ಹೊಸ 'ಎಟಿಎಂ ಕಾರ್ಡ್' ಪಡೆದು ಬೆಚ್ಚಿಬಿದ್ದ ಸಾರ್ವಜನಿಕರು!..ಇದು ಭಯಾನಕ ಕೇಸ್!!

|

ನೀವು ಬಂಕ್‌ನಲ್ಲಿ ಪೆಟ್ರೋಲ್ ಹಾಕಿಸಿಕೊಂಡು ನಿಮ್ಮ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಬಿಲ್ ಪಾವತಿಗೆ ಮುಂದಾಗುತ್ತೀರಾ. ಆ ಸಮಯದಲ್ಲಿ ಒಂದು ವಿಚಿತ್ರ ನಡೆಯುತ್ತದೆ. ಅದೇನೆಂದರೆ, ನೀವು ಕಾರ್ಡ್ ನೀಡಿ ಅದರ ಪಿನ್ ಹಾಕುವ ಮುನ್ನವೇ ಆತ ನಿಮಗೆ ಹಣ ಪಾವತಿಯಾಗಿದೆ ಎಂಬ ಬಿಲ್ ನೀಡುತ್ತಾನೆ. ಇದು ಹೇಗಾಯ್ತು ಎಂದು ಆ ಸಮಯದಲ್ಲಿ ತಲೆಕೆಡುತ್ತದೆ.

ಹೌದು, ಇದು ಬಹುತೇಕರಿಗೆ ಆಶ್ಚರ್ಯವಾಗಿ ಕಂಡರೂ ಸಹ ಎಟಿಎಂ ಕಾರ್ಡ್ ಬಳಕೆದಾರರಿಗೆ ಭಯಮೂಡಿಸುವಂತಹ ವ್ಯವಸ್ಥೆಯಾಗಿದೆ. ಹಳೆಯ ಡೆಬಿಟ್​ ಮತ್ತು ಕ್ರೆಡಿಟ್​ ಕಾರ್ಡ್​ಗಳ ಬದಲಾಗಿ ಇದೀಗ ಬಂದಿರುವ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್​ಗಳು ಗೌಪ್ಯ ಪಿನ್ ಇಲ್ಲದೆ ನೇರವಾಗಿ ಹಣವನ್ನು ಪಾವತಿಗೆ ದಾರಿ ಮಾಡಿಕೊಟ್ಟಿವೆ. ಆದರೆ, ಇದು ಈಗ ಸುರಕ್ಷತೆ ಪ್ರಶ್ನೆಯನ್ನು ಹುಟ್ಟುಹಾಕಿದೆ.

ಹೊಸ 'ಎಟಿಎಂ ಕಾರ್ಡ್' ಪಡೆದು ಬೆಚ್ಚಿಬಿದ್ದ ಸಾರ್ವಜನಿಕರು!..ಇದು ಭಯಾನಕ ಕೇಸ್!!

ಈ ಹಿಂದೆ ಬಳಕೆಯಲ್ಲಿದ್ದ ಮ್ಯಾಗ್ನೆಟಿಕ್ ಸ್ಟ್ರೈಪ್ ಕಾರ್ಡ್‌ಗಿಂತ ಹೊಸ ಕಾರ್ಡ್‌ ಹೆಚ್ಚು ಸುರಕ್ಷಿತ ಎನ್ನಲಾಗಿದೆಯಾದರೂ, ಹೊಸಕಾರ್ಡ್​ನಿಂದ​ ಬಳಕೆದಾರರಿಗೆ ತಿಳಿಯದಂತೆ ಹಣ ಪಡೆಯಬಹುದು ಎಂಬ ದೂರುಗಳು ಕೇಳಿ ಬಂದಿವೆ. ಹಾಗಾದರೆ, ಏನಿದು ಭಯಾನಕ ಸುದ್ದಿ? ಪಿನ್ ಇಲ್ಲದೆ ಪಾವತಿಯಾಗುತ್ತಿರುವುದು ಹೇಗೆ? ಇದಕ್ಕೆ ಪರಿಹಾರವಿದೆಯಾ ಎಂಬುದನ್ನು ಮುಂದೆ ಓದಿ ತಿಳಿಯಿರಿ.

ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ!

ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ!

ಇತ್ತೀಚಿಗೆ ಬಹುಸುರಕ್ಷಿತ ಎಂದು ನೀಡಲಾಗಿರುವ ಹೊಸ ಚಿಪ್ ಸಹಿತ ಕಾರ್ಡ್‌ಗಳಲ್ಲಿ ಗೌಪ್ಯ ಪಿನ್ ಇಲ್ಲದೆ ಹಾಣ ಪಾವತಿ ಮಾಡಬಹುದಾಗಿದೆ. ಕಾರ್ಡ್ ಅನ್ನು ಸ್ವೈಪಿಂಗ್ ಮಷಿನ್ ಬಳಿ ಇಟ್ಟೊಡನೆಯೇ ಹಣ ಖಾತೆಯಿಂದ ಕಡಿತವಾಗುತ್ತದೆ. ಕಾರ್ಡ್‌ನಲ್ಲಿ ವೈಫೈ ಸೌಲಭ್ಯವನ್ನು ನೀಡಿರುವುದರಿಂದ ಈ ರೀತಿ ಪಾವತಿ ಸಾಧ್ಯ ಎಂದು ಬ್ಯಾಂಕ್‌ನವರು ಈ ಬಗ್ಗೆ ಮಾಹಿತಿ ನೀಡುತ್ತಾರೆ.

ಪಕ್ಕದಲ್ಲಿ ನಿಂತಿದ್ದರೂ ಹಣ ಖಾಲಿ!

ಪಕ್ಕದಲ್ಲಿ ನಿಂತಿದ್ದರೂ ಹಣ ಖಾಲಿ!

ಸ್ವೈಪ್​ ಮೆಷಿನ್​ಗಳನ್ನು ಜನರ ಜೇಬಿನ ಬಳಿ ಹಿಡಿದು​ ಸುಲಭವಾಗಿ ಹಣ ವರ್ಗಾವಣೆ ಮಾಡಿಕೊಳ್ಳಬಹುದಾಗಿದ್ದು, ಇದಕ್ಕೆ ಎಟಿಎಂ ಕಾರ್ಡ್ ಮೇಲೆ ವೈಫೈ ಮಾರ್ಕ್ ಇದ್ದರೆ ಸಾಕು. ವೈಫೈ ಸೌಲಭ್ಯದ ಸಹಾಯದಿಂದ ಸ್ವೈಪ್​ ಮೆಷಿನ್ ಮೂಲಕ ನಿಮ್ಮ ಜೇಬಿನ ಹತ್ತಿರ ಹಿಡಿದು ಹಣ ವರ್ಗಾವಣೆ ಮಾಡಿಕೊಳ್ಳಬಹುದು. ಈ ವ್ಯವಹಾರ ಕೆಲವೇ ಸೆಕೆಂಡ್‌ಗಳಲ್ಲಿ ಮುಗಿಯುತ್ತದೆ.

ವಂಚನೆಗೆ ದಾರಿ ಹೊಸ ಮಾರ್ಗ!

ವಂಚನೆಗೆ ದಾರಿ ಹೊಸ ಮಾರ್ಗ!

ಎಟಿಎಂ ಕಾರ್ಡ್ ​ಮೂಲಕ ಪಾಸ್​ವರ್ಡ್​ ನಮೂದಿಸದೇ ಹಣ ಪಾವತಿಸುವ ಸೌಲಭ್ಯದಿಂದ ಗ್ರಾಹಕರು ಹಣ ಪಾವತಿ ಮಾಡುವುದು ಈಗ ಸುಲಭವಾಗಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲ ವಂಚಕರು, ವೈಫೈ ಸೌಲಭ್ಯದ ಸ್ವೈಪ್​ ಮೆಷಿನ್​ಗಳನ್ನು ಜನರ ಜೇಬಿನ ಬಳಿ ಹಿಡಿದು​ ಸುಲಭವಾಗಿ ಹಣ ದೋಚುವ ಉಪಾಯವನ್ನು ಕಂಡುಕೊಂಡಿದ್ದಾರೆ.

ಈ ಸೇವೆ ಬೇಡ ಎನ್ನುತ್ತಿದ್ದಾರೆ ಗ್ರಾಹಕರು!

