ಪೊಕೊ F4 5G V/S ಪೊಕೊ F3 GT: ಇವೆರಡರಲ್ಲಿ ಖರೀದಿಗೆ ಯಾವುದು ಬೆಸ್ಟ್‌?

|

ಜನಪ್ರಿಯ ಪೊಕೊ ಮೊಬೈಲ್ ಕಂಪನಿಯು ಇತ್ತೀಚಿಗಷ್ಟೆ ಹೊಸದಾಗಿ ಪೊಕೊ F4 5G ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಈ ಸ್ಮಾರ್ಟ್‌ಫೋನ್ ಆಕರ್ಷಕ ಫೀಚರ್ಸ್‌ ಹಾಗೂ ಮೀಡ್‌ರೇಂಜ್‌ ಪ್ರೈಸ್‌ಟ್ಯಾಗ್‌ನಿಂದ ಗ್ರಾಹಕರ ಗಮನ ಸೆಳೆದಿದೆ. ಮುಖ್ಯವಾಗಿ ಈ ಫೋನ್ ಟ್ರಿಪಲ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಪಡೆದಿದ್ದು, ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್ ಹೊಂದಿರುವುದು ಪ್ರಮುಖ ಹೈಲೈಟ್‌ ಆಗಿ ಕಾಣಿಸಿಕೊಂಡಿದೆ. ಇನ್ನು ಹೆಚ್ಚು ಕಡಿಮೆ ಅದೇ ಪ್ರೈಸ್‌ಟ್ಯಾಗ್‌ನ ರೇಂಜ್‌ನಲ್ಲಿರುವ ಪೊಕೊ ಸಂಸ್ಥೆಯ ಪೊಕೊ F3 GT ಫೋನಿಗಿಂತ ಪೊಕೊ F4 5G ಫೋನ್‌ ಹೇಗೆ ಭಿನ್ನ?..ಇವೆರಡರಲ್ಲಿ ಯಾವುದು ಉತ್ತಮ?

ಕಾಣಬಹುದಾಗಿದೆ

ಹೌದು, ಪೊಕೊ ಸಂಸ್ಥೆಯ ನೂತನ ಪೊಕೊ F4 5G ಸ್ಮಾರ್ಟ್‌ಫೋನ್‌ ಹಾಗೂ ಪೊಕೊ F3 GT ಸ್ಮಾರ್ಟ್‌ಫೋನ್ ಮೀಡ್‌ರೇಂಜ್‌ ಬೆಲೆಯಲ್ಲಿ ಬೆಸ್ಟ್‌ ಅನಿಸುವಂತಹ ಫೀಚರ್ಸ್‌ಗಳನ್ನು ಪಡೆದಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಪ್ರೈಸ್‌ಟ್ಯಾಗ್‌ನಲ್ಲಿ ಹೆಚ್ಚಿನ ಭಿನ್ನತೆ ಕಾಣಿಸದಿದ್ದರೂ, ರಚನೆ ಹಾಗೂ ಫೀಚರ್ಸ್‌ಗಳ ದೃಷ್ಠಿಯಿಂದ ಕೆಲವು ಪ್ರಮುಖ ಭಿನ್ನತೆಗಳನ್ನು ಕಾಣಬಹುದಾಗಿದೆ. ಹಾಗೆಯೇ ಕೆಲವು ಫೀಚರ್ಸ್‌ಗಳು ಸಾಮ್ಯತೆ ಹೊಂದಿವೆ. ಹಾಗಾದರೇ ಪೊಕೊ F4 5G ಸ್ಮಾರ್ಟ್‌ಫೋನ್‌ ಹಾಗೂ ಪೊಕೊ F3 GT ಸ್ಮಾರ್ಟ್‌ಫೋನ್ ಇವೆರಡು ಫೋನ್‌ಗಳ ಫೀಚರ್ಸ್‌ ಕಾರ್ಯವೈಖರಿ ಏನು? ಈ ಎರಡು ಫೋನ್‌ಗಳಲ್ಲಿ ಖರೀದಿಗೆ ಯಾವುದು ಉತ್ತಮ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ವಿನ್ಯಾಸ ಮತ್ತು ಡಿಸ್‌ಪ್ಲೇ ರಚನೆ ಭಿನ್ನತೆಗಳೆನು

