ರಿಯಲ್‌ಮಿ ನಾರ್ಜೋ 50i ಪ್ರೈಮ್ ಲಾಂಚ್; ಇದರ ಫೀಚರ್ಸ್‌ಗಳೇನು?

|

ಭಾರತದಲ್ಲಿ ಕಡಿಮೆ ಬೆಲೆಗೆ ಹೆಚ್ಚು ಫೀಚರ್ಸ್ ಇರುವ ಸ್ಮಾರ್ಟ್‌ಫೋನ್‌ಗಳನ್ನು ಗ್ರಾಹಕರಿಗೆ ನೀಡಿ ಹೆಸರಾಗಿರುವ ರಿಯಲ್‌ಮಿ ಈಗ ಮತ್ತೊಂದು ಸ್ಮಾರ್ಟ್‌ಫೋನ್‌ನ್ನು ಬಿಡುಗಡೆ ಮಾಡಿದೆ. ಅದುವೇ ರಿಯಲ್‌ಮಿ ನಾರ್ಜೋ 50i ಪ್ರೈಮ್. ಈ ಫೋನ್‌ 5,000 mAh ಶಕ್ತಿಯ ಬ್ಯಾಟರಿ ಹೊಂದಿದ್ದು, 8 ಮೆಗಾಪಿಕ್ಸೆಲ್ AI ಕ್ಯಾಮರಾ ಹೊಂದಿದೆ. ಹಾಗೂ ಎರಡು ವೇರಿಯಂಟ್‌ಗಳಲ್ಲಿ ಈ ಸ್ಮಾರ್ಟ್‌ಫೋನ್‌ ಅನಾವರಣಗೊಂಡಿದೆ.

ರಿಯಲ್‌ಮಿ

ರಿಯಲ್‌ಮಿ ನಾರ್ಜೋ 50i ಪ್ರೈಮ್ (Realme Narzo 50i Prime) ಭಾರತೀಯ ಮಾರುಕಟ್ಟೆಗೆ ಲಗ್ಗೆ ಹಾಕಿದ್ದು, ಬಜೆಟ್‌ ದರದ ಬೆಲೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 3GB RAM + 32GB ಹಾಗೂ 4GB RAM + 64GB ವೇರಿಯಂಟ್ ಆಯ್ಕೆಗಳಲ್ಲಿ ಮಾರಾಟಕ್ಕೆ ಲಭ್ಯವಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ರಿಯಲ್‌ಮಿ ನಾರ್ಜೋ 50A ಗೆ ಬಹುತೇಕ ಹೋಲಿಕೆಯಾಗುತ್ತದೆ. ಈ ಫೋನ್‌ನ ಇತರ ಫೀಚರ್‌ಗಳನ್ನು ಈ ಲೇಖನದಲ್ಲಿ ನೋಡೋಣ.

ಡಿಸ್‌ಪ್ಲೇ ಮಾಹಿತಿ:

ಡಿಸ್‌ಪ್ಲೇ ಮಾಹಿತಿ:

ರಿಯಲ್‌ಮಿ ನಾರ್ಜೋ 50i ಪ್ರೈಮ್ 6.5 ಇಂಚಿನ ಡಿಸ್ಪ್ಲೇಯನ್ನು ಹೊಂದಿದ್ದು, ಈ ಡಿಸ್ಪ್ಲೆ 1600 x 720 ಪಿಕ್ಸೆಲ್‌ಗಳ ರೆಸಲ್ಯೂಶನ್‌ ಒಳಗೊಂಡಿದೆ. ಜೊತೆಗೆ 88.7 ಪ್ರತಿಶತದಷ್ಟು ಸ್ಕ್ರೀನ್ ಟು ಬಾಡಿ ಅನುಪಾತ ಮತ್ತು 400 ನಿಟ್ ಬ್ರೈಟ್ನೆಸ್ ಅನ್ನು ಹೊಂದಿದೆ.

ಪ್ರೊಸೆಸರ್ ಮಾಹಿತಿ:

ಪ್ರೊಸೆಸರ್ ಮಾಹಿತಿ:

ಈ ಫೋನ್ ಆಕ್ಟಾ ಕೋರ್ Unisoc T612 SoC ನಿಂದ ಚಾಲಿತವಾಗಲಿದ್ದು, ಆಂಡ್ರಾಯ್ಡ್ 11 ಆಧಾರಿತ ರಿಯಲ್‌ಮಿ ಯುಐ ಗೋ ಆವೃತ್ತಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಮೈಕ್ರೊ SD ಕಾರ್ಡ್ ಸ್ಲಾಟ್ ಅನ್ನು ಒಳಗೊಂಡಿದ್ದು, ಬರೋಬ್ಬರಿ 1TB ವರೆಗೆ ಸ್ಟೋರೇಜ್‌ ಸಾಮರ್ಥ್ಯದ ವರೆಗೂ ವಿಸ್ತರಣೆ ಮಾಡಿಕೊಳ್ಳಬಹುದಾಗಿದೆ.

