ಇಂದು 'ರಿಯಲ್‌ಮಿ ಪ್ಯಾಡ್‌ X' ಟ್ಯಾಬ್‌ ಫಸ್ಟ್‌ ಸೇಲ್‌: ಬೊಂಬಾಟ್‌ ಕೊಡುಗೆ!

|

ರಿಯಲ್‌ಮಿ ಸಂಸ್ಥೆಯು ಇತ್ತೀಚಿಗೆಷ್ಟೆ ಬಿಡುಗಡೆ ಮಾಡಿರುವ ರಿಯಲ್‌ಮಿ ಪ್ಯಾಡ್‌ X ಟ್ಯಾಬ್ಲೆಟ್ (Realme Pad X) ಡಿವೈಸ್‌ ಆಕರ್ಷಕ ಫೀಚರ್ಸ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಹೊಸ ಟ್ಯಾಬ್ಲೆಟ್ ಸಾಧನವು, ಕಳೆದ ವರ್ಷ ಕಂಪನಿಯು ಪರಿಚಯಿಸಿದ್ದ ರಿಯಲ್‌ಮಿ ಪ್ಯಾಡ್‌ನ ಉತ್ತರಾಧಿಕಾರಿಯಾಗಿದೆ. ಇನ್ನು ರಿಯಲ್‌ಮಿ ಪ್ಯಾಡ್‌ X ಟ್ಯಾಬ್ಲೆಟ್ ಫಸ್ಟ್‌ ಸೇಲ್‌ ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ ತಾಣದಲ್ಲಿ ಇಂದು ಮಧ್ಯಾಹ್ನ 12 ರಿಂದ ಪ್ರಾರಂಭವಾಗಲಿದೆ.

ರಿಯಲ್‌ಮಿ

ರಿಯಲ್‌ಮಿ ಸಂಸ್ಥೆಯ ನೂತನ ರಿಯಲ್‌ಮಿ ಪ್ಯಾಡ್‌ X ಟ್ಯಾಬ್ಲೆಟ್ ಮಾರಾಟವು ಇಂದು ಫ್ಲಿಪ್‌ಕಾರ್ಟ್‌ ಮತ್ತು ಅಧಿಕೃತ ರಿಯಲ್‌ಮಿ ವೆಬ್‌ಸೈಟ್‌ ಮೂಲಕ ಶುರುವಾಗಲಿದೆ. ಈ ಸಾಧನವು ಕ್ವಾಲ್ಕಮ್‌ ಸ್ನ್ಯಾಪ್‌ಡ್ರಾಗನ್‌ 695 ಪ್ರೊಸೆಸರ್ ಹೊಂದಿದ್ದು, ಜೊತೆಗೆ 4GB + 64B (WiFi ಮಾತ್ರ), 4GB + 64GB (5G ಸಂಪರ್ಕ, ಮತ್ತು 6GB + 128GB (5G ಸಂಪರ್ಕ) ಆಯ್ಕೆಗಳನ್ನು ಒಳಗೊಂಡಿದೆ.

