ಓಲಾ ಸಂಸ್ಥೆಗೆ ಬಿಗ್‌ ಶಾಕ್‌ ಕೊಟ್ಟ ಆರ್‌ಬಿಐ!..1.67 ಕೋಟಿ ದಂಡ!

|

ಜನಪ್ರಿಯ ಕ್ಯಾಬ್‌ ಸರ್ವಿಸ್‌ ಓಲಾ ಸಂಸ್ಥೆಗೆ ಆರ್‌ಬಿಐ ಬಿಗ್‌ ಶಾಕ್‌ ನೀಡಿದೆ. ಆರ್‌ಬಿಐನ ನಿಯಮಗಳ್ನು ಪಾಲಿಸುವಲ್ಲಿ ಓಲಾ ಸಂಸ್ಥೆ ವಿಫಲವಾದ ಕಾರಣಕ್ಕೆ ಆರ್‌ಬಿಐ 1.67 ಕೋಟಿ ದಂಡವನ್ನು ವಿಧಿಸಿದೆ. ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ಓಲಾ ಹಣಕಾಸು ಸೇವೆಗಳ ಮೇಲೆ ತನ್ನ ದಂಡಾಸ್ತ್ರವನ್ನು ಪ್ರಯೋಗಿಸಿದೆ. ಇದು ಓಲಾದ ಹಣಕಾಸು ಸೇವೆಗಳ ವಿಭಾಗವಾಗಿದೆ. ಆರ್‌ಬಿಐನ ಪ್ರಿಪೇಯ್ಡ್ ಪಾವತಿ ಸಾಧನ (ಪಿಪಿಐ) ಮತ್ತು ನೋ-ಯುವರ್-ಕಸ್ಟಮರ್‌ (ಕೆವೈಸಿ) ನಿಯಮಗಳನ್ನು ಪಾಲಿಸಿಲ್ಲದೆ ಇರುವುದರಿಂದ ದಂಡ ವಿಧಿಸಲಾಗಿದೆ.

ಆರ್‌ಬಿಐ

ಹೌದು, ಆರ್‌ಬಿಐ ಓಲಾ ಸಂಸ್ಥೆಯ ಹಣಕಾಸು ಸೇವೆಗಳ ಮೇಲೆ ದಂಡವನ್ನು ವಿಧಿಸಿದೆ. ಪೇಮೆಂಟ್‌ ಮತ್ತು ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007 ರ ಸೆಕ್ಷನ್ 30 ರ ಅಡಿಯಲ್ಲಿ ಆರ್‌ಬಿಐ ಓಲಾ ವಿರುದ್ದ ಈ ರೀತಿಯ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ. ಆರ್‌ಬಿಐ ತನ್ನ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ಮೇಲೆ ದಂಡಾಸ್ತ್ರ ಪ್ರಯೋಗಿಸುತ್ತಲೇ ಬಂದಿದೆ. ಅದರಂತೆ ಇದೀಗ ಓಲಾ ಸಂಸ್ಥೆ ಕೆವೈಸಿ ಹಾಗೂ ಪಾವತಿ ನಿಯಮಗಳನ್ನು ಪಾವತಿಸಿದ ಹಿನ್ನಲೆಯಲ್ಲಿ 1.67 ಕೋಟಿ ದಂಡ ಪಾವತಿಸಬೇಕಾದ ಸ್ಥಿತಿಗೆ ತಲುಪಿದೆ.

