ಹೊಸ ರೂಪದಲ್ಲಿ PUBG ಗೇಮ್‌ ಮತ್ತೆ ಎಂಟ್ರಿ!..ಡೌನ್‌ಲೋಡ್‌ ಮಾಡುವುದು ಹೇಗೆ?

|

ಗೇಮ್‌ ಪ್ರಿಯರ ಆಲ್‌ ಟೈಮ್ ಫೇವರೇಟ್ ಗೇಮ್ ಎನಿಸಿಕೊಂಡಿರುವ ಪಬ್‌ಜಿ ಹೊಸ ಆವೃತ್ತಿಯಲ್ಲಿ ಮತ್ತೆ ಎಂಟ್ರಿ ಪಡೆದಿದೆ. ಪಬ್‌ಜಿ ನ್ಯೂ ಸ್ಟೇಟ್ (PUBG New State) ಗೇಮ್ ಪ್ರಪಂಚದಾದ್ಯಂತ ಎಲ್ಲರಿಗೂ ಬಿಡುಗಡೆ ಮಾಡಲಾಗಿದೆ. ಈ ಗೇಮ್‌ ಅನ್ನು ಕ್ರಾಫ್ಟನ್ ಅಭಿವೃದ್ಧಿಪಡಿಸಿದೆ. ಇದು ಪಬ್‌ಜಿ ಮೊಬೈಲ್ ಗೇಮ್‌ನ ಫ್ಯೂಚರಿಸ್ಟಿಕ್ ಆವೃತ್ತಿ ಆಗಿದ್ದು, ಇದೀಗ ಆಂಡ್ರಾಯ್ಡ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಲಭ್ಯವಿದೆ.

ಹೊಸ ರೂಪದಲ್ಲಿ PUBG ಗೇಮ್‌ ಮತ್ತೆ ಎಂಟ್ರಿ!..ಡೌನ್‌ಲೋಡ್‌ ಮಾಡುವುದು ಹೇಗೆ?