ಈ ಸೇವೆ ಬೇಡ ಎನ್ನುತ್ತಿದ್ದಾರೆ ಗ್ರಾಹಕರು!

ಇನ್ನು ಸ್ವೈಪ್​ ಮೆಷಿನ್ ವೈಫೈ ಸೌಲಭ್ಯದ ಮೂಲಕ ಹಣ ವರ್ಗಾವಣೆ ಮಾಡುತ್ತಿರುವುದು ಸಾರ್ವಜನಿಕರಿಗೆ ಗೊಂದಲ ಮೂಡಿಸಿದೆ. ನಾವು ಪಿನ್ ಅನ್ನು ನಮೂದಿಸದೇ ಇದ್ದರೂ ಹಣ ವರ್ಗಾವಣೆ ಆಗಿದ್ದೇಗೆ ಎಂದು ಜನರು ಅಂದುಕೊಳ್ಳುತ್ತಿದ್ದಾರೆ. ನಮಗೆ ಎಷ್ಟೇ ಕಷ್ಟವಾದರೂ ಸರಿ ನಾವು ಪಿನ್ ನಮೂದಿಸಿದಾಗ ಮಾತ್ರ ಹಣ ವರ್ಗಾವಣೆಯಾಗಲಿ ಎಂದು ಹೇಳುತ್ತಿದ್ದಾರೆ.

ಮಾಹಿತಿ ತಿಳಿಯದೇ ಪರದಾಟ

ಮಾಹಿತಿ ತಿಳಿಯದೇ ಪರದಾಟ

ಒಂದು ವೇಳೆ ಈ ವೈಫೈ ಸೇವೆ ಬೇಡ ಎಂದಾದಲ್ಲಿ ಅದನ್ನು ಬ್ಲಾಕ್ ಮಾಡುವ ಆಯ್ಕೆಯನ್ನು ಬ್ಯಾಂಕ್‌ಗಳು ಆನ್‌ಲೈನಿನಲ್ಲಿ ಒದಗಿಸಿವೆ. ಆದರೆ. ಈ ಬಗ್ಗೆ ಸರಿಯಾದ ಮಾಹಿತಿ ತಿಳಿಯದ ಸಾರ್ವಜನಿಕರು ಅವರಿಗೆ ತಿಳಿಯದಂತೆ ಇದನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಬ್ಯಾಂಕ್‌ನವರು ಈ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡದಿರುವುದಕ್ಕೆ ಗ್ರಾಹಕರು ಸಿಟ್ಟಾಗಿದ್ದಾರೆ.

ಹಲವರು ಪೌಚ್ ಮೊರೆ!

ಹಲವರು ಪೌಚ್ ಮೊರೆ!

ಇಂತಹ ಸಮಸ್ಯೆಯನ್ನು ಅರಿತಿರುವ ಹಲವು ಇತ್ತೀಚಿಗೆ ಬಂದಿರುವ ಆಂಟಿ ಸ್ಕ್ಯಾನ್​ ಕಾರ್ಡ್​ ಪೌಚ್ಗೆ ಮೊರೆಹೋಗಿದ್ದಾರೆ. ಈ ಆಂಟಿ ಸ್ಕ್ಯಾನ್​ ಪೌಚ್ ಒಳಗೆ ಎಟಿಎಂ ಕಾರ್ಡ್ ಅನ್ನು ಹಾಕಿದರೆ ಅದು ಸ್ವಲ್ಪ ಸುರಕ್ಷತೆಯನ್ನು ಕಾಪಾಡುತ್ತದೆ. ಇದರಿಂದ ನಿಮಗೆ ತಿಳಿಯದಂತೆ ಸ್ಕ್ಯಾನ್​ ಮಾಡಿ ಹಣ ದೋಚುವುದನ್ನು ತಡೆಗಟ್ಟ ಆದರೆ, ಇದಕ್ಕೆ 100 ರೂ. ವೆಚ್ಚ ಮಾಡಬೇಕು.

'ಗೂಗಲ್' ಎಂದರೆ ಏನರ್ಥ?..ತಿಳಿದರೆ ಖಂಡಿತಾ ಶಾಕ್ ಆಗ್ತೀರಾ!!

