Just In
- 8 hrs ago
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- 11 hrs ago
Tech News of this Week; ಈ ವಾರ ಟೆಕ್ ವಲಯದಲ್ಲಿ ಜರುಗಿದ ಘಟನೆಗಳೇನು?, ಇಲ್ಲಿದೆ ವಿವರ!
- 1 day ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 1 day ago
ಫ್ಲಿಪ್ಕಾರ್ಟ್ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
Don't Miss
- Sports
IND vs NZ 2nd T20: ಕಿವೀಸ್ ವಿರುದ್ಧ ಹೋರಾಡಿ ಗೆದ್ದ ಭಾರತ; ಸರಣಿ ಸಮಬಲ
- Lifestyle
ಫೆಬ್ರವರಿಯಲ್ಲಿದೆ ಈ 3 ಗ್ರಹಗಳ ಸಂಚಾರ: ಈ 4 ರಾಶಿಯವರಿಗೆ ಮಂಗಳಕರ
- Movies
2023ರಲ್ಲಿ ಮೈಸೂರಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಚಿತ್ರಗಳಿವು; ನಂಬರ್ 1 ಪಟ್ಟ ಯಾವ ಚಿತ್ರಕ್ಕೆ?
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫೋನ್‌ಪೇ ಮತ್ತು ಗೂಗಲ್ ಪೇ ಬಳಸೋರಿಗೆ ಆರ್‌ಬಿಐನಿಂದ ಹೊಸ ರೂಲ್ಸ್!
ಭಾರತದಲ್ಲಿ ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಸಾಕಷ್ಟು ಜನಪ್ರಿಯವಾಗಿದೆ. ಫೋನ್‌ಪೇ, ಗೂಗಲ್ ಪೇ, ಪೇಟಿಎಂ ಸೇರಿದಂತೆ ಹಲವು ಯುಪಿಐ ಆ್ಯಪ್‌ಗಳು ಸುಲಭವಾಗಿ ಹಣ ಪಾವತಿ ಮಾಡುವುದಕ್ಕೆ ಸಹಕಾರಿಯಾಗಿವೆ. ಯುಪಿಐ ಆಧಾರಿತ ನಗದು ವರ್ಗಾವಣೆ ವ್ಯವಸ್ಥೆ ಜನಪ್ರಿಯವಾದಂತೆ ಆರ್‌ಬಿಐ ಕೂಡ ಹೊಸ ಹೊಸ ನಿಯಮಗಳನ್ನು ಜಾರಿಗೆ ತರುತ್ತಿದೆ. ಈ ಮೂಲಕ ಯುಪಿಐ ಆ್ಯಪ್ ಬಳಸುವ ಗ್ರಾಹಕರಿಗೆ ಸುರಕ್ಷತೆ ಮತ್ತು ಇನ್ನಷ್ಟು ಅನುಕೂಲಕರ ವ್ಯವಸ್ಥೆ ಕಲ್ಫಿಸಲು ಮುಂದಾಗಿದೆ. ಅದರಂತೆ ಆರ್‌ಬಿಐ ಇದೀಗ ಹೊಸ ಫೀಚರ್ಸ್ ಪರಿಚಯಿಸಿದೆ.