ವಿನ್ಯಾಸ ಮತ್ತು ಡಿಸ್‌ಪ್ಲೇ ರಚನೆ ಭಿನ್ನತೆಗಳೆನು

ನೂತನ ಪೊಕೊ F4 5G ಸ್ಮಾರ್ಟ್‌ಫೋನ್‌ 6.67 ಇಂಚಿನ ಫುಲ್‌ HD+ E4 ಅಮೋಲೆಡ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ 1,080 x 2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯವನ್ನು ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಮತ್ತು 360Hz ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಹೊಂದಿದೆ. ಹೆಚ್ಚುವರಿಯಾಗಿ, ಈ ಡಿಸ್‌ಪ್ಲೇ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್‌ ಅನ್ನು ಒಳಗೊಂಡಿದೆ. ಅದೇ ರೀತಿ ಪೊಕೊ F3 GT ಸ್ಮಾರ್ಟ್‌ಫೋನ್‌ 6.67 ಇಂಚಿನ ಟರ್ಬೊ ಅಮೋಲೆಡ್ 10-ಬಿಟ್ ಡಿಸ್ಪ್ಲೇಯನ್ನು ಹೊಂದಿದೆ. ಇನ್ನು ಈ ಡಿಸ್‌ಪ್ಲೇ ಹೆಚ್‌ಡಿಆರ್ 10+ ಬೆಂಬಲ ಹೊಂದಿದೆ. ಇದು 120Hz ರಿಫ್ರೆಶ್ ರೇಟ್‌ ಮತ್ತು 480 ಹೆಚ್ ಟಚ್ ಸ್ಯಾಂಪ್ಲಿಂಗ್ ರೇಟ್‌ ಅನ್ನು ಪಡೆದುಕೊಂಡಿದೆ.

ಫಿಂಗರ್‌ಪ್ರಿಂಟ್

ಪೊಕೊ F4 5G ಸ್ಮಾರ್ಟ್‌ಫೋನ್‌ ಫ್ಲಾಟ್ ಎಡ್ಜ್ ಫೋನ್ ಆಗಿದ್ದು, ಪೊಕೊ F3 GT ಸ್ಮಾರ್ಟ್‌ಫೋನ್‌ ಗೇಮಿಂಗ್ ಫೋನ್‌ ಆಗಿದೆ. ಪೊಕೊ F3 GT ಹೊಸ ಪೊಕೊ F4 5G ಗಿಂತ ಭಾರವಾಗಿರುತ್ತದೆ ಮತ್ತು ದಪ್ಪವಾಗಿರುತ್ತದೆ. ಎರಡೂ ಫೋನ್‌ಗಳು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್ ಮತ್ತು IP53 ರೇಟಿಂಗ್ ಅನ್ನು ಹೊಂದಿವೆ. ಹಾಗೆಯೇ ಈ ಎರಡೂ ಫೋನ್‌ಗಳು ಮಧ್ಯದಲ್ಲಿ ರಂಧ್ರ ಪಂಚ್ ಕಟ್-ಔಟ್ ಅನ್ನು ಹೊಂದಿವೆ.

ಪ್ರೊಸೆಸರ್‌ ಪವರ್‌ ಹೇಗಿದೆ?

ಪ್ರೊಸೆಸರ್‌ ಪವರ್‌ ಹೇಗಿದೆ?

ಹೊಸ ಪೊಕೊ F4 5G ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಅನ್ನು ಹೊಂದಿದೆ. ಇದು ಆಂಡ್ರಾಯ್ಡ್ 12 ಬೆಂಬಲ ದೊಂದಿಗೆ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ. ಅದೇ ರೀತಿ ಪೊಕೊ F3 GT ಸ್ಮಾರ್ಟ್‌ಫೋನ್‌ ಮೀಡಿಯಾ ಟೆಕ್ ಡೈಮೆನ್ಸಿಟಿ 1200 SoC ಪ್ರೊಸೆಸರ್‌ ಬಲವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲ ದೊಂದಿಗೆ ಕಾರ್ಯನಿರ್ವಹಿಸುತ್ತದೆ. ಪೊಕೊ F4 5G ಸ್ಮಾರ್ಟ್‌ಫೋನಿನಲ್ಲಿ ಅಪ್‌ಗ್ರೇಡ್‌ ಆಗಿರುವ ಇತ್ತೀಚಿನ ಆಂಡ್ರಾಯ್ಡ್‌ 12 ಓಎಸ್‌ ಇದೆ.

ಮೆಮೊರಿ ಸಾಮರ್ಥ್ಯದ ಆಯ್ಕೆಗಳು

ಮೆಮೊರಿ ಸಾಮರ್ಥ್ಯದ ಆಯ್ಕೆಗಳು

ಪೊಕೊ F4 5G ಸ್ಮಾರ್ಟ್‌ಫೋನ್‌ ಒಟ್ಟು ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಅವುಗಳಯ ಕ್ರಮವಾಗಿ 6GB RAM + 128GB ಮತ್ತು 8GB + 128GB ಹಾಗೂ 12GB + 256GB ಸಾಮರ್ಥ್ಯದ ಸ್ಟೋರೇಜ್‌ ಆಯ್ಕೆಗಳಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಪೊಕೊ F3 GT ಸ್ಮಾರ್ಟ್‌ಫೋನ್‌ ಸಹ ಮೂರು ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಪಡೆದಿದ್ದು, ಅವುಗಳು ಕ್ರಮವಾಗಿ 6GB/ 128GB, 8GB/ 128GB ಮತ್ತು 8GB/ 256GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳಾಗಿವೆ. ಪೊಕೊ F4 5G ಫೋನ್ 12GB RAM ವೇರಿಯಂಟ್‌ ಆಯ್ಕೆ ಪಡೆದಿದೆ.

