ರಿಯಲ್‌ಮಿ 10 ಪ್ರೊ ಸರಣಿ ಸ್ಮಾರ್ಟ್‌ಫೋನ್‌ ಲಾಂಚ್‌ಗೆ ದಿನಾಂಕ ನಿಗದಿ; ಆಕರ್ಷಕ ಫೀಚರ್ಸ್‌!

|

ರಿಯಲ್‌ಮಿಯು ಕೈಗೆಟಕುವ ಬೆಲೆಯಲ್ಲಿ ಸ್ಮಾರ್ಟ್‌ಫೋನ್‌ಗಳನ್ನು ಪರಿಚಯಿಸಿ ಹೆಚ್ಚಿನ ಜನಪ್ರಿಯತೆ ಗಳಿಸಿಕೊಂಡಿದೆ. ಅದರಲ್ಲೂ ಸ್ಮಾರ್ಟ್‌ಫೋನ್‌ಳು ಬಜೆಟ್‌ ಬೆಲೆ ಹೊಂದಿದ್ದರೂ ಸಹ ವಿಶೇಷ ಫೀಚರ್ಸ್‌ಗಳು ಗ್ರಾಹಕರನ್ನು ಈ ಸ್ಮಾರ್ಟ್‌ಫೋನ್‌ಗಳ ಕಡೆ ಹೆಚ್ಚು ಆಕರ್ಷಿಸುವಂತೆ ಮಾಡುತ್ತದೆ. ಇದರ ನಡುವೆ ಈಗ ರಿಯಲ್‌ಮಿ ಕಂಪೆನಿಯು ರಿಯಲ್‌ಮಿ 10 ಪ್ರೊ ಸರಣಿಯನ್ನು ಪರಿಚಯಿಸಲು ಮುಂದಾಗಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿಯು ಭಾರತದಲ್ಲಿ ತನ್ನ ಇತ್ತೀಚಿನ ರಿಯಲ್‌ಮಿ 10 ಪ್ರೊ ಸರಣಿ ಅನಾವರಣಕ್ಕೆ ಮುಂದಾಗಿದೆ. ಈ ಫೋನ್‌ಗಳು ಮುಂದಿನ ತಿಂಗಳು ಅಂದರೆ ಡಿಸೆಂಬರ್ 8 ರಂದು ಅನಾವರಣಗೊಳ್ಳಲಿವೆ ಎಂದು ತಿಳಿದುಬಂದಿದೆ. ಹಾಗೆಯೇ ಲಾಂಚ್‌ಗೂ ಮುನ್ನವೇ ಕೆಲವು ಫೀಚರ್ಸ್‌ಗಳ ಬಗ್ಗೆ ರಿಯಲ್‌ಮಿ ಮಾಹಿತಿ ನೀಡಿದ್ದು, ಅದರ ಪ್ರಕಾರ ಈ ಸರಣಿಯಲ್ಲಿ ರಿಯಲ್‌ ಮಿ 10 ಪ್ರೊ ಮತ್ತು ರಿಯಲ್‌ಮಿ 10 ಪ್ರೊ+ ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಲಾಂಚ್ ಮಾಡಲಾಗುತ್ತದಂತೆ. ಹಾಗಿದ್ರೆ, ಈ ಫೋನ್‌ಗಳ ಫೀಚರ್ಸ್‌ ಏನು? ಬೆಲೆ ಎಷ್ಟು ಎಂಬುದನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿ.

ಡಿಸ್‌ಪ್ಲೇ ವಿವರ

ಡಿಸ್‌ಪ್ಲೇ ವಿವರ

ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್‌ 6.7 ಇಂಚಿನ ಫುಲ್‌ HD+ ಕರ್ವ್ಡ್‌ ಡಿಸ್‌ಪ್ಲೇ ಹೊಂದಿರಲಿದ್ದು, ಇದು 1080x2400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 120Hz ರಿಫ್ರೆಶ್ ರೇಟ್‌ ನೀಡಲಿದೆ. ಹಾಗೆಯೇ 680nits ಬ್ರೈಟ್‌ನೆಸ್‌ ಆಯ್ಕೆಯನ್ನು ಇದು ಪಡೆದಿರಲಿದೆ. ಇದರ ಜೊತೆಗೆ ರಿಯಲ್‌ಮಿ 10 ಪ್ರೊ+ ಸ್ಮಾರ್ಟ್‌ಫೋನ್‌ 6.7 ಇಂಚಿನ ಫೂಲ್‌ HD+ ಡಿಸ್‌ಪ್ಲೇ ಹೊಂದಿರಲಿದ್ದು, ಇದು 1080x2412 ಪಿಕ್ಸೆಲ್ ರೆಸಲ್ಯೂಶನ್ ನೀಡಲಿದೆ. ಹಾಗೇಯೇ ಈ ಡಿಸ್‌ಪ್ಲೇ 120Hz ರಿಫ್ರೆಶ್ ರೇಟ್‌ ನೀಡಲಿದೆ.