'ಗೂಗಲ್' ಎಂದರೆ ಏನರ್ಥ?..ತಿಳಿದರೆ ಖಂಡಿತಾ ಶಾಕ್ ಆಗ್ತೀರಾ!!

ಬೇಕಾದ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಹುಡುಕಿಕೊಡುವ ವ್ಯವಸ್ಥೆಯಾಗಿ, ಇಂಟರ್ನೆಟ್ ಬಳಸುವವರಿಗೆಲ್ಲ ತುಂಬ ಪರಿಚಿತವಾದ ಹೆಸರೆಂದರೆ ಅದು 'ಗೂಗಲ್''ಮಾತ್ರ.! ವಿಶ್ವದಲ್ಲಿ ಇಂಟರ್‌ನೆಟ್ ಬಳಸುವ ಪ್ರತಿಯೋರ್ವನು ಗೂಗಲ್ ಎಂಬ ಪದವನ್ನು ಟೈಪಿಸಿರುತ್ತಾನೆ ಎಂದರೆ ಗೂಗಲ್ ಎಂಬ ಪದ ಎಷ್ಟು ಬೃಹದಾಕಾರವಾಗಿ ಬೆಳೆದಿದೆ ಎಂಬುದನ್ನು ನಾವು ನೋಡಬಹುದು.!!

ವಿಶ್ವದಲ್ಲೇ ಅತ್ಯಂತ ಹೆಚ್ಚು ಹೆಸರುವಾಸಿಯಾದ ಸರ್ಚ್ ಎಂಜಿನ್ ಗೂಗಲ್ ಇಂದು ಇಂಟರ್‌ನೆಟ್ ಎಂಬ ಅಪಾರವಾದ ಮಾಹಿತಿ ರಾಶಿಕಣಜವನ್ನು ಹೊಂದಿದೆ.! ಸಾಮಾನ್ಯರಿಗೆ ಭವಿಷ್ಯವನ್ನು ತೋರಿಸುವ ಈ ಬೃಹತ್ ಕಂಪೆನಿ ಮುಂದಿನ ಹತ್ತಿಪ್ಪತ್ತು ವರ್ಷಗಳಲ್ಲಿ ವಿಶ್ವದ ಅಸಮಾನ್ಯ ಸಾಮ್ರಾಟ ಕಂಪೆನಿ ಆಗಲಿದೆ. ಅಂತಹ ಕಂಪೆನಿ ಪ್ರಪಂಚದಲ್ಲಿ ಮತ್ತೊಂದಿರುವುದಿಲ್ಲ ಎಂದು ವಿಶ್ವದ ತಜ್ಞರೆಲ್ಲರೂ ಲೆಕ್ಕಾಚಾರ ಹಾಕಿದ್ದಾರೆ.!!

ಯಾವುದೋ ಲೋಕದವರ ಹೆಸರಿನಂತೆ ಕಾಣುವ ಈ ಗೂಗಲ್ ಕಂಪೆನಿ ಇಂದು ವಿಶ್ವದ ಇಂಟರ್‌ನೆಟ್ ಪ್ರಪಂಚವನ್ನು ಆಳುತ್ತಿದೆ.! ಹಾಗಾದರೆ, ಗೂಗಲ್' ಎಂದರೇನು? ಗೂಗಲ್ ಎಂಬ ಹೆಸರು ಕಂಪೆನಿ ಗೆ ಹೇಗೆ ಸಿಕ್ಕಿತು? ಗೂಗಲ್‌ ಪದದ ಸೃಷ್ಟಿಕರ್ತ ಯಾರು? ಗೂಗಲ್ ಪದಕ್ಕೆ ನಿಜವಾದ ಅರ್ಥವೇನು? ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

 ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ಸಿಂಪಲ್ ಪ್ರಶ್ನೆ ಗೂಗಲ್ ಎಂದರೆನು?

ನಿಮಗೆ ಅಕ್ಷಯಪಾತ್ರಯಲ್ಲಿ ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.!!

ಸಿಂಪಲ್ ಆಗಿ ಗೂಗಲ್ ಎಂದರೆನು?

ಸಿಂಪಲ್ ಆಗಿ ಗೂಗಲ್ ಎಂದರೆನು?

