ಜಿಯೋ, ಏರ್‌ಟೆಲ್‌, ಬಿಎಸ್‌ಎನ್‌ಎಲ್‌ ಸಂಸ್ಥೆಗಳ ವೇಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ಗಳು!

|

ಪ್ರಸ್ತುತ ಇಂಟರ್ನೆಟ್‌ ಅಗತ್ಯ ಹೆಚ್ಚಿದ್ದು, ಈ ನಿಟ್ಟಿನಲ್ಲಿ ತಡೆರಹಿತ ಡೇಟಾಗಾಗಿ ಬ್ರಾಡ್‌ಬ್ಯಾಂಡ್‌ ಸಂಪರ್ಕ ಬೇಡಿಕೆಯಲ್ಲಿ ಕಾಣಿಸಿಕೊಂಡಿದೆ. ಮುಖ್ಯವಾಗಿ ಜಿಯೋ ಫೈಬರ್, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ ಮತ್ತು ಬಿಎಸ್‌ಎನ್‌ಎಲ್ ಬ್ರಾಡ್‌ಬ್ಯಾಂಡ್‌ನ ಕೈಗೆಟುಕುವ ಬ್ರಾಡ್‌ಬ್ಯಾಂಡ್ ಯೋಜನೆಗಳು ಬಳಕೆದಾರರಿಗೆ ಬ್ರಾಡ್‌ಬ್ಯಾಂಡ್ ಸಂಪರ್ಕವನ್ನು ಪಡೆಯಲು ಸಾಧ್ಯವಾಗಿಸುತ್ತಿದೆ. ಈ ಯೋಜನೆಗಳು ಆಕರ್ಷಕ ಪ್ರಯೋಜನ ಸಹ ಪಡೆದಿವೆ.

ಜಿಯೋ

ಹೌದು, ಸದ್ಯ ಬಹುತೇಕ ಬಳಕೆದಾರರು ಅಗ್ಗದ ಅಥವಾ ಬಜೆಟ್‌ ದರದಲ್ಲಿನ ಬ್ರಾಡ್‌ಬ್ಯಾಂಡ್ ಯೋಜನೆಗಳತ್ತ ಹೆಚ್ಚು ಮುಖ ಮಾಡುತ್ತಾರೆ. ಮತ್ತೆ ಕೆಲವು ಬಳಕೆದಾರರು ವೇಗದ ಇಂಟರ್ನೆಟ್ ಸಂಪರ್ಕದ ಪ್ರೀಮಿಯಂ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಆಯ್ಕೆ ಮಾಡುತ್ತಾರೆ. ಜಿಯೋ, ಏರ್‌ಟೆಲ್‌ ಹಾಗೂ ಬಿಎಸ್‌ಎನ್‌ಎಲ್‌ ಗಳ 1 Gbps ವೇಗದ ಸಾಮರ್ಥ್ಯದಲ್ಲಿ ಯೋಜನೆಗಳು ಗಮನ ಸೆಳೆದಿವೆ. ಹಾಗಾದರೇ ಈ ಟೆಲಿಕಾಂಗಳ ಪ್ರೀಮಿಯಂ ಬ್ರಾಡ್‌ಬ್ಯಾಂಡ್‌ ಯೋಜನೆಗಳ ಪ್ರಯೋಜನಗಳ ಬಗ್ಗೆ ಮುಂದೆ ನೋಡೋಣ ಬನ್ನಿರಿ.

ಜಿಯೋ ಫೈಬರ್ 8,499ರೂ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ

ಜಿಯೋ ಫೈಬರ್ 8,499ರೂ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ

ಜಿಯೋಫೈಬರ್ ತನ್ನ ಈ ಪ್ರೈಸ್‌ಟ್ಯಾಗ್‌ನ ಒಳಗೆ ಎರಡು 1 Gbps ವೇಗದ ಯೋಜನೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ 3,999ರೂ ಮತ್ತು 8,499ರೂ. ಆಗಿವೆ. ಈ ಪೈಕಿ ಜಿಯೋಫೈಬರ್ 8,499ರೂ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆ 1 Gbps ಅಪ್‌ಲೋಡ್ ಮತ್ತು ಡೌನ್‌ಲೋಡ್ ವೇಗ ಹೊಂದಿದೆ. ಹಾಗೆಯೇ 6.6TB ಅಥವಾ 6600GB ಎಫ್‌ಯುಪಿ ಮಿತಿ ಮತ್ತು ಅನಿಯಮಿತ ವಾಯಿಸ್‌ ಕರೆ ನೀಡುತ್ತದೆ. ಈ ಪ್ರಯೋಜನಗಳಲ್ಲದೆ, ಈ ಯೋಜನೆಯು ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್, ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಸೋನಿಲೈವ್, ಜೀ5, ಸನ್‌ಎನ್‌ಎಕ್ಸ್‌ಟಿ, ವೂಟ್ ಸೆಲೆಕ್ಟ್, ವೂಟ್ ಕಿಡ್ಸ್, ಆಲ್ಟ್‌ಬಲಾಜಿ, ಹೊಯ್ಚೋಯಿ, ಶೆಮರೂಮೀ , ಲಯನ್ಸ್‌ಗೇಟ್ ಪ್ಲೇ, ಡಿಸ್ಕವರಿ +, ಇರೋಸ್ ನೌ, ಜಿಯೋ ಸಿನೆಮಾ ಮತ್ತು ಜಿಯೋಸಾವ್ನ್ ಸೇರಿದಂತೆ 15 ಒಟಿಟಿ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ನೀಡುತ್ತದೆ.