ಪ್ರೊಸೆಸರ್‌ ಯಾವುದಿರಬಹುದು?

ಪ್ರೊಸೆಸರ್‌ ಯಾವುದಿರಬಹುದು?

ರಿಯಲ್‌ಮಿ 10 ಪ್ರೊ 5G ಸ್ಮಾರ್ಟ್‌ಫೋನ್ ಆಕ್ಟಾ ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದೆ. ಹಾಗೆಯೇ 12GB RAM ಹಾಗೂ 256GB ಇಂಟರ್ನಲ್ ಸ್ಟೋರೇಜ್ ಆಯ್ಕೆ ಹೊಂದಿರಲಿದ್ದು, 1TB ವರೆಗೆ ಇದನ್ನು ಹೆಚ್ಚಿಗೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಇದರೊಂದಿಗೆ ರಿಯಲ್‌ಮಿ 10 ಪ್ರೊ + ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ 1080 ಚಿಪ್‌ಸೆಟ್‌ನಿಂದ ಕಾರ್ಯನಿರ್ವಹಿಸಲಿದ್ದು, ಇದೂ ಸಹ 12GB RAM ಹಾಗೂ 128GB ಮತ್ತು 256GB ಇಂಟರ್ನಲ್‌ನ ಎರಡು ವೇರಿಯಂಟ್‌ನಲ್ಲಿ ಕಂಡುಬರಲಿದೆ.

ಕ್ಯಾಮೆರಾ ರಚನೆ

ಕ್ಯಾಮೆರಾ ರಚನೆ

ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್‌ 108MP ಪ್ರಾರ್ಥಮಿಕ ಕ್ಯಾಮೆರಾ ಹಾಗೂ 2MP ಪೊಟ್ರೈಟ್ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್‌ ಕ್ಯಾಮೆರಾ ರಚನೆ ಪಡೆದುಕೊಂಡಿದೆ. ಹಾಗೆಯೇ ಸೆಲ್ಫಿಗಾಗಿ 16MP ಕ್ಯಾಮೆರಾ ಹೊಂದಿರಲಿದೆ. ಇದರೊಂದಿಗೆ ರಿಯಲ್‌ಮಿ 10 ಪ್ರೊ+ ಟ್ರಿಪಲ್ ರಿಯರ್‌ ಕ್ಯಾಮೆರಾ ರಚನೆ ಹೊಂದಿದ್ದು, ಇದರಲ್ಲಿ108MP ಮುಖ್ಯ ಕ್ಯಾಮೆರಾ, 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಕ್ಯಾಮರಾ ಇದೆ. ಹಾಗೆಯೇ ಮುಂಭಾಗದಲ್ಲಿ 16MP ಸೆಲ್ಫಿ ಕ್ಯಾಮೆರಾದಿಂದ ಪ್ಯಾಕ್‌ ಆಗಿದೆ.

ಬ್ಯಾಟರಿ ಸಾಮರ್ಥ್ಯ

ಬ್ಯಾಟರಿ ಸಾಮರ್ಥ್ಯ

ರಿಯಲ್‌ಮಿ 10 ಪ್ರೊ ಸ್ಮಾರ್ಟ್‌ಫೋನ್‌ 33W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಹೊಂದಿರಲಿದ್ದು, ರಿಯಲ್‌ಮಿ 10 ಪ್ರೊ+ 67W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000 mAh ಸಾಮರ್ಥ್ಯದ ಬ್ಯಾಟರಿ ಆಯ್ಕೆ ಪಡೆಯಲಿದೆ. ಇನ್ನುಳಿದಂತೆ ಈ ಎರಡೂ ಫೋನ್‌ಗಳು ಡ್ಯುಯಲ್ ಸಿಮ್, ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸಾರ್ ಮತ್ತು ಸ್ಟಿರಿಯೊ ಸ್ಪೀಕರ್‌ ಫೀಚರ್ಸ್‌ ಅನ್ನು ಹೊಂದಿವೆ.

ಫ್ಲಿಪ್‌ಕಾರ್ಟ್‌

ಈ ಎರಡೂ ಫೋನ್‌ಗಳನ್ನು ಕಳೆದ ವಾರ ಚೀನಾದಲ್ಲಿ ಅನಾವರಣಗೊಳಿಸಲಾಗಿದ್ದು, ಭಾರತದಲ್ಲಿ ಕೆಲವು ವಾರಗಳಲ್ಲಿ ಲಾಚ್‌ ಆಗುವ ಈ ಸ್ಮಾರ್ಟ್‌ಫೋನ್‌ಗಳ ಬೆಲೆ ಬಗ್ಗೆ ಯಾವುದೇ ನಿಖರ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ಫೋನ್‌ಗಳು ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ ಇರಲಿವೆ.

Best Mobiles in India

Read more about:
English summary
Realme 10 Pro series launch on December 8; What are the features?.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X