ಮೇಲಿನದು ನಿಮಗೆ ಅರ್ಥವಾಗದಿದ್ದರೆ ಈಗ ನೇರ ವಿಷಯಕ್ಕೆ ಬರೋಣ.!! `1' ರ ನಂತರ `00' ಬರೆದರೆ ನೂರು ಅಲ್ಲವೇ? ಅದೇ ಒಂದರ ಮುಂದೆ `000' ಬರೆದರೆ ಸಾವಿರ ಇನ್ನು ಮುಂದೆ ಹೋಗಿ `0000000' ಬರೆದರೆ ಅದು ಒಂದು ಕೋಟಿ. ಹೀಗೆ `1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಯಾವ ಸಂಖ್ಯೆ ಸಿಗುತ್ತದೆ? ಇಷ್ಟು ದೊಡ್ಡ ಸಂಖ್ಯೆಗೆ ಹೆಸರಿದೆಯೆ ಎನ್ನುತ್ತೀರಾ? ಇದೆ. ಅದೇ `ಗೂಗಲ್'!!

ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

ಗೂಗಲ್ ಎಂಬ ಪದ ಹುಟ್ಟಿದ್ದು ಹೇಗೆ?

1920ರಲ್ಲಿ ಅಸಾಮಾನ್ಯ ಸಂಖ್ಯೆಯ ಬಗ್ಗೆ ಯೋಚಿಸುತ್ತಿದ್ದ ಅಮೆರಿಕದ ಗಣಿತಜ್ಞ ಎಡ್ವರ್ಡ್ ಕಸ್ನರ್ ಎಂಬ ಅದಕ್ಕೆ ಏನು ಹೆಸರಿಟ್ಟರೆ ಚೆಂದ ಎಂದು ತನ್ನ 9 ವರ್ಷದ ಸೋದರ ಸಂಬಂಧಿಯ ಮಗ ಮಿಲ್ಟನ್ ಸಿರೋಟಾಗೆ ಕೇಳಿದನಂತೆ. ಆ ಹುಡುಗ ಚೇಷ್ಟೆ ಮಾಡುತ್ತ ತನ್ನ ಬಾಯಿಗೆ ತೋಚಿದನ್ನು ಹೇಳಿದ ಹೆಸರು `ಗೂಗಲ್'!!

ಬಾಲಕನ ತೊದಲು ನುಡಿ!!

ಬಾಲಕನ ತೊದಲು ನುಡಿ!!

ಮಿಲ್ಟನ್ ಸಿರೋಟಾ ಹೇಳಿದ ತೊದಲು ನುಡಿಯನ್ನು ಎಡ್ವರ್ಡ್ ಕಸ್ನರ್ ದೊಡ್ಡ ಸಂಖ್ಯೆಗೆ ಹೆಸರಾಗಿ ಇಟ್ಟ.! ತಾನು ಬರೆದ ಪುಸ್ತಕ ಮ್ಯಾಥಮ್ಯಾಟಿಕ್ಸ್ ಅಂಡ್ ದಿ ಇಮ್ಯಾಜಿನೇಷನ್' ಮೂಲಕ ಈ ಹೆಸರಿಗೆ ಬಹಳ ಪ್ರಚಾರ ಕೊಟ್ಟ. ನಂತ ಗೂಗಲ್ ಸಂಸ್ಥೆ ಹುಟ್ಟಿ ಅದರ ಕೀರ್ತಿ ಬೆಳೆದಂತೆಲ್ಲಾ `ಗೂಗಲ್' ಎಂಬ ಹೆಸರು ವಿಶ್ವದಲ್ಲಿ ಮನೆಮಾತಾಗಿ ಬಹಳ ಪ್ರಸಿದ್ಧಿ ಪಡೆದಿದೆ. ಇಡೀ ಜಗತ್ತು 9 ವರ್ಷದ ಬಾಲಕನ ತೊದಲು ನುಡಿಯನ್ನು ಈಗ ಒಪ್ಪಿಕೊಂಡುಬಿಟ್ಟಿದೆ!

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

ಗೂಗಲ್ ಕಂಪೆನಿಗೆ ಈ ಹೆಸರು ಬರಲು ಕಾರಣ?

