ಇಂದು 'ಪೊಕೊ X2' ಫೋನಿನ ಮೊದಲ ಸೇಲ್ ಆರಂಭ!..ಭರ್ಜರಿ ಆಫರ್!

|

ಪೊಕೊ ಸಂಸ್ಥೆಯು ಹೊಸದಾಗಿ ಬಿಡುಗಡೆ ಮಾಡಿರುವ ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಈಗಾಗಲೆ ಮಾರುಕಟ್ಟೆಯಲ್ಲಿ ಹೊಸ ಅಲೆ ಎಬ್ಬಿಸಿದೆ. ಈ ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನಿನ ಮೊದಲ ಸೇಲ್ ಇಂದು ಮಧ್ಯಾಹ್ನ 12ರಿಂದ ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ನಲ್ಲಿ ಶುರುವಾಗಲಿದೆ. 64ಎಂಪಿ ಕ್ಯಾಮೆರಾ ಸೆನ್ಸಾರ್, ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 730 ಪ್ರೊಸೆಸರ್‌ ಸಾಮರ್ಥ್ಯಗಳನ್ನು ಒಳಗೊಂಡಿರುವುದು ಪ್ರಮುಖ ಹೈಲೈಟ್ಸ್‌ಗಳಾಗಿವೆ.

ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್

ಹೌದು, ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನಿನ ಫಸ್ಟ್‌ ಸೇಲ್ ಇಂದು (ಫೆ. 11) ಫ್ಲಿಪ್‌ಕಾರ್ಟ್‌ನಲ್ಲಿ ನಡೆಯಲಿದೆ. ಈ ಫೋನ್ 6GB RAM+64GB, 6GB+128GB ಮತ್ತು 8GB RAM + 256GB ಸ್ಟೋರೇಜ್ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ 4,500mAh ಬ್ಯಾಟರಿ ಬಾಳಿಕೆಯ ಸಾಮರ್ಥ್ಯವನ್ನು ಪಡೆದಿದೆ. ಆರಂಭಿಕ ವೇಋಇಯಂಟ್ ಬೆಲೆಯು 15,999ರೂ. ಆಗಿದ್ದು, ಬ್ಲೂ ಮತ್ತು ಪರ್ಪಲ್ ಬಣ್ಣಗಳ ಆಯ್ಕೆ ಪಡೆದಿದೆ. ಹಾಗೆಯೇ ಐಸಿಐಸಿಐ ಬ್ಯಾಂಕ್‌ನಿಂದ 1000ರೂ ಕ್ಯಾಶ್‌ಬ್ಯಾಕ್ ಸಿಗಲಿದೆ. ಇನ್ನುಳಿದಂತೆ ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ತಿಳಿಯೋಣ.

ಡಿಸ್‌ಪ್ಲೇ ಮತ್ತು ಡಿಸೈನ್

ಡಿಸ್‌ಪ್ಲೇ ಮತ್ತು ಡಿಸೈನ್

ಪೊಕೊ X2 ಸ್ಮಾರ್ಟ್‌ಫೋನ್ 1080 x 2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.67 ಇಂಚಿನ ಡಿಸ್‌ಪ್ಲೇಯನ್ನು ಹೊಂದಿದೆ. ಡಿಸ್‌ಪ್ಲೇಯ ಅನುಪಾತವು 20:9 ಆಗಿದ್ದು, ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅಂತರವು ಶೇ.84.8% ಆಗಿದೆ. ಇನ್ನು ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆಯು 395ppi ಆಗಿದ್ದು, ಡಿಸ್‌ಪ್ಲೇಯು 120Hz ರೀಫ್ರೇಶಿಂಗ್ ರೇಟ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್ 5 ಸಹ ಪಡೆದಿದೆ.

ಪ್ರೊಸೆಸರ್ ಸಾಮರ್ಥ್ಯ

ಪ್ರೊಸೆಸರ್ ಸಾಮರ್ಥ್ಯ

ಪೊಕೊ X2 ಸ್ಮಾರ್ಟ್‌ಫೋನ್ ಸ್ನ್ಯಾಪ್‌ಡ್ರಾಗನ್ 730G ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಆಂಡ್ರಾಯ್ಡ್‌ 10 ಓಎಸ್‌ ಬೆಂಬಲ ಪಡೆದುಕೊಂಡಿದೆ. ಅಡದರೆನೊ 618 ಗ್ರಾಫಿಕ್ಸ್‌ ಪಡೆದಿದೆ. ಇದರೊಂದಿಗೆ 6GB RAM + 64GB, 6GB RAM + 128GB ಮತ್ತು 8GB RAM + 256GB ಸಾಮರ್ಥ್ಯ ಮೂರು ವೇರಿಯಂಟ್ ಆಯ್ಕೆಗಳನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸುವ ಅವಕಾಶ ಸಹ ಇದೆ.

