ರಿಯಲ್‌ಮಿ ಉತ್ಪನ್ನ ಖರೀದಿಸೋಕೆ ಇದಕ್ಕಿಂತ ಒಳ್ಳೆಯ ಸಮಯ ಬೇಕಾ?

|

ಮೊಬೈಲ್‌ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿರುವ ರಿಯಲ್‌ಮಿ ಸಂಸ್ಥೆಯು ಸ್ಮಾರ್ಟ್‌ಫೋನ್‌ ಜೊತೆಗೆ ಭಿನ್ನ ಡಿವೈಸ್‌ಗಳೊಂದಿಗೆ ಗ್ರಾಹಕರ ಗಮನ ಸೆಳೆದಿದೆ. ಸಂಸ್ಥೆಯು ಕಡಿಮೆ ಬೆಲೆಯಿಂದ ಹೈ ಎಂಡ್‌ ದರದ ವರೆಗೂ ಹಲವು ಫೋನ್‌ಗಳನ್ನು ಪರಿಚಯಿಸಿ ಸೈ ಎನಿಸಿಕೊಂಡಿದೆ. ಅದೇ ರೀತಿ ಭಿನ್ನ ಪ್ರೈಸ್‌ ಟ್ಯಾಗ್‌ನಲ್ಲಿ ಕೆಲವು ಇತರೆ ಸ್ಮಾರ್ಟ್‌ ಉತ್ಪನ್ನಗಳ ಆಯ್ಕೆ ಸಹ ನೀಡಿದೆ. ರಿಯಲ್‌ಮಿ ಕಂಪನಿಯು ಇದೀಗ ತನ್ನ ಕೆಲವು ಉತ್ಪನ್ನಗಳಿಗೆ ಭರ್ಜರಿ ಡಿಸ್ಕೌಂಟ್‌ ಅನ್ನು ಘೋಷಿಸಿದೆ.

ಮಾರಾಟವನ್ನು

ಹೌದು, ರಿಯಲ್‌ಮಿ ಸಂಸ್ಥೆಯು ಈಗ ರಿಯಲ್‌ಮಿ ಫ್ಯಾನ್ಸ್ ಫೆಸ್ಟಿವಲ್ (828 Realme Fan Festival) ಮಾರಾಟವನ್ನು ಆಯೋಜಿಸಿದ್ದು, ಕೆಲವು ಆಯ್ದ ಡಿವೈಸ್‌ಗಳಿಗೆ ರಿಯಾಯಿತಿ ಸುರಿಮಳೆಯನ್ನೇ ಸುರಿಸಿದೆ. ಈ ಸೇಲ್‌ನಲ್ಲಿ ಸಂಸ್ಥೆಯು ಸ್ಮಾರ್ಟ್‌ಫೋನ್‌, ಲ್ಯಾಪ್‌ಟಾಪ್‌, ಇಯರ್‌ಬಡ್ಸ್, ಟ್ಯಾಬ್‌, ಸ್ಮಾರ್ಟ್‌ವಾಚ್‌ ಸೇರಿದಂತೆ ಇತರೆ ಆಡಿಯೋ ಉತ್ಪನ್ನಗಳಿಗೆ ಬೊಂಬಾಟ್‌ ಕೊಡುಗೆ ನೀಡಿದೆ.

ಇರಲಿದೆ

ಅಂದಹಾಗೇ ನಾಲ್ಕು ದಿನಗಳ ಈ ಸೇಲ್‌ ಆಗಷ್ಟ್‌ 24 ಇಂದಿನಿಂದ ಪ್ರಾರಂಭವಾಗಿದ್ದು, ಇದೇ ಆಗಷ್ಟ್ 28 ರ ವರೆಗೂ ಚಾಲ್ತಿ ಇರಲಿದೆ. ಹಾಗಾದರೇ ರಿಯಲ್‌ಮಿ ಫ್ಯಾನ್ಸ್ ಫೆಸ್ಟಿವಲ್ ಕೊಡುಗೆಯ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ತಿಳಿಯೋಣ ಬನ್ನಿರಿ.

ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿ

ಸ್ಮಾರ್ಟ್‌ಫೋನ್‌ಗಳಿಗೆ ಬಿಗ್ ರಿಯಾಯಿತಿ

ರಿಯಲ್‌ಮಿ ಫ್ಯಾನ್ಸ್ ಫೆಸ್ಟಿವಲ್ ಸೇಲ್‌ನಲ್ಲಿ ಆಯ್ದ ಫೋನ್‌ಗಳಿಗೆ ರಿಯಲ್‌ಮಿ ಅತ್ಯುತ್ತಮ ಕೊಡುಗೆ ಘೋಷಿಸಿದೆ. ಮುಖ್ಯವಾಗಿ ರಿಯಲ್‌ಮಿ 9 5G (6GB + 128GB) ಫೋನ್‌ 2500ರೂ. ಪ್ರೀಪೇಯ್ಡ್‌ ಆಫರ್‌ ಪಡೆದಿದ್ದು, ಹಾಗೆಯೇ 1000ರೂ. ಬ್ಯಾಂಕ್‌ ಆಫರ್ ಸಿಗಲಿದೆ. ರಿಯಲ್‌ಮಿ 9 ಪ್ರೊ ಫೋನ್ ಸಹ 2500ರೂ. ಪ್ರೀಪೇಯ್ಡ್‌ ಆಫರ್‌ ಪಡೆದಿದ್ದು, ಹಾಗೆಯೇ 2000ರೂ. ಬ್ಯಾಂಕ್‌ ಆಫರ್ ಪಡೆದಿದೆ. ಅದೇ ರೀತಿ ರಿಯಲ್‌ಮಿ 9i ಮತ್ತು ರಿಯಲ್‌ಮಿ 9 ಪ್ರೊ 5G ಫೋನ್‌ಗಳು ಸಹ 2500ರೂ. ಪ್ರೀಪೇಯ್ಡ್‌ ಆಫರ್‌ ಪಡೆದಿದ್ದು, ಹಾಗೆಯೇ 1000ರೂ. ಬ್ಯಾಂಕ್‌ ಆಫರ್ ಪಡೆದಿವೆ. ಹಾಗೆಯೇ ರಿಯಲ್‌ಮಿ ನಾರ್ಜೋ 50 ಮತ್ತು ರಿಯಲ್‌ಮಿ 9 ಫೋನ್‌ಗಳು ರಿಯಲ್‌ಮಿ 1500ರೂ. ಪ್ರೀಪೇಯ್ಡ್‌ ಆಫರ್‌ ಪಡೆದಿದ್ದು, ಜೊತೆಗೆ 1000ರೂ. ಬ್ಯಾಂಕ್‌ ಕೊಡುಗೆ ಪಡೆದಿವೆ.

ಟ್ಯಾಬ್ಲೆಟ್‌ಗಳಿಗೆ ಆಕರ್ಷಕ ಕೊಡುಗೆ

ಟ್ಯಾಬ್ಲೆಟ್‌ಗಳಿಗೆ ಆಕರ್ಷಕ ಕೊಡುಗೆ

ರಿಯಲ್‌ಮಿ ಫ್ಯಾನ್ಸ್ ಫೆಸ್ಟಿವಲ್ ಸೇಲ್‌ನಲ್ಲಿ ಕೆಲವು ಟ್ಯಾಬ್ಲೆಟ್‌ಗಳು ಬೊಂಬಾಟ್‌ ಕೊಡುಗೆಯಲ್ಲಿ ಕಾಣಿಸಿಕೊಂಡಿವೆ. ರಿಯಲ್‌ಮಿ ಪ್ಯಾಡ್‌ ಮಿನಿ (3GB+32GB Wifi) 8549 ರೂ. ಗಳ ಡಿಸ್ಕೌಂಟ್‌ ಬೆಲೆಯಲ್ಲಿ ಕಾಣಿಸಿಕೊಂಡಿದೆ. ಅದೇ ರೀತಿ ರಿಯಲ್‌ಮಿ ಪ್ಯಾಡ್‌ ಮಿನಿ 4GB+64GB Wifi+LTE ವೇರಿಯಂಟ್‌ 12749ರೂ. ಗಳ ಆಫರ್‌ ದರದಲ್ಲಿ ಸಿಗಲಿದೆ. ಇನ್ನು ರಿಯಲ್‌ಮಿ ಪ್ಯಾಡ್‌ ಸ್ಲಿಮ್‌ (3GB+32GB Wifi) ವೇರಿಯಂಟ್‌ ಆಫರ್‌ನಲ್ಲಿ 10799ರೂ. ಗಳಿಗೆ ಸಿಗಲಿದೆ.

