ಸ್ನಾಪ್‌ಡ್ರಾಗನ್ 8 ಜೆನ್‌ 2 ಪ್ರೊಸೆಸರ್‌ ಲಾಂಚ್‌ಗೆ ಸಿದ್ಧತೆ!

|

ಸ್ನಾಪ್‌ಡ್ರಾಗನ್ ಎಂಬುದನ್ನು ಕ್ವಾಲ್ಕಾಮ್ ಟೆಕ್ನಾಲಜೀಸ್ Inc ರೂಪಿಸಿದ್ದು, ಮೊಬೈಲ್ ಡಿವೈಸ್‌ಗಳಿಗಾಗಿ ಚಿಪ್ ಸೆಮಿಕಂಡಕ್ಟರ್ ಉತ್ಪನ್ನಗಳ ಮೇಲಿನ ಸಿಸ್ಟಮ್‌ನ ಸೂಟ್ ಇದಾಗಿದೆ. ಇದರ ನಡುವೆ ಈಗ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ ಆಂಡ್ರಾಯ್ಡ್‌ ಉದ್ಯಮಕ್ಕೆ ಅತ್ಯಾವಶ್ಯಕವಾಗಿದ್ದು, ಯಾವುದೇ ಸ್ಮಾರ್ಟ್‌ಫೋನ್‌ಗಳಲ್ಲೂ ಅದರಲ್ಲೂ ಕೈಗೆಟಕುವ ಬೆಲೆಯಿಂದ ದುಬಾರಿ ಬೆಲೆಯ ಸ್ಮಾರ್ಟ್‌ಫೋನ್‌ಗಳಲ್ಲೂ ಈ ಸ್ನಾಪ್‌ಡ್ರಾಗನ್ ತನ್ನದೇ ಆದ ಪ್ರಭಾವ ಬೀರಿದೆ.

ಸ್ನಾಪ್‌ಡ್ರಾಗನ್

ಈ ನಡುವೆ ತನ್ನ ಸರಣಿಯಲ್ಲಿ ಅನೇಕ ಆವೃತ್ತಿಯ ಸ್ನಾಪ್‌ಡ್ರಾಗನ್ ಅನ್ನು ಕ್ವಾಲ್ಕಾಮ್ ಪರಿಚಯಿಸಿದ್ದು, ಇದರ ಮುಂದುವರೆದ ಭಾಗವಾಗಿ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8 ಜೆನ್‌ 2 ಚಿಪ್‌ಸೆಟ್‌ ಅನ್ನು ಪರಿಚಯಿಸಲಿದೆ. ಈ ಆಯ್ಕೆ ಪಡೆದ ಫೋನ್‌ಗಳು ತಮ್ಮ ಕಾರ್ಯಕ್ಷಮತೆಯಲ್ಲಿ ಇತರೆ ಎಲ್ಲಾ ಫೋನ್‌ಗಳನ್ನೂ ಮೀರಿಸುವ ಕೆಲಸ ಮಾಡಲಿವೆ.

ಸ್ಯಾಮ್‌ಸಂಗ್‌

ಹೌದು, ಸ್ಯಾಮ್‌ಸಂಗ್‌ ಗ್ಯಾಲಕ್ಸಿ S22 ಅಲ್ಟ್ರಾ, ಒನ್‌ಪ್ಲಸ್‌ 10 ಪ್ರೊ, ಐಕ್ಯೂ 9T, ವಿವೋ X80 ಪ್ರೊ ಸ್ಮಾರ್ಟ್‌ಫೋನ್‌ ಒಳಗೊಂಡಂತೆ ಇನ್ನೂ ಅನೇಕ ಫೋನ್‌ಗಳು ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8 ಜೆನ್‌ 1 ಹಾಗೂ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8ಜೆನ್‌ 1+ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿವೆ. ಈ ಫೋನ್‌ಗಳ ಕಾರ್ಯಕ್ಷಮತೆಗೆ ಮಾರುಹೋಗಿರುವ ಗ್ರಾಹಕರು ಹೆಚ್ಚು ಹೆಚ್ಚಾಗಿ ಈ ಪ್ರೊಸೆಸರ್‌ ಇರುವ ಫೋನ್‌ಗಳನ್ನು ಖರೀದಿಸಲು ಮುಂದಾಗಿದ್ದಾರೆ. ಈ ಯಶಸ್ಸಿನ ಭಾಗವಾಗಿ ಈಗ ಕ್ವಾಲ್ಕಾಮ್ ಸ್ನ್ಯಾಪ್ಡ್ರ್ಯಾಗನ್ 8ಜೆನ್ 2 SoC ಅನ್ನು ಪ್ರಾರಂಭಿಸಲು ಕಂಪೆನಿ ಸಿದ್ಧತೆ ನಡೆಸಿದೆ.

