ಆಧಾರ್‌ ಮೂಲಕವೇ ಫೋನ್‌ಪೇ ಆಕ್ಟಿವ್ ಮಾಡಬಹುದು; ಹೇಗೆ ಗೊತ್ತಾ!?

|

ಫೋನ್‌ಪೇ (PhonePe) ಭಾರತೀಯ ಡಿಜಿಟಲ್ ಪಾವತಿ ಮತ್ತು ಹಣಕಾಸು ತಂತ್ರಜ್ಞಾನ ಕಂಪೆನಿಯಾಗಿದ್ದು, ಏಕೀಕೃತ ಪಾವತಿಗಳ ಇಂಟರ್ಫೇಸ್ ಅನ್ನು ಆಧರಿಸಿದ ಆಪ್ ಇದಾಗಿದೆ. ಇದರ ನಡುವೆ ಈ ಆಪ್‌ನಲ್ಲಿ ಸುಲಭ ಮಾರ್ಗದ ಹೊಸ ಫೀಚರ್ಸ್‌ ಒಂದನ್ನು ಪರಿಚಯಿಸಲಾಗಿದೆ. ಈ ಮೂಲಕ ಭಾರತದಲ್ಲಿ ಆಧಾರ್ ಆಧಾರಿತ ಯುಪಿಐ ಮೂಲಕ ಕಾರ್ಯನಿರ್ವಹಿಸುವ ಮೊದಲ ಆಪ್‌ ಆಗಲಿದೆ.

ಫೋನ್‌ಪೇ

ಹೌದು, ಫೋನ್‌ಪೇನಲ್ಲಿ ಇನ್ಮುಂದೆ ಆಧಾರ್ ಆಧಾರಿತ ಓಟಿಪಿ ದೃಢೀಕರಣವನ್ನು ಬಳಕೆ ಮಾಡಿಕೊಂಡು ಯುಪಿಐ ಅನ್ನು ಸಕ್ರಿಯಗೊಳಿಸಬಹುದಾಗಿದೆ. ಹಾಗೆಯೇ ಆಧಾರ್ ಆಧಾರಿತ ಯುಪಿಐ ಫೀಚರ್ಸ್‌ ಹೊರತರಲು ಫೋನ್‌ಪೇ ಮೊದಲ ಯುಪಿಐ ಥರ್ಡ್ ಪಾರ್ಟಿ ಆಪ್‌ ಪ್ರೊವೈಡರ್ (TPAP) ಅಪ್ಲಿಕೇಶನ್ ಆಗಿದೆ. ಅದರಂತೆ ಇದೀಗ ಹಲವಾರು ಭಾರತೀಯರು ಯುಪಿಐ ಎಕೋ ಸಿಸ್ಟಮ್‌ ಭಾಗವಾಗಲು ಅನುವು ಮಾಡಿಕೊಡಲಾಗಿದೆ.

ಈ ಹಿಂದೆ ಡೆಬಿಟ್‌ ಕಾರ್ಡ್‌ ಕಡ್ಡಾಯವಾಗಿತ್ತು

ಈ ಹಿಂದೆ ಡೆಬಿಟ್‌ ಕಾರ್ಡ್‌ ಕಡ್ಡಾಯವಾಗಿತ್ತು

ಹಿಂದಿನ ಯುಪಿಐ ಆನ್‌ಬೋರ್ಡಿಂಗ್ ಫ್ಲೋ ಪ್ರಕಾರ ಯುಪಿಐ ನೋಂದಣಿ ಪ್ರಕ್ರಿಯೆಯ ಸಮಯದಲ್ಲಿ ಬಳಕೆದಾರರ ಯುಪಿಐ ಪಿನ್ ಅನ್ನು ಸೆಟ್‌ ಮಾಡಲು ಮಾನ್ಯವಾದ ಡೆಬಿಟ್ ಕಾರ್ಡ್ ಕಡ್ಡಾಯವಾಗಿತ್ತು. ಪರಿಣಾಮ ಹೆಚ್ಚಿನ ಬಳಕೆದಾರರು ಡೆಬಿಟ್‌ ಕಾರ್ಡ್‌ ಪಡೆಯದ ಹಿನ್ನೆಲೆ ಅಥವಾ ತಕ್ಷಣಕ್ಕೆ ಅವರ ಬಳಿ ಇಲ್ಲದ ಪರಿಣಾಮ ಬಹುಪಾಲು ಸಂಖ್ಯೆಯ ಭಾರತೀಯ ಬ್ಯಾಂಕ್ ಖಾತೆದಾರರಿಗೆ ಯುಪಿಐ ಪಡೆಯಲು ಆಗುತ್ತಿರಲಿಲ್ಲ.

