ಇಂದು ರಿಯಲ್‌ಮಿ ನಾರ್ಜೊ 50i ಪ್ರೈಮ್ ಫಸ್ಟ್‌ ಸೇಲ್‌!..ಬೆಲೆ ತುಂಬಾ ಕಡಿಮೆ!

|

ರಿಯಲ್‌ಮಿ ಮೊಬೈಲ್ ಸಂಸ್ಥೆಯ ತನ್ನ ಬಹುನಿರೀಕ್ಷಿತ ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಆಗಿ ಈಗಾಗಲೇ ಗ್ರಾಹಕರ ಗಮನ ಸೆಳೆದಿದೆ. ಈ ಸ್ಮಾರ್ಟ್‌ಫೋನ್ ಇಂದು (ಸೆ. 23) ಜನಪ್ರಿಯ ಇ ಕಾಮರ್ಸ್‌ ತಾಣ ಅಮೆಜಾನ್ ಆಯೋಜಿಸಿರುವ ಗ್ರೇಟ್‌ ಇಂಡಿಯನ್‌ ಸೇಲ್‌ ಹಾಗೂ ಅಧಿಕೃತ ರಿಯಲ್‌ ಮಿ ತಾಣದ ಮೂಲಕ ಮೊದಲ ಸೇಲ್ ಆರಂಭಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 7,999 ರೂ. ಆಗಿದೆ.

ಮಾರಾಟ

ಹೌದು, ರಿಯಲ್‌ ಮಿ ಕಂಪನಿಯ ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನಿನ ಮೊದಲ ಮಾರಾಟ ಇಂದು ನಡೆಯಲಿದೆ. ಈ ಸ್ಮಾರ್ಟ್‌ಫೋನ್ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯವನ್ನು ಒಳಗೊಂಡಿದ್ದು, ಇದರೊಂದಿಗೆ ಆಕ್ಟಾ ಕೋರ್‌ UniSoC T612 ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಇನ್ನುಳಿದಂತೆ ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್‌ ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಒಳಗೊಂಡಿದೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.

ಆಫರ್‌ ಏನಿದೆ?

ಆಫರ್‌ ಏನಿದೆ?

ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವು ಕ್ರಮವಾಗಿ 3GB + 32GB ಮತ್ತು 4GB + 64GB ಆಗಿವೆ. ಆರಂಭಿಕ 3GB + 32GB ವೇರಿಯಂಟ್‌ ಬೆಲೆಯು 7,999 ರೂ. ಆಗಿದ್ದು, 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 8,999ರೂ. ಆಗಿದೆ. ಎಸ್‌ಬಿಐ ಕಾರ್ಡ್‌ ಮೂಲಕ ಖರೀದಿಸುವ ಗ್ರಾಹಕರು ಶೇಕಡಾ 10% ರಿಯಾಯಿತಿ ಪಡೆಯುತ್ತಾರೆ.

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ಡಿಸ್‌ಪ್ಲೇ ರಚನೆ ಹಾಗೂ ವಿನ್ಯಾಸ

ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಒಳಗೊಂಡಿದೆ. ಜೊತೆಗೆ 88.7 ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 400 ನಿಟ್ ಬ್ರೈಟ್ನೆಸ್ ಅನ್ನು ಹೊಂದಿದೆ.

ಪ್ರೊಸೆಸರ್‌ ಪವರ್‌ ಎಷ್ಟು

ಪ್ರೊಸೆಸರ್‌ ಪವರ್‌ ಎಷ್ಟು

ರಿಯಲ್‌ಮಿ ನಾರ್ಜೋ 50i ಪ್ರೈಮ್ ಸ್ಮಾರ್ಟ್‌ಫೋನ್ ಆಕ್ಟಾ ಕೋರ್ Unisoc T612 SoC ಪ್ರೊಸೆಸರ್‌ ನಿಂದ ಚಾಲಿತವಾಗಲಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ ಗೋ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದ್ದು, 1TB ವರೆಗೆ ಸ್ಟೋರೇಜ್‌ ಸಾಮರ್ಥ್ಯದ ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮೆರಾ ಸೆನ್ಸಾರ್‌ ಎಷ್ಟಿದೆ

ಕ್ಯಾಮೆರಾ ಸೆನ್ಸಾರ್‌ ಎಷ್ಟಿದೆ

ರಿಯಲ್‌ಮಿ ನಾರ್ಜೋ 50i ಪ್ರೈಮ್ ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಹೊಂದಿದ್ದು, ಅದು 8 ಮೆಗಾಪಿಕ್ಸೆಲ್ AI ಸೆನ್ಸಾರ್ ನಲ್ಲಿದೆ. ಜೊತೆಗೆ 5 ಮೆಗಾಪಿಕ್ಸೆಲ್ ಸಾಮರ್ಥ್ಯದ ಸೆಲ್ಫಿ ಕ್ಯಾಮರಾವನ್ನು ನೀಡಲಾಗಿದೆ. ಕೆಲವು ಬೇಸಿಕ್ ಫೋಟೊ ಎಡಿಟಿಂಗ್ ಆಯ್ಕೆಗಳನ್ನು ಇದು ಒಳಗೊಂಡಿದೆ.

