ಶೀಘ್ರದಲ್ಲೇ ಪೊಕೊ C50 ಬಿಡುಗಡೆ; ನಿರೀಕ್ಷಿತ ಬೆಲೆ, ಫೀಚರ್ಸ್ ಏನು?

|

ಪೊಕೊ ಕಂಪೆನಿಯು ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಈಗಾಗಲೇ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ. ಈ ಫೋನ್‌ ನ ಶೈಲಿ ಹಾಗೂ ಭಿನ್ನ ಪೀಚರ್ಸ್‌ ಇತರೆ ಫೋನ್‌ಗಳಿಗಿಂತ ಹೆಚ್ಚಿಗೆ ಇಷ್ಟವಾಗಲು ಕಾರಣವಾಗಿದೆ. ಇದರ ಭಾಗವಾಗಿಯೇ ಭಾರತದಲ್ಲಿ ಶೀಘ್ರದಲ್ಲೇ ಪೊಕೊ C50 (POCO C50)ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡುವುದಾಗಿ ಘೋಷಿಸಿದೆ.

ಪೊಕೊ

ಹೌದು, ಭಾರತದಲ್ಲಿ ಇನ್ನೇನು ಕೆಲವೇ ದಿನಗಳಲ್ಲಿ ಪೊಕೊ C50 ಸ್ಮಾರ್ಟ್‌ಫೋನ್‌ ಗ್ರಾಹಕರ ಕೈ ಸೇರಲಿದೆ. ಕಳೆದ ವರ್ಷ ಬಿಡುಗಡೆಯಾದ ಪೊಕೊ C31 ಮುಂದುವರೆದ ಆವೃತ್ತಿಯ ಸ್ಮಾರ್ಟ್‌ಫೋನ್‌ ಇದಾಗಿದೆ. ವಿಷಯ ಏನೆಂದರೆ ಪೊಕೊದ ಪೊಕೊ C40 ಸ್ಮಾರ್ಟ್‌ಫೊನ್‌ ಮಾತ್ರ ಭಾರತದಲ್ಲಿ ಲಾಂಚ್‌ ಆಗಿಲ್ಲ. ಇನ್ನು ಈ ಹೊಸ ಫೋನ್‌ ದೀರ್ಘ ಬ್ಯಾಟರಿ ಬಾಳಿಕೆ ಜೊತೆಗೆ ಮೀಡಿಯಾಟೆಕ್‌ ಹಿಲಿಯೋ A22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದೆ ಎನ್ನಲಾಗಿದ್ದು, ಇದರ ಮತ್ತಷ್ಟು ಫೀಚರ್ಸ್‌ ಅನ್ನು ಈ ಲೇಖನದಲ್ಲಿ ವಿವರಿಸಲಾಗಿದೆ ಓದಿರಿ.

ಪ್ರಮುಖ ಫೀಚರ್ಸ್‌

ಪ್ರಮುಖ ಫೀಚರ್ಸ್‌

ಈ ಸ್ಮಾರ್ಟ್‌ಫೋನ್‌ ಫೋನ್ ವಾಟರ್‌ಡ್ರಾಪ್ ನಾಚ್‌ ಆಯ್ಕೆಯ ಜೊತೆಗೆ 6.52 ಇಂಚಿನ HD+ ಡಿಸ್‌ಪ್ಲೇ ಹೊಂದಿರಲಿದೆ ಎನ್ನಲಾಗಿದೆ. 20:9 ಆಕಾರ ಅನುಪಾತದ ಡಿಸ್‌ಪ್ಲೇ ಹಾಗೂ 400 ನಿಟ್ಸ್ ಬ್ರೈಟ್‌ನೆಸ್‌ ಜೊತೆಗೆ ಸ್ಕ್ರಾಚ್ ರೆಸಿಸ್ಟೆಂಟ್ ಗ್ಲಾಸ್ ಆಯ್ಕೆ ಪಡೆದುಕೊಂಡಿರಲಿದೆ.

ಪ್ರೊಸೆಸರ್‌ ವಿವರ

ಪ್ರೊಸೆಸರ್‌ ವಿವರ

ಜೊತೆಗೆ ಮೀಡಿಯಾ ಟೆಕ್‌ ಹಿಲಿಯೋ A22 ಪ್ರೊಸೆಸರ್‌ನಿಂದ ಕಾರ್ಯನಿರ್ವಹಿಸಲಿದ್ದು, ಈ ಫೋನ್ ಆಂಡ್ರಾಯ್ಡ್ 12 ಗೋ ಆವೃತ್ತಿಯಲ್ಲಿ ಪ್ಯಾಕ್‌ ಆಗಲಿದೆ ಎಂದು ತಿಳಿದುಬಂದಿದೆ. ಇದರೊಂದಿಗೆ 64GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಪಡೆದಿರಲಿದ್ದು, ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ ಎಂದು ಹೇಳಲಾಗುತ್ತಿದೆ.

ಕ್ಯಾಮೆರಾ ಆಯ್ಕೆ

ಕ್ಯಾಮೆರಾ ಆಯ್ಕೆ

ಇದರೊಂದಿಗೆ 8MP ರಿಯರ್‌ ಕ್ಯಾಮೆರಾ 2MP ಡೆಪ್ತ್‌ ಸೆನ್ಸರ್‌ ಆಯ್ಕೆಯ ಸೆಕೆಂಡರಿ ಕ್ಯಾಮೆರಾ ಇದರಲ್ಲಿ ಇರುವ ಸಾಧ್ಯತೆಯಿದೆ. ಹಾಗೆಯೇ ರಿಯರ್‌ ಪ್ಯಾನಲ್‌ನಲ್ಲಿ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಫೀಚರ್ಸ್‌ ನೀಡಲಾಗಿದೆ.

