ಫಿಲಿಪ್ಸ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ಅಚ್ಚರಿಯ ಫೀಚರ್ಸ್‌!

|

ಟೆಕ್‌ ಮಾರುಕಟ್ಟೆಯಲ್ಲಿ ಫಿಲಿಪ್ಸ್‌ ಕಂಪೆನಿಯ ಡಿವೈಸ್‌ಗಳಿಗೆ ಭಾರಿ ಬೇಡಿಕೆಯಿದೆ. ಇದಕ್ಕೆ ತಕ್ಕಂತೆ ಫಿಲಿಪ್ಸ್‌ ಕಂಪೆನಿ ಕೂಡ ಭಿನ್ನ ಮಾದರಿಯ ಡಿವೈಸ್‌ಗಳನ್ನು ಪರಿಚಯಿಸುತ್ತಾ ಬಂದಿದೆ. ಸದ್ಯ ಇದೀಗ ಭಾರತದ ಮಾರುಕಟ್ಟೆಯಲ್ಲಿ ಹೊಸ ಫಿಲಿಪ್ಸ್‌ TAH8506BK ಹೆಡ್‌ಫೋನ್‌ ಬಿಡುಗಡೆ ಮಾಡಿದೆ. ಈ ಹೊಸ ಹೆಡ್‌ಫೋನ್‌ ANC ಪ್ರೊ, ವೇಗದ ಚಾರ್ಜಿಂಗ್ ಸೇರಿದಂತೆ ಹಲವು ಆಕರ್ಷಕ ಫೀಚರ್ಸ್‌ಗಳನ್ನು ಒಳಗೊಂಡಿದೆ. ಇದು ಫೋನ್‌ ಕಾಲ್‌ಗಳನ್ನು ಮಾಡುವುದಕ್ಕೆ ಸ್ವೈಪ್‌ ಟಚ್‌ ಕಂಟ್ರೋಲ್‌ ಫೀಚರ್ಸ್‌ ಅನ್ನು ಬೆಂಬಲಿಸಲಿದೆ.

ಫಿಲಿಪ್ಸ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ಅಚ್ಚರಿಯ ಫೀಚರ್ಸ್‌!

ಹೌದು, ಫಿಲಿಪ್ಸ್‌ ಕಂಪೆನಿ ಹೊಸ ಫಿಲಿಪ್ಸ್ TAH8506BK ಹೆಡ್‌ಫೋನ್‌ ಪರಿಚಯಿಸಿದೆ. ಇದು ಮಡಚಬಹುದಾದ ಮತ್ತು ಹೊಂದಾಣಿಕೆ ಮಾಡಬಹುದಾದ ಇಯರ್ ಕಪ್‌ಗಳನ್ನು ಒಳಗೊಂಡಿದೆ. ಇದರಲ್ಲಿ ವಾಲ್ಯೂಮ್‌ ಲೆವೆಲ್‌ ಅನ್ನು ಕಂಟ್ರೋಲ್‌ ಮಾಡುವುದಕ್ಕೆ ಕೂಡ ಅವಕಾಶವನ್ನು ನೀಡಲಾಗಿದೆ. ಇನ್ನು ಹೆಡ್‌ಫೋನ್‌ ಅಡಾಪ್ಟಿವ್ ಆಕ್ಟಿವ್ ನಾಯ್ಸ್ ಕ್ಯಾನ್ಸಲೇಷನ್ ಪ್ರೊ ಫೀಚರ್ಸ್‌ ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿದೆ. ಹಾಗಾದ್ರೆ ಈ ಹೊಸ ಹೆಡ್‌ಫೋನ್‌ ಯಾವೆಲ್ಲಾ ಫೀಚರ್ಸ್‌ ಒಳಗೊಂಡಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಫಿಲಿಪ್ಸ್ TAH8506BK ಹೆಡ್‌ಫೋನ್‌ ಅತ್ಯಾಕರ್ಷಕ ಫೀಚರ್ಸ್‌ಗಳ ಮೂಲಕ ಗಮನಸೆಳೆದಿದೆ. ಇದು ಆಂಬಿಯೆಂಟ್ ಮೋಡ್ ಬಳಕೆದಾರರಿಗಾಗಿ ಬ್ಯಾಕ್‌ಗ್ರೌಂಡ್‌ ಸೌಂಡ್‌ ಅನ್ನು ನೀಡಲಿದೆ. ಇನ್ನು ಈ ಹೆಡ್‌ಫೋನ್‌ಗಳು 40mm ಆಡಿಯೋ ಡ್ರೈವರ್‌ಗಳನ್ನು ಒಳಗೊಂಡಿದ್ದು, ಹೈ-ರೆಸ್ ಆಡಿಯೊಗೆ ಬೆಂಬಲವನ್ನು ನೀಡಲಿದೆ. ಈ ಹೆಡ್‌ಫೋನ್‌ನಲ್ಲಿ 4 EQ ಸ್ಟೆಪ್ಸ್‌ಗಳನ್ನು ಪ್ರಿಸೆಟ್‌ ಮಾಡಲಾಗಿದೆ. ಅವುಗಳೆಂದರೆ, ಬಾಸ್, ವಾಯ್ಸ್‌, ಪವರ್‌ ಮತ್ತು ಟ್ರಾವೆಲ್‌ ಗಳೆಂದು ಹೆಸರಿಸಲಾಗಿದೆ. ಈ ಮೋಡ್‌ಗಳನ್ನು ಫಿಲಿಪ್ಸ್ ಹೆಡ್‌ಫೋನ್ ಅಪ್ಲಿಕೇಶನ್ ಮೂಲಕ ಸುಲಭವಾಗಿ ಕಸ್ಟಮೈಸ್ ಮಾಡಬಹುದಾಗಿದೆ.

