ಭಾರತದಲ್ಲಿ 5G ಟೆಸ್ಟ್‌ಬೆಡ್‌ ಲಾಂಚ್‌ ಮಾಡಿದ ಪ್ರಧಾನಿ ಮೋದಿ!

|

ಭಾರತದಲ್ಲಿ 5G ನೆಟ್‌ವರ್ಕ್‌ ಪ್ರಾರಂಭದ ಬಗ್ಗೆ ಈಗಾಗಲೇ ಸಾಕಷ್ಟು ಚರ್ಚೆಗಲು ನಡೆದಿವೆ. ಈ ವರ್ಷಾಂತ್ಯದ ವೇಳೆಗೆ ಭಾರತದಲ್ಲಿ 5G ನೆಟ್‌ವರ್ಕ್‌ ಲಭ್ಯವಾಗಲಿದೆ ಎಂದು ಈಗಾಗಲೇ ಕೇಂದ್ರ ಸರ್ಕಾರ ಕೂಡ ಹೇಳಿದೆ. ಇದರ ನಡುವೆ ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ದೇಶದಲ್ಲಿ 5G ಟೆಸ್ಟ್‌ಬೆಡ್ ಅನ್ನು ಲಾಂಚ್‌ ಮಾಡಿದ್ದಾರೆ. ಇದು 5G ಮತ್ತು ಮುಂದಿನ ಪೀಳಿಗೆಯ ತಂತ್ರಜ್ಞಾನಗಳಲ್ಲಿ ತಮ್ಮ ಉತ್ಪನ್ನಗಳು, ಪರಿಹಾರಗಳು ಮತ್ತು ಮೂಲಮಾದರಿಗಳನ್ನು ಮೌಲ್ಯೀಕರಿಸಲು ಸ್ಟಾರ್ಟ್‌ಅಪ್‌ಗಳನ್ನು ಬೆಂಬಲಿಸುತ್ತದೆ.

ಟೆಸ್ಟ್‌ಬೆಡ್‌

ಹೌದು, ಭಾರತದಲ್ಲಿ 5G ಟೆಸ್ಟ್‌ಬೆಡ್‌ ಅನ್ನು ಪ್ರಧಾನಿ ಮೋದಿ ಲಾಂಚ್‌ ಮಾಡಿದ್ದಾರೆ. ಇದರಿಂದ ಸ್ಟಾರ್ಟ್‌ಅಪ್‌ಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಇಂದು ನಡೆದ TRAI ರಜತ ಮಹೋತ್ಸವ ಆಚರಣೆಯಲ್ಲಿ ಈ ಟೆಸ್ಟ್‌ಬೆಡ್‌ ಅನ್ನು ಪರಿಚಯಿಸಲಾಗಿದೆ. ಇನ್ನು ವರ್ಚುವಲ್ ಈವೆಂಟ್‌ನಲ್ಲಿ ಮಾತನಾಡಿದ ಪ್ರಧಾನಿ ಮೋದಿ ಈ ಸಂದರ್ಭದ ಸ್ಮರಣಾರ್ಥ ಪ್ರಧಾನಿಯವರು ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದರು ಎಂದು ಸರ್ಕಾರದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಹಾಗಾದ್ರೆ ಭಾರತದಲ್ಲಿ 5G ಟೆಸ್ಟ್‌ಬೆಡ್‌ನ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಭಾರತದಲ್ಲಿ 5G ಟೆಸ್ಟ್‌ಬೆಡ್

ಭಾರತದಲ್ಲಿ 5G ಟೆಸ್ಟ್‌ಬೆಡ್

ಭಾರತದಲ್ಲಿ 5G ಟೆಸ್ಟ್‌ಬೆಡ್‌ ಅನ್ನು ಐಐಟಿ ಮದ್ರಾಸ್ ನೇತೃತ್ವದ ಎಂಟು ಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಈ ಯೋಜನೆಯಲ್ಲಿ ಭಾಗವಹಿಸಿದ ಇತರ ಸಂಸ್ಥೆಗಳೆಂದರೆ IIT ದೆಹಲಿ, IIT ಬಾಂಬೆ, IIT ಹೈದರಾಬಾದ್, IIT ಕಾನ್ಪುರ್, IISc ಬೆಂಗಳೂರು ಸೇರಿವೆ. ಇದಲ್ಲದೆ ವೈರ್‌ಲೆಸ್ ತಂತ್ರಜ್ಞಾನದಲ್ಲಿ ಶ್ರೇಷ್ಠತೆಯ ಕೇಂದ್ರ (CEWiT) ಮತ್ತು ಸೊಸೈಟಿ ಫಾರ್ ಅಪ್ಲೈಡ್ ಮೈಕ್ರೋವೇವ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ & ರಿಸರ್ಚ್ (SAMEER) ಕೂಡ ಸೇರಿವೆ. ಇನ್ನು ಈ ಬಹು-ಸಂಸ್ಥೆಯ ಸಹಯೋಗದ ಯೋಜನೆಯನ್ನು 220 ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಸರ್ಕಾರ ಹೇಳಿದೆ.

