ಭಾರತದಲ್ಲಿ ಪೊಕೊ C50 ಲಾಂಚ್‌ಗೆ ವೇದಿಕೆ ಸಜ್ಜು; ಅಗ್ಗದ ಬೆಲೆಗೆ ಲಭ್ಯ!?

|

ಮಿಡ್‌ರೇಂಜ್‌ ಫೋನ್‌ಗಳನ್ನ ಮಾರುಕಟ್ಟೆಗೆ ಪರಿಚಯಿಸುತ್ತಿರುವ ಪೊಕೊ ಕಂಪೆನಿಯು ಗ್ರಾಹಕರ ಮೆಚ್ಚಿನ ಕಂಪೆನಿಗಳಲ್ಲಿ ಒಂದಾಗಿದೆ. ಈಗಾಗಲೇ ಹಲವಾರು ಫೋನ್‌ಗಳನ್ನು ಪರಿಚಯಿಸಿದ್ದು, ಇವುಗಳ ಕಾರ್ಯಕ್ಷಮತೆ ಹಾಗೂ ಇನ್ನಿತರೆ ಫೀಚರ್ಸ್‌ಗೆ ಗ್ರಾಹಕರು ಆಕರ್ಷಿತರಾಗುತ್ತಿದ್ದಾರೆ. ಇದರ ಬೆನ್ನಲ್ಲೇ ಹೊಸ ಫೋನ್‌ವೊಂದನ್ನು ಹೊಸ ವರ್ಷ ಹಾಗೂ ಸಂಕ್ರಾಂತಿ ಹಿನ್ನೆಲೆ ಅನಾವರಣ ಮಾಡಲು ಪೊಕೊ ಮುಂದಾಗಿದೆ.

ಸ್ಮಾರ್ಟ್‌ಫೋನ್‌

ಹೌದು, ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಪೊಕೊ ಕಂಪೆನಿಯ ಹಲವಾರು ಫೋನ್‌ಗಳು ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿದ್ದು, ಇದರ ಸಾಲಿಗೆ ಈಗ ಪೊಕೊ C50 ಸ್ಮಾರ್ಟ್‌ಫೋನ್‌ ಸಹ ಸೇರಿಕೊಳ್ಳಲಿದೆ. ಈ ಫೋನ್‌ ಬಗ್ಗೆ ಕೆಲವು ವಿವರ ಲೀಕ್‌ ಆಗಿದ್ದು, ಅದರ ಪ್ರಕಾರ ಈ ಹೊಸ ಫೋನ್‌ ಪೊಕೊ ಮೂರನೇ ಸಿ-ಸರಣಿ ಸ್ಮಾರ್ಟ್‌ಫೋನ್ ಆಗಿರಲಿದೆ. ಹಾಗೆಯೇ ಇದು ರೀಬ್ರಾಂಡೆಡ್ ರೆಡ್ಮಿ A1+ ಆಗಿರಬಹುದು ಎಂದೂ ಸಹ ಹೇಳಲಾಗುತ್ತಿದೆ. ಹಾಗಿದ್ರೆ ರೆಡ್ಮಿ A1+ ಸ್ಮಾರ್ಟ್‌ಫೋನ್‌ ಫೀಚರ್ಸ್‌ ಏನು?, ಪೊಕೊ C50 ಯಾವಾಗ ಲಾಂಚ್‌ ಆಗಲಿದೆ ಎಂಬಿತ್ಯಾದಿ ಮಾಹಿತಿಯನ್ನು ಈ ಲೇಖನದಲ್ಲಿ ವಿವರಿಸಿದ್ದೇವೆ ಓದಿರಿ.

ಜಾಗತಿಕ

ಜಾಗತಿಕ ಮಾರುಕಟ್ಟೆಗಳಲ್ಲಿ ಸಿ-ಸರಣಿಯ ಅಡಿಯಲ್ಲಿ ಪೊಕೊ C40 ಅನ್ನು ಈ ಹಿಂದೆ ಅನಾವರಣ ಮಾಡಲಾಗಿತ್ತು. ಆದರೆ, ಪೊಕೊ ತನ್ನ 5 ನೇ ಸರಣಿಗೆ ಪರಿವರ್ತನೆ ಆಗಲು ಮುಂದಾಗಿದ್ದರಿಂದ ಪೊಕೊ C40 ಭಾರತೀಯ ಮಾರುಕಟ್ಟೆಗೆ ಪರಿಚಯವಾಗಲಿಲ್ಲ. ಬದಲಾಗಿ ಪೊಕೊದ ಮುಂಬರುವ ಪ್ರವೇಶ ಮಟ್ಟದ ಸ್ಮಾರ್ಟ್‌ಫೋನ್ ಪೊಕೊ C50 ಅನ್ನು ಜನವರಿ 3, 2023 ರಂದು ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಪೊಕೊ

ಈ ಮುಂಬರುವ ಪೊಕೊ ಫೋನ್‌ ಬಗ್ಗೆ ಈವರೆಗೂ ಯಾವುದೇ ಫೀಚರ್ಸ್‌ ಮಾಹಿತಿ ಲೀಕ್‌ ಆಗಿಲ್ಲ. ಅದಾಗ್ಯೂ ಈ ಫೋನ್‌ 6.71 ಇಂಚಿನ ಡಿಸ್‌ಪ್ಲೇಯನ್ನು ಹೊಂದಿರಬಹುದಾಗಿದ್ದು, ಪಂಚ್-ಹೋಲ್ ವಿನ್ಯಾಸದಲ್ಲಿ ಕಾಣಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಜೊತೆಗೆ 50 ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ರಚನೆ ಪಡೆಯಲಿದ್ದು, 6,000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಹೊಂದಿರಲಿದೆ ಎನ್ನಲಾಗಿದೆ.

