ರಿಪಬ್ಲಿಕ್ ಡೇ ಆಫರ್ : 'ರಿಯಲ್‌ ಮಿ' ಸ್ಮಾರ್ಟ್‌ಫೋನ್‌ಗಳಿಗೆ ಭಾರಿ ಡಿಸ್ಕೌಂಟ್!

|

ವಿಶೇಷ ದಿನಗಳಂದು ಮೊಬೈಲ್ ಸಂಸ್ಥೆಗಳು, ಆನ್‌ಲೈನ್‌ ತಾಣಗಳು ಸ್ಮಾರ್ಟ್‌ಫೋನ್‌ ಖರೀದಿಯ ಮೇಲೆ ಆಫರ್ ನೀಡಲು ಮುಂದಾಗುತ್ತವೆ. ಅದೇ ರೀತಿ ಜನೆವರಿ 26ರ ಗಣರಾಜ್ಯೋತ್ಸವ ದಿನದ ಅಂಗವಾಗಿ 'ರಿಯಲ್‌ ಮಿ' ಕಂಪನಿಯು ಗ್ರಾಹಕರಿಗೆ ಭರ್ಜರಿ ರಿಯಾಯಿತಿ ಘೋಷಿಸಿದೆ. ಫ್ಲಿಪ್‌ಕಾರ್ಟ್‌ ತಾಣದ ಸಂಯೋಜನೆಯೊಂದಿಗೆ ರಿಯಲ್‌ ಮಿ ಕಂಪನಿಯು ತನ್ನ ಇತ್ತೀಚಿಗಿನ ಸ್ಮಾರ್ಟ್‌ಫೋನ್‌ಗಳಿಗೆ ಡಿಸ್ಕೌಂಟ್ ತಿಳಿಸಿದೆ.

ರಿಯಲ್‌ ಮಿ ಸಂಸ್ಥೆ

ಹೌದು, ರಿಯಲ್‌ ಮಿ ಸಂಸ್ಥೆಯು ಗಣರಾಜ್ಯೋತ್ಸವ ದಿನ ಪ್ರಯುಕ್ತ 'ರಿಯಲ್‌ ಪಬ್ಲಿಕ್' ಹೆಸರಿನ ಸೇಲ್ ಮೇಳವನ್ನು ಆಯೋಜಿಸಿದೆ. ನಾಲ್ಕು ದಿನಗಳ ಈ ಸೇಲ್ ಮೇಳವು ಇದೇ ಜ.19 ರಿಂದ ಜ.22ರ ವರೆಗೂ ಫ್ಲಿಪ್‌ಕಾರ್ಟ್ ಮತ್ತು ರಿಯಲ್‌ ಮಿ ತಾಣದಲ್ಲಿ ನಡೆಯಲಿದೆ. ಇನ್ನು ಈ ಸೇಲ್‌ ಮೇಳದಲ್ಲಿ ರಿಯಲ್‌ ಮಿ ಕಂಪನಿಯ ರಿಯಲ್ ಮಿ 5 ಪ್ರೊ, ರಿಯಲ್‌ ಮಿ ಎಕ್ಸ್‌, ರಿಯಲ್‌ ಮಿ ಎಕ್ಸ್‌ಟಿ, ರಿಯಲ್‌ ಮಿ 3, ರಿಯಲ್‌ ಮಿ 2 ಪ್ರೊ, ರಿಯಲ್‌ ಮಿ 3i, ಹಾಗೂ ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಸೇರಿದಂತೆ ಇನ್ನಷ್ಟು ಫೋನ್ ಮಾದರಿಗಳಿಗೆ ರಿಯಾಯಿತಿ ಲಭ್ಯ ಇದೆ. ರಿಯಲ್‌ ಮಿ ಆಯೋಜಿಸಿರುವ ರಿಯಲ್‌ ಪಬ್ಲಿಕ್ ಸೇಲ್ ಮೇಳದಲ್ಲಿ ಡಿಸ್ಕೌಂಟ್‌ನಲ್ಲಿ ಲಭ್ಯ ಇರುವ ಫೋನ್‌ಗಳ ಬಗ್ಗೆ ತಿಳಿಯೋಣ.

ರಿಯಲ್‌ ಮಿ 5 ಪ್ರೊ

ರಿಯಲ್‌ ಮಿ 5 ಪ್ರೊ

ರಿಯಲ್‌ ಮಿ ಸಂಸ್ಥೆಯ 'ರಿಯಲ್‌ ಪಬ್ಲಿಕ್' ಸೇಲ್ ಮೇಳದಲ್ಲಿ ಜನಪ್ರಿಯ ರಿಯಲ್‌ ಮಿ 5 ಪ್ರೊ 4GB + 64GB ವೇರಿಯಂಟ್ ಫೋನ್ 11,999ರೂ.ಗಳಿಗೆ ಲಭ್ಯವಾಗಲಿದೆ. 6GB + 64GB ವೇರಿಯಂಟ್ ಫೋನ್ 12,999ರೂ. ಹಾಗೂ 8GB + 128GB ವೇರಿಯಂಟ್‌ ಫೋನ್‌ 14,999ರೂ.ಗಳಿಗೆ ಲಭ್ಯವಾಗಲಿದೆ.