ಕೇಂದ್ರಿತ

ಹಾಗೆಯೇ ರಿಯಲ್‌ಮಿ ಪ್ಯಾಡ್‌ X ಸಾಧನವು 2000 × 1200 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 10.95 ಇಂಚಿನ ಡಿಸ್ಪ್ಲೇಯನ್ನು ಒಳಗೊಂಡಿದೆ. ಇದು ಮಲ್ಟಿಮೀಡಿಯಾ ಮತ್ತು ಉತ್ಪಾದಕತೆ-ಕೇಂದ್ರಿತ ಟ್ಯಾಬ್ಲೆಟ್ ಹೈ-ರೆಸ್ ಆಡಿಯೊ ಪ್ರಮಾಣೀಕರಣ ಮತ್ತು ಅಡಾಪ್ಟಿವ್ ಸರೌಂಡ್ ಸೌಂಡ್‌ನೊಂದಿಗೆ ಕ್ವಾಡ್-ಸ್ಪೀಕರ್ ಸೆಟಪ್ ಅನ್ನು ಸಹ ಪ್ಯಾಕ್ ಮಾಡುತ್ತದೆ. ಹಾಗಾದರೇ ರಿಯಲ್‌ಮಿ ಪ್ಯಾಡ್‌ X ಸಾಧನ ಇತರೆ ಫೀಚರ್ಸ್‌ಗಳ ಬಗ್ಗೆ ಹಾಗೂ ಕೊಡುಗೆ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ X 11 ಇಂಚಿನ WUXGA+ ಫುಲ್‌ ವ್ಯೂ ಡಿಸ್‌ಪ್ಲೇಯನ್ನು ಹೊಂದಿದೆ. ಈ ಡಿಸ್‌ಪ್ಲೇ 450 ನಿಟ್ಸ್‌ ಗರಿಷ್ಠ ಬ್ರೈಟ್‌ನೆಸ್ ಅನ್ನು ಬೆಂಬಲಿಸಲಿದೆ. ಇದು 84.5% ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ಈ ಟ್ಯಾಬ್‌ ಸ್ನಾಪ್‌ಡ್ರಾಗನ್ 695 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಆಧಾರಿತ ರಿಯಲ್‌ಮಿ UI 3.0 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 6GB RAM ಮತ್ತು 128GB ಇಂಟರ್‌ ಸ್ಟೋರೇಜ್‌ ಅನ್ನು ಹೊಂದಿದೆ. ಇದರಲ್ಲಿ ಹೆಚ್ಚುವರಿ ಸ್ಟೋರೇಜ್‌ ಅನ್ನು ವರ್ಚುವಲ್ RAM ಆಗಿ 5GB ವರೆಗೆ ವಿಸ್ತರಿಸುವುದಕ್ಕೆ ಅವಕಾಶವಿದೆ.

ಕ್ಯಾಮೆರಾವನ್ನು

ಇನ್ನು ರಿಯಲ್‌ಮಿ ಪ್ಯಾಡ್‌ X ಸ್ಮಾರ್ಟ್‌ ಟ್ಯಾಬ್‌ 13 ಮೆಗಾ ಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್ ವೈಡ್ ಆಂಗಲ್ ಫ್ರಂಟ್-ಫೇಸಿಂಗ್ ಕ್ಯಾಮೆರಾವನ್ನು ಕೂಡ ನೀಡಲಾಗಿದೆ. ಇನ್ನು ಈ ಪ್ಯಾಡ್‌ 33W ವೇಗದ ಚಾರ್ಜಿಂಗ್‌ಗೆ ಬೆಂಬಲಿಸುವ 8,340 mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದೆ. ಇದು 1.5 ತಿಂಗಳ ಸ್ಟ್ಯಾಂಡ್‌ಬೈ ಟೈಂ, 11 ಗಂಟೆಗಳ ವೀಡಿಯೊ ಕಾಲ್‌ ಟೈಂ, 19 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಮತ್ತು 138 ಗಂಟೆಗಳವರೆಗೆ ಮ್ಯೂಸಿಕ್‌ ಸ್ಟ್ರೀಮಿಂಗ್ ಟೈಂ ನೀಡಲಿದೆ ಎಂದು ರಿಯಲ್‌ಮಿ ಕಂಪೆನಿ ಹೇಳಿಕೊಂಡಿದೆ.

