ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಟ್ಯಾಬ್‌ ಮತ್ತು ಲ್ಯಾಪ್‌ಟಾಪ್‌ಗಳಿಗೆ ಬಿಗ್‌ ಆಫರ್‌!

|

ಟೆಕ್‌ ಮಾರುಕಟ್ಟೆಯಲ್ಲಿ ರಿಯಲ್‌ಮಿ ಕಂಪೆನಿ ತನ್ನದೇ ಆದ ಪ್ರಾಬಲ್ಯವನ್ನು ಸಾಧಿಸಿದೆ. ಸ್ಮಾರ್ಟ್‌ಫೋನ್‌ಗಳ ಜೊತೆಗೆ ಭಿನ್ನ ಮಾದರಿಯ ಟೆಕ್‌ ಗ್ಯಾಜೆಟ್ಸ್‌ಗಳ ಮೂಲಕ ತನ್ನ ಸ್ಥಾನ ಭದ್ರಪಡಿಸಿಕೊಂಡಿದೆ. ಈಗಾಗಲೇ ಹಲವು ವೈವಿಧ್ಯಮಯ ಗ್ಯಾಜೆಟ್ಸ್‌ಗಳ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸದ್ಯ ಇದೀಗ ತನ್ನ ಗ್ರಾಹಕರಿಗಾಗಿ ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ ಅನ್ನು ಘೋಷಿಸಿದೆ. ಈ ಸೇಲ್‌ ಈಗಾಗಲೇ ಲೈವ್‌ ಆಗಿದ್ದು, ಇದೇ ಆಗಸ್ಟ್‌ 28, 2022 ರವರೆಗೆ ನಡೆಯಲಿದೆ.

ರಿಯಲ್‌ಮಿ

ಹೌದು, ರಿಯಲ್‌ಮಿ ಕಂಪೆನಿ ತನ್ನ ಗ್ರಾಹಕರಿಗಾಗಿ ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ ನಡೆಸುತ್ತಿದೆ. ಈ ಸೇಲ್‌ ಫ್ಲಿಪ್‌ಕಾರ್ಟ್, ಅಮೆಜಾನ್‌, ರಿಯಲ್‌ಮಿ.ಕಾಮ್‌ ಮತ್ತು ಮೇನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ನಡೆಯುತ್ತಿದೆ. ಇನ್ನು ಈ ಸೇಲ್‌ನಲ್ಲಿ ರಿಯಲ್‌ಮಿ ಸ್ಮಾರ್ಟ್‌ಫೋನ್‌ಗಳು ಮಾತ್ರವಲ್ಲದೆ ರಿಯಲ್‌ಮಿ ಟ್ಯಾಬ್‌, ರಿಯಲ್‌ಮಿ ಲ್ಯಾಪ್‌ಟಾಪ್‌ಗಳು ಕೂಡ ವಿಶೇಷ ರಿಯಾಯಿತಿ ಪಡೆದುಕೊಂಡಿವೆ. ಹಾಗಾದ್ರೆ ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ಟ್ಯಾಬ್‌ ಮತ್ತು ಲ್ಯಾಪ್‌ಟಾಪ್‌ಗಳ ಮೇಲೆ ಏನೆಲ್ಲಾ ಡಿಸ್ಕೌಂಟ್‌ ಲಭ್ಯವಾಗಲಿದೆ ಅನ್ನೊದನ್ನ ಈ ಲೇಖನದಲ್ಲಿ ತಿಳಿಸಿಕೊಡ್ತೀವಿ ಓದಿರಿ.

ರಿಯಲ್‌ಮಿ ಪ್ಯಾಡ್‌ ಮಿನಿ (3GB + 32GB ವೈಫೈ ರೂಪಾಂತರ)

ರಿಯಲ್‌ಮಿ ಪ್ಯಾಡ್‌ ಮಿನಿ (3GB + 32GB ವೈಫೈ ರೂಪಾಂತರ)

ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಲ್‌ಮಿ ಪ್ಯಾಡ್‌ ಮಿನಿ 3GB+32GB ವೈಫೈ ರೂಪಾಂತರದ ಆಯ್ಕೆಯು 1,000ರೂ. ಫ್ಲಾಟ್ ರಿಯಾಯಿತಿಯನ್ನು ಪಡೆದುಕೊಂಡಿದೆ. ಅಲ್ಲದೆ 500ರೂ. ವರೆಗೆ ಪ್ರಿಪೇಯ್ಡ್ ಡಿಸ್ಕೌಂಟ್‌ ಆಫರ್‌ ಅನ್ನು ಕೂಡ ಪಡೆದುಕೊಂಡಿದೆ. ಜೊತೆಗೆ ಹೆಚ್ಚುವರಿಯಾಗಿ, 10% ಡಿಸ್ಕೌಂಟ್‌ ಅನ್ನು ಕೂಡ ಪಡೆಯಲಿದೆ. ಇದೆಲ್ಲವನ್ನೂ ಸೇರಿಸಿದರೆ ಈ ಡಿವೈಸ್‌ ನಿಮಗೆ ಕೇವಲ 8,549ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ರಿಯಲ್‌ಮಿ ಪ್ಯಾಡ್‌ ಮಿನಿ (4GB+64GB ವೈಫೈ ರೂಪಾಂತರ)

ರಿಯಲ್‌ಮಿ ಪ್ಯಾಡ್‌ ಮಿನಿ (4GB+64GB ವೈಫೈ ರೂಪಾಂತರ)

ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ನೀವು ರಿಯಲ್‌ಮಿ ಪ್ಯಾಡ್‌ ಮಿನಿ (4GB+64GB ವೈಫೈ ರೂಪಾಂತರ) ದ ಆಯ್ಕೆಯುನ್ನು ಕೂಡ ಡಿಸ್ಕೌಂಟ್‌ನಲ್ಲಿ ಖರೀದಿಸಬಹುದು. ಈ ಪ್ಯಾಡ್‌ ಮೇಲೆ 1,000ರೂ. ಫ್ಲಾಟ್ ರಿಯಾಯಿತಿ ಮತ್ತು 500ರೂ.ಗಳ ಪ್ರಿಪೇಯ್ಡ್ ಡಿಸ್ಕೌಂಟ್‌ ಆಫರ್‌ ಲಭ್ಯವಾಗುವುದರಿಂದ ಇದನ್ನು ನೀವು ಕೇವಲ 10,349ರೂ. ಬೆಲೆಯಲ್ಲಿ ಖರೀದಿಸಲು ಸಾಧ್ಯವಾಗಲಿದೆ.

ರಿಯಲ್‌ಮಿ ಪ್ಯಾಡ್‌ ಮಿನಿ (Wifi + LTE ರೂಪಾಂತರ)

ರಿಯಲ್‌ಮಿ ಪ್ಯಾಡ್‌ ಮಿನಿ (Wifi + LTE ರೂಪಾಂತರ)

ರಿಯಲ್‌ಮಿ ಪ್ಯಾಡ್‌ ಮಿನಿ (4GB+64GB Wifi + LTE ರೂಪಾಂತರ)ದ ಖರೀದಿಯ ಮೇಲೆ ನಿಮಗೆ 1,000ರೂ. ರಿಯಾಯಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಇದರಿಂದ ಈ ಪ್ಯಾಡ್‌ ನಿಮಗೆ 12,749ರೂ. ಬೆಲೆಗೆ ದೊರೆಯಲಿದೆ.

ರಿಯಲ್‌ಮಿ ಪ್ಯಾಡ್‌ ಮಿನಿ (3GB ಮತ್ತು 32GB Wifi + LTE ರೂಪಾಂತರ)

ರಿಯಲ್‌ಮಿ ಪ್ಯಾಡ್‌ ಮಿನಿ (3GB ಮತ್ತು 32GB Wifi + LTE ರೂಪಾಂತರ)

ಈ ಪ್ಯಾಡ್‌ ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ 1,000ರೂ. ರಿಯಾಯಿತಿ ಪಡೆದಿದೆ. ಆದರಿಂದ ಇದನ್ನು ನೀವು 10,799ರೂ. ಬೆಲೆಗೆ ಖರೀದಿಸಲು ಸಾದ್ಯವಾಗಲಿದೆ.