ಕ್ಯಾಮೆರಾ ಗುಣಮಟ್ಟ ಹೇಗಿದೆ?

ಕ್ಯಾಮೆರಾ ಗುಣಮಟ್ಟ ಹೇಗಿದೆ?

ಪೊಕೊ F4 5G ಸ್ಮಾರ್ಟ್‌ಫೋನ್‌ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್ ಸೆನ್ಸಾರ್‌ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಲೆನ್ಸ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್‌ ಅನ್ನು ಒಳಗೊಂಡಿದೆ. ಅದೇ ರೀತಿ ಪೊಕೊ F3 GT ಸ್ಮಾರ್ಟ್‌ಫೋನ್‌ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್ ಮತ್ತು ಮೂರನೇ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಲೆನ್ಸ್ ಅನ್ನು ಒಳಗೊಂಡಿದೆ.

ಸೆಲ್ಫಿ

ಇನ್ನು ಪೊಕೊ F4 5G ಫೋನ್‌ 20 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಪೊಕೊ F3 GT ಫೋನ್‌ 16 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಈ ಎರಡು ಫೋನ್‌ಗಳು ಕ್ಯಾಮೆರಾ ವಿಭಾಗದಲ್ಲಿ ಹೆಚ್ಚಿನ ಭಿನ್ನತೆಗಳನ್ನು ಪಡೆದಿಲ್ಲ. ಸೆಲ್ಫಿ ಕ್ಯಾಮೆರಾದಲ್ಲಿ ಅಪ್‌ಗ್ರೇಡ್‌ ಆಗಿರುವುದನ್ನು ನಾವು ಗಮನಿಸಬಹುದು. ಉಳಿದಂತೆ ಫೋಟೊ ಎಡಿಟಿಂಗ್ ಆಯ್ಕೆಗಳು ಹೊಂದಿವೆ.

ಬ್ಯಾಟರಿ ಸಾಮರ್ಥ್ಯ ಮತ್ತು ಬ್ಯಾಕ್‌ಅಪ್‌

ಬ್ಯಾಟರಿ ಸಾಮರ್ಥ್ಯ ಮತ್ತು ಬ್ಯಾಕ್‌ಅಪ್‌

ಪೊಕೊ F4 5G ಸ್ಮಾರ್ಟ್‌ಫೋನ್‌ 4,500 mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, ಇದಕ್ಕೆ ಪೂರಕವಾಗಿ ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಹಾಗೆಯೇ ಪೊಕೊ F3 GT ಸ್ಮಾರ್ಟ್‌ಫೋನ್‌ 5,065mAh ಸಾಮರ್ಥ್ಯದ ಬ್ಯಾಟರಿ ಹೊಂದಿದ್ದು, ಇದು 67W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಬ್ಯಾಟರಿ ಸ್ಟೋರೇಜ್‌ ವಿಭಾಗದಲ್ಲಿ ಪೊಕೊ F4 5G ಫೋನಿನ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಬಹುದಿತ್ತು. ಉಳಿದಂತೆ ಎರಡು 67W ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಪಡೆದಿವೆ.

ಕೊನೆಯ ಮಾತು

ಕೊನೆಯ ಮಾತು

ಹೊಸ ಪೊಕೊ F4 5G ಸ್ಮಾರ್ಟ್‌ಫೋನ್‌ ಮತ್ತು ಪೊಕೊ F3 GT ಸ್ಮಾರ್ಟ್‌ಫೋನ್‌ ಗಳ ನಡುವೆ ಹೆಚ್ಚಿನ ಭಿನ್ನತೆಗಳು ಇಲ್ಲ. ಪೊಕೊ F4 5G ಫೋನ್ ಪೊಕೊ F3 GT ಫೋನಿನ ಅಪ್‌ಗ್ರೇಡ್‌ ಆವೃತ್ತಿ ಎನಿಸಿದೆ. ಪೊಕೊ F4 5G ಫೋನಿನ ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಇನ್ನಷ್ಟು ಹೆಚ್ಚಿಸಬಹುದಾಗಿತ್ತು ಎಂದೆನಿಸುತ್ತದೆ. ಉಳಿದಂತೆ ಮೀಡ್‌ರೇಂಜ್‌ನಲ್ಲಿ ಆಕರ್ಷಕ ಫೋನ್‌ ಎನಿಸಿದೆ. ಪೊಕೊ F3 GT ಸ್ಮಾರ್ಟ್‌ಫೋನ್‌ ಗೇಮಿಂಗ್‌ ಫೋನ್‌ ಆಗಿ ಕಾಣಿಸಿಕೊಂಡಿದೆ. ಇನ್ನು ಪೊಕೊ F4 5G ಆಲ್‌ರೌಂಡ್‌ ಫೋನ್ ಆಗಿದೆ. ಹೀಗಾಗಿ ಇದನ್ನು ಖರೀದಿಸಬಹುದು.

Best Mobiles in India

English summary
Poco F4 5G vs Poco F3 GT: Full Comparison Which one is Better?

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X