ಹೊಂದಿದೆ. ಬ್ಲೂಟೂತ್ ಸೌಲಭ್ಯದ ಮೂಲಕ ವಾಯಿಸ್‌ ಕರೆ, ಮ್ಯೂಸಿಕ್ ಕೇಳುವಿಕೆ ಮಾಡಬಹುದಾಗಿದೆ.

Skypearl ಹೆಲ್ಮೆಟ್‌

Skypearl ಹೆಲ್ಮೆಟ್‌

Skypearl ಬ್ಲೂಟೂತ್ ಹೆಲ್ಮೆಟ್‌ ಡ್ಯುಯಲ್ ಸ್ಟಿರಿಯೊ ಸ್ಪೀಕರ್‌ಗಳನ್ನು ಹೊಂದಿರುವ ಬ್ಲೂಟೂತ್ ಹೆಡ್‌ಸೆಟ್, ಕಾಲ್ ಕಂಟ್ರೋಲ್ ನಂತಹ ಸೌಲಭ್ಯಗಳನ್ನು ಹೊಂದಿದೆ.

Best Mobiles in India

Read more about:
English summary
Philips launches sneaker cleaner in India with two years guarantee

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X