240W ಚಾರ್ಜಿಂಗ್ ಬೆಂಬಲದ ರಿಯಲ್‌ಮಿ ಫೋನ್‌ ಲಾಂಚ್‌ಗೆ ಡೇಟ್ ಫಿಕ್ಸ್‌!?

|

ಸ್ಮಾರ್ಟ್‌ಗ್ಯಾಜೆಟ್‌ ವಿಭಾಗದಲ್ಲಿ ರಿಯಲ್‌ಮಿ ತನ್ನದೇ ಆದ ವಿಭಿನ್ನ ಶೈಲಿಯ ಗ್ಯಾಜೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಟೆಕ್‌ ವಲಯದಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿದೆ. ಅದರಲ್ಲೂ ಅಗ್ಗದ ದರದಲ್ಲಿ ಅತ್ಯುತ್ತಮ ಫೀಚರ್ಸ್‌ ಆಯ್ಕೆ ಇರುವ ಡಿವೈಸ್‌ಗಳನ್ನು ಪರಿಚಯಿಸುವ ಪ್ರಮುಖ ಕಂಪೆನಿಗಳಲ್ಲಿ ರಿಯಲ್‌ ಮಿ ಸಹ ಒಂದಾಗಿದೆ. ಇದರ ನಡುವೆ ಕೆಲವು ದಿನಗಳ ಹಿಂದೆ ಘೋಷಣೆ ಮಾಡಲಾಗಿದ್ದ ಫಾಸ್ಟ್‌ ಚಾರ್ಜಿಂಗ್‌ ಆಯ್ಕೆ ಇರುವ ಹೊಸ ಸ್ಮಾರ್ಟ್‌ಫೋನ್‌ನ ಅನಾವರಣದ ದಿನಾಂಕ ನಿಗದಿಯಾಗಿದೆ.

240W ಚಾರ್ಜಿಂಗ್ ಬೆಂಬಲದ ರಿಯಲ್‌ಮಿ ಫೋನ್‌ ಲಾಂಚ್‌ಗೆ ಡೇಟ್ ಫಿಕ್ಸ್‌!?

ಹೌದು, ರಿಯಲ್‌ಮಿ GT ನಿಯೋ 5 ಅನ್ನು MWC 2023 ರಲ್ಲಿ ಲಾಂಚ್‌ ಮಾಡಲಾಗುವ ನಿರೀಕ್ಷೆ ಇದ್ದು, ಈಗಾಗಲೇ ಈ ವಿಶೇಷ ಚಾರ್ಜಿಂಗ್‌ ಸಾಮರ್ಥ್ಯ ಇರುವ ಸ್ಮಾರ್ಟ್‌ಫೋನ್‌ನ ಬಗ್ಗೆ ಕೆಲವು ಫೀಚರ್ಸ್‌ ಲೀಕ್‌ ಆಗಿವೆ. ಅದರ ಪ್ರಕಾರ ಈ ಸ್ಮಾರ್ಟ್‌ಫೋನ್‌ ಬರೋಬ್ಬರಿ 240W ವೇಗದ ಚಾರ್ಜಿಂಗ್ ಬೆಂಬಲವನ್ನು ಪಡೆಯಲಿದೆ. ಹಾಗೆಯೇ ಎರಡು ಬ್ಯಾಟರಿ ಸಾಮರ್ಥ್ಯದ ವೇರಿಯಂಟ್‌ನಲ್ಲಿ ಈ ಫೋನ್‌ ಪ್ಯಾಕ್‌ ಆಗಲಿರುವುದು ಮತ್ತಷ್ಟು ವಿಶೇಷವಾದ ಸಂಗತಿ. ಹಾಗಿದ್ರೆ ಇದರ ಪ್ರಮುಖ ಫೀಚರ್ಸ್‌ ಅನ್ನು ಈ ಲೇಖನದಲ್ಲಿ ತಿಳಿಸಿಕೊಡಲಾಗಿದೆ ಓದಿರಿ.