ಹೌದು, ಆರ್‌ಬಿಐ ಯುಪಿಐ ಆ್ಯಪ್‌ಗಳನ್ನು ಬಳಸುವವರಿಗೆ ಹೊಸ ಫೀಚರ್ಸ್ ಪರಿಚಯಿಸಿದೆ. ಅದರಂತೆ ಸರಕು ಮತ್ತು ಸೇವೆಗಳ ಪಾವತಿ ಅನುಕೂಲವಾಗುವ ಹೊಸ ಅಂಶವನ್ನು ಸೇರಿಸಲು ಮುಂದಾಗಿದೆ. ಇದಕ್ಕಾಗಿ ಯುಪಿಐನಲ್ಲಿ ಸಿಂಗಲ್-ಬ್ಲಾಕ್-ಮತ್ತು-ಮಲ್ಟಿಪಲ್-ಡೆಬಿಟ್ ಫಂಕ್ಷನ್ ಅನ್ನು ಪರಿಚಯಿಸಲಿದೆ. ಇದರಿಂದ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಮತ್ತು ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಿಗೆ ಪಾವತಿ ಮಾಡುವುದಕ್ಕೆ ಸುಲಭ ಅವಕಾಶ ನೀಡಲಿದೆ ಎಂದು ಆರ್‌ಬಿಐ ಗವರ್ನರ್ ಹೇಳಿದ್ದಾರೆ. ಹಾಗಾದ್ರೆ ಆರ್‌ಬಿಐ ಪರಿಚಯಿಸಿರುವ ಹೊಸ ಫೀಚರ್ಸ್ ವಿಶೇಷತೆ ಏನು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ಆರ್‌ಬಿಐನ ಹೊಸ ಫೀಚರ್ಸ್ ಉದ್ದೇಶ ಏನು?
ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವವರಿಗೆ ಇದು ಅನುಕೂಲಕರವಾಗಿದೆ. ಇದರಿಂದ ಸಿಂಗಲ್ ಬ್ಲಾಕ್ ಮತ್ತು ಮಲ್ಟಿಪಲ್ ಡೆಬಿಟ್ ಅನ್ನು ಬಹಳ ವಿಶ್ವಾಸಯುತವಾಗಿ ನಡೆಸಬಹುದಾಗಿದೆ. ಕಡ್ಡಾಯವಾಗಿ ನೀವು ಮಾಡಲೇಬೇಕಾದ ಪಾವತಿಗಳಿಗಾಗಿ ಒಂದಿಷ್ಟು ಹಣವನ್ನು ತೆಗೆದಿರಿಸಲು ಇದು ಸಹಾಯಮಾಡಲಿದೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ. ಇದರಿಂದ ವಹಿವಾಟುಗಳನ್ನು ನಡೆಸುವ ಗ್ರಾಹಕರಿಗೆ ಹೆಚ್ಚಿನ ನಂಬಿಕಯನ್ನು ಉಳಿಸಲು ಅವಕಾಶ ನೀಡಲಿದೆ.

ಹೇಗೆ ಕಾರ್ಯನಿರ್ವಹಿಸಲಿದೆ?
ಆರ್‌ಬಿಐ ಹೇಳಿರುವಂತೆ ಯುಪಿಐ ಆ್ಯಪ್‌ಗಳ ಮೂಲಕ ನೀವು ಇ-ಕಾಮರ್ಸ್, ಹೋಟೆಲ್ ಬುಕಿಂಗ್, ಷೇರುಪೇಟೆಯಲ್ಲಿ ಹೂಡಿಕೆ ಮಾಡುತ್ತಿದ್ದರೆ, ಇದಕ್ಕಾಗಿಯೇ ಒಂದಿಷ್ಟು ಹಣವನ್ನು ಪೂರ್ವ ನಿರ್ಧರಿತವಾಗಿ ಒಂದೆಡೆ ಇಡಲಿದೆ. ಇದರಿಂದ ನೀವು ಸಕಾಲಿಕ ಪಾವತಿಗಳನ್ನು ಮಾಡಬಹುದಾಗಿದೆ. ಆದರೆ ಸರಕುಗಳು ಅಥವಾ ಸೇವೆಗಳ ನಿಜವಾದ ವಿತರಣೆಯವರೆಗೆ ಹಣವು ಗ್ರಾಹಕರ ಖಾತೆಯಲ್ಲಿಯೇ ಇರಲಿದೆ ಅನ್ನೊದು ಆರ್‌ಬಿಐ ಗವರ್ನರ್ ಅವರ ವಾದವಾಗಿದೆ.

ಅಂದರೆ ಇ-ಕಾಮರ್ಸ್ ಖರೀದಿಗಳು, ಹೋಟೆಲ್ ಬುಕಿಂಗ್ ಅಥವಾ ಸೆಕ್ಯುರಿಟಿಗಳಲ್ಲಿನ ಹೂಡಿಕೆಗಳಂತಹ ಸರಕು ಮತ್ತು ಸೇವೆಗಳ ವಿತರಣೆಗಳಿಗೆ ಪಾವತಿ ಮಾಡಲು ಇದು ಸಹಾಯ ಮಾಡಲಿದೆ. ಇದಕ್ಕಾಗಿಯೇ 'ಸಿಂಗಲ್-ಬ್ಲಾಕ್-ಮತ್ತು-ಮಲ್ಟಿಪಲ್ ಡೆಬಿಟ್' ಫೀಚರ್ಸ್ ನೀಡಲಾಗಿದೆ. ಇದರ ಮೂಲಕ ವಹಿವಾಟುಗಳನ್ನು ನಡೆಸುವಾಗ ಗ್ರಾಹಕರು ಹೆಚ್ಚಿನ ವಿಶ್ವಾಸವನ್ನು ಹೊಂದಿರುತ್ತಾರೆ.

ಇದಲ್ಲದೆ ಆರ್‌ಬಿಐನ ರಿಟೇಲ್ ಡೈರೆಕ್ಟ್ ಯೋಜನೆಯನ್ನು ಬಳಸಿಕೊಂಡು ಸರ್ಕಾರಿ ಭದ್ರತೆಗಳನ್ನು ಖರೀದಿಸಲು ಈ ಫೀಚರ್ಸ್ ಸಹಾಯಕವಾಗಲಿದೆ ಎಂದು ಗವರ್ನರ್ ಹೇಳಿದ್ದಾರೆ. ಇನ್ನು enhancement ಅನ್ನು ಜಾರಿಗೆ ತರಲು ಭಾರತೀಯ ರಾಷ್ಟ್ರೀಯ ಪಾವತಿ ನಿಗಮಕ್ಕೆ ಪ್ರತ್ಯೇಕ ಸೂಚನೆ ನೀಡುವುದಾಗಿ ಆರ್‌ಬಿಐ ಹೇಳಿದೆ. ಇದಲ್ಲದೆ ಎಲ್ಲಾ ಪಾವತಿಗಳು ಮತ್ತು ಸಂಗ್ರಹಣೆಗಳನ್ನು ಸೇರಿಸಲು ಭಾರತ್ ಬಿಲ್ ಪಾವತಿ ವ್ಯವಸ್ಥೆ ವ್ಯಾಪ್ತಿಯಲ್ಲಿ ವಿಸ್ತರಣೆಯನ್ನು ಸಹ ಘೋಷಿಸಲಾಗಿದೆ.

ಇನ್ನು BBPS ಪುನರಾವರ್ತಿತವಲ್ಲದ ಪಾವತಿಗಳನ್ನು ಅಥವಾ ವ್ಯಕ್ತಿಗಳ ಸಂಗ್ರಹಣೆ ಅಗತ್ಯಗಳನ್ನು ಪ್ರಕ್ರಿಯೆಗೊಳಿಸಲು ಸೌಲಭ್ಯವನ್ನು ಹೊಂದಿಲ್ಲ ಎನ್ನಲಾಗಿದೆ. ಇದು ವೃತ್ತಿಪರ ಸೇವಾ ಶುಲ್ಕ ಪಾವತಿಗಳು, ಶಿಕ್ಷಣ ಶುಲ್ಕಗಳು, ತೆರಿಗೆ ಪಾವತಿಗಳು, ಬಾಡಿಗೆ ಸಂಗ್ರಹಣೆಗಳಿಂದ ಹೊರಗಿದೆ. ಈ ಹೊಸ ವ್ಯವಸ್ಥೆಯು ಪಾರದರ್ಶಕ ಮತ್ತು ಏಕರೂಪದ ಪಾವತಿಗಳ ಅನುಭವ, ನಿಧಿಗಳಿಗೆ ತ್ವರಿತ ಪ್ರವೇಶ ಮತ್ತು ಸುಧಾರಿತ ದಕ್ಷತೆಯಿಂದ ಪ್ರಯೋಜನ ಪಡೆಯುವುದಕ್ಕೆ ಅವಕಾಶ ನೀಡಲಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470