ಫಿಲಿಪ್ಸ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ಅಚ್ಚರಿಯ ಫೀಚರ್ಸ್‌!

ಇನ್ನು ಈ ಹೆಡ್‌ಫೋನ್‌ ANC ಫೀಚರ್ಸ್‌ ಪಡೆದುಕೊಂಡಿದೆ. ಜೊತೆಗೆ ಈ ಹೆಡ್‌ಫೋನ್‌ ಬ್ಲೂಟೂತ್ ಮಲ್ಟಿಪಾಯಿಂಟ್ ಕನೆಕ್ಟಿವಿಟಿ ಫೀಚರ್ಸ್‌ ಅನ್ನು ಕೂಡ ಪಡೆದಿದೆ. ಇದು ಬಳಕೆದಾರರಿಗೆ ಎರಡು ಡಿವೈಸ್‌ಗಳಿಗೆ ಏಕಕಾಲದಲ್ಲಿ ಸಂಪರ್ಕಿಸಲು ಅನುವು ಮಾಡಿಕೊಡುತ್ತದೆ. ಅಲ್ಲದೆ ಈ ಡಿವೈಸ್‌ ಅನ್ನು ಸಿಂಗಲ್‌ ಚಾರ್ಜ್‌ನಲ್ಲಿ 60 ಗಂಟೆಗಳವರೆಗಿನ ಪ್ಲೇಬ್ಯಾಕ್ ಟೈಂ ನೀಡಲಿದೆ. ಇದು ANC ಇಲ್ಲದೆ ಆಕ್ಟಿವ್‌ ಮಾಡಿದರೆ 45 ಗಂಟೆಗಳವರೆಗಿನ ಬ್ಯಾಟರಿ ಬಾಳಿಕೆ ನೀಡಲಿದೆ. ಅಲ್ಲದೆ ಈ ಹೆಡ್‌ಫೋನ್‌ ವೇಗದ ಚಾರ್ಜಿಂಗ್‌ ಅನ್ನು ಬೆಂಬಲಿಸಲಿದೆ. ಆದರಿಂದ ಈ ಹೆಡ್‌ಫೋನ್‌ ಅನ್ನು ನೀವು ಕೇವಲ 15 ನಿಮಿಷ ಚಾರ್ಜ್‌ ಮಾಡಿದರೆ 8 ಗಂಟೆಗಳವರೆಗಿನ ಪ್ಲೇಟೈಮ್ ಅನ್ನು ಒದಗಿಸಲಿದೆ.