ಡಿಸ್‌ಪ್ಲೇ ಹೇಗಿರಲಿದೆ?
ಈ ಹೊಸ ಸ್ಮಾರ್ಟ್‌ಫೋನ್‌ ರಿಯಲ್‌ಮಿ GT ನಿಯೋ 5 6.7 ಇಂಚಿನ 1.5K OLED ಡಿಸ್‌ಪ್ಲೇಯನ್ನು ಹೊಂದಿರಲಿದ್ದು, ಇದು 144Hz ರಿಫ್ರೆಶ್ ರೇಟ್‌ ನೀಡಲಿದೆ ಎನ್ನಲಾಗಿದೆ. ಆದರೆ, ಈ ಫೋನ್‌ನ ನಿಟ್ಸ್‌ ರೇಟ್‌ ಹಾಗೂ ಪಿಕ್ಸೆಲ್‌ ರೆಸಲ್ಯೂಶನ್‌, ಸೆಲ್ಫಿ ಕ್ಯಾಮೆರಾವನ್ನು ಯಾವ ಬದಿಯಲ್ಲಿ ಇರಿಸಲಾಗುತ್ತದೆ? ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.

240W ಚಾರ್ಜಿಂಗ್ ಬೆಂಬಲದ ರಿಯಲ್‌ಮಿ ಫೋನ್‌ ಲಾಂಚ್‌ಗೆ ಡೇಟ್ ಫಿಕ್ಸ್‌!?

ಪ್ರೊಸೆಸರ್‌ ವಿವರ
ಈ ಸ್ಮಾರ್ಟ್‌ಫೋನ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8+ ಜನ್‌ 1 SoC ನಿಂದ ಕಾರ್ಯನಿರ್ವಹಿಸುತ್ತದೆ ಎಂದು ಹೇಳಲಾಗುತ್ತಿದ್ದು, ಇದರೊಂದಿಗೆ ಈ ಫೋನ್‌ 16GB RAM ಮತ್ತು 512GB ವರೆಗಿನ ಇಂಟರ್ನಲ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಇದು ಪಡೆದುಕೊಂಡಿರಲಿದೆ ಎನ್ನುವ ಮಾಹಿತಿ ದೃಢವಾಗಿದೆ. ಇದಿಷ್ಟೇ ಅಲ್ಲದೆ ಈ ಫೋನ್‌ ಆಂಡ್ರಾಯ್ಡ್‌ 13 ಆಧಾರಿತ ರಿಯಲ್‌ಮಿ UI 4.0 ಮೂಲಕ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ.

ಟ್ರಿಪಲ್‌ ರಿಯರ್‌ ಕ್ಯಾಮೆರಾ
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ರಚನೆ ಹೊಂದಿರಲಿದೆ ಎನ್ನಲಾಗಿದ್ದು, ಇದರಲ್ಲಿ 50 ಮೆಗಾಪಿಕ್ಸೆಲ್‌ ಪ್ರಾಥಮಿಕ ಕ್ಯಾಮೆರಾ, 8 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಆಂಗಲ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್‌ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿರಲಿದೆ ಎಂದು ತಿಳಿದುಬಂದಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಪಿಕ್ಸೆಲ್‌ ಫ್ರಂಟ್ ಕ್ಯಾಮೆರಾ ಹೊಂದಿರಲಿದೆ.

ಎರಡು ವೇರಿಯಂಟ್‌ನ ಬ್ಯಾಟರಿ ಆಯ್ಕೆ?
ಪ್ರಮುಖವಾಗಿ ಈ ಫೋನ್‌ ಬ್ಯಾಟರಿ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಸದ್ದು ಮಾಡುತ್ತಿದ್ದು, ಎರಡು ವೇರಿಯಂಟ್‌ನಲ್ಲಿ ಪ್ಯಾಕ್‌ ಆಗಲಿದೆ ಎನ್ನಲಾಗಿದೆ. ಅದರಲ್ಲಿ 5,000mAh ಸಾಮರ್ಥ್ಯದ ಬ್ಯಾಟರಿಯ ವೇರಿಯಂಟ್‌ 150W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಿದರೆ ಮತ್ತೊಂದು ಫೋನ್‌ 4,600mAh ಸಾಮರ್ಥ್ಯದ ಬ್ಯಾಟರಿಯೊಂದಿಗೆ ಹೊಸ 240W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಬೆಂಬಲಿಸುತ್ತದೆ ಎನ್ನುವ ವಿಷಯ ದೃಢವಾಗಿದೆ.