ಆರ್‌ಬಿಐ

ಇನ್ನು ಆರ್‌ಬಿಐ ಓಲಾ ಹಣಕಾಸು ಸೇವೆಗಳ ಮೇಲೆ ತೆಗೆದುಕೊಂಡಿರುವ ಕ್ರಮವು ನಿಯಂತ್ರಕ ಅನುಸರಣೆಯಲ್ಲಿನ ನ್ಯೂನತೆಗಳನ್ನು ಆಧರಿಸಿದೆ. ಆದರೆ ಆರ್‌ಬಿಐ ವಿಧಿಸಿರುವ ದಂಡವು ಕಂಪನಿಯಲ್ಲಿ ನಡೆಯುತ್ತಿರುವ ಯಾವುದೇ ವಹಿವಾಟು ಅಥವಾ ಒಪ್ಪಂದದ ಮೇಲೆ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಇನ್ನು ಆರ್‌ಬಿಐ ನೀಡಿರುವ ಆದೇಶದಂತೆ ಓಲಾ ಕಂಪೆನಿ ಸೆಂಟ್ರಲ್‌ ಬ್ಯಾಂಕ್‌ ಹೊರಡಿಸಿದ ಕೆವೈಸಿ ಮಾರ್ಗಸೂಚಿಗಳನ್ನು ಅನುಸರಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಹಾಗಾದ್ರೆ ಆರ್‌ಬಿಐ ಓಲಾ ಸಂಸ್ಥೆ ವಿರುದ್ದ ದಂಡಾಸ್ತ್ರ ವಿಧಿಸಿರುವುದರಿಂದ ಆಗುವ ಪರಿಣಾಮಗಳೇನು? ಓಲಾ ಸಂಸ್ಥೆ ಆರ್‌ಬಿಐಗೆ ದಂಡವನ್ನು ಯಾವಾಗ ಪಾವತಿಸಬೇಕು ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಸರ್ವ್‌

ರಿಸರ್ವ್‌ ಬ್ಯಾಂಕ್‌ ಆಫ ಇಂಡಿಯಾ ಓಲಾ ಫೈನಾನ್ಶಿಯಲ್ ಸರ್ವಿಸಸ್ ಮೇಲೆ 1.67 ಕೋಟಿ ದಂಡವನ್ನು ವಿಧಿಸಿದೆ. ಪೇಮೆಂಟ್‌ ಮತ್ತು ಸೆಟಲ್ಮೆಂಟ್ ಸಿಸ್ಟಮ್ಸ್ ಆಕ್ಟ್, 2007 ರ ಸೆಕ್ಷನ್ 30 ರ ಅಡಿಯಲ್ಲಿ ಆರ್‌ಬಿಐ ಓಲಾ ವಿರುದ್ದ ಈ ಕ್ರಮ ತೆಗೆದುಕೊಂಡಿದೆ. ಆರ್‌ಬಿಐ ನೀಡಿರುವ ಆದೇಶದ ಪ್ರಕಾರ ಓಲಾ ಫೈನಾನ್ಶಿಯಲ್ ಸರ್ವಿಸಸ್ ಸೆಂಟ್ರಲ್ ಬ್ಯಾಂಕ್ ಹೊರಡಿಸಿದ KYC ಮಾರ್ಗಸೂಚಿಗಳನ್ನು ಅನುಸರಿಸುತ್ತಿಲ್ಲ ಎಂದು ಕಂಡುಬಂದಿದೆ. ಅಲ್ಲದೆ ಓಲಾ ಸಂಸ್ಥೆ ಕೆವೈಸಿ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ವಿವರಿಸಲು ಕಂಪನಿಗೆ ನೋಟಿಸ್ ನೀಡಿದೆ. ಆದರೆ ಈ ನೋಟಿಸ್‌ಗೆ ಸಮರ್ಪಕವಾಗಿ ಓಲಾ ಸಂಸ್ಥೆ ನಡೆದುಕೊಂಡಿಲ್ಲ ಇದೇ ಕಾರಣಕ್ಕೆ ಆರ್‌ಬಿಐ ದಂಡ ವಿಧಿಸಿದೆ.