ವೇರಿಯಂಟ್

ಹಾಗೆಯೇ ರಿಯಲ್‌ಮಿ ಪ್ಯಾಡ್‌ ಸ್ಲಿಮ್‌ (4GB+64GB Wifi+LTE) ವೇರಿಯಂಟ್‌ 16749ರೂ.ಗಳ ದರದಲ್ಲಿ ಲಭ್ಯವಾಗಲಿದೆ. ಹಾಗೆಯೇ ಇತ್ತೀಚಿಗಿನ ರಿಯಲ್‌ಮಿ ಪ್ಯಾಡ್‌ X (4GB+64GB Wifi) ವೇರಿಯಂಟ್ 17999ರೂ. ಬೆಲೆಯಲ್ಲಿ ಕಾಣಿಸಿಕೊಂಡಿದ್ದು, 6GB+128GB Wifi+5G ವೇರಿಯಂಟ್‌ ಸಾಧನವು 25999ರೂ. ಗಳಿಗೆ ದೊರೆಯುತ್ತದೆ.

ಆಡಿಯೋ ಉತ್ಪನ್ನಗಳಿಗೆ ಬೆಸ್ಟ್ ಆಫರ್

ಆಡಿಯೋ ಉತ್ಪನ್ನಗಳಿಗೆ ಬೆಸ್ಟ್ ಆಫರ್

ರಿಯಲ್‌ಮಿ ಬಡ್ಸ್‌ ವೈರ್‌ಲೆಸ್‌ ಆಫರ್‌ ಬೆಲೆಯು 1599ರೂ. ಆಗಿದೆ.
ರಿಯಲ್‌ಮಿ ಬಡ್ಸ್‌ ವೈರ್‌ಲೆಸ್‌ 2 ನಿಯೋ ಆಫರ್‌ ಬೆಲೆಯು 1299ರೂ. ಆಗಿದೆ.
ರಿಯಲ್‌ಮಿ ಟೆಕ್‌ಲೈಫ್‌ ಬಡ್ಸ್‌ T100 ಆಫರ್ ಬೆಲೆಯು 1299ರೂ. ಆಗಿದೆ.
ರಿಯಲ್‌ಮಿ ಬಡ್ಸ್‌ Q2 ಆಫರ್‌ ದರವು 1999ರೂ. ಆಗಿದೆ.

ನಿಯೋ

ರಿಯಲ್‌ಮಿ ಬಡ್ಸ್‌ Q2 ನಿಯೋ ಆಫರ್‌ ದರವು 1299ರೂ. ಆಗಿದೆ.
ರಿಯಲ್‌ಮಿ ಬಡ್ಸ್‌ ಏರ್‌ 2 ಆಫರ್‌ ದರವು 2999ರೂ. ಆಗಿದೆ.
ರಿಯಲ್‌ಮಿ ಬಡ್ಸ್‌ ಏರ್‌ 3 ನಿಯೋ ಆಫರ್‌ ದರವು 1799ರೂ. ಆಗಿದೆ.
ರಿಯಲ್‌ಮಿ 3W BT ಸ್ಪೀಕರ್‌ ಆಫರ್ ಬೆಲೆಯು 699ರೂ. ಆಗಿದೆ.
ರಿಯಲ್‌ಮಿ 5W BT ಸ್ಪೀಕರ್‌ ಆಫರ್ ಬೆಲೆಯು 1299ರೂ. ಆಗಿದೆ.

ಫಿಟ್ನೆಸ್‌ ಬ್ಯಾಂಡ್‌ ಮತ್ತು ಸ್ಮಾರ್ಟ್‌ವಾಚ್‌ಗಳಿಗೂ ಉತ್ತಮ ಕೊಡುಗೆ

ಫಿಟ್ನೆಸ್‌ ಬ್ಯಾಂಡ್‌ ಮತ್ತು ಸ್ಮಾರ್ಟ್‌ವಾಚ್‌ಗಳಿಗೂ ಉತ್ತಮ ಕೊಡುಗೆ

ರಿಯಲ್‌ಮಿ ಬ್ಯಾಂಡ್‌ 2 ಆಫರ್‌ ಬೆಲೆಯು 1999ರೂ. ಆಗಿದೆ.
ರಿಯಲ್‌ಮಿ ವಾಚ್‌ 2 ಆಫರ್‌ ಬೆಲೆಯು 2999ರೂ. ಆಗಿದೆ.
ರಿಯಲ್‌ಮಿ ಸ್ಮಾರ್ಟ್‌ ಕ್ಯಾಮೆರಾ 360 ಡಿಗ್ರಿ ಆಫರ್ ಬೆಲೆಯು 2699ರೂ. ಆಗಿದೆ.

Best Mobiles in India

English summary
Realme has announced discounts on smartphones Realme tablets, Realme laptops, Realme audio products, and smartwatches.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X