ರಿಯಲ್‌ ಮಿ X

ರಿಯಲ್‌ ಮಿ X

ಅತ್ಯುತ್ತಮ ಫೀಚರ್ಸ್‌ಗಳಿಂದ ಗಮನ ಸೆಳೆದಿರುವ 'ರಿಯಲ್‌ ಮಿ X' ಫೋನ್‌ ಸಹ 'ರಿಯಲ್‌ ಪಬ್ಲಿಕ್' ಸೇಲ್ ಮೇಳದಲ್ಲಿ ಡಿಸ್ಕೌಂಟ್ ಪಡೆದಿದೆ. 4GB + 128GB ವೇರಿಯಂಟ್ ಫೋನ್‌ 14,999ರೂ.ಗಳಿಗೆ ಸಿಗಲಿದೆ. ಅಂದಹಾಗೆ 4GB + 128GB ವೇರಿಯಂಟ್‌ ಸ್ಮಾರ್ಟ್‌ಫೋನ್ ಬೆಲೆಯು 16,999ರೂ. ಆಗಿದೆ.

ರಿಯಲ್‌ ಮಿ XT

ರಿಯಲ್‌ ಮಿ XT

4GB + 64GB ವೇರಿಯಂಟ್ ಸಾಮರ್ಥ್ಯದ ರಿಯಲ್‌ ಮಿ XT ಫೋನ್ ಬೆಲೆಯು 15,999ರೂ. ಆಗಿದೆ. ಆದರೆ ರಿಯಲ್‌ ಮಿ ಸಂಸ್ಥೆಯ 'ರಿಯಲ್‌ ಪಬ್ಲಿಕ್' ಸೇಲ್ ಮೇಳದಲ್ಲಿ ಈ ಫೋನ್ ಒಂದು ಸಾವಿರ ಬೆಲೆ ಇಳಿಕೆಯೊಂದಿಗೆ 14,999ರೂ.ಗಳಿಗೆ ದೊರೆಯಲಿದೆ.

ರಿಯಲ್‌ ಮಿ 3 ಹಾಗೂ 3i

ರಿಯಲ್‌ ಮಿ 3 ಹಾಗೂ 3i

ರಿಯಲ್‌ ಮಿ ಸಂಸ್ಥೆಯ ರಿಯಲ್‌ ಮಿ 3 ಹಾಗೂ 3i ಫೋನ್‌ಗಳು ಬಜೆಟ್‌ ಬೆಲೆಯಲ್ಲಿ ಗ್ರಾಹಕರನ್ನು ಆಕರ್ಷಿಸಿವೆ. 'ರಿಯಲ್‌ ಪಬ್ಲಿಕ್' ಸೇಲ್ ಮೇಳದಲ್ಲಿ ರಿಯಲ್‌ ಮಿ 3 ಹಾಗೂ 3i ಎರಡು ಫೋನ್‌ಗಳು ಡಿಸ್ಕೌಂಟ್ ಲಿಸ್ಟ್‌ನಲ್ಲಿವೆ. ರಿಯಲ್‌ ಮಿ 3ಯ 3GB + 32GB ವೇರಿಯಂಟ್ ಫೋನ್ 6,999ರೂ.ಗಳಿಗೆ ಸಿಗಲಿದೆ. ಹಾಗೆಯೇ ರಿಯಲ್‌ ಮಿ 3i ಫೋನ್‌ 3GB + 32GB ವೇರಿಯಂಟ್ ಸಹ 6,999ರೂ.ಗಳಿಗೆ ದೊರೆಯಲಿದೆ.

ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌

ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌

ರಿಯಲ್‌ ಮಿ ಕಂಪನಿಯು ಇತ್ತೀಚಿಗೆ ಬಿಡುಗಡೆ ಮಾಡಿದ್ದ ರಿಯಲ್‌ ಮಿ ಬಡ್ಸ್‌ ಇಯರ್‌ಫೋನ್ ನೆಕ್‌ಬ್ಯಾಂಡ್ ಹೆಚ್ಚು ಗ್ರಾಹಕರನ್ನು ಆಕರ್ಷಿಸಿದೆ. ಇನ್ನು ಈ ವಾಯರ್‌ಲೆಸ್‌ ಇಯರ್‌ಫೋನ್ ಬೆಲೆಯು 1,799ರೂ.ಗಳಾಗಿದ್ದು, ಆದರೆ 'ರಿಯಲ್‌ ಪಬ್ಲಿಕ್' ಸೇಲ್ ಮೇಳದಲ್ಲಿ ರಿಯಲ್‌ ಮಿ ಬಡ್ಸ್‌ ವಾಯರ್‌ಲೆಸ್‌ ಡಿವೈಸ್‌ 1,599ರೂ.ಗಳಿಗೆ ಸಿಗಲಿದೆ.

Most Read Articles
Best Mobiles in India

English summary
Realme is hosting a new ‘Realpublic' Sale on Flipkart and Realme.com in India. The sale will begin on January 19. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X