ಬ್ಯಾಟರಿ ಹಾಗೂ ಇತರೆ

ಬ್ಯಾಟರಿ ಹಾಗೂ ಇತರೆ

ಮತ್ತೊಂದು ವಿಶೇಷ ಎಂದರೆ ಈ ಫೋನ್ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಬೆಂಬಲವನ್ನು ನೀಡುತ್ತದೆ. ಇನ್ನುಳಿದಂತೆ ಮೈಕ್ರೊ ಎಸ್‌ಡಿ ಕಾರ್ಡ್ ಸ್ಲಾಟ್ ಮೂಲಕ ಸ್ಟೋರೇಜ್‌ ಸಾಮರ್ಥ್ಯವನ್ನು ಹೆಚ್ಚಿಗೆ ಮಾಡಿಕೊಳ್ಳುವ ಆಯ್ಕೆ ನೀಡಲಾಗಿದ್ದು, 3.5mm ಹೆಡ್‌ಫೋನ್ ಜ್ಯಾಕ್‌ನೊಂದಿಗೆ ಬರುತ್ತದೆ ಎನ್ನುವ ಮಾತುಗಳು ಟೆಕ್‌ ವಲಯದಲ್ಲಿ ಕೇಳಿಬರುತ್ತಿವೆ.

ಶೀಘ್ರದಲ್ಲೇ ಭಾರತಕ್ಕೆ

ಶೀಘ್ರದಲ್ಲೇ ಭಾರತಕ್ಕೆ

ಪೊಕೊ C50 ಹೊಸ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಆಗಿ ಲಾಂಚ್‌ ಆಗಲಿದ್ದು, ನವೆಂಬರ್‌ ಕೊನೆಯ ವಾರದಲ್ಲಿ ಲಭ್ಯವಾಗಲಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆಯಾದರೂ ಪೊಕೊ ಮಾತ್ರ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಇದರೊಂದಿಗೆ ಈ ಫೋನ್‌ ಬೆಲೆಯು ಬಜೆಟ್‌ ಬೆಲೆಯ ವ್ಯಾಪ್ತಿಯಲ್ಲಿ ಇರಲಿದೆ ಎನ್ನಲಾಗಿದೆ. ಇನ್ನು ಈ ಫೋನ್‌ ಭಾರತದಲ್ಲಿ 15,000 ರೂ.ಗಿಂತ ಕಡಿಮೆಯಿರಬಹುದು ಎನ್ನಲಾಗಿದೆ.

ಮರುಬ್ಯಾಡ್ಜ್ ಮಾಡಿದ ಫೋನ್?

ಮರುಬ್ಯಾಡ್ಜ್ ಮಾಡಿದ ಫೋನ್?

ಗೂಗಲ್ ಪ್ಲೇ ಕನ್ಸೋಲ್ ವೆಬ್‌ಸೈಟ್‌ನಲ್ಲಿ ಈ ಬಗ್ಗೆ ವರದಿ ಮಾಡಲಾಗಿದ್ದು, ಅದರಂತೆ ಈ ಫೋನ್‌ ರೆಡ್ಮಿ A1+ನ ಮರುಬ್ಯಾಡ್ಜ್ ಮಾಡಿದ ಆವೃತ್ತಿ ಇರಬಹುದು ಎಂದು ಹೇಳಿದೆ. ಇನ್ನು ಈ ಡಿವೈಸ್‌ IMEI ಡೇಟಾಬೇಸ್‌ನಲ್ಲಿ ಮಾಡೆಲ್‌ ಸಂಖ್ಯೆ 220733SPI ನೊಂದಿಗೆ ಗುರುತಿಸಲ್ಪಟ್ಟಿದೆ.

ಬಜೆಟ್

ಪೊಕೊ ತನ್ನ C-ಸರಣಿಯ ಬಜೆಟ್ ಬೆಲೆಯ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಈ ಫೋನ್‌ ಅನ್ನು ಲಾಂಚ್‌ ಮಾಡಲು ಮುಂದಾಗಿದೆ. ಅದರಂತೆ ಈ ಡಿವೈಸ್‌ ಕ್ಯಾಮೆರಾದ ಹೆಚ್ಚಿನ ಕಾರ್ಯಕ್ಷಮತೆ, ತಲ್ಲೀನಗೊಳಿಸುವ ಮಲ್ಟಿಮೀಡಿಯಾ ಅನುಭವ ಮತ್ತು ದೀರ್ಘ ಬ್ಯಾಟರಿ ಅವಧಿಯನ್ನು ಕೇಂದ್ರೀಕರಿಸಿದೆ ಎಂದು ಕಂಪನಿ ತನ್ನ ಬ್ಲಾಗ್‌ನಲ್ಲಿ ಬರೆದುಕೊಂಡಿದೆ.

Best Mobiles in India

Read more about:
English summary
Poco company has already gained a lot of popularity in the smartphone segment. Soon after this, the launch of the Poco C50 smartphone has been announced.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X