ಬ್ಯಾಟರಿ ಬ್ಯಾಕ್‌ಅಪ್‌

ಬ್ಯಾಟರಿ ಬ್ಯಾಕ್‌ಅಪ್‌

ರಿಯಲ್‌ಮಿ ನಾರ್ಜೋ 50i ಪ್ರೈಮ್ ಫೋನ್‌ 5,000mAh ಬ್ಯಾಟರಿ ಶಕ್ತಿ ಹೊಂದಿದ್ದು, ಇದಕ್ಕೆ ಪೂರಕವಾಗಿ 10W ಸಾಮರ್ಥ್ಯದ ಫಾಸ್ಟ್‌ ಚಾರ್ಜಿಂಗ್ ಸೌಲಭ್ಯವನ್ನು ಒಳಗೊಂಡಿದೆ. ಜೊತೆಗೆ ಕನೆಕ್ಟಿವಿಟಿ ಆಯ್ಕೆಯಲ್ಲಿ ಡ್ಯುಯಲ್-ಸಿಮ್, 4G, ವೈಫೈ 802.11 b/g/n, ಬ್ಲೂಟೂತ್ 5.0, GPS ಮತ್ತು ಗ್ಲೋನಾಸ್ ಸೇರಿವೆ.

ಬೆಲೆ ಮತ್ತು ಲಭ್ಯತೆ

ಬೆಲೆ ಮತ್ತು ಲಭ್ಯತೆ

ರಿಯಲ್‌ಮಿ ನಾರ್ಜೊ 50i ಪ್ರೈಮ್ ಸ್ಮಾರ್ಟ್‌ಫೋನ್‌ ಎರಡು ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದ್ದು, ಅವು ಕ್ರಮವಾಗಿ 3GB + 32GB ಮತ್ತು 4GB + 64GB ಆಗಿವೆ. ಆರಂಭಿಕ 3GB + 32GB ವೇರಿಯಂಟ್‌ ಬೆಲೆಯು 7,999 ರೂ. ಆಗಿದ್ದು, 4GB + 64GB ಸ್ಟೋರೇಜ್‌ ವೇರಿಯಂಟ್‌ ಬೆಲೆಯು 8,999ರೂ. ಆಗಿದೆ. ಈ ಫೋನ್ ಅಮೆಜಾನ್‌ ಗ್ರೇಟ್‌ ಇಂಡಿಯನ್ ಸೇಲ್‌ ಹಾಗೂ ರಿಯಲ್‌ಮಿ ಸೈಟ್‌ನಲ್ಲಿ ಖರೀದಿಗೆ ಲಭ್ಯ.

ರಿಯಲ್‌ಮಿ ನಾರ್ಜೋ 50i ಪ್ರೈಮ್ ಪರ್ಯಾಯ ಫೋನ್‌ಗಳು

ರಿಯಲ್‌ಮಿ ನಾರ್ಜೋ 50i ಪ್ರೈಮ್ ಪರ್ಯಾಯ ಫೋನ್‌ಗಳು

ರಿಯಲ್‌ಮಿ ನಾರ್ಜೋ 50i ಪ್ರೈಮ್ ಎಂಟ್ರಿ ಲೆವೆಲ್‌ ಫೋನ್‌ ಆಗಿದ್ದು, ಇದಕ್ಕೆ ಪರ್ಯಾಯ ಫೋನ್‌ಗಳನ್ನು ನೋಡುವುದಾರರೆ, ರೆಡ್ಮಿ 10A, ಟೆಕ್ನೋ ಸ್ಪಾರ್ಕ್ 9 ಮತ್ತು ಇನ್ಫಿನಿಕ್ಸ್‌ ಹಾಟ್‌ 12 ಪ್ಲೇ ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳಿಂದ ಗಮನ ಸೆಳೆದಿವೆ.

Best Mobiles in India

English summary
Realme Narzo 50i Prime First Sale Today: Price in India, Offers, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X