5G ಟೆಸ್ಟ್‌ಬೆಡ್

ಇನ್ನು 5G ಟೆಸ್ಟ್‌ಬೆಡ್ ಭಾರತೀಯ ಉದ್ಯಮ ಮತ್ತು ಸ್ಟಾರ್ಟ್‌ಅಪ್‌ಗಳಿಗೆ ಅನುಕೂಲವಾಗಿದೆ. 5G ಗಾಗಿ ಸ್ಪೆಕ್ಟ್ರಮ್ ಹರಾಜಿನ ವಿಧಾನಗಳ ಬಗ್ಗೆ ನಿರ್ಧರಿಸಲು DoT ಯ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾದ DCCಗೆ ಒಂದು ದಿನದ ಮುಂಚಿತವಾಗಿ ಟೆಸ್ಟ್‌ಬೆಡ್‌ನ ಪ್ರಾರಂಭವಾಗಲಿದೆ. ಇನ್ನು ಟೆಲಿಕಾಂಗಳಿಗೆ ಸ್ಪೆಕ್ಟ್ರಮ್ ಅನ್ನು ಹಸ್ತಾಂತರಿಸುವ ಅವಧಿ, ಟೆಲಿಕಾಂ ಆಪರೇಟರ್‌ಗಳು ಖಾಸಗಿ 5G ನೆಟ್‌ವರ್ಕ್‌ಗಳಿಗಾಗಿ ಉದ್ಯಮದೊಂದಿಗೆ ಪಾಲುದಾರರಾಗುವ ವಿಧಾನಗಳ ಬಗ್ಗೆ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.

5G ಮತ್ತು ಭಾರತ

5G ಮತ್ತು ಭಾರತ

ಇದು ಭಾರತದ ಟೆಲಿಕಾಂ ವಲಯದಲ್ಲಿ ನಿರ್ಣಾಯಕ ಮತ್ತು ಆಧುನಿಕ ತಂತ್ರಜ್ಞಾನದ ಮೇಲೆ ಸ್ವಾವಲಂಬನೆಯತ್ತ ಪ್ರಮುಖ ಹೆಜ್ಜೆಯಾಗಿದೆ. ದೇಶದ ಹಳ್ಳಿಗಳಿಗೆ 5G ತಂತ್ರಜ್ಞಾನ ತಲುಪಿಸುವಲ್ಲಿ ದೊಡ್ಡ ಪಾತ್ರ ವಹಿಸಲಿದೆ ಎಂದು ಮೋದಿ ಹೇಳಿದ್ದಾರೆ. ಇದಲ್ಲದೆ, 21 ನೇ ಶತಮಾನದ ಭಾರತದ ಸಂಪರ್ಕವು ದೇಶದ ಪ್ರಗತಿಯ ವೇಗವನ್ನು ನಿರ್ಧರಿಸುತ್ತದೆ. ಅಲ್ಲದೆ ಈ ಪ್ರಗತಿಯ ವೇಗವನ್ನು ಪ್ರತಿಯೊಂದು ಹಂತದಲ್ಲೂ ಆಧುನೀಕರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಶಿಕ್ಷಣ

ಇನ್ನು 5G ತಂತ್ರಜ್ಞಾನವು ದೇಶದ ಆಡಳಿತದಲ್ಲಿ ಧನಾತ್ಮಕ ಬದಲಾವಣೆಗಳನ್ನು ತರಲಿದೆ. ಜೀವನ ಸುಲಭ, ಮತ್ತು ವ್ಯವಹಾರವನ್ನು ಸುಲಭಗೊಳಿಸುತ್ತದೆ. ಇದು ಕೃಷಿ, ಆರೋಗ್ಯ, ಶಿಕ್ಷಣ, ಮೂಲಸೌಕರ್ಯ ಮತ್ತು ಇತರ ಕ್ಷೇತ್ರಗಳಲ್ಲಿ ಲಾಜಿಸ್ಟಿಕ್ಸ್ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಇದರಿಂದ ಸೌಲಭ್ಯ ಹೆಚ್ಚಲಿದ್ದು, ಹಲವು ಉದ್ಯೋಗಾವಕಾಶಗಳೂ ಸೃಷ್ಟಿಯಾಗಲಿವೆ. ಇದಲ್ಲದೆ, ಮುಂದಿನ 15 ವರ್ಷಗಳಲ್ಲಿ, 5G ಭಾರತದ ಆರ್ಥಿಕತೆಗೆ 450 ಮಿಲಿಯನ್ ಡಾಲರ್ಗಳಷ್ಟು ಪ್ರಯೋಜನವನ್ನು ನೀಡಲಿದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟಿದ್ದಾರೆ.

Best Mobiles in India

Read more about:
English summary
PM Narendra Modi has launched a 5G testbed in india today

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X