ಈ ಪ್ರೊಸೆಸರ್‌ ವಿಶೇಷತೆ ಏನು?

ಈ ಪ್ರೊಸೆಸರ್‌ ವಿಶೇಷತೆ ಏನು?

ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ಗೂ ಮುನ್ನವೇ ಭಿನ್ನ ಇದೇ ಸರಣಿಯ ಹಳೆಯ ಪ್ರೊಸೆಸರ್‌ಗಳು ಈಗಾಗಲೇ ಮೊಬೈಲ್‌ಮಾರುಕಟ್ಟೆಯನ್ನು ತಮ್ಮದೇ ರೀತಿಯಲ್ಲಿ ಆವರಿಸಿಕೊಂಡಿವೆ. ಇದು ಅಡ್ರಿನೊ 740 ಗ್ರಾಫಿಕ್ಸ್ ಪ್ರೊಸೆಸಿಂಗ್ ಯೂನಿಟ್ (ಜಿಪಿಯು) ಆಯ್ಕೆಯನ್ನು ಪಡೆಯಲಿದ್ದು, ಬಹುಶಃ 4nm ಪ್ರಕ್ರಿಯೆಯನ್ನು ಆಧರಿಸಿರುತ್ತದೆ ಎನ್ನಲಾಗಿದೆ. ಇದೀಗ ಮತ್ತೆ ತನ್ನ ಸಾಮರ್ಥ್ಯವನ್ನು ಹೆಚ್ಚಿಸಿಕೊಂಡಿರುವ ಕಂಪೆನಿ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಅನ್ನು ನವೆಂಬರ್ 14 ರಿಂದ ನವೆಂಬರ್ 17 ರ ನಡುವೆ ಅನಾವರಣ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದೆ.

ಈ ಪ್ರೊಸೆಸರ್‌ ಆಯ್ಕೆ ಇರುವ ಫೋನ್‌ಗಳಿವು?

ಈ ಪ್ರೊಸೆಸರ್‌ ಆಯ್ಕೆ ಇರುವ ಫೋನ್‌ಗಳಿವು?

ಮೊಟೊರೊಲಾ X40

ಪ್ರಮುಖವಾಗಿ ಮೊಟೊರೊಲಾ X40 ಸ್ಮಾರ್ಟ್‌ಫೋನ್‌ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ತಿಳಿದುಬಂದಿದೆ. ಹಾಗೆಯೇ ಈ ಫೋನ್‌ ಒಂದು ಗಂಟೆಯ ಒಳಗೆ ಚಾರ್ಜಿಂಗ್‌ ಆಗಲಿದ್ದು, ಇದಕ್ಕೆಂದೇ 68W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆದುಕೊಂಡಿರಲಿದೆ. ಪಂಚ್-ಹೋಲ್ ಡಿಸ್‌ಪ್ಲೇ ಆಯ್ಕೆಯನ್ನು ಇದು ಪಡೆದಿರಲಿದ್ದು, ಯಾವಾಗ ಲಾಂಚ್‌ ಆಗಲಿದೆ ಹಾಗೂ ಏನೆಲ್ಲಾ ಪ್ರಮುಖ ಫೀಚರ್ಸ್‌ ಇರಲಿವೆ ಎಂಬುದನ್ನು ತಿಳಿಯಲು ಕಾದು ನೋಡಬೇಕಿದೆ.