ಈಗ ಪರಿಚಯಿಸಲಾಗಿರುವ ಈ ಆಧಾರ್‌ ಆಧಾರದ ಯುಪಿಐ ವ್ಯವಸ್ಥೆ ಹಳೆಯ ವ್ಯವಸ್ಥೆಯನ್ನು ಮುರಿಯಲಿದೆ. ಈ ಮೂಲಕ ಡಿಜಿಟಲ್‌ ಪಾವತಿಯಿಂದ ವಂಚಿತರಾಗಿದ್ದ ಅದೆಷ್ಟೋ ಜನರಿಗೆ ಪ್ರಯೋಜನ ಸಿಗಲಿದೆ.

ಫೋನ್‌ಪೇ

ಈ ಬಗ್ಗೆ ಫೋನ್‌ಪೇ ಪಾವತಿ ವಿಭಾಗದ ಮುಖ್ಯಸ್ಥ ದೀಪ್ ಅಗರವಾಲ್ ಮಾಹಿತಿ ನೀಡಿದ್ದು, ನಮ್ಮ ಬಳಕೆದಾರರಿಗೆ ಆಧಾರ್ ಆಧಾರಿತ ದೃಢೀಕರಣವನ್ನು ನೀಡುವ ಮೊದಲ ಫಿನ್‌ಟೆಕ್ ಪ್ಲಾಟ್‌ಫಾರ್ಮ್ ಆಗಲು ನಾವು ಉತ್ಸುಕರಾಗಿದ್ದೇವೆ. ಈ ಮೂಲಕ ಯುಪಿಐ ಆನ್‌ಬೋರ್ಡಿಂಗ್ ಫ್ಲೋ ಇನ್ನಷ್ಟು ಸುಲಭವಾಗಲಿದೆ. ಹಾಗೆಯೇ ಈ ಫೀಚರ್ಸ್‌ ಆರ್‌ಬಿಐ, ಎನ್‌ಪಿಸಿಐ ಮತ್ತು UIDAI ನ ಅತ್ಯಂತ ಪ್ರಗತಿಪರ ಕ್ರಮವಾಗಿದೆ ಎಂದು ನಾವು ನಂಬುತ್ತೇವೆ. ಅದರಲ್ಲೂ UIDAI ಯ ಆಧಾರ್ ಪ್ರೋಗ್ರಾಂ ಡಿಜಿಟಲ್ ಹಣಕಾಸು ವ್ಯವಸ್ಥೆಯನ್ನು ಮುನ್ನಡೆಸಲಿದೆ ಎಂದು ಹೇಳಿದ್ದಾರೆ.

