ಪೊಕೊ F4 5G ಫೋನಿನ ಆಫರ್‌ ಬೆಲೆ ತಿಳಿದ್ರೆ, ಪಕ್ಕಾ OMG ಅಂತೀರಾ?

|

ಭಾರತೀಯ ಮೊಬೈಲ್‌ ಮಾರುಕಟ್ಟೆಯಲ್ಲಿ ಶಿಯೋಮಿ ಸಂಸ್ಥೆಯು ಸಬ್‌ ಬ್ರ್ಯಾಂಡ್‌ ಆಗಿರುವ ಪೊಕೊ ಈಗಾಗಲೇ ಭಿನ್ನ ಮಾದರಿಯ ಫೋನ್‌ಗಳ ಮೂಲಕ ತನ್ನ ಸ್ಥಾನ ಗಟ್ಟಿ ಮಾಡಿಕೊಂಡಿದೆ. ಪೊಕೊ ಸಂಸ್ಥೆಯು ನೂತನವಾಗಿ ಪೊಕೊ F4 5G (POCO F4 5G) ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಸದ್ದು ಮಾಡುತ್ತಿದೆ. ಇದರೊಂದಿಗೆ ಹೆಚ್ಚಿ ಗಮನ ಸೆಳೆದಿದೆ. ಅಲ್ಲದೇ ಈ ಫೋನ್‌ ಇದೀಗ ಭರ್ಜರಿ ಡಿಸ್ಕೌಂಟ್‌ ನಲ್ಲಿ ಕಾಣಿಸಿಕೊಂಡಿದ್ದು, ಮತ್ತಷ್ಟು ಗ್ರಾಹಕರ ತಿರುಗಿ ನೋಡುವಂತಾಗಿದೆ.

ಕ್ವಾಲ್ಕಾಮ್‌

ಹೌದು, ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಲ್ಲಿ ಎಂಟ್ರಿ ಕೊಟ್ಟಿರುವ ಪೊಕೊ F4 5G (POCO F4 5G) ಸ್ಮಾರ್ಟ್‌ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದೆ. ಹಾಗೂ 4,500mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಹೊಂದಿದ್ದು, ಜೊತೆಗೆ 67W ವೇಗದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದ್ದು, ಗ್ರಾಹಕರ ಗಮನ ಸೆಳೆದಿದೆ. ಈ ಫೋನ್ ಇದೀಗ ಆಕರ್ಷಕ ರಿಯಾಯಿತಿ ಪಡೆದಿದೆ.

ಕ್ರೆಡಿಟ್

ಪೊಕೊ F4 5G ಸ್ಮಾರ್ಟ್‌ಫೋನ್ ಇದೀಗ 4,000ರೂ. ಗಳ ವರೆಗಿನ ಡಿಸ್ಕೌಂಟ್‌ ಬೆಲೆಯಲ್ಲಿ ಲಭ್ಯವಾಗಲಿದೆ. ಬಳಕೆದಾರರು SBI ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು EMI ವಹಿವಾಟುಗಳೊಂದಿಗೆ 3,000ರೂ. ಇನ್‌ಸ್ಟಂಟ್‌ ರಿಯಾಯಿತಿಯನ್ನು ಪಡೆಯಬಹುದು ಎಂದು ಕಂಪನಿಯು ಕಳೆದ ವಾರ ಘೋಷಿಸಿತು. ಇದರ ಜೊತೆಗೆ, ಕಂಪನಿಯು ಯಾವುದೇ ಕ್ರೆಡಿಟ್ ಕಾರ್ಡ್ ಮತ್ತು ಡೆಬಿಟ್ ಕಾರ್ಡ್ ವಹಿವಾಟಿಗೆ 1,000ರೂ ಹೆಚ್ಚುವರಿ ರಿಯಾಯಿತಿಯನ್ನು ನೀಡುತ್ತದೆ.