ಐಕ್ಯೂ 11, ಐಕ್ಯೂ 11 ಪ್ರೊ

ಐಕ್ಯೂ 11, ಐಕ್ಯೂ 11 ಪ್ರೊ

ಐಕ್ಯೂ 11, ಐಕ್ಯೂ 11 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆಗೂ ಮುನ್ನವೇ ಸದ್ದು ಮಾಡುತ್ತಿವೆ. ಈ ಫೋನ್‌ಗಳು ಸಹ ಹೊಸ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು, ಲೀಕ್‌ ಆದ ಮಾಹಿತಿಯಂತೆ 120Hz ರಿಫ್ರೆಶ್ ರೇಟ್‌ ಆಯ್ಕೆ ಇರುವ 6.78 ಇಂಚಿನ ಡಿಸ್‌ಪ್ಲೇ ಯನನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಜೊತೆಗೆ ಈ ಫೋನ್‌ಗಳು 8GB ಹಾಗೂ 12GB RAM ನ ಎರಡು ವೇರಿಯಂಟ್‌ನಲ್ಲಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.

ಶಿಯೋಮಿ 13

ಶಿಯೋಮಿ 13

ಶಿಯೋಮಿ 13 ಸ್ಮಾರ್ಟ್‌ಫೋನ್‌ನ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ಹೊಂದಿರಲಿದೆ ಎಂದು ತಿಳಿದುಬಂದಿದೆ. ಈ ಸ್ಮಾರ್ಟ್‌ಫೋನ್ 6.36 ಇಂಚಿನ FHD+ ಡಿಸ್‌ಪ್ಲೇ ಹೊಂದಿರಲಿದ್ದು, ಶಿಯೋಮಿ 12S ಆವೃತ್ತಿಯಲ್ಲಿ ಕಂಡುಬಂದಂತೆ ಈ ಸ್ಮಾರ್ಟ್‌ಫೋನ್‌ನ ಕ್ಯಾಮೆರಾ ರಚನೆ ಲೈಕಾ ಸಹಯೋಗದೊಂದಿಗೆ ರಚಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗೆಯೇ ನವೆಂಬರ್ ಮಧ್ಯದ ವೇಳೆಗೆ ಈ ಫೋನ್ ಲಾಂಚ್‌ ಆಗಲಿದೆ ಎಂಬ ಮಾಹಿತಿ ಲೀಕ್‌ ಆಗಿದೆ.

ಒನ್‌ಪ್ಲಸ್‌ 11

ಒನ್‌ಪ್ಲಸ್‌ 11

ಒನ್‌ಪ್ಲಸ್‌ 11 ಸ್ಮಾರ್ಟ್‌ಫೋನ್‌ನಲ್ಲೂ ಈ ಪ್ರೊಸೆಸರ್ ಕಾರ್ಯನಿರ್ವಹಿಸಲಿದ್ದು, ಈ ಫೋನ್ 6.7 ಇಂಚಿನ LTPO ಕರ್ವ್ಡ್ ಡಿಸ್‌ಪ್ಲೇ ಹೊಂದಿದ್ದು, 3126×1440 ಪಿಕ್ಸೆಲ್‌ಗ ರೆಸಲ್ಯೂಶನ್‌ ನೀಡಲಿದೆ. ಹಾಗೆಯೇ ಈ ಫೋನ್‌ 50MP ಪ್ರಮುಖ ಕ್ಯಾಮೆರಾ, 48MP ಸೆಕೆಂಡರಿ ಕ್ಯಾಮೆರಾ ಹಾಗೂ 32MP ಮೂರನೇ ಕ್ಯಾಮೆರಾ ಆಯ್ಕೆ ಪಡೆದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯಿಂದ ಪ್ಯಾಕ್‌ ಆಗಿದ್ದು, 100W ವೇಗದ ಚಾರ್ಜಿಂಗ್ ಬೆಂಬಲ ಪಡೆದಿದೆ.

ರಿಯಲ್‌ಮಿ GT 3 ಪ್ರೊ

ರಿಯಲ್‌ಮಿ GT 3 ಪ್ರೊ

ರಿಯಲ್‌ಮಿ GT 3 ಪ್ರೊ ಸ್ಮಾರ್ಟ್‌ಫೊನ್‌ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್ ನಲ್ಲಿ ಕಾರ್ಯನಿರ್ವಹಿಸಲಿದ್ದು, ಈ ಫೋನ್ 8GB ಹಾಗೂ 12GB RAM ವೇರಿಯಂಟ್‌ನಲ್ಲಿ ಲಭ್ಯವಿದೆ.

Best Mobiles in India

English summary
Snapdragon is developed by Qualcomm Technologies Inc. Now the details of the smartphone which has got Snapdragon 8 Gen 2 processor are given.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X