ಕೊನೆಯ 6 ಅಂಕೆಗಳನ್ನು ನಮೂದಿಸಿ

ಕೊನೆಯ 6 ಅಂಕೆಗಳನ್ನು ನಮೂದಿಸಿ

ಫೋನ್‌ ಪೇನಲ್ಲಿ ಆಧಾರ್ ಇ-ಕೆವೈಸಿ ಮೂಲಕ ಸಕ್ರಿಯಗೊಳಿಸಲಾಗುತ್ತದೆ. ಆಧಾರ್‌ ಕಾರ್ಡ್‌ ಮೂಲಕ ಫೋನ್‌ಪೇ ಬಳಕೆ ಮಾಡಲು ಮುಂದಾಗುವ ಗ್ರಾಹಕರು ತಮ್ಮ ಆಧಾರ್ ಸಂಖ್ಯೆಯ ಕೊನೆಯ 6 ಅಂಕೆಗಳನ್ನು ಮಾತ್ರ ನಮೂದಿಸಬೇಕಾಗುತ್ತದೆ ಎಂದು ಕಂಪೆನಿ ತಿಳಿಸಿದೆ. ಅಂತೆಯೇ ಫೋನ್‌ಪೇನಲ್ಲಿ ದೃಢೀಕರಣ ಪ್ರಕ್ರಿಯೆ ಸಂದರ್ಭದಲ್ಲಿ UIDAI ಹಾಗೂ ಬ್ಯಾಂಕ್‌ನಿಂದ ಓಟಿಪಿ ಪಡೆಯಲಿದ್ದು, ಈ ಮೂಲಕ ಬಳಕೆದಾರರು ಫೋನ್‌ಪೇನಲ್ಲಿ ಪಾವತಿಗಳು ಮತ್ತು ಬ್ಯಾಲೆನ್ಸ್ ಚೆಕ್‌ಗಳಂತಹ ಎಲ್ಲಾ ಯುಪಿಐ ಫೀಚರ್ಸ್‌ಗಳನ್ನು ಬಳಸಲು ಸಾಧ್ಯವಾಗುತ್ತದೆ.

ಯುಪಿಐ

ಈ ಬೆಳವಣಿಗೆ ಯುಪಿಐ ಎಕೋ ಸಿಸ್ಟಮ್‌ ಅನ್ನು ವಿಸ್ತರಿಸಲು ಸಹಾಯ ಮಾಡಲಿದ್ದು, ಹೊಸ ಗ್ರಾಹಕರನ್ನು ಡಿಜಿಟಲ್ ಪಾವತಿ ವ್ಯವಸ್ಥೆಗೆ ಒಳಗಾಗುವಂತೆ ಮಾಡಲಿದೆ ಎಂದು ಅಗರವಾಲ್ ಮಾಹಿತಿ ನೀಡಿದ್ದಾರೆ. ಇದರ ಜೊತೆಗೆ ಈ ಯುಪಿಐ ವ್ಯವಸ್ಥೆ ಜಾಗತಿಕವಾಗಿ ಮಾದರಿಯಾಗಿದ್ದು, ಜಗತ್ತಿನ ಎಲ್ಲಾ ದೇಶಗಳು ಈ ರೀತಿಯ ವ್ಯವಸ್ಥೆಯನ್ನು ಜಾರಿಗೆ ತರಲು ಎದುರು ನೋಡುತ್ತೇವೆ. ಹಾಗೆಯೇ ಯುಪಿಐ ಅನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪಡೆಯಲು ಎನ್‌ಪಿಸಿಐ ಯೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದು ವಿವರಿಸಿದ್ದಾರೆ.

ಎಷ್ಟು ಜನ ಫೋನ್‌ಪೇ ಬಳಕೆದಾರರಿದ್ದಾರೆ?

ಎಷ್ಟು ಜನ ಫೋನ್‌ಪೇ ಬಳಕೆದಾರರಿದ್ದಾರೆ?

ಫೋನ್‌ಪೇ ನಲ್ಲಿ 41.5 ಕೋಟಿ ನೋಂದಾಯಿತ ಬಳಕೆದಾರರು ಇದ್ದು, ನಾಲ್ಕು ಭಾರತೀಯರಲ್ಲಿ ಒಬ್ಬರು ಈಗ ಫೋನ್‌ಪೇ ಬಳಸುತ್ತಿದ್ದಾರೆ. ಹಾಗೆಯೇ ಕಂಪೆನಿಯು 3.3 ಕೋಟಿ ಆಫ್‌ಲೈನ್ ವ್ಯಾಪಾರಿಗಳನ್ನು ಡಿಜಿಟಲ್ ಪ್ಲಾಟ್‌ಫಾರ್ಮ್‌ಗೆ ಪ್ರವೇಶ ಮಾಡಿಸಿದ್ದಯ, ದೇಶದಲ್ಲಿ 99 ಪ್ರತಿಶತ ಪಿನ್ ಕೋಡ್‌ ವ್ಯಾಪ್ತಿಯಲ್ಲಿ ಇದು ಕಾರ್ಯನಿರ್ವಹಿಸಲಿದೆ.

Best Mobiles in India

English summary
PhonePe is an Indian digital payment and financial technology company. Now for the first time in the world UPI can be enabled using Aadhaar based OTP authentication.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X