ಬೆಲೆ ಮತ್ತು ಲಭ್ಯತೆ
ಫಿಲಿಪ್ಸ್‌ TAH8506BK ಹೆಡ್‌ಫೋನ್‌ ಭಾರತದಲ್ಲಿ 10,999ರೂ. ಬೆಲೆಯನ್ನು ಪಡೆದಿದೆ. ಇದು ಭಾರತದಲ್ಲಿನ ಪ್ರಮುಖ ಆನ್‌ಲೈನ್ ಮತ್ತು ಆಫ್‌ಲೈನ್ ಸ್ಟೋರ್‌ಗಳ ಮೂಲಕ ಖರೀದಿಸಲು ಲಭ್ಯವಾಗಲಿದೆ.

ಫಿಲಿಪ್ಸ್ ಸಂಸ್ಥೆಯಿಂದ ಹೊಸ ಹೆಡ್‌ಫೋನ್‌ ಲಾಂಚ್‌! ಅಚ್ಚರಿಯ ಫೀಚರ್ಸ್‌!

ಇದಲ್ಲದೆ ಫಿಲಿಪ್ಸ್‌ ಕಂಪೆನಿ ಭಾರತದಲ್ಲಿ ಹೊಸದಾಗಿ TAB8947 3.1.2 CH ಮತ್ತು TAB7807 3.1 CH ಸೌಂಡ್‌ಬಾರ್‌ಗಳನ್ನು ಬಿಡುಗಡೆ ಮಾಡಿದೆ. ಈ ಎರಡು ಸೌಂಡ್‌ಬಾರ್‌ಗಳು ಕೂಡ ವಾಯರ್‌ಲೆಸ್‌ ಕನೆಕ್ಟಿವಿಟಿಯ್ನು ಪಡೆದುಕೊಂಡಿವೆ. ಇದರಿಂದ ವಾಯರ್‌ಲೆಸ್‌ ಮೂಲಕ ಸಬ್‌ವೂಫರ್‌ಗಳಿಗೆ ಕನೆಕ್ಟ್‌ ಮಾಡಬಹುದಾಗಿದೆ. ಇದರಲ್ಲಿ ಫಿಲಿಪ್ಸ್ TAB8947 3.1.2 CH ಸೌಂಡ್‌ಬಾರ್‌ 8 ಇಂಟಿಗ್ರೇಟೆಡ್ ಆಡಿಯೋ ಡ್ರೈವರ್‌ಗಳನ್ನು ಹೊಂದಿದೆ. ಇದು 3.1.2 ಚಾನಲ್‌ಗಳನ್ನು ಮತ್ತು 8-ಇಂಚಿನ ಸಬ್ ವೂಫರ್ ಅನ್ನು ಬಳಸಲಿದೆ. ಇನ್ನು ಈ ಸೌಂಡ್‌ಬಾರ್‌ ಸ್ಪಷ್ಟವಾದ ಸೌಂಡ್‌ ಮಾತ್ರವಲ್ಲದೆ ಹೆಚ್ಚಿನ ಬಾಸ್‌ ಅನ್ನು ಕೂಡ ನೀಡಲಿದೆ. ಇದಲ್ಲದೆ ಡಾಲ್ಬಿ ಅಟ್ಮೋಸ್‌ ಬೆಂಬಲವನ್ನು ಹೊಂದಿರುವುದರಿಂದ ಸರೌಂಡ್‌ ಅನುಭವವನ್ನು ನೀಡಲಿದೆ. ಜೊತೆಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ, ಡಿಸ್ನಿ+ ಹಾಟ್‌ಸ್ಟಾರ್ ಮತ್ತು ZEE5 ನಂತಹ OTT ಸೇವೆಗಳಲ್ಲಿ ಕೂಡ ಡಾಲ್ಬಿ ಅಟ್ಮೋಸ್‌ ಅನ್ನು ಬೆಂಬಲಿಸಲಿದೆ.

Best Mobiles in India

English summary
Philips TAH8506BK Headphone Launched in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X