ಗೂಗಲ್ ಟ್ರೆಂಡ್ಸ್ ರಿಪೋರ್ಟ್: ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ರಾಹುಲ್ ಗಾಂಧಿ!!

|

ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಸಹ ಮೀರಿಸಿ ಈ ಬಾರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ರಾಹುಲ್‌ಗಾಂಧಿ ಜನಪ್ರಿಯ ಆನ್‌ಲೈನ್ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. ಕಳೆದ ವರ್ಷ ಆನ್‌ಲೈನ್ ಹುಡುಕಾಟದಲ್ಲಿ ರಾಹುಲ್‌ ಗಾಂಧಿ ಅತಿ ಹೆಚ್ಚು ಸರ್ಚ್ ಆಗಿರುವ ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ ಎಂದು ಇತ್ತೀಚಿನ ಗೂಗಲ್‌ ಟ್ರೆಂಡ್ಸ್ ರಿಪೋರ್ಟ್ ತಿಳಿಸಿದೆ.

ಹೌದು, ಭಾರತೀಯರು ಗೂಗಲ್‌ನಲ್ಲಿ ನಡೆಸಿರುವ ಹುಡುಕಾಟವನ್ನು ಆಧರಿಸಿ ಮಾಹಿತಿಯನ್ನು ನೀಡಲಾಗಿದೆ ಎಂದು ಗೂಗಲ್ ಸಂಸ್ಥೆ ಸ್ಪಷ್ಡಪಡಿಸಿದ್ದು, ವಿಶ್ವದಾದ್ಯಂತ ಇರುವ ಭಾರತೀಯರಲ್ಲಿ 100 ಜನರ ಪೈಕಿ 45 ಜನ ಗೂಗಲ್‌ನಲ್ಲಿ ರಾಹುಲ್ ಗಾಂಧಿಯನ್ನು ಹುಡುಕಿದರೆ, 34 ಜನ ಪ್ರಧಾನಿ ನರೇಂದ್ರ ಮೋದಿ ಕುರಿತ ಮಾಹಿತಿಯನ್ನು ಹುಡುಕಿದ್ದಾರೆ ಎಂಬ ರಿಪೋರ್ಟ್ ಅನ್ನು ನೀಡಿದೆ.

ಗೂಗಲ್ ಟ್ರೆಂಡ್ಸ್ ರಿಪೋರ್ಟ್: ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ರಾಹುಲ್ ಗಾಂಧಿ!!

ಕಳೆದ ಒಂದು ವರ್ಷದಲ್ಲಿ ಭಾರತೀಯರು ಯಾವ ನಾಯಕನನ್ನು ಹೆಚ್ಚು ಹುಡುಕಿದರು ಎಂಬ ಕುರಿತು ಇಂಟರೆಸ್ಟಿಂಗ್ ಮಾಹಿತಿಯನ್ನು ಪ್ರತಿವರ್ಷದಂತೆ ಈ ವರ್ಷವೂ ಗೂಗಲ್ ಬಿಡುಗಡೆ ಮಾಡಿದೆ. ಅದರಲ್ಲಿ ಗೂಗಲ್ ಟ್ರೆಂಡ್ಸ್ ಪ್ರಕಾರ, 0-100 ರ ಪ್ರಮಾಣದಲ್ಲಿ, ರಾಹುಲ್ ಗಾಂಧಿ 45 ಅಂಕ ಗಳಿಸಿದರೆ, ಪ್ರಧಾನಿ ಮೋದಿ ಅವರು ಈ ಬಾರಿ ಕೇವಲ 35 ಅಂಕಗಳನ್ನು ಪಡೆದಿದ್ದಾರೆ.

ಗೂಗಲ್ ಟ್ರೆಂಡ್ಸ್ ರಿಪೋರ್ಟ್: ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ರಾಹುಲ್ ಗಾಂಧಿ!!

2018 ಜನವರಿ 1 ರಿಂದ 2019 ಜನವರಿ 6 ರವರೆಗಿನ ಗೂಗಲ್‌ನ ರಿಪೋರ್ಟ್ ಇದಾಗಿದ್ದು, ಈ ಮೂಲಕ ಕಳೆದ ಹಲವು ವರ್ಷಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಹುಡುಕಲ್ಪಟ್ಟ ರಾಜಕೀಯ ನಾಯಕ ಎಂಬ ಶ್ರೇಯಕ್ಕೆ ಪಾತ್ರರಾಗಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸ್ಥಾನವನ್ನು ಇದೀಗ ಕಳೆದುಕೊಂಡಿದ್ದಾರೆ ಎನ್ನುತ್ತಿವೆ ಗೂಗಲ್ ನೀಡಿರುವ ಅಂಕಿಅಂಶಗಳು.

ಗೂಗಲ್ ಟ್ರೆಂಡ್ಸ್ ರಿಪೋರ್ಟ್: ಪ್ರಧಾನಿ ಮೋದಿಯನ್ನೇ ಹಿಂದಿಕ್ಕಿದ ರಾಹುಲ್ ಗಾಂಧಿ!!

2014ರಲ್ಲಿ 100 ಅಂಕಗಳಿಗೆ 37 ನರೇಂದ್ರ ಮೋದಿ ಅತಿದೊಡ್ಡ ಜನಪ್ರಿಯ ನಾಯಕನಾಗಿ ಹೊರಹೊಮ್ಮಿದ್ದರು. ಆ ಸಮಯದಲ್ಲಿ ರಾಹುಲ್‌ ಗಾಂಧಿಯವರು ಕೇವಲ 4 ಅಂಕಗಳನ್ನು ಪಡೆದುಕೊಂಡಿದ್ದರು. ಇದಾದ ನಾಲ್ಕು ವರ್ಷಗಳಲ್ಲಿಯೂ ಸತತವಾಗಿ ಆನ್‌ಲೈನ್ ಜನಪ್ರಿಯ ರಾಜಕಾರಣಿ ಪಟ್ಟದಲ್ಲಿದ್ದ ಮೋದಿಯವರಿಂದ ಆ ಸ್ಥಾನ ಕೈ ಜಾರಿದೆ ಎನ್ನುತ್ತಿದೆ ಅಂಕಿಅಂಶಗಳು.

Best Mobiles in India

English summary
A smart mix of social media tactics, use of technology, and recent poll wins have significantly pushed Rahul Gandhi's graph up on Google News searches, show data. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X