ರಿಯಾಯಿತಿಯನ್ನು

ಹೊಸ ಹೆಚ್‌ಡಿಎಫ್‌ಸಿ ಕಾರ್ಡ್ ಕೊಡುಗೆಯು ಪೊಕೊ F4 5G ಗಾಗಿ ಅದೇ 3,000ರೂ. ತ್ವರಿತ ರಿಯಾಯಿತಿಯಾಗಿದೆ. ಹೆಚ್ಚುವರಿಯಾಗಿ, ಹೆಚ್‌ಡಿಎಫ್‌ಸಿ ಬಳಕೆದಾರರು ಹೆಚ್ಚುವರಿ 1,000 ರೂ. ರಿಯಾಯಿತಿಯನ್ನು ಪಡೆಯಬಹುದು. ಇತರೆ ಆಫರ್‌ಗಳ ಮಾಹಿತಿ ಹಾಗೂ ಈ ಫೋನಿನ ಫೀಚರ್ಸ್‌ ಬಗ್ಗೆ ತಿಳಿಯಲು ಮುಂದೆ ಓದಿರಿ.

ಆಫರ್‌ ವಿವರ ಹೀಗಿದೆ:

ಆಫರ್‌ ವಿವರ ಹೀಗಿದೆ:

* ಹೆಚ್‌ಡಿಎಫ್‌ಸಿ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/EMI ವಹಿವಾಟುಗಳೊಂದಿಗೆ 3,000ರೂ. ಇನ್‌ಸ್ಟಂಟ್‌ ರಿಯಾಯಿತಿ
* ಎಸ್‌ಬಿಐ ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್/EMI ವಹಿವಾಟುಗಳೊಂದಿಗೆ 3,000ರೂ. ಇನ್‌ಸ್ಟಂಟ್‌ ಡಿಸ್ಕೌಂಟ್‌
* ಕ್ರೆಡಿಟ್ ಕಾರ್ಡ್/ಡೆಬಿಟ್ ಕಾರ್ಡ್ ವಹಿವಾಟುಗಳೊಂದಿಗೆ 1,000ರೂ. ಇನ್‌ಸ್ಟಂಟ್‌ ರಿಯಾಯಿತಿ
* ಇತರ ಫೋನ್‌ಗಳಲ್ಲಿ 3,000ರೂ. ಹೆಚ್ಚುವರಿ ವಿನಿಮಯ ಕೊಡುಗೆ
* ಫ್ಲಿಪ್‌ಕಾರ್ಟ್‌ ಆಕ್ಸಿಸ್ ಬ್ಯಾಂಕ್ ಕಾರ್ಡ್‌ನಲ್ಲಿ 5% ಕ್ಯಾಶ್‌ಬ್ಯಾಕ್

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಡಿಸ್‌ಪ್ಲೇ ರಚನೆ ಮತ್ತು ವಿನ್ಯಾಸ

ಪೊಕೊ F4 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ HD+ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080x2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಡಿಸ್‌ಪ್ಲೇ DCI-P3 ಬಣ್ಣದ ಹರವು ಸಹ ಒಳಗೊಂಡಿದ್ದು, 120Hz ರಿಫ್ರೆಶ್ ರೇಟ್‌ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಇದಲ್ಲದೆ ಅಮೇಜಾನ್‌ ಪ್ರೈಮ್‌ ವೀಡಿಯೊದಲ್ಲಿ HDR10+ , ನೆಟ್‌ಫ್ಲಿಕ್ಸ್‌ ನಲ್ಲಿ ಡಾಲ್ಬಿ ವಿಷನ್‌ ಬೆಂಬಲವನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ.

ಪ್ರೊಸೆಸರ್‌ ಯಾವುದು?

ಪ್ರೊಸೆಸರ್‌ ಯಾವುದು?

ಪೊಕೊ F4 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲದೊಂದಿಗೆ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಜೊತೆಗೆ ಮಾಲಿ-G610 MC6 GPU ಸಪೋರ್ಟ್‌ ಅನ್ನು ಪಡೆದಿದೆ. ಅಲ್ಲದೆ ಫೋರ್‌ ಕಾರ್ಟೆಕ್ಸ್-A78 ಕೋರ್‌ಗಳನ್ನು ಒಳಗೊಂಡಿದೆ. ಹಾಗೆಯೇ 6GB RAM + 128GB ಮತ್ತು 8GB + 128GB ಹಾಗೂ 12GB + 256GB ಸಾಮರ್ಥ್ಯದ ಮೂರು ವೇರಿಯೆಂಟ್‌ ಆಯ್ಕೆಗಳಲ್ಲಿ ಬರಲಿದೆ.

ಕ್ಯಾಮೆರಾ ಸೆನ್ಸಾರ್ ಹೇಗಿದೆ?

ಕ್ಯಾಮೆರಾ ಸೆನ್ಸಾರ್ ಹೇಗಿದೆ?