ಲಾಂಚ್‌ ದಿನಾಂಕ ಯಾವುದು?
ಇನ್ನು ಈ ಫೋನ್‌ ಅನ್ನು ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2023 ರಲ್ಲಿ ಘೋಷಿಸಲಾಗುತ್ತಿದ್ದು, ಫೆಬ್ರವರಿ 27 ಅಥವಾ ಮಾರ್ಚ್ 2 ರ ನಡುವೆ ಬಾರ್ಸಿಲೋನಾದಲ್ಲಿ ಇದು ಅನಾವರಣ ಆಗಲಿದೆ ಎನ್ನುವ ಮಾತು ಕೇಳಿಬರುತ್ತಿವೆ.

240W ಚಾರ್ಜಿಂಗ್ ಬೆಂಬಲದ ರಿಯಲ್‌ಮಿ ಫೋನ್‌ ಲಾಂಚ್‌ಗೆ ಡೇಟ್ ಫಿಕ್ಸ್‌!?

ಇದರೊಂದಿಗೆ ರಿಯಲ್‌ಮಿ ತನ್ನ ಆಂಡ್ರಾಯ್ಡ್‌ 13 ಅಪ್‌ಡೇಟ್ ಮಾರ್ಗಸೂಚಿ ಅನ್ವಯ ತನ್ನ ಬೀಟಾ ರಿಯಲ್‌ಮಿ UI 4.0 ಬೀಟಾ ಸಾಫ್ಟ್‌ವೇರ್ ಪ್ರೋಗ್ರಾಂ ಅನ್ನು GT ಮಾಸ್ಟರ್ ಆವೃತ್ತಿಗಾಗಿ ನಿನ್ನೆಯಷ್ಟೇ ಘೋಷಣೆ ಮಾಡಿದೆ. ಆದರೆ ಇದು ಎಲ್ಲಾ ಬಳಕೆದಾರರಿಗೂ ಲಭ್ಯವಾಗದೆ ಆಯ್ದ ಬಳಕೆದಾರರಿಗೆ ಮಾತ್ರ ಲಭ್ಯವಾಗಲಿದೆ. ಹಾಗೆಯೇ GT ಮಾಸ್ಟರ್ ಆವೃತ್ತಿಗಾಗಿ ರಿಯಲ್‌ಮಿ UI 4.0 ಆರಂಭಿಕ ಹಂತದಲ್ಲಿರುವುದರಿಂದ ಇದು ಕೆಲವು ದೋಷಗಳನ್ನು ಹೊಂದಿರಬಹುದು ಎನ್ನಲಾಗಿದೆ.

ನಿಮ್ಮ GT ಮಾಸ್ಟರ್ ಆವೃತ್ತಿಯಲ್ಲಿ ರಿಯಲ್‌ಮಿ UI 4.0 ಆಂಡ್ರಾಯ್ಡ್‌ 13 ಅಪ್‌ಡೇಟ್ ಅನ್ನು ಇನ್‌ಸ್ಟಾಲ್‌ ಮಾಡಲು ಬಯಸಿದರೆ, ನಿಮ್ಮ ಡಿವೈಸ್‌ ಕನಿಷ್ಠ 60 ಪ್ರತಿಶತ ಬ್ಯಾಟರಿ ಸಾಮರ್ಥ್ಯ ಹೊಂದಿದೆಯಾ ಎನ್ನುವುದನ್ನು ಖಚಿತಪಡಿಸಿಕೊಳ್ಳಿ.

Best Mobiles in India

English summary
Realme GT Neo 5 with 240W charging tipped to launch.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X