ರಿಯಲ್‌ಮಿ ಪ್ಯಾಡ್‌ ಸ್ಲಿಮ್‌

ರಿಯಲ್‌ಮಿ ಪ್ಯಾಡ್‌ ಸ್ಲಿಮ್‌

ರಿಯಲ್‌ಮಿ ಪ್ಯಾಡ್‌ ಸ್ಲಿಮ್‌ 3GB + 32GB ವೈಫೈ ರೂಪಾಂತರವು 1,000ರೂ. ಫ್ಲಾಟ್ ರಿಯಾಯಿತಿ ಮತ್ತು 1,000ರೂ.ಗಳ ಪ್ರಿಪೇಯ್ಡ್ ಡಿಸ್ಕೌಂಟ್‌ ಆಫರ್‌ ಪಡೆದುಕೊಂಡಿದೆ. ಆದರಿಂದ ಈ ಪ್ಯಾಡ್‌ ನಿಮಗೆ 7999ರೂ. ಬೆಲೆಯಲ್ಲಿ ಲಭ್ಯವಾಗಲಿದೆ.

ರಿಯಲ್‌ಮಿ ಬುಕ್‌ ಸ್ಲಿಮ್‌ ಲ್ಯಾಪ್‌ಟಾಪ್‌

ರಿಯಲ್‌ಮಿ ಬುಕ್‌ ಸ್ಲಿಮ್‌ ಲ್ಯಾಪ್‌ಟಾಪ್‌

ಇದಲ್ಲದೆ ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಲ್‌ಮಿ ಲ್ಯಾಪ್‌ಟಾಪ್‌ಗಳಿಗೂ ಕೂಡ ವಿಶೇಷ ಡಿಸ್ಕೌಂಟ್‌ ಲಭ್ಯವಿದೆ. ಇದರಲ್ಲಿ ರಿಯಲ್‌ಮಿ ಬುಕ್‌ ಸ್ಲಿಮ್‌ ಲ್ಯಾಪ್‌ಟಾಪ್‌ 9,000ರೂ. ವರೆಗೆ ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಲ್ಯಾಪ್‌ಟಾಪ್‌ ಅನ್ನು ನೀವು ಕೇವಲ 37,999ರೂ. ಬೆಲೆಗೆ ಖರೀದಿಸಬಹುದು. ಇನ್ನು ಈ ಲ್ಯಾಪ್‌ಟಾಪ್‌ i3 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸಲಿದ್ದು 8GB + 256GB ರೂಪಾಂತರದ ಆಯ್ಕೆಯಲ್ಲಿ ಬರಲಿದೆ.

ರಿಯಲ್‌ಮಿ ಬುಕ್‌ ಸ್ಲಿಮ್‌ (16GB + 512GB)

ರಿಯಲ್‌ಮಿ ಬುಕ್‌ ಸ್ಲಿಮ್‌ (16GB + 512GB)

ಇನ್ನು i5 ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುವ ರಿಯಲ್‌ಮಿಬುಕ್‌ನ 16GB + 512GB ರೂಪಾಂತರವು 7,000ರೂಪಾಯಿಗಳ ಡಿಸ್ಕೌಂಟ್‌ ಪಡೆದುಕೊಂಡಿದೆ. ಆದರಿಂದ ಈ ಲ್ಯಾಪ್‌ಟಾಪ್‌ ನಿಮಗೆ 59,999ರೂ. ಗಳಿಗೆ ಬದಲಾಗಿ 52,999ರೂ. ಗಳಿಗೆ ಲಭ್ಯವಾಗಲಿದೆ.

ರಿಯಲ್‌ಮಿ

ಇದರೊಂದಿಗೆ ನೀವು ರಿಯಲ್‌ಮಿ ಫ್ಯಾನ್‌ ಫೆಸ್ಟಿವಲ್‌ ಸೇಲ್‌ನಲ್ಲಿ ರಿಯಲ್‌ಮಿ ಬಡ್ಸ್‌ ಏರ್‌ ಪ್ರೊ TWS ಇಯರ್‌ಬಡ್ಸ್‌ಗಳ ಮೇಲೆ 1,000 ರೂಪಾಯಿಗಳ ರಿಯಾಯಿತಿ ಪಡೆದುಕೊಳ್ಳಬಹುದು. ಇದರಿಂದ ಇದನ್ನು ನೀವು ಕೇವಲ 3,999ರೂ. ಬೆಲೆಗೆ ಖರೀದಿಸಬಹುದಾಗಿದೆ.

Best Mobiles in India

Read more about:
English summary
Realme Fan Festival Sale: Massive discounts on tablets and laptops

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X