ಸದ್ಯದಲ್ಲೇ ಭಾರತಕ್ಕೆ ಲಗ್ಗೆ ಇಡಲಿದೆ 'ರಿಯಲ್‌ಮಿ GT ನಿಯೋ 3T' ಫೋನ್‌!

|

ರಿಯಲ್‌ಮಿ ಮೊಬೈಲ್ ಸಂಸ್ಥೆಯು ಭಿನ್ನ ಫೋನ್‌ಗಳ ಶ್ರೇಣಿಯ ಮೂಲಕ ಮಾರುಕಟ್ಟೆಯಲ್ಲಿ ಸದ್ದು ಮಾಡಿದೆ. ಆ ಪೈಕಿ ರಿಯಲ್‌ಮಿ GT ಸರಣಿಯಲ್ಲಿನ ಕೆಲವು ಸ್ಮಾರ್ಟ್‌ಫೋನ್‌ಗಳು ಈಗಾಗಲೇ ಹೆಚ್ಚಿನ ಗಮನ ಸೆಳೆದಿವೆ. ಕಂಪನಿಯು ಇದೀಗ ತನ್ನ GT ಸರಣಿಯಲ್ಲಿ ನೂತನವಾಗಿ ರಿಯಲ್‌ಮಿ GT ನಿಯೋ 3T ಫೋನ್‌ ಅನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನ್ ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 870 SoC ಪ್ರೊಸೆಸರ್‌ ಪವರ್‌ನೊಂದಿಗೆ ಎಂಟ್ರಿ ಕೊಡಲಿದೆ.

ಸೆಪ್ಟೆಂಬರ್

ಹೌದು, ರಿಯಲ್‌ಮಿ ಕಂಪನಿಯು ಹೊಸ ರಿಯಲ್‌ಮಿ GT ನಿಯೋ 3T ಹೆಸರಿನ ಸ್ಮಾರ್ಟ್‌ಫೋನ್‌ ಅನ್ನು ಇದೇ ಸೆಪ್ಟೆಂಬರ್ 16 ರಂದು ದೇಶಿಯ ಮಾರುಕಟ್ಟೆಗೆ ಲಾಂಚ್ ಮಾಡಲಿದೆ. ಈ AMOLED ಮಾದರಿಯ ಡಿಸ್‌ಪ್ಲೇ ಪಡೆದಿರಲಿದ್ದು, ಜೊತೆಗೆ 120Hz ಸಾಮರ್ಥ್ಯದ ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿರಲಿದೆ. ಹಾಗೆಯೇ 80W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವನ್ನು ಇದು ಒಳಗೊಂಡಿರಲಿದೆ.

ಸ್ಮಾರ್ಟ್‌ಫೋನ್

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್ ಭಾರತದಲ್ಲಿ ಇದೇ ಸೆಪ್ಟೆಂಬರ್ 16 ರಂದು ಮಧ್ಯಾಹ್ನ 12:30 ಕ್ಕೆ ಬಿಡುಗಡೆಯಾಗಲಿದೆ ಎಂದು ಕಂಪನಿಯ ಇತ್ತೀಚಿನ ಟ್ವಿಟ್ಟ ಮೂಲಕ ತಿಳಿದುಬಂದಿದೆ. ಹಾಗಾದರೇ ಇನ್ನುಳಿದಂತೆ ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿರಲಿದೆ ಎಂಬುದನ್ನು ನೋಡೋಣ ಬನ್ನಿರಿ.