ಸ್ಟೋರೇಜ್

ಭಾರತದಲ್ಲಿ ರಿಯಲ್‌ಮಿ ಪ್ಯಾಡ್‌ X ಟ್ಯಾಬ್‌ Wi-Fi ಕನೆಕ್ಟಿವಿಟಿ ನೀಡುವ ಬೇಸ್‌ ಮಾಡೆಲ್‌ 4GB + 64GB ಸ್ಟೋರೇಜ್ ಮಾದರಿಯ ಬೆಲೆ 19,999 ರೂ ಆಗಿದೆ. ಆದರೆ 5G ಸಾಮರ್ಥ್ಯದ ಮಾದರಿಯ ಬೆಲೆ 25,999ರೂ. ಆಗಿರಲಿದೆ. ಇದಲ್ಲದೆ 5G ಸಂಪರ್ಕವನ್ನು ಬೆಂಬಲಿಸುವ 6GB + 128GB ರೂಪಾಂತರದ ಬೆಲೆ 27,999 ರೂ.ಗೆ ನಿಗಧಿಮಾಡಲಾಗಿದೆ. ಇನ್ನು ಈ ಪ್ಯಾಡ್‌ ಫ್ಲಿಪ್‌ಕಾರ್ಟ್, ರಿಯಲ್‌ಮಿ.ಕಾಮ್‌ ಮತ್ತು ಆಫ್‌ಲೈನ್ ರಿಟೇಲ್‌ ಸ್ಟೋರ್‌ಗಳಲ್ಲಿ ಆಗಸ್ಟ್ 1 ರಿಂದ ಸೇಲ್‌ ಆಗಲಿದೆ.

ರಿಯಲ್‌ಮಿ ಪ್ಯಾಡ್‌ ಫೀಚರ್ಸ್‌

ರಿಯಲ್‌ಮಿ ಪ್ಯಾಡ್‌ ಫೀಚರ್ಸ್‌

ಕಳೆದ ವರ್ಷ ಬಿಡುಗಡೆ ಮಾಡಿರುವ ರಿಯಲ್‌ಮಿ ಪ್ಯಾಡ್‌ ಡಿವೈಸ್‌ ಸಹ ಆಕರ್ಷಕ ಫೀಚರ್ಸ್‌ ಪಡೆದಿದೆ. ಈ ಸಾಧನವು 10.4-ಇಂಚಿನ ಡಿಸ್‌ಪ್ಲೇ ಹೊಂದಿದ್ದು, ಡಿಸ್‌ಪ್ಲೇಯು 2,000x1,200 ಪಿಕ್ಸೆಲ್‌ ರೆಸಲ್ಯೂಶನ್ ಸಾಮರ್ಥ್ಯ ಪಡೆದಿದೆ. ಇದು ನೈಟ್ ಮೋಡ್, ಡಾರ್ಕ್ ಮೋಡ್ ಮತ್ತು ಸನ್‌ಲೈಟ್ ಮೋಡ್ ಅನ್ನು ಬೆಂಬಲಿಸುತ್ತದೆ. ಈ ಟ್ಯಾಬ್ಲೆಟ್ 6.9 ಮಿಲಿಮೀಟರ್ ತೆಳುವಾಗಿದ್ದು ಅಲ್ಯೂಮಿನಿಯಂ ರಚನೆಯನ್ನು ಹೊಂದಿದೆ.

ಪಿಕ್ಸಲ್

ರಿಯಲ್‌ಮಿ ಪ್ಯಾಡ್‌ ಡಿವೈಸ್‌ ಮೀಡಿಯಾ ಟೆಕ್ ಹೆಲಿಯೊ ಜಿ 80 SoC ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಹಾಗೆಯೇ ಇದು 3GB + 32GB ಮತ್ತು 4GB + 64GB ಸ್ಟೋರೇಜ್‌ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಹಾಗೆಯೇ ಇದು 8 ಮೆಗಾ ಪಿಕ್ಸಲ್ ಸೆನ್ಸಾರ್ ಕ್ಯಾಮೆರಾ ರಚನೆಯನ್ನು ಪಡೆದಿದ್ದು, ಇದು ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಹಾಗೆಯೇ ಹಿಂಬದಿಯಲ್ಲಿ 8 ಮೆಗಾ ಪಿಕ್ಸಲ್ ಸೆನ್ಸಾರ್‌ನ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಜೊತೆಗೆ 7,100mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದೆ. ಒಂದೇ ಚಾರ್ಜ್‌ನಲ್ಲಿ 12 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಅಥವಾ 65 ದಿನಗಳ ಸ್ಟ್ಯಾಂಡ್‌ಬೈ ಸಮಯವನ್ನು ತಲುಪಿಸಲು ರೇಟ್ ಮಾಡಲಾಗಿದೆ. ಟ್ಯಾಬ್ಲೆಟ್ 18W ವೇಗದ ಚಾರ್ಜಿಂಗ್ ಮತ್ತು ರಿವರ್ಸ್ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ.