ಆರ್‌ಬಿಐ ಓಲಾ

ಆರ್‌ಬಿಐ ಓಲಾ ಸಂಸ್ಥೆ ಕೆವೈಸಿ ನಿಯಮಗಳ ಅವಶ್ಯಕತೆಗಳ ಬಗ್ಗೆ ಹಲವು ನಿರ್ದೇಶನಗಳನ್ನು ನೀಡಿದೆ. ಆದರೆ ಆರ್‌ಬಿಐ ಹೊರಡಿಸಿದ ನಿರ್ದೇಶನಗಳನ್ನು ಓಲಾ ಫೈನಾನ್ಶಿಯಲ್‌ ಸರ್ವಿಸ್‌ ಘಟಕವು ಅನುಸರಿಸುತ್ತಿಲ್ಲ ಎಂದು ಗಮನಿಸಲಾಗಿದೆ. ಅದರಂತೆ, ಆರ್‌ಬಿಐ ನಿರ್ದೇಶನಗಳನ್ನು ಪಾಲಿಸದಿದ್ದಕ್ಕಾಗಿ ದಂಡವನ್ನು ಏಕೆ ವಿಧಿಸಬಾರದು ಎಂಬುದಕ್ಕೆ ಕಾರಣವನ್ನು ತೋರಿಸಲು ಸೂಚಿಸುವ ನೋಟಿಸ್ ನೀಡಲಾಗಿದೆ,"ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ನೋಟಿಸ್‌ಗೆ ಓಲಾ ಸಂಸ್ಥೆ ನೀಡಿದ ಪ್ರತಿಕ್ರಿಯೆಯನ್ನು ಪರಿಗಣಿಸಿದ ನಂತರ, ಆರ್‌ಬಿಐ ಓಲಾ ಕಂಪನಿಗೆ 1,67,80,000 ರೂಪಾಯಿ ದಂಡ ವಿಧಿಸಿದೆ.

ಆರ್‌ಬಿಐ

ಓಲಾ ಹಣಕಾಸು ಸೇವೆಗಳ ಮೇಲೆ ಆರ್‌ಬಿಐ ವಿಧಿಸಿರುವ ದಂಡಾಸ್ತ್ರದಿಂದ ಸಂಸ್ಥೆಯ ಸೇವೆಗಳ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎನ್ನಲಾಗಿದೆ. ಆದರೆ ಆರ್‌ಬಿಐನ ನಿರ್ದೇಶನಗಳನ್ನು ಪಾಲಿಸದಿದ್ದರೆ ಕೋಟಿ ಗಟ್ಟಲೇ ದಂಡವನ್ನು ಪಾವತಿಸಬೇಕಾದ ಅನಿವಾರ್ಯತೆ ಎದುರಾಗಲಿದೆ. ಸದ್ಯ ಓಲಾ ಸಂಸ್ಥೆಯ ವಿರುದ್ದ ಆರ್‌ಬಿಐ ದಂಡಾಸ್ತ್ರ ಪ್ರಯೋಗಿಸಿದೆ. ಒಂದು ವೇಳೆ ಓಲಾ ಸಂಸ್ಥೆ ದಂಡವನ್ನು ಪಾವತಿಸದೆ ಹೋದರೆ ಹಾಗೂ ಕೆವೈಸಿ ನಿಯಮಗಳನ್ನು ಅನುಸರಿಸದೆ ಹೋದರೆ ಆರ್‌ಬಿಐನಿಂದ ಕಠಿಣ ಕ್ರಮ ಎದುರಿಸಬೇಕಾದ ಸ್ಥಿತಿಗೆ ತಲುಪಲಿದೆ.

ಆರ್‌ಬಿಐ

ಆರ್‌ಬಿಐ ಕೆವೈಸಿ ನಿಯಮಗಳನ್ನು ಪಾಲಿಸದ ಸಂಸ್ಥೆಗಳ ವಿರುದ್ದ ಕ್ರಮ ತೆಗೆದುಕೊಂಡಿರುವುದು ಮೊದಲೇನಲ್ಲ. ಕಳೆದ ವರ್ಷ ಪೇಟಿಎಂ ವಿರುದ್ದವೂ ಕೂಡ ಆರ್‌ಬಿಐ ಇದೇ ಮಾದರಿಯ ದಂಡಾಸ್ತ್ರವನ್ನು ಪ್ರಯೋಗ ಮಾಡಿತ್ತು. ಅಂದು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಮೇಲೆ 1 ಕೋಟಿ ರೂ. ದಂಡ ವಿಧಿಸಲಾಗಿತ್ತು. ವಾಸ್ತವಿಕ ಸ್ಥಿತಿಯನ್ನು ಒಳಗೊಂಡ ಮಾಹಿತಿ ಸಲ್ಲಿಸದ ಕಾರಣಕ್ಕೆ ಪೇಟಿಎಂ ಮೇಲೆ ಆರ್‌ಬಿಐ ಈ ನಿರ್ಧಾರ ತೆಗೆದುಕೊಂಡಿತ್ತು.

