ಪುಲ್ವಾಮಾ ಅಟ್ಯಾಕ್ ನ ಎಫೆಕ್ಟ್ – ಪಾಕಿಸ್ತಾನಿ ವೆಬ್ ಸೈಟ್ ಗಳು ಹ್ಯಾಕ್

By Gizbot Bureau
|

ಪುಲ್ವಾಮದಲ್ಲಿ ದಾಳಿ ನಡೆದ ಮರುಕ್ಷಣವೇ ಪಾಕಿಸ್ತಾನದ ಹಲವು ವೆಬ್ ಸೈಟ್ ಗಳನ್ನು ಭಾರತೀಯ ಹ್ಯಾಕರ್ ಗಳಿಂದ ಹ್ಯಾಕ್ ಮಾಡಿಸಲಾಗಿದೆ.

ಟೈಮ್ಸ್ ನೌ ನ ವರದಿಯು ತಿಳಿಸುವಂತೆ ಭಾರತೀಯ ಹ್ಯಾಕರ್ ಗಳ ತಂಡ- ಟೀಮ್ ಐ ಕ್ರ್ಯೂ ಈ ಕೆಳಗೆ ಪಟ್ಟಿ ಮಾಡಿರುವ ವೆಬ್ ಸೈಟ್ ಗಳನ್ನು ಹ್ಯಾಕ್ ಮಾಡಿದೆ ಮತ್ತು ಆ ಪಟ್ಟಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ. ಭಾರತೀಯ ಹ್ಯಾಕರ್ ಗಳು ಪಾಕಿಸ್ತಾನದ ಮೇಲೆ ನಡೆಸಿರುವ ಅತೀ ದೊಡ್ಡ ಸೈಬರ್ ಅಟ್ಯಾಕ್ ಇದಾಗಿದೆ ಎಂದು ಅವರು ತಿಳಿಸಿದ್ದಾರೆ.

ಪುಲ್ವಾಮಾ ಅಟ್ಯಾಕ್ ನ ಎಫೆಕ್ಟ್ – ಪಾಕಿಸ್ತಾನಿ ವೆಬ್ ಸೈಟ್ ಗಳು ಹ್ಯಾಕ್

ಹ್ಯಾಕಿಂಗ್ ನ ನಂತ್ರ ಅಟ್ಯಾಕ್ ಮಾಡಿದವರು ಮೆಸೇಜ್ ಕೂಡ ನೀಡಿದ್ದಾರೆ. “ ನಾವು ಎಂದಿಗೂ #14/02/2019 ನ್ನು ಮರೆಯುವುದಿಲ್ಲ ಎಂದು ತಿಳಿಸಿದ್ದಾರೆ.ಸೈಬರ್ ಅಟ್ಯಾಕ್ ನ್ನು ಪುಲ್ವಾಮ ಅಟ್ಯಾಕ್ ನಲ್ಲಿ ಮೃತಪಟ್ಟ ಯೋಧರಿಗೆ ಅರ್ಪಿಸಲಾಗಿದೆ.

ಫೆಬ್ರವರಿ 14 ರಂದು ಪುಲ್ವಾಮದಲ್ಲಿ CRPF ಹೊತ್ತೊಯ್ಯುತ್ತಿದ್ದ ಸೈನಿಕರ ತುಕಡಿಯ ಮೇಲೆ ಬಾಂಬ್ ಸ್ಪೋಟಿಸಿ ದಾಳಿ ನಡೆಸಲಾಗಿತ್ತು. ಈ ದಾಳಿಯಲ್ಲಿ 40 ಮಂದಿ ಭಾರತೀಯ ಯೋಧರು ಮೃತಪಟ್ಟಿದ್ದರು. ಜೈಷ್-ಇ-ಮೊಹಮ್ಮದ್ ಎಂಬ ಪಾಕಿಸ್ತಾನಿ ಮೂಲದ ಟೆರರ್ ತಂಡವು ಈ ಕೃತ್ಯವನ್ನು ಎಸಗಿತ್ತು.

ಹ್ಯಾಕ್ ಮಾಡಲಾಗಿರುವ ಪಾಕಿಸ್ತಾನದ ವೆಬ್ ಸೈಟ್ ಗಳ ಪಟ್ಟಿ :

https://sindhforests.gov.pk/op.html

https://mail.sindhforests.gov.pk/op.html

https://pkha.gov.pk/op.html

https://ebidding.pkha.gov.pk/op.html

https://mail.pkha.gov.pk/op.html

http://kda.gkp.pk/op.html

http://blog.kda.gkp.pk/op.html

http://mail.kda.gkp.pk/op.html

https://kpsports.gov.pk/op.html

https://mail.kpsports.gov.pk/op.html

http://seismic.pmd.gov.pk/op.html

http://namc.pmd.gov.pk/op.html

http://rmcpunjab.pmd.gov.pk/FlightsChartFolder/op.html

http://ffd.pmd.gov.pk/modis/op.html

http://radar.pmd.gov.pk/islamabad/op.html

https://badin.opf.edu.pk/14-02-2019.php

ಪಾಕಿಸ್ತಾನದ ಸುದ್ದಿ ಪತ್ರಿಕೆಯೊಂದರ ವರದಿಯ ಪ್ರಕಾರ ಪಾಕಿಸ್ತಾನದ ಫಾರಿನ್ ಮಿನಿಸ್ಟ್ರಿ ಮತ್ತು ಆರ್ಮಿಯ ವೆಬ್ ಸೈಟ್ ಗಳನ್ನೂ ಕೂಡ ಹ್ಯಾಕ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಫಾರಿನ್ ಮಿನಿಸ್ಟ್ರಿ ವೆಬ್ ಸೈಟ್ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಹೇಳಲಾಗುತ್ತಿದೆ. ಆಸ್ಟ್ರೇಲಿಯಾ, ನೆದರ್ ಲ್ಯಾಂಡ್, ಸೌದಿ ಅರೇಬಿಯಾ ಮತ್ತು ಬ್ರಿಟನ್ ಬಳಕೆದಾರರು ವೆಬ್ ಸೈಟ್ ನ್ನು ಆಕ್ಸಿಸ್ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಲಾಗಿದೆ.

Best Mobiles in India

Read more about:
English summary
Pulwama attack: Pakistani websites hacked, here's the list

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X