C50

ಇನ್ನು ಪೊಕೊ C50 ಸಿ ಸರಣಿಯ ಅಡಿಯಲ್ಲಿ ಮೂರನೇ ಸ್ಮಾರ್ಟ್‌ಫೋನ್ ಆಗಿರಲಿದ್ದು, ಈ ಹಿಂದೆ ಪೊಕೊ C3 ಹಾಗೂ ಪೊಕೊ C31 ಅನ್ನು ಅನಾವರಣ ಮಾಡಲಾಗಿದೆ. ಇದರ ನಡುವೆ ಈ ಹಿಂದೆ IMEI ಡೇಟಾಬೇಸ್‌ನಲ್ಲಿ ಪೊಕೊ C50 ಮಾಡೆಲ್ ಸಂಖ್ಯೆ 220733SPI ಮೂಲಕ ಭಾರತೀಯ ರೂಪಾಂತರವನ್ನು ಗುರುತಿಸಲಾಗಿತ್ತು. ಆದರೆ, ಗೂಗಲ್ ಪ್ಲೇ ಬೆಂಬಲಿತ ಡಿವೈಸ್‌ ಪಟ್ಟಿಯಲ್ಲಿ ಮಾದರಿ ಸಂಖ್ಯೆ 220733SPI ಮತ್ತು Snow ಎಂಬ ಸಂಕೇತನಾಮದೊಂದಿಗೆ ಕಾಣಿಸಿಕೊಳ್ಳಲಿದೆ.

ಫೋನ್‌

ಈ ಸಂಕೇತನಾಮದಿಂದಲೇ ಈ ಹೊಸ ಫೋನ್‌ ರೆಡ್ಮಿ A1+ ಅನ್ನು ಪೊಕೊ C50 ಎಂದು ಮರುಬ್ರಾಂಡ್ ಮಾಡುತ್ತಿರಬಹುದು ಎಂಬ ಶಂಕೆ ಟೆಕ್‌ ವಲಯದಲ್ಲಿ ಕೇಳಿಬರುತ್ತಿದೆ. ಹಾಗಿದ್ರೆ ರೆಡ್ಮಿ A1+ ಸ್ಮಾರ್ಟ್‌ಫೋನ್‌ನ ಕೆಲವು ಫೀಚರ್ಸ್‌ ಏನು? ಇದರ ಬೆಲೆ ಎಷ್ಟು ಎಂಬಿತ್ಯಾದಿ ವಿವರವನ್ನು ಇಲ್ಲಿ ನೀಡಲಾಗಿದೆ ಓದಿರಿ.

ರೆಡ್ಮಿ A1+

ರೆಡ್ಮಿ A1+ ಸ್ಮಾರ್ಟ್‌ಫೋನ್‌ 6.52 ಇಂಚಿನ ಎಲ್‌ಸಿಡಿ ಡಿಸ್‌ಪ್ಲೇ ಆಯ್ಕೆ ಪಡೆದುಕೊಂಡಿದ್ದು, ಇದು HD+ ರೆಸಲ್ಯೂಶನ್ ಹೊಂದಿದೆ. ಹಾಗೆಯೇ ಈ ಡಿಸ್‌ಪ್ಲೇ 400nits ಬ್ರೈಟ್‌ನೆಸ್ ಮತ್ತು ಸ್ಕ್ರಾಚ್-ರೆಸಿಸ್ಟೆಂಟ್ ಗ್ಲಾಸ್‌ಆಯ್ಕೆ ಪಡೆದುಕೊಂಡಿದೆ. ಇದರೊಂದಿಗೆ ಈ ಫೋನ್ ಕ್ವಾಡ್-ಕೋರ್ ಮೀಡಿಯಾ ಟೆಕ್ ಹಿಲಿಯೊ A22 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದೆ. ಇದರೊಂದಿಗೆ ಈ ಫೋನ್‌ ಐಎಮ್‌ಜಿ ಪವರ್‌‌ಜಿಪಿಯು ಬಲ ಪಡೆದಿಕೊಂಡಿದೆ. ಹಾಗೆಯೇ 2GB ಹಾಗೂ 3GB RAM ವೇರಿಯಂಟ್‌ ಜೊತೆಗೆ 32GB ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯ ಹೊಂದಿದೆ.

ರಿಯರ್‌

ಇನ್ನು ಕ್ಯಾಮೆರಾ ಆಯ್ಕೆಯಲ್ಲಿ 8MP ರಿಯರ್‌ ಕ್ಯಾಮೆರಾ ಜೊತೆಗೆ ಡೆಪ್ತ್ ಸೆನ್ಸಾರ್ ಮತ್ತು ಎಲ್‌ಇಡಿ ಫ್ಲ್ಯಾಶ್‌ ಆಯ್ಕೆ ಇದ್ದು, 5MP ಸೆಲ್ಫಿ ಕ್ಯಾಮೆರಾ ಹೊಂದಿದೆ. ಇದರೊಂದಿಗೆ 5000mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆದುಕೊಂಡಿದ್ದು, 10W ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಹಾಗೆಯೇ ಈ ಫೋನ್‌ 7,499ರೂ. ಗಳ ಆರಂಭಿಕ ಬೆಲೆ ಹೊಂದಿದ್ದು, ಕಪ್ಪು, ತಿಳಿ ನೀಲಿ ಮತ್ತು ತಿಳಿ ಹಸಿರು ಬಣ್ಣದ ಆಯ್ಕೆಗಳಲ್ಲಿ ಲಭ್ಯವಿದೆ.

Best Mobiles in India

English summary
Poco C50 smartphone will be launched in India soon.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X