ಹೊಸ ಪಬ್‌ಜಿ ನ್ಯೂ ಸ್ಟೇಟ್ (PUBG New State) ಗೇಮ್ ಅನ್ನು ಆಂಡ್ರಾಯ್ಡ್‌ ಬಳಕೆದಾರರು ಗೂಗಲ್‌ ಪ್ಲೇ ಸ್ಟೋರ್‌ ಮೂಲಕ ಇನ್‌ಸ್ಟಾಲ್‌ ಮಾಡಬಹುದಾಗಿದೆ. ಇನ್ನು ಐಒಎಸ್ ಬಳಕೆದಾರರು ತಮ್ಮ ಐಫೋನ್‌ನಲ್ಲಿ ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಅನ್ನು ಡೌನ್‌ಲೋಡ್ ಮಾಡಬೇಕಿದ್ದರೇ, ಸ್ವಲ್ಪ ಸಮಯದವರೆಗೆ ಕಾಯಬೇಕಾಗುತ್ತದೆ. ಸದ್ಯ ಆಪಲ್‌ ಅಪ್ಲಿಕೇಶನ್ ಸ್ಟೋರ್ ಇನ್ನೂ ಪ್ರೀ- ರಿಜಿಸ್ಟ್ರೇಶನ್ ಪೇಜ್‌ ಅನ್ನು ತೋರಿಸುತ್ತದೆ. ಹಾಗಾದರೇ ಹೊಸ ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಡೌನ್‌ಲೋಡ್ ಮಾಡುವುದು ಹೇಗೆ ಎನ್ನುವ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಹಂತ ಹಂತದ ಬಿಡುಗಡೆಯಾಗಲಿದೆ ಎಂಬುದನ್ನು ಗೇಮ್ ಪ್ರಿಯರು ಗಮನಿಸಬೇಕು. ಅಲ್ಲದೇ ಈ ಗೇಮ್‌ ಅನ್ನು ಸದ್ಯ ಪ್ರತಿಯೊಬ್ಬರೂ ಇನ್‌ಸ್ಟಾಲ್‌ ಮಾಡಿಕೊಳ್ಳಲು ಸಾಧ್ಯ ಆಗದಿರಬಹುದು. ಇನ್ನು ಕೆಲವು ಬಳಕೆದಾರರು ಹೊಸ ಅಪ್‌ಡೇಟ್‌ ಸ್ವೀಕರಿಸಿರಬಹುದು. ಮತ್ತೆ ಕೆಲವರು ಈ ಗೇಮ್‌ಗಾಗಿ ಇನ್ನಷ್ಟು ಸಮಯ ಕಾಯಬೇಕಾಗಬಹುದು. ಅಂ್ಹಾಗೇ ಈ ಗೇಮ್‌ ಅನ್ನು ಪಬ್‌ಜಿ ಸ್ಟುಡಿಯೋಸ್‌ನಿಂದ ಅಭಿವೃದ್ಧಿಪಡಿಸಲಾಗಿದೆ. ಹೊಸ ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಓರಿಜಿನಲ್‌ ಪಬ್‌ಜಿ (PUBG) ಗೇಮ್‌ನ ವಿಸ್ತರಣೆಯ ಭಾಗವಾಗಿದೆ ಎನ್ನಲಾಗಿದೆ. ಈ ಗೇಮ್‌ ಅವಾಸ್ತವಿಕ ಗ್ರಾಫಿಕ್ಸ್, ಸುಧಾರಿತ ಕಾರ್ಯಕ್ಷಮತೆ ಮತ್ತು ಆಪ್ಟಿಮೈಸೇಶನ್‌ಗಳು, ಅಪ್‌ಡೇಟ್‌ ಆಗಿರುವ ಪಬ್‌ಜಿ ಗನ್‌ಪ್ಲೇ, ವಿಶಿಷ್ಠ ಶಸ್ತ್ರಾಸ್ತ್ರಗಳು ಸೇರಿದಂತೆ ಹೊಸ ಬಗೆಯ ವಾಹನಗಳು ಹಾಗೂ ಇತರೆ ಕೆಲವು ನೂತನ ಅಪ್‌ಡೇಟ್‌ ಹೊಂದಿರಲಿದೆ.

ಹೊಸ ರೂಪದಲ್ಲಿ PUBG ಗೇಮ್‌ ಮತ್ತೆ ಎಂಟ್ರಿ!..ಡೌನ್‌ಲೋಡ್‌ ಮಾಡುವುದು ಹೇಗೆ?

ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಡೌನ್‌ಲೋಡ್ ಮಾಡಲು ಹೀಗೆ ಮಾಡಿ:
ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಅನ್ನು ಡೌನ್‌ಲೋಡ್ ಮಾಡಲು, ಆಂಡ್ರಾಯ್ಡ್ ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ಗೆ ಭೇಟಿ ನೀಡಿರಿ.

ಹಂತ 1: ಗೂಗಲ್ ಪ್ಲೇ ಸ್ಟೋರ್ ತೆರೆಯಿರಿ
ಹಂತ 2: ಇನ್‌ಸ್ಟಾಲ್‌ ಆಯ್ಕೆಯನ್ನು ಒತ್ತಿರಿ
ಹಂತ 3: ನಿಮ್ಮ ರುಜುವಾತುಗಳೊಂದಿಗೆ ಸೈನ್ ಅಪ್ ಮಾಡಿ ಮತ್ತು ಗೇಮ್‌ ಅನ್ನು ಆಡಲು ಪ್ರಾರಂಭಿಸಿ.

ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಡೌನ್‌ಲೋಡ್ ಮಾಡುವ ಮುನ್ನ ಈ ಅಂಶಗಳನ್ನು ತಿಳಿಯಿರಿ:
* ನಿಮ್ಮ ಫೋನ್ ಸ್ಥಿರ ವೈಫೈ ಸಂಪರ್ಕಕ್ಕೆ ಸಂಪರ್ಕಿಸಿ. ಗೇಮ್‌ನ 1.4GB ಗಾತ್ರ ಹೊಂದಿದೆ.
* ಈ ಗೇಮ್ ಭಾರೀ ಗಾತ್ರದೊಂದಿಗೆ ಬರುವುದರಿಂದ ನಿಮ್ಮ ಫೋನ್‌ನಲ್ಲಿ ಅಗತ್ಯ ಸ್ಟೋರೇಜ್‌ ಇರಲಿ.
* ಇನ್‌ಸ್ಟಾಲ್ ಮಾಡುವ ಸಂದರ್ಭದಲ್ಲಿ ನಿಮ್ಮ ಫೋನ್ ಅನ್ನು ಚಾರ್ಜರ್‌ಗೆ ಪ್ಲಗ್ ಇನ್ ಮಾಡಿ.
* ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ ಸದ್ಯ ಡೌನ್‌ಲೋಡ್‌ಗೆ ಲಭ್ಯವಿದೆ.

ಹೊಸ ರೂಪದಲ್ಲಿ PUBG ಗೇಮ್‌ ಮತ್ತೆ ಎಂಟ್ರಿ!..ಡೌನ್‌ಲೋಡ್‌ ಮಾಡುವುದು ಹೇಗೆ?

* RAM: 2GB ಅಥವಾ ಅದಕ್ಕಿಂತ ಹೆಚ್ಚಿನ RAM
* OS: Android 6.0 ಅಥವಾ ಅದಕ್ಕಿಂತ ಹೆಚ್ಚಿನ ಓಎಸ್‌ ಸಪೋರ್ಟ್‌
* GL 3.1 ಅಥವಾ ಅದಕ್ಕೂ ಅಧಿಕ / Vulkan 1.1 ಅಥವಾ ಅದಕ್ಕಿಂತ ಹೆಚ್ಚಿನ
* CPU: 64-ಬಿಟ್ (ABI arm64 ಅಥವಾ ಅದಕ್ಕಿಂತ ಹೆಚ್ಚಿನ)

ಬ್ಯಾಟಲ್ ರಾಯಲ್ ಗೇಮ್ 'ಪಬ್‌ಜಿ ನ್ಯೂ ಸ್ಟೇಟ್' ಗೇಮ್‌ ಅಂತಿಮವಾಗಿ ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ, ಈ ನೂತನ ಪಬ್‌ಜಿ ನ್ಯೂ ಸ್ಟೇಟ್ ಗೇಮ್‌ 2051 ರ ಯುದ್ಧವನ್ನು ಆಧರಿಸಿದೆ. ಇದು ಸುಧಾರಿತ ಗ್ರಾಫಿಕ್ಸ್ ಮತ್ತು ಗನ್‌ಪ್ಲೇ, ಹೊಸ ನಕ್ಷೆ ವೈಶಿಷ್ಟ್ಯಗಳು, ಹಿಂತಿರುಗಿಸುವ ಗೇಮ್‌ನ ವಿಧಾನಗಳು, ಅನನ್ಯ ಆಟದ ಯಂತ್ರಗಳು ಮತ್ತು ಹಲವಾರು ಇತರ ನವೀಕರಣಗಳನ್ನು ಹೊಂದಿದೆ. ಆಂಡ್ರಾಯ್ಡ್ ಬಳಕೆದಾರರಿಗೆ ಡೌನ್‌ಲೋಡ್ ಮಾಡಲು ಆಟವನ್ನು ಲಭ್ಯಗೊಳಿಸಲಾಗಿದೆ.

Best Mobiles in India

English summary
PUBG New State is releasing on Android and iOS platforms today. Game will be free to download and play for everyone.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X