ಕ್ಯಾಮರಾ ಮತ್ತು ಬ್ಯಾಟರಿ ವಿಶೇಷತೆ:

ಕ್ಯಾಮರಾ ಮತ್ತು ಬ್ಯಾಟರಿ ವಿಶೇಷತೆ:

ರಿಯಲ್‌ಮಿ ನಾರ್ಜೋ 50i ಪ್ರೈಮ್ 8 ಮೆಗಾಪಿಕ್ಸೆಲ್ AI ಪ್ರಮುಖ ಕ್ಯಾಮೆರಾ ಹೊಂದಿದ್ದು, ಜೊತೆಗೆ 5 ಮೆಗಾಪಿಕ್ಸೆಲ್ ನ ಸೆಲ್ಫಿ ಕ್ಯಾಮರಾವನ್ನು ಹೊಂದಿದೆ. ಇನ್ನು ಈ ಫೋನ್‌ 5,000mAh ಬ್ಯಾಟರಿ ಶಕ್ತಿ ಹೊಂದಿದ್ದು, 4 ದಿನಗಳವರೆಗೆ ಆಡಿಯೊ ಪ್ಲೇಬ್ಯಾಕ್ ಬೆಂಬಲವನ್ನು ನೀಡಲಿದೆ.

ಇತರೆ ಫೀಚರ್ಸ್ ಗಳು:

ಇತರೆ ಫೀಚರ್ಸ್ ಗಳು:

ಈ ಸ್ಮಾರ್ಟ್‌ಫೋನ್‌ ಒಟ್ಟಾರೆ 8.5mm ತೆಳ್ಳಗಿನ ಅಳತೆ ಹೊಂದಿದ್ದು, ಸುಮಾರು 182g ತೂಕ ಇದೆ. ಅಧಿಕ ಬ್ಯಾಟರಿ ಸಾಮರ್ಥ್ಯ ಇರುವ ಈ ಸ್ಮಾರ್ಟ್‌ಫೋನ್‌ 36 ದಿನಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 46 ಗಂಟೆಗಳವರೆಗೆ ಕರೆ ಸಮಯವನ್ನು ನೀಡುತ್ತದೆ. ಹಾಗೆ ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್, GPS, 3.5mm ಜ್ಯಾಕ್, USB ಟೈಪ್-C ಚಾರ್ಜರ್ ಹಾಗೂ ಬ್ಲೂಟೂತ್ 5.0. ಹೊಂದಿದೆ.

ರಿಯಲ್‌ಮಿ ನಾರ್ಜೋ 50i ಪ್ರೈಮ್ ಪ್ರೈಮ್ ಬೆಲೆ ಎಷ್ಟು?

ರಿಯಲ್‌ಮಿ ನಾರ್ಜೋ 50i ಪ್ರೈಮ್ ಪ್ರೈಮ್ ಬೆಲೆ ಎಷ್ಟು?

3GB RAM + 32GB ಸ್ಟೋರೇಜ್ ಮಾದರಿಯ ಬೆಲೆ 7,999 ರೂ. ಮತ್ತು 4GB RAM + 64GB ಸ್ಟೋರೇಜ್ ರೂಪಾಂತರದ ಬೆಲೆ 8,999ರೂ. ಈ ಸ್ಮಾರ್ಟ್‌ಫೋನ್ ಡಾರ್ಕ್ ಬ್ಲೂ ಮತ್ತು ಮಿಂಟ್ ಗ್ರೀನ್ ಬಣ್ಣಗಳಲ್ಲಿ ಲಭ್ಯವಿದೆ.

ಅಮೆಜಾನ್

ಸೆಪ್ಟೆಂಬರ್ 23 ರಂದು ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2022 ನಲ್ಲಿ ಈ ಫೋನ್‌ ಮೊದಲ ಬಾರಿಗೆ ಮಾರಾಟಕ್ಕೆ ಲಭ್ಯವಾಗಲಿದೆ. ಅಮೆಜಾನ್‌ ಪ್ರೈಮ್ ಸದಸ್ಯರು ಸೆಪ್ಟೆಂಬರ್ 22 ರಂದು ಮಧ್ಯಾಹ್ನ 12 ಗಂಟೆಗೆ ಈ ಸ್ಮಾರ್ಟ್‌ಫೋನ್‌ ಖರೀದಿಸಬಹುದು. ರಿಯಲ್‌ಮಿ ನಾರ್ಜೋ 50i ಪ್ರೈಮ್ ಅಮೆಜಾನ್ ಮತ್ತು ಅಧಿಕೃತ ರಿಯಲ್‌ಮಿ.ಕಾಮ್‌ ಇತರೆ ಪ್ರಮುಖ ಸ್ಟೋರ್‌ನಲ್ಲಿ ಖರೀದಿಗೆ ಲಭ್ಯವಾಗಲಿದೆ.

Best Mobiles in India

English summary
Realme, Narzo 50i Prime launched in india. key features are 5000mAh battery, single camera.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X