ಕ್ಯಾಮೆರಾ ವಿಶೇಷ

ಕ್ಯಾಮೆರಾ ವಿಶೇಷ

ಪೊಕೊ X2 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ನಾಲ್ಕು ಕ್ಯಾಮೆರಾ ಸೆಟ್‌ಅಪ್‌ ಪಡೆದಿದ್ದು, ಮುಖ್ಯ ಕ್ಯಾಮೆರಾವು ಸೋನಿಯ IMX686 ಸೆನ್ಸಾರ್ ಒಳಗೊಂಡ 64ಎಂಪಿ ಕ್ಯಾಮೆರಾ ಆಗಿದೆ. ಸೆಕೆಂಡರಿ ಕ್ಯಾಮೆರಾವು ಅಲ್ಟ್ರಾ ವೈಲ್ಡ್‌ ಆಂಗಲ್‌ನ 8ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿದೆ. ಹಾಗೆಯೇ ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು 2ಎಂಪಿ ಸೆನ್ಸಾರ್ ಸಾಮರ್ಥ್ಯ ಪಡೆದಿವೆ. ಇನ್ನು ಮುಂಬದಿ ಡ್ಯುಯಲ್ ಸೆಲ್ಫಿ ಕ್ಯಾಮೆರಾ ನೀಡಲಾಗಿದ್ದು, ಅವುಗಳು 20ಎಂಪಿ ಮತ್ತು 2ಎಂಪಿ ಸೆನ್ಸಾರ್ ಹೊಂದಿವೆ.

ಬ್ಯಾಟರಿ ಬಲ

ಬ್ಯಾಟರಿ ಬಲ

ಪೊಕೊ X2 ಸ್ಮಾರ್ಟ್‌ಫೋನ್ 4,500mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಹೊಂದಿದೆ. ಇದರೊಂದಿಗೆ 27W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯ ಪಡೆದುಕೊಂಡಿದೆ. ಹಾಗೆಯೆ ಫಿಂಗರ್‌ಪ್ರಿಂಟ್ ಸೆನ್ಸಾರ್, ವೈಫೈ 802.11ac, ಎನ್‌ಎಫ್‌ಸಿ, ಜಿಪಿಎಸ್‌, ಯುಎಸ್‌ಬಿ, ಬ್ಲೂಟೂತ್, ಆಯ್ಕೆಗಳು ಇರಲಿವೆ. ಬ್ಲೂ, ರೆಡ್ ಮತ್ತು ಪರ್ಪಲ್ ಬಣ್ಣಗಳಲ್ಲಿ ಲಾಂಚ್ ಆಗುವ ಸಾಧ್ಯತೆಗಳು ಹೆಚ್ಚಾಗಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ಪೊಕೊ ಎಕ್ಸ್‌2 ಸ್ಮಾರ್ಟ್‌ಫೋನ್ ಒಟ್ಟು ಮೂರು ವೇರಿಯಂಟ್‌ ಮಾದರಿಗಳಲ್ಲಿ ಲಾಂಚ್ ಆಗಿದ್ದು, 6GB RAM + 64GB ಬೇಸಿಕ್ ವೇರಿಯಂಟ್ ಬೆಲೆಯು 15,999ರೂ ಆಗಿದೆ. ಇನ್ನು 6GB RAM + 128GB ಸ್ಟೋರೇಜ್ ವೇರಿಯಂಟ್ ಬೆಲೆಯು 16,999ರೂ ಆಗಿದ್ದು, 8GB RAM + 256GB ಸಾಮರ್ಥ್ಯದ ಹೈಎಂಡ್ ವೇರಿಯಂಟ್ ಬೆಲೆಯು 19,999ರೂ.ಗಳಾಗಿದೆ. ಇನ್ನು ಪೊಕೊ ಎಕ್ಸ್‌2 ಫೋನ್ ಫಸ್ಟ್‌ ಸೇಲ್ ಫೆಬ್ರುವರಿ 11ರಿಂದ (ಇಂದು)ಶುರುವಾಗಲಿದೆ.

Best Mobiles in India

English summary
Poco X2 sale will kick-off via Flipkart at 12:00PM today and its price in India starts from Rs 15,999.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X