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ  ಬ್ರಾಡ್‌ಬ್ಯಾಂಡ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ ಬ್ರಾಡ್‌ಬ್ಯಾಂಡ್ ಯೋಜನೆ

ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಫೈಬರ್ 3,999ರೂ ವಿಐಪಿ ಬ್ರಾಡ್‌ಬ್ಯಾಂಡ್ ಯೋಜನೆಯನ್ನು ಹೊಂದಿದೆ. ಇದು 1 Gbps ವೇಗ, ಅನಿಯಮಿತ ಡೇಟಾವನ್ನು ತಿಂಗಳಿಗೆ 3.3TB ಅಥವಾ 3300GB ಮತ್ತು ತನ್ನ ಲ್ಯಾಂಡ್‌ಲೈನ್ ಸೇವೆಯ ಮೂಲಕ ಅನಿಯಮಿತ ವಾಯಿಸ್‌ ಕರೆಗಳನ್ನು ನೀಡುತ್ತದೆ. ಈ ಯೋಜನೆ ನೀಡುವ ಒಟಿಟಿ ಚಂದಾದಾರಿಕೆಗಳಲ್ಲಿ ಡಿಸ್ನಿ + ಹಾಟ್‌ಸ್ಟಾರ್ ವಿಐಪಿ, ಏರ್‌ಟೆಲ್ ಎಕ್ಸ್‌ಸ್ಟ್ರೀಮ್ ಅಪ್ಲಿಕೇಶನ್ ಪ್ರೀಮಿಯಂ ಮತ್ತು ವಿಂಕ್ ಮ್ಯೂಸಿಕ್ ಚಂದಾದಾರಿಕೆ ಸೇರಿವೆ. ಹಾಗೆಯೇ ಆಂಡ್ರಾಯ್ಡ್ ಟಿವಿ ಆಧಾರಿತ ಏರ್ಟೆಲ್ ಎಕ್ಸ್‌ಸ್ಟ್ರೀಮ್ ಬಾಕ್ಸ್ ಅನ್ನು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಆಯ್ಕೆ ಮಾಡುವ ಆಯ್ಕೆಯನ್ನು ಗ್ರಾಹಕರು ಪಡೆಯುತ್ತಾರೆ. ಎಕ್ಸ್‌ಸ್ಟ್ರೀಮ್ ಬಾಕ್ಸ್‌ನೊಂದಿಗೆ, ಬಳಕೆದಾರರು ಉಚಿತ ZEE5 ಪ್ರೀಮಿಯಂ ಮತ್ತು ಅಮೆಜಾನ್ ಪ್ರೈಮ್ ಚಂದಾದಾರಿಕೆಗಳನ್ನು ಪಡೆಯುತ್ತಾರೆ.

ಬಿಎಸ್‌ಎನ್‌ಎಲ್ ಭಾರತ್ ಫೈಬರ್ 16,999ರೂ  ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್ ಭಾರತ್ ಫೈಬರ್ 16,999ರೂ ಬ್ರಾಡ್‌ಬ್ಯಾಂಡ್ ಯೋಜನೆ

ಬಿಎಸ್‌ಎನ್‌ಎಲ್ ಇನ್ನೂ 1 Gbps ಬ್ರಾಡ್‌ಬ್ಯಾಂಡ್ ಯೋಜನೆಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿಲ್ಲ. ಕಂಪನಿಯು ನೀಡುವ ಅತಿ ವೇಗದ ಬ್ರಾಡ್‌ಬ್ಯಾಂಡ್ ಯೋಜನೆಯ ಎಂದರೇ 1,499 ರೂ. ಬೆಲೆಯ 300Mbps ವೇಗದ ಯೋಜನೆ. ಆದಾಗ್ಯೂ, ಬಿಎಸ್‌ಎನ್‌ಎಲ್‌ನ ಪ್ರೀಮಿಯಂ ಬ್ರಾಡ್‌ಬ್ಯಾಂಡ್ ಯೋಜನೆಯ ಬೆಲೆ 16,999ರೂ. ಇದೆ. ಇದು 100Mbps ವೇಗದ ಸೌಲಭ್ಯ ಪಡೆದಿದೆ. ದಿನಕ್ಕೆ 100 Mbps ವೇಗವನ್ನು 170GB ಡೇಟಾ ವರೆಗೆ ನೀಡುತ್ತದೆ ಆ ನಂತರ ವೇಗವನ್ನು 10 Mbpsಗೆ ಇಳಿಸಲಾಗುತ್ತದೆ. ಇನ್ನು ಈ ಬ್ರಾಡ್‌ಬ್ಯಾಂಡ್ ಯೋಜನೆಯೊಂದಿಗೆ ಬಿಎಸ್‌ಎನ್‌ಎಲ್ ಯಾವುದೇ ಒಟಿಟಿ ಚಂದಾದಾರಿಕೆಗಳನ್ನು ನೀಡುತ್ತಿಲ್ಲ, ಆದರೆ ಲ್ಯಾಂಡ್‌ಲೈನ್ ವಾಯಿಸ್‌ ಕರೆ ಪ್ರಯೋಜನವಿದೆ.

Best Mobiles in India

English summary
Airtel Xstream Fiber, BSNL Broadband and JioFiber attract a lot of customers, but the premium plans ship with the best benefits.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X