ಪೊಕೊ F4 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಹೊಂದಿರುವ f/1.8 ಲೆನ್ಸ್‌ನೊಂದಿಗೆ ಬರುತ್ತದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಇದಲ್ಲದೆ 20 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ನಲ್ಲಿರುವ ಕ್ಯಾಮೆರಾಗಳು ನೈಟ್ ಮೋಡ್, AI ಸ್ಕೈಸ್ಕೇಪಿಂಗ್ 4.0 ಮತ್ತು AI ಎರೇಸ್ 2.0 ನಂತಹ ಫೀಚರ್ಸ್‌ಗಳನ್ನು ಒಳಗೊಂಡಿವೆ. ಜೊತೆಗೆ ಎಲ್ಇಡಿ ಫ್ಲ್ಯಾಷ್, ಹೆಚ್‌ಡಿಆರ್, ಪನೋರಮಾ ಫೀಚರ್ಸ್‌ ಕೂಡ ಸೇರಿದೆ.

ಬ್ಯಾಟರಿ ಮತ್ತು ಇತರೆ

ಬ್ಯಾಟರಿ ಮತ್ತು ಇತರೆ

ಪೊಕೊ F4 5G ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಈ ಬ್ಯಾಟರಿ ಕೇವಲ 38 ನಿಮಿಷಗಳಲ್ಲಿ 0% to 100% ಚಾರ್ಜ್‌ ಮಾಡಲಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 802.11ac, ಬ್ಲೂಟೂತ್ v5.2, GPS/ A-GPS/ NavIC, NFC, ಮತ್ತು USB ಟೈಪ್-C ಪೋರ್ಟ್ ಸೇರಿವೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್ ಲೈಟ್ ಸೆನ್ಸಾರ್‌, ಗೈರೊಸ್ಕೋಪ್ ಸೆನ್ಸಾರ್‌, ಮ್ಯಾಗ್ನೆಟೋಮೀಟರ್ ಮತ್ತು ಪ್ರಾಕ್ಸಿಮಿಟಿ ಸೆನ್ಸರ್‌ ಅನ್ನು ಒಳಗೊಂಡಿವೆ. ಜೊತೆಗೆ ಈ ಫೋನ್‌ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ ಅನ್ನು ಕೂಡ ಹೊಂದಿದೆ. ಇನ್ನು ಈ ಫೋನ್‌ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ ಬರುತ್ತದೆ. ಇದು ಡಾಲ್ಬಿ ಅಟ್ಮೋಸ್‌ ಮತ್ತು ಹೈ-ರೆಸ್ ಆಡಿಯೊ ಬೆಂಬಲವನ್ನು ಹೊಂದಿದೆ. ಸೌಂಡ್‌ ಕ್ಯಾನ್ಸಲೇಶನ್‌ಗಾಗಿ ಎರಡು ಮೈಕ್ರೊಫೋನ್‌ಗಳನ್ನು ಸಹ ನೀಡಲಾಗಿದೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಭಾರತದಲ್ಲಿ ಪೊಕೊ F4 5G ಸ್ಮಾರ್ಟ್‌ಫೋನ್‌ ಬೇಸ್ ಮಾಡೆಲ್‌ 6GB RAM + 128GB ಸ್ಟೋರೇಜ್ ರೂಪಾಂತರದ ಬೆಲೆ 27,999ರೂ. ಆಗಿದೆ. ಇನ್ನು 8GB + 128GB ಮಾದರಿಯ ಆಯ್ಕೆಯ ಬೆಲೆ 29,999ರೂ. ಹೊಂದಿದೆ. ಇದಲ್ಲದೆ ಇದರ ಟಾಪ್-ಆಫ್-ಲೈನ್ 12GB + 256GB ಆಯ್ಕೆಯ ಬೆಲೆ 33,999ರೂ.ಆಗಿದೆ. ಈ ಸ್ಮಾರ್ಟ್‌ಫೋನ್‌ ನೆಬ್ಯುಲಾ ಗ್ರೀನ್ ಮತ್ತು ನೈಟ್ ಬ್ಲಾಕ್ ಕಲರ್‌ ಆಯ್ಕೆಗಳಲ್ಲಿ ಲಭ್ಯವಾಗಲಿದೆ.

Best Mobiles in India

English summary
POCO F4 5G Buyers Can get Rs 4,000 Instant Discount this Bank card: Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X