ರಿಯಲ್‌ಮಿ GT ನಿಯೋ 3T ಫೀಚರ್ಸ್

ರಿಯಲ್‌ಮಿ GT ನಿಯೋ 3T ಫೀಚರ್ಸ್

ರಿಯಲ್‌ಮಿ GT ನಿಯೋ 3T (Realme GT Neo 3T) ಈ ಫೋನ್‌ 6.62 ಇಂಚಿನ E4 AMOLED ಡಿಸ್‌ಪ್ಲೇಯನ್ನು ಹೊಂದಿದೆ. ಜೊತೆಗೆ 120Hz ರಿಫ್ರೆಶ್ ರೇಟ್‌ ಅನ್ನು ಒಳಗೊಂಡಿರಲಿದೆ. ಹಾಗೆಯೇ ಸ್ಕ್ರೀನ್‌ 1,300 ನಿಟ್‌ಗಳ ಗರಿಷ್ಠ ಬ್ರೈಟ್ನೆಸ್‌ ಅನ್ನು ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದರೊಂದಿಗೆ HDR10+ ಬೆಂಬಲವನ್ನು ಸಹ ಹೊಂದಿದೆ. ಅಲ್ಲದೇ ಕ್ವಾಲ್ಕಮ್‌ ಸ್ನಾಪ್‌ಡ್ರಾಗನ್ 870 SoC ಪ್ರೊಸೆಸರ್‌ ಪವರ್‌ನೊಂದಿಗೆ ಇದು ಕಾರ್ಯನಿರ್ವಹಿಸಲಿದೆ. ಜೊತೆಗೆ Adreno 650 GPU ಮತ್ತು 8GB RAM ಅನ್ನು ಹೊಂದಿದೆ.

ಸ್ಮಾರ್ಟ್‌ಫೋನ್

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಖ್ಯ ಕ್ಯಾಮೆರಾವು 64 ಮೆಗಾ ಪಿಕ್ಸೆಲ್ ಸಾಮರ್ಥ್ಯ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8 ಮೆಗಾ ಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಇನ್ನು ತೃತೀಯ ಕ್ಯಾಮೆರಾ 2 ಮೆಗಾ ಪಿಕ್ಸೆಲ್ ಸೆನ್ಸಾರ್ ಹೊಂದಿದೆ. ಹಾಗೆಯೇ ಈ ಫೋನ್ 60fps ನಲ್ಲಿ 4K ಮಾದರಿಯ ವಿಡಿಯೋ ರೆಕಾರ್ಡಿಂಗ್ ಸೌಲಬ್ಯವನ್ನು ಪಡೆದಿದೆ.

ಪಿಕ್ಸೆಲ್

ಇನ್ನು ಮುಂಭಾಗದಲ್ಲಿ 16 ಮೆಗಾ ಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ರಿಯಲ್‌ಮಿ GT ನಿಯೋ 3T ಫೋನ್‌ 5,000 mAh ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ಒಳಗೊಂಡಿರಲಿದ್ದು, ಇದಕ್ಕೆ ಪೂರಕವಾಗಿ 80W ವೇಗದ ಚಾರ್ಜಿಂಗ್ ಬೆಂಬಲ ಪಡೆದಿರಲಿದೆ. ಫೋನ್ 5G ಸಂಪರ್ಕವನ್ನು ಸಹ ಹೊಂದಿದೆ. ಫಿಂಗರ್‌ಪ್ರಿಂಟ್ ಸೆನ್ಸಾರ್ ಆಯ್ಕೆಯನ್ನು ಈ ಫೋನ್‌ ಪಡೆದಿದೆ.

ಇತರೆ ಸೌಲಭ್ಯಗಳು

ಇತರೆ ಸೌಲಭ್ಯಗಳು

ರಿಯಲ್‌ಮಿ GT ನಿಯೋ 3T ಸ್ಮಾರ್ಟ್‌ಫೋನ್‌ 8GB ಮೆಮೊರಿ ಮತ್ತು 256GB ಆಂತರೀಕ ಸಂಗ್ರಹ ಸಾಮರ್ಥ್ಯದ ಆಯ್ಕೆ ಹೊಂದಿರಲಿದೆ. ಹೆಚ್ಚುವರಿಯಾಗಿ ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿ ವಿಸ್ತರಿಸಲು ಸ್ಲಾಟ್ ಆಯ್ಕೆ ಇರುವ ಸಾಧ್ಯತೆ ಕಡಿಮೆ ಎನ್ನಲಾಗಿದೆ. ಇನ್ನು ಕನೆಕ್ಟಿವಿಟಿಯಲ್ಲಿ ಈ ಫೋನ್‌ 5G, Wi-Fi 6, ಬ್ಲೂಟೂತ್ 5.2, GPS, 3.5mm ಆಡಿಯೋ ಜಾಕ್‌ ಆಯ್ಕೆಗಳನ್ನು ಪಡೆದಿದೆ.

Best Mobiles in India

English summary
Realme GT Neo 3T Will Launch in India on September 16: All Details.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X