ರಿಯಲ್‌ಮಿ ಫ್ಲಾಟ್ ಮಾನಿಟರ್ ಫೀಚರ್ಸ್‌

ರಿಯಲ್‌ಮಿ ಫ್ಲಾಟ್ ಮಾನಿಟರ್ ಫೀಚರ್ಸ್‌

ರಿಯಲ್‌ಮಿ ಫ್ಲಾಟ್ ಮಾನಿಟರ್ 23.8 ಇಂಚಿನ ಫುಲ್‌ ಹೆಚ್‌ಡಿ ಎಲ್ಇಡಿ ಡಿಸ್‌ಪ್ಲೇ ಹೊಂದಿದೆ. ಇದು ಫ್ಯೂಚರಿಸ್ಟಿಕ್ ಡಿಸ್‌ಪ್ಲೇ ಪ್ರೊಫೈಲ್ ಅನ್ನು ನೀಡುತ್ತದೆ ಎಂದು ಹೇಳಲಾಗಿದೆ. ಇನ್ನು ಈ ಮಾನಿಟರ್‌ ಡಿಸ್‌ಪ್ಲೇ 75Hz ಹೆಚ್ಚಿನ ರಿಫ್ರೆಶ್ ರೇಟ್ ಟೆಕ್ನಾಲಜಿಯನ್ನು ಬೆಂಬಲಿಸಲಿದೆ. ಇದು 8ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದ್ದು, ಇದು ವೇಗದ ಮತ್ತು ವಿಳಂಬ-ಮುಕ್ತ ಕಾರ್ಯಕ್ಷಮತೆಯನ್ನು ನೀಡಲಿದೆ. ಅಲ್ಲದೆ ಈ ಫ್ಲಾಟ್‌ ಮಾನಿಟರ್‌ ಮಿಲಿಯನ್ ಬಣ್ಣಗಳನ್ನು ಸಹ ಬೆಂಬಲಿಸುತ್ತದೆ.

ಒಳಗೊಂಡಿದೆ

ಇನ್ನು ರಿಯಲ್‌ಮಿ ಫ್ಲಾಟ್‌ ಮಾನಿಟರ್‌ ಮಲ್ಟಿ ಪೋರ್ಟ್‌ ಆಯ್ಕೆಗಳನ್ನು ಹೊಂದಿದೆ. ಇದು HDMI 1.4 ಪೋರ್ಟ್, USB ಟೈಪ್-C ಪೋರ್ಟ್, DC ಪೋರ್ಟ್ ಮತ್ತು VGA ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಈ ಮಾನಿಟರ್‌ ಆಡಿಯೊಗಾಗಿ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಸದ್ಯ ರಿಯಲ್‌ಮಿ ಫ್ಲಾಟ್‌ ಮಾಟನಿರ್‌ ಭಾರತದ ಮಾರುಕಟ್ಟೆಯಲ್ಲಿ 18,999ರೂ. ಬೆಲೆಯನ್ನು ಹೊಂದಿದೆ. ಈ ಮಾನಿಟರ್ ಬ್ಲಾಕ್‌ ಕಲರ್‌ ಆಯ್ಕೆಗಳಲ್ಲಿ ಬರಲಿದ್ದು, ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟವಾಗಲಿದೆ. ಸದ್ಯ ಈ ಮಾನಿಟರ್‌ನ ಸೇಲ್‌ ಡೇಟ್‌ ಇನ್ನು ಅಧಿಕೃತವಾಗಿಲ್ಲ.

Best Mobiles in India

English summary
Realme Pad X First Sale on Flipkart: Price in India, Launch Offers, Specifications.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X