`1' ರ ನಂತರ ಸೊನ್ನೆಗಳನ್ನು ಹಾಕುತ್ತಲೇ ಹೋದರೆ ಸಿಗುವ ಪದಗಳಿಗೆ `ಗೂಗಲ್' ಎನ್ನುತ್ತಾರೆ. ಹಾಗಾಗಿ, ' ಬಹಳ ಬಹಳ ಸಂಖ್ಯೆಯಷ್ಟು ವೆಬ್‌ಸೈಟುಗಳನ್ನು ನಮ್ಮ ಸರ್ಚ್ ಎಂಜಿನ್ ಹುಡುಕಿ ದಾಖಲಿಸಿ ಇಟ್ಟುಕೊಂಡಿದೆ' ಎಂದು ಹೇಳಿಕೊಳ್ಳುವ ಸಲುವಾಗಿ ಗೂಗಲ್ ಸಂಸ್ಥೆಯು `ಗೂಗಲ್' ಎಂಬ ದೊಡ್ಡ ಸಂಖ್ಯೆಯ ಹೆಸರನ್ನು ತನಗೆ ಇಟ್ಟುಕೊಂಡಿದೆ ಅಷ್ಟೆ.!!

ಗೂಗಲ್ ಪ್ಲಸ್ ಎಂದರೆ?

ಗೂಗಲ್ ಪ್ಲಸ್ ಎಂದರೆ?

ಎಂದಿಗೂ ಮುಗಿಯದೇ ಇರುವ ಇಂಕನ್ನು ಕೊಟ್ಟು, ಅಪರಿಮಿತ ಶಕ್ತಿ, ಆಯುಷ್ಯಗಳೆಲ್ಲವನ್ನು ವರವನ್ನು ನೀಡಿ ಸಾಮಾನ್ಯ ಸಂಖ್ಯೆ 1ರ ಮುಂದೆ ಎಷ್ಟು ಸೊನ್ನೆಯಗಳನ್ನು ಬರೆಯುತ್ತಿದ್ದರೆ, ಅಂದರೆ ನಮ್ಮ ಬ್ರಹ್ಮಾಂಡ ಹುಟ್ಟಿ ಸಾಯುವವರೆಗೂ ಬರೆದರೂ ಅದಕ್ಕಿಂತಲೂ ಹೆಚ್ಚು ಪಟ್ಟನ್ನು ಗೂಗಲ್ ಎನ್ನುತ್ತಾರೆ.! ಅಂದರೆ ಗೂಗಲ್‌ಗಿಂತಲೂ ಹೆಚ್ಚು ಗೂಗಲ್‌ ಪ್ಲಸ್ ಹೆಸರಿನ ಮೌಲ್ಯ.!!

ಇದು ನಿಮಗೆ ಗೊತ್ತಿರಲಿ.!!

ಇದು ನಿಮಗೆ ಗೊತ್ತಿರಲಿ.!!

ಭಾರತೀಯರು ಗಣಿತದ ಜನಕರು.! ಶೂನ್ಯ ಪರಿಕಲ್ಪನೆಯನ್ನು ಸೃಷ್ಟಿಸಿದವರೂ ಭಾರತೀಯರೇ.! ಜಗತ್ತಿಗೆ ಬೃಹತ್ ಸಂಖ್ಯೆಗಳನ್ನು ಪರಿಚಯಿಸಿದರು ಸಹ ಭಾರತೀಯರೇ! ಏಕ, ದಶ, ಶತ, ಸಹಸ್ರ, ಲಕ್ಷ, ಕೋಟಿ, ನೀಲ, ಪದ್ಮಾ, ಶಂಖ, ಮಹಾಶಂಖ ಹೀಗೆ ಭಾರಿ ಹೆಸರನ್ನು ನೀಡಿದವರು ಭಾರತೀಯರು.! ಸೊನ್ನೆಯನ್ನು ನೀಡಿ ಗೂಗಲ್ ಅನ್ನು ಮೀರಿಸಿದವರು ನಮ್ಮ ಪೂರ್ವಜರು!!

Best Mobiles in India

English summary
Using a tap-and-pay bank card is great – you place it on a payment terminal and can cover a bill without putting in a PIN or swiping it through.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X