ಆರ್‌ಬಿಐ

ಆರ್‌ಬಿಐ ಅಂತಿಮ ದೃಡೀಕರಣ ಪ್ರಮಾಣಪತ್ರ (CoA) ವಿತರಣೆಗಾಗಿ ಪೇಟಿಎಂನ ಅರ್ಜಿಯನ್ನು ಪರಿಶೀಲಿಸಿದಾಗ, ದೋಷ ಕಂಡುಬಂದಿತ್ತು. "ಇದು ಪಾವತಿ ಮತ್ತು ಇತ್ಯರ್ಥ ವ್ಯವಸ್ಥೆಗಳ ಕಾಯಿದೆ, 2007 ರ ಸೆಕ್ಷನ್ 26 (2) ರಲ್ಲಿ ಉಲ್ಲೇಖಿಸಲಾಗಿರುವ ಅಪರಾಧವಾಗಿದೆ. ವೈಯಕ್ತಿಕ ವಿಚಾರಣೆಯ ಸಮಯದಲ್ಲಿ ಮಾಡಿದ ಲಿಖಿತ ಪ್ರತಿಕ್ರಿಯೆಗಳು ಮತ್ತು ಮೌಖಿಕ ಸಲ್ಲಿಕೆಗಳನ್ನು ಪರಿಶೀಲಿಸಿದ ನಂತರ, ಆರ್‌ಬಿಐ ಈ ದಂಡವನ್ನು ವಿಧಿಸಿತ್ತು.

ಆರ್‌ಬಿಐ

ಇನ್ನು ಆರ್‌ಬಿಐ ನೀಡಿರುವ ಶಾಕ್‌ ಬಗ್ಗೆ ಓಲಾ ಕಂಪೆನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಓಲಾ ಎಲೆಕ್ಟ್ರಿಕ್ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ತನ್ನ ಮೊದಲ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅನಾವರಣಗೊಳಿಸಿದೆ. ಸದ್ಯ ಈ ಬ್ಯಾಟರಿಯ ಬಗ್ಗೆ ಓಲಾ ಎಲೆಕ್ಟ್ರಿಕ್ ಸಿಇಒ ಭವಿಶ್ ಅಗರ್ವಾಲ್ ಅವರು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ಪೋಸ್‌ ಮಾಡುವ ಮೂಲಕ ಓಲಾ ಲಿಥಿಯಂ-ಐಯಾನ್ ಬ್ಯಾಟರಿಯನ್ನು ಅನಾವರಣಗೊಳಿಸಿದ್ದಾರೆ.

ಬ್ಯಾಟರಿ

ಇನ್ನು ಈ ''ಬ್ಯಾಟರಿ ಸೆಲ್‌ ಎಲೆಕ್ಟ್ರಿಕ್‌ ವೆಹಿಕಲ್‌ ಕ್ರಾಂತಿಯ ಹೃದಯವಾಗಿದೆ. ನಾವು ನಮ್ಮದೇ ಆದ ತಂತ್ರಜ್ಞಾನವನ್ನು ವೇಗವಾಗಿ ಅಳೆಯಲು ಮತ್ತು ಆವಿಷ್ಕಾರಗಳನ್ನು ಮಾಡಬೇಕಾಗಿದೆ" ಎಂದು ಅವರು ತಮ್ಮ ಟ್ವಿಟರ್‌ ಪೋಸ್ಟ್‌ನಲ್ಲಿ ಬರೆದಿದ್ದಾರೆ. ಅಲ್ಲದೆ 2023 ರಿಂದ ಓಲಾ ಗಿಗಾಫ್ಯಾಕ್ಟರಿಯಲ್ಲಿ ಈ ಬ್ಯಾಟರಿ ಉತ್ಪಾದನೆಯಾಗಲಿದೆ ಎಂದು ಓಲಾ ಕಂಪನಿ ಹೇಳಿದೆ. ಇನ್ನು ಈ ಬ್ಯಾಟರಿಯು ಭಾರತದಲ್ಲಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಮೊದಲ ಲಿಥಿಯಂ ಐಯಾನ್ ಬ್ಯಾಟರಿ ಸೆಲ್ ಎಂದು ಕಂಪನಿ ಹೇಳಿಕೊಂಡಿದೆ.

Best Mobiles in India

Read more about:
English summary
Ola Heavily Fined By